Deepa Malik; ಪ್ಯಾರಲಿಸಿಸ್ ನಿಂದ ಪ್ಯಾರಾಲಿಂಪಿಕ್ಸ್ ವರೆಗೆ: ಇದು ದೀಪಾ ಸ್ಪೂರ್ತಿಯ ಕಥೆ


ಕೀರ್ತನ್ ಶೆಟ್ಟಿ ಬೋಳ, Aug 22, 2024, 6:22 PM IST

Deepa Malik; ಪ್ಯಾರಲಿಸಿಸ್ ನಿಂದ ಪ್ಯಾರಾಲಿಂಪಿಕ್ಸ್ ವರೆಗೆ: ಇದು ದೀಪಾ ಸ್ಪೂರ್ತಿಯ ಕಥೆ

ದೀಪಾ ಮಲಿಕ್… ಇವರದ್ದು ಕ್ರೀಡಾ ಜಗತ್ತಿನ ನೂರಾರು ಸ್ಪೂರ್ತಿ ಕಥೆಗಳ ನಡುವೆ ಮತ್ತೊಂದು ಕಥೆಯಲ್ಲ. ಇದು ಅತ್ಯಂತ ದಿಟ್ಟತನ, ಧೈರ್ಯ, ಅಡೆತಡೆಗಳನ್ನು ಎದುರಿಸಿ ನಿಂತ ಗಟ್ಟಿಗಿತ್ತಿ ಮಹಿಳೆಯ ಕಥೆ.

ಪ್ಯಾರಿಸ್‌ ನಲ್ಲಿ ಕೆಲವೇ ದಿನಗಳಲ್ಲಿ ನಡೆಯಲಿರುವ ಪ್ಯಾರಾ ಒಲಿಂಪಿಕ್ಸ್‌ ಸಂದರ್ಭದಲ್ಲಿ ಭಾರತದ ಪದಕ ವಿಜೇತೆ ಪಟು ದೀಪಾ ಮಲಿಕ್‌ ಅವರ ಕಥೆಯನ್ನೊಮ್ಮೆ ಓದಿ.

1970ರಲ್ಲಿ ಜನಿಸಿದ ದೀಪಾ ಮಲಿಕ್‌ ಗೆ 1999 ರಲ್ಲಿ ಬೆನ್ನುಮೂಳೆಯಲ್ಲಿ ಗೆಡ್ಡೆ ಬೆಳೆದಿರುವುದು ಪತ್ತೆಯಾಗಿತ್ತು. ಪರಿಣಾಮ ಅವರು ಮೂರು ಬೆನ್ನುಮೂಳೆಯ ಶಸ್ತ್ರಚಿಕಿತ್ಸೆಗೆ ಒಳಗಾಗ ಬೇಕಾಯಿತು. 14 ವರ್ಷಗಳ ಅವಧಿಯಲ್ಲಿ ಆಕೆಯ ಭುಜದ ಬ್ಲೇಡ್‌ ಗಳ ನಡುವೆ 183 ಹೊಲಿಗೆಗಳನ್ನು ಹಾಕಲಾಗಿತ್ತು. ಇಷ್ಟೆಲ್ಲಾ ನೋವು ತಿಂದ ಜೀವ ಸುಮ್ಮನೆ ಮನೆಯಲ್ಲಿ ಬಿದ್ದು ತಾನಾಯಿತು, ತನ್ನ ಪಾಡಾಯಿತು ಎಂದು ಜೀವನ ಕಳೆಯಿತು ಎಂದು ನೀವು ಭಾವಿಸಿದರೆ ತಪ್ಪು ನಿಮ್ಮದು. ಕಲ್ಲಿಗೆ ಬಿದ್ದ ಉಳಿ ಏಟಿನಂತೆ, ಒಂದೊಂದು ನೋವು – ಆಘಾತ ಅವಳನ್ನು ಮತ್ತಷ್ಟು ಗಟ್ಟಿಯಾಗಿಸಿತು.

ದೀಪಾ ಮಲಿಕ್ ಹುಟ್ಟಿದ್ದು 1970ರ ಸಪ್ಟೆಂಬರ್‌ 30ರಂದು ಹರ್ಯಾಣದ ಭೈಸ್ವಾಲ್‌ ನಲ್ಲಿ. ಇವರದು ಸೈನಿಕರ ಕುಟುಂಬ. ಹಾಗಾಗಿಯೇ ಏನೋ ಧೈರ್ಯ, ಛಲ ಇವರ ಆಸ್ತಿ. ಇವರು ಮದುವೆಯಾಗಿದ್ದು ಕೂಡಾ ಭಾರತೀಯ ಯೋಧನನ್ನೇ. ಇಬ್ಬರು ಮಕ್ಕಳ ತಾಯಿ, ಯೋಧನ ಹೆಂಡತಿಯಾಗಿದ್ದ ಸಾಮಾನ್ಯ ದೀಪಾ ಮಲಿಕ್ ಮುಂದೆ ದೇಶ ಮೆಚ್ಚುವ ಸಾಧಕಿಯಾಗಿದ್ದು ಮಾತ್ರ ರೋಚಕ. ನೋವೆಂಬ ಕತ್ತಲ ಹಿಂದಿನ ಬೆಳಕಿನ ಆಶಾಕಿರಣ ಹಿಡಿದು ಹೊರಟವರು ಏರಿದ್ದು ಸಾಧನೆಯ ಶಿಖರವನ್ನು. ಸಾಧಿಸಿದ್ದು ಅಸಾಧಾರಾಣವಾದುದನ್ನೇ.

ಅದೊಂದು ಕರಾಳ ದಿನ ದೀಪಾ ಅವರ ಪಾಲಿಗೆ ಆ ಶನಿ ಬಡಿದಿತ್ತು. ಮಗಳು ಜ್ವರದಿಂದ ಮಲಗಿದ್ದಳು, ಗಂಡ ಕಾರ್ಗಿಲ್ ಕದನದಲ್ಲಿ ಶತ್ರುಗಳೆದುರು ಹೋರಾಡುತ್ತಿದ್ದರು. ಇಲ್ಲಿ ದೀಪಾ ಸ್ಪೈನಲ್ ಟ್ಯೂಮರ್ ಗೆ ಒಳಗಾಗಿದ್ದರು. ದೀಪಾ ಅವರ ಸೊಂಟದಿಂದ ಕೆಳಗೆ ಸ್ವಾಧೀನವೇ ಇರಲಿಲ್ಲ. ಜೀವಮಾನವೆಲ್ಲಾ ಆಯಸ್ಸೆಲ್ಲಾ ವ್ಹೀಲ್ ಚೇರ್ ಮೇಲೆಯೇ! ದೀಪಾ ಮುಂದೆ ಜೀವನದಲ್ಲಿ ಎಂದೂ ನಡೆಯುವುದಿಲ್ಲ ಎಂದು ವೈದ್ಯರು ಘೋಷಿಸಿದ್ದರು. ಆದರೆ ಸುಮ್ಮನೆ ಬಿಟ್ಟು ಬಿಡುವ ಜಾಯಮಾನವೇ ದೀಪಾರದಲ್ಲ. ನಡೆಯಲಾರದ ಅವರು ಕಲಿತಿದ್ದು ಬೈಕಿಂಗ್, ಸ್ವಿಮ್ಮಿಂಗ್! ಇಷ್ಟೆಲ್ಲಾ ಕಷ್ಟವನ್ನು ಅನುಭವಿಸಿ, ಕ್ರೀಡಾ ಪಟುವಾಗಬೇಕೆಂದು ನಿರ್ಧರಿಸುವಾಗ ದೀಪಾರ ಪ್ರಾಯ 36 ವರ್ಷ! ಅಂದರೆ ಸಾಮಾನ್ಯ ಕ್ರೀಡಾಪಟುಗಳು ನಿವೃತ್ತಿ ಹೊಂದುವ ಪ್ರಾಯ. ಈ ಪ್ರಾಯದಲ್ಲಿ ಕ್ರೀಡಾ ತರಬೇತಿ ಆರಂಭಿಸಿದ ದೀಪಾ ತಮ್ಮ 45ರ ಹರೆಯದಲ್ಲಿ ಪ್ಯಾರಾ ಒಲಂಪಿಕ್ಸ್‌ ನಲ್ಲಿ ಬೆಳ್ಳಿ ಗೆದ್ದರು. ಅಂತಹ ಛಲಗಾತಿ ದೀಪಾ ಮಲಿಕ್.

ವ್ಹೀಲ್‌ ಚೇರ್‌ ನಲ್ಲೇ ಕಾಲ ಕಳೆಯಬೇಕಿದ್ದ ದೀಪಾ ಮಲಿಕ್ ಅವರಿಗೆ ಬೈಕ್‌ ರೈಡ್‌ ಮಾಡಬೇಕೆಂಬ ಆಸೆ ಉಂಟಾಗಿತ್ತು. ಹಿಮಾಲಯನ್‌ ಮೋಟಾರ್‌ ಸ್ಪೋರ್ಟ್ಸ್‌ ಅಸೋಸಿಯೇಶನ್‌ ಸೇರಿದ ದೀಪಾ ಕೇವಲ ಎಂಟು ದಿನದಲ್ಲಿ 1700 ಕಿ.ಮೀ ಬೈಕ್‌ ರೈಡ್‌ ಮಾಡಿ ದಾಖಲೆ ಬರೆದರು. ಜಗತ್ತಿನ ಅತೀ ಎತ್ತರದ ಮೋಟಾರ್‌ ವಾಹನ ರಸ್ತೆ ಲಡಾಖ್‌ ನ ಖಾರ್ದುಂಗಾ ಲಾ ನಲ್ಲಿ ಬೈಕ್‌ ಚಲಾಯಿಸಿ, ಈ ಸಾಧನೆ ಮಾಡಿದ ಮೊತ್ತ ಮೊದಲ ಕಾಲುಗಳ ಸ್ವಾಧೀನ ಕಳೆದುಕೊಂಡ ಮಹಿಳೆ ಎಂಬ ವಿಶಿಷ್ಟ ವಿಶ್ವದಾಖಲೆ ಬರೆದರು.

ಬೈಕ್‌ ಕ್ರೇಜ್‌ ಜಾಸ್ತಿಯೇ ಇದ್ದ ಕಾರಣ ತನ್ನ ತೋಳು ಮತ್ತು ಭುಜವನ್ನು ಇನ್ನಷ್ಟು ಗಟ್ಟಿಗೊಳಿಸಬೇಕು ಎಂದು ದೀಪಾ ಈಜಲು ಆರಂಭಿಸುತ್ತಾರೆ. ಆದರೆ ಈಜುಕೊಳದಲ್ಲಿ ದೀಪಾರ ಸಾಧನೆಗೆ ಯಾವುದೇ ಅಡ್ಡಿಯಾಗಲಿಲ್ಲ. ಈಕೆ ಹವ್ಯಾಸಕ್ಕಾಗಿ ಆರಂಭಿಸಿದ ಈಜು ಮುಂದೆ ಹಲವು ದಾಖಲೆಗಳಿಗೆ ವೇದಿಕೆಯಾಯಿತು. ನುರಿತ ಈಜುಗಾರರು ಸಹ ನದಿ ಪ್ರವಾಹದ ವಿರುದ್ಧ ಈಜುವುದು ಕಷ್ಟ. ಅದರಲ್ಲೂ ಕಾಲುಗಳ ಸ್ವಾಧೀನವನ್ನೇ ಕಳೆದುಕೊಂಡಿದ್ದ 38ರ ಹರೆಯದ ದೀಪಾ 2008ರಲ್ಲಿ ಯಮುನಾ ನದಿಯಲ್ಲಿ ಪ್ರವಾಹದ ವಿರುದ್ಧವಾಗಿ ಈಜುವ ಸಂಕಲ್ಪ ತೊಟ್ಟರು. ಅದರಲ್ಲಿ ಯಶಸ್ವಿಯೂ ಆದರು. ಅದು ಕೂಡಾ ಬರೋಬ್ಬರಿ ಒಂದು ಕಿಲೋ ಮೀಟರ್!‌

ಇಷ್ಟಕ್ಕೆ ಮುಗಿದಿಲ್ಲ ಈಕೆಯ ಸಾಧನೆಯ ಪಟ್ಟಿ. ತನ್ನ ದೈಹಿಕ ಅಶಕ್ತತೆಯ ಕಾರಣವನ್ನು ಬದಿಗಿರಿಸಿ ಅಸಾಧ್ಯವನ್ನೆಲ್ಲಾ ಸಾಧ್ಯವಾಗಿಸುವ ಪಣ ತೊಟ್ಟರು. ಇಂತಹ ಗಟ್ಟಿಗಿತ್ತಿ ದೀಪಾ ಮುಂದೆ ಕಣ್ಣು ಹಾಯಿಸಿದ್ದು ಜಾವೆಲಿನ್‌ ಥ್ರೋ ಮತ್ತು ಶಾಟ್‌ ಪುಟ್‌ ಕ್ರೀಡೆಯ ಮೇಲೆ. ಗುಂಡೆಸತದಲ್ಲಿ ಪರಿಣಿತಿ ಪಡೆದ ದೀಪಾ 2016ರ ರಿಯೋದಲ್ಲಿ ನಡೆದ ಪ್ಯಾರಾ ಒಲಿಂಪಿಕ್ಸ್‌ ನಲ್ಲಿ ಭಾರತವನ್ನು ಪ್ರತಿನಿಧಿಸಿ ಬೆಳ್ಳಿ ಪದಕವನ್ನೂ ಗೆದ್ದರು.

2012 ಲಂಡನ್‌ ಪ್ಯಾರಾ ಒಲಿಂಪಿಕ್ಸ್‌ ಗೂ ದೀಪಾ ಮಲಿಕ್‌ ಹೆಸರು ಪರಿಗಣಿಸಲಾಗಿತ್ತು. ಆದರೆ ಭಾರತದಿಂದ ಕೇವಲ 10 ಮಂದಿ ಕಳುಹಿಸುವ ನಿರ್ಧಾರ ಮಾಡಿದ್ದರಿಂದ ದೀಪಾ ತಮ್ಮ ಪ್ರಥಮ ಪ್ಯಾರಾ ಒಲಿಂಪಿಕ್ಸ್‌ ಪದಕಕ್ಕೆ ಮತ್ತೆ ನಾಲ್ಕು ವರ್ಷ ಕಾಯಬೇಕಾಯಿತು.

ಜಾವೆಲಿನ್‌ ಥ್ರೋ, ಈಜು ಮತ್ತು ಶಾಟ್‌ ಪುಟ್‌ ನಲ್ಲಿ 20 ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಪ್ರಶಸ್ತಿ ಪಡೆದಿರುವ ದೀಪಾ ಮಲಿಕ್‌, 2010, 2014, 2018 ಹೀಗೆ ಸತತ ಮೂರು ಏಶ್ಯನ್‌ ಪ್ಯಾರಾ ಗೇಮ್ಸ್‌ ನಲ್ಲಿ ಪದಕ ಗೆದ್ದ ಭಾರತದ ಏಕೈಕ ಮಹಿಳೆ.

2012ರಲ್ಲಿ ಅರ್ಜುನ ಪ್ರಶಸ್ತಿ ಪುರಸ್ಕ್ರತರಾದ ದೀಪಾ, 2017ರ ಪದ್ಮಶ್ರೀ ಗೌರವ ಪಡೆದರು.  2019ರ ಸಾಲಿನ ಕ್ರೀಡಾ ಲೋಕದ ಅತ್ಯುನ್ನತ ಗೌರವ ರಾಜೀವ್‌ ಗಾಂಧಿ ಖೇಲ್‌ ರತ್ನ ಪ್ರಶಸ್ತಿಯನ್ನೂ ಪಡೆದಿದ್ದಾರೆ.

ಕೀರ್ತನ್‌ ಶೆಟ್ಟಿ ಬೋಳ

ಟಾಪ್ ನ್ಯೂಸ್

1KARKALA1

Worship: ಕರಾವಳಿಯೆಲ್ಲೆಡೆ ಅನಂತಪದ್ಮನಾಭ ವ್ರತ ಸಂಪನ್ನ

Maravooru

Mangaluru: ತಾಂತ್ರಿಕ ತಜ್ಞರ ಸಮಿತಿಯಿಂದ ಮರವೂರು ಸೇತುವೆ ಪರಿಶೀಲನೆ

Yashpal-Udupi

Udupi: ಮತ್ಸ್ಯಸಂಪದ ಯೋಜನೆ ಅನುಷ್ಠಾನ: ಶಾಸಕ ಯಶ್‌ಪಾಲ್‌ ಸುವರ್ಣ

uUdupi ಗೀತಾರ್ಥ ಚಿಂತನೆ-38: ಸರ್ವೋತ್ತಮಜ್ಞಾನ, ಅಜತ್ತ್ವಜ್ಞಾನ

Udupi ಗೀತಾರ್ಥ ಚಿಂತನೆ-38: ಸರ್ವೋತ್ತಮಜ್ಞಾನ, ಅಜತ್ತ್ವಜ್ಞಾನ

MNCY

Development project: ಮಂಗಳೂರು ಪಾಲಿಕೆ; ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ

BANDARAKERI

Udupi: ಭಕ್ತರಲ್ಲಿಗೆ ಭಾಗವತ ಭಂಡಾರಕೇರಿ ಶ್ರೀಗಳ ಸಾಧನೆ

Payan

Movie Release: ರಾಜ್ಯಾದ್ಯಂತ “ಪಯಣ್‌’ ಸಿನೆಮಾ ಸೆ.20ರಂದು ತೆರೆಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಈ ಹಳ್ಳಿಯಲ್ಲಿ ಪ್ರತಿಯೊಬ್ಬ ಪುರುಷನು ಎರಡು ಬಾರಿ ಮದುವೆಯಾಗುತ್ತಾನಂತೆ! ಕಾರಣವೂ ವಿಚಿತ್ರ

ಈ ಹಳ್ಳಿಯಲ್ಲಿ ಪ್ರತಿಯೊಬ್ಬ ಪುರುಷನು ಎರಡು ಬಾರಿ ಮದುವೆಯಾಗುತ್ತಾನಂತೆ! ಕಾರಣವೂ ವಿಚಿತ್ರ

smi irani

Smriti Irani ದೆಹಲಿ ಬಿಜೆಪಿಯಲ್ಲಿ ಸಕ್ರಿಯ: ”ಸಿಎಂ ಫೇಸ್” ಆಗಿ ಕೇಳಿ ಬರುತ್ತಿರುವ ಹೆಸರು!

International Day of Democracy: “ವಿಶ್ವ ಪ್ರಜಾಪ್ರಭುತ್ವ” ಆತ್ಮಾವಲೇೂಕನ ದಿನ

International Day of Democracy: “ವಿಶ್ವ ಪ್ರಜಾಪ್ರಭುತ್ವ” ಆತ್ಮಾವಲೇೂಕನ ದಿನ

Tan removalಗೆ ಟೊಮೆಟೊ ಫೇಸ್‌ ಪ್ಯಾಕ್‌; ನೈಸರ್ಗಿಕ ತ್ವಚೆ ಕಾಳಜಿ

Beauty Tips: ಮುಖದ ಕಾಂತಿ ಹೆಚ್ಚಿಸಲು ಟೊಮ್ಯಾಟೋ ಫೇಸ್‌ ಪ್ಯಾಕ್‌; ಇದರ ಲಾಭವೇನು ಗೊತ್ತಾ?

1

South Indian actors: ನಾಗಾರ್ಜುನ್‌ ಟು ವಿಜಯ್; ದಕ್ಷಿಣ ಭಾರತದ ಶ್ರೀಮಂತ‌ ನಟರು ಯಾರ‍್ಯಾರು

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

1KARKALA1

Worship: ಕರಾವಳಿಯೆಲ್ಲೆಡೆ ಅನಂತಪದ್ಮನಾಭ ವ್ರತ ಸಂಪನ್ನ

Maravooru

Mangaluru: ತಾಂತ್ರಿಕ ತಜ್ಞರ ಸಮಿತಿಯಿಂದ ಮರವೂರು ಸೇತುವೆ ಪರಿಶೀಲನೆ

Yashpal-Udupi

Udupi: ಮತ್ಸ್ಯಸಂಪದ ಯೋಜನೆ ಅನುಷ್ಠಾನ: ಶಾಸಕ ಯಶ್‌ಪಾಲ್‌ ಸುವರ್ಣ

uUdupi ಗೀತಾರ್ಥ ಚಿಂತನೆ-38: ಸರ್ವೋತ್ತಮಜ್ಞಾನ, ಅಜತ್ತ್ವಜ್ಞಾನ

Udupi ಗೀತಾರ್ಥ ಚಿಂತನೆ-38: ಸರ್ವೋತ್ತಮಜ್ಞಾನ, ಅಜತ್ತ್ವಜ್ಞಾನ

MNCY

Development project: ಮಂಗಳೂರು ಪಾಲಿಕೆ; ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.