Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು


Team Udayavani, Aug 23, 2024, 12:09 AM IST

ccCrime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

ವಿದ್ಯುತ್‌ ಉಪಕರಣ ಕಳವು : ಬಂಧನ
ಉಪ್ಪಳ: ಐಲ ಮೈದಾನ ಬಳಿ ನಿರ್ಮಾಣಗೊಳ್ಳುತ್ತಿರುವ ಮನೆಯಿಂದ ಸುಮಾರು 50 ಸಾವಿರ ರೂ. ಮೌಲ್ಯದ ವಿದ್ಯುತ್‌ ಉಪಕರಣಗಳನ್ನು ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಪೆರಿಂಗಡಿ ಜನಪ್ರಿಯ ನಿವಾಸಿ ಮೊಹಮ್ಮದ್‌ ಇಕ್ಬಾಲ್‌(44)ನನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ. ಮನೆ ಮಾಲಕ ಅಬ್ದುಲ್‌ ರಝಾಕ್‌ ನೀಡಿದ ದೂರಿನಂತೆ ಬಂಧಿಸಲಾಗಿದೆ.

ಮದ್ಯ ಸಹಿತ ಬಂಧನ; ಸ್ಕೂಟರ್‌ ವಶಕ್ಕೆ
ಕುಂಬಳೆ: ಕೊಯಿಪ್ಪಾಡಿ ಕುಂಟಂಗೇರಡ್ಕದಲ್ಲಿ ಅಬಕಾರಿ ದಳ ನಡೆಸಿದ ಕಾರ್ಯಾಚರಣೆಯಲ್ಲಿ 1.62 ಲೀಟರ್‌ ಮದ್ಯವನ್ನು ವಶಪಡಿಸಿಕೊಂಡಿದ್ದು, ಈ ಸಂಬಂಧ ಕುಂಟಂಗೇರಡ್ಕದ ಉದಯ ನಾಯ್ಕ(53)ನನ್ನು ಬಂಧಿಸಿದೆ. ಮದ್ಯ ಸಾಗಿಸಲು ಬಳಸಿದ ಸ್ಕೂಟರನ್ನು ವಶಪಡಿಸಿಕೊಳ್ಳಲಾಗಿದೆ.

ಆನ್‌ಲೈನ್‌ ವಂಚನೆ : ಬಂಧನ
ಕಾಸರಗೋಡು: ಆನ್‌ಲೈನ್‌ ಮುಖಾಂತರ ಸ್ಟಾಕ್‌ ಮಾರ್ಕೆಟ್‌ ಕಂಪೆನಿಯ ಪ್ರತಿನಿಧಿಗಳೆಂದು ನಂಬಿಸಿ ಪಡನ್ನ ನಿವಾಸಿ ಯೋರ್ವರಿಂದ ಹಲವು ಬಾರಿಯಾಗಿ 74,25,999 ರೂ. ಪಡೆದು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ತಮಿಳುನಾಡು ನಿವಾಸಿಗಳಾದ ಗಣೇಶನ್‌ (41) ಮತ್ತು ಹಮಾದ್‌ ಸೈಯ್ಯಿದ್‌ ಕೇಳ್ವೆ (35)ನನ್ನು ಕಾಸರಗೋಡು ಸೈಬರ್‌ ಕ್ರೈಂ ಪೊಲೀಸರು ಕಲ್ಲಿಕೋಟೆಯಿಂದ ಬಂಧಿಸಿದ್ದಾರೆ.

ಪೊದೆಯಲ್ಲಿ 800 ಲೀಟರ್‌ ಹುಳಿ ರಸ; ವಶಕ್ಕೆ
ಕಾಸರಗೋಡು: ಮುಟ್ಟತ್ತೋಡಿ ಊಜಂಗೋಡಿನ ವ್ಯಕ್ತಿಯೋರ್ವರ ಹಿತ್ತಿಲ ಪೊದೆಯಲ್ಲಿ ಕಳ್ಳ ಭಟ್ಟಿ ತಯಾರಿಸಲು ಸಿದ್ಧಪಡಿಸಿದ 800 ಲೀಟರ್‌ ವಾಶ್‌(ಹುಳಿ ರಸ) ಅನ್ನು ಅಬಕಾರಿ ದಳ ವಶಪಡಿಸಿಕೊಂಡಿದೆ.

ಕೂಡ್ಲು ಪಾಯಿಚ್ಚಾಲ್‌: ಯುವಕ ನಾಪತ್ತೆ
ಕಾಸರಗೋಡು: ಕೂಡ್ಲು ಪಾಯಿಚ್ಚಾಲ್‌ ಸಾರಾ ಅಪಾರ್ಟ್‌ಮೆಂಟ್‌ನ ರಮೇಶ್‌ ಅವರ ಪುತ್ರ ವಿನಯ (27) ನಾಪತ್ತೆಯಾದ ಘಟನೆ ನಡೆದಿದೆ. ಆ. 19ರಿಂದ ನಾಪತ್ತೆಯಾಗಿರುವುದಾಗಿ ಪೊಲೀಸರಿಗೆ ದೂರು ನೀಡಲಾಗಿದೆ.

ಹೊಟೇಲ್‌ ನೌಕರ ನೇಣು ಬಿಗಿದು ಆತ್ಮಹತ್ಯೆ
ಮುಳ್ಳೇರಿಯ: ಹೊಟೇಲ್‌ನೌಕರ ಅಡೂರು ಅಡ್ಕ ನಿವಾಸಿ ಶಶಿಧರನ್‌(48) ಮನೆ ಅಂಗಳದ ಚಪ್ಪರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಕಾರಣ ತಿಳಿದು ಬಂದಿಲ್ಲ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತಮ್ಮನಿಗೆ ಇರಿತ: ಗಂಭೀರ ಗಾಯ
ಕಾಸರಗೋಡು: ಚೀಮೇನಿ ತಿಮಿರಿ ತಾಳೆಚೆಂಬ್ರಕಾನ ಕುನ್ನು ಕಿಣಟ್ಟುಕಾರದ ವರುಣ್‌ದಾಸ್‌ (26) ಇರಿತದಿಂದ ಗಂಭೀರ ಗಾಯಗೊಂಡಿದ್ದು, ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಗೆ ಸಂಬಂಧಿಸಿ ಕಲ್ಲಿಕೋಟೆ ಟೆರಿಟೋರಿಯಲ್‌ ಆರ್ಮಿಯಲ್ಲಿ ಸಿಬ್ಬಂದಿಯಾಗಿರುವ ಸಹೋದರ ವಿಪಿನ್‌ದಾಸ್‌ನನ್ನು ಚೀಮೇನಿ ಪೊಲೀಸರು ವಶಕ್ಕೆ ತೆಗೆದು ಕೊಂಡಿದ್ದಾರೆ. ತಡೆಯಲು ಬಂದ ತಂದೆ ವಿಪ್ರದಾಸ್‌(62) ಕೂಡಾ ಗಾಯಗೊಂಡಿದ್ದಾರೆ.

ಯುವಕ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ
ಕಾಸರಗೋಡು: ಅಣಂಗೂರು ತುರ್ತಿ ಫಾತಿಮಾ ಮಂಜಿಲ್‌ ಮುಹಮ್ಮದ್‌ ಕುಂಞಿ ಅವರ ಪುತ್ರ ಮಹಶೂಮ್‌ಲೈಸ್‌(18) ಮನೆಯ ಕೊಠಡಿಯೊಳಗೆ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಕಾಸರಗೋಡು ಪೊಲೀಸರು ಪ್ರಕ ರಣ ದಾಖಲಿಸಿಕೊಂಡಿದ್ದು,ರಾತ್ರಿನಿದ್ದೆ ಮಾಡಿದ್ದ ಯುವಕ ಬೆಳಗ್ಗೆ ಮರಣ ಹೊಂದಿದ್ದು, ಕಾರಣ ತಿಳಿಯಬೇಕಿದೆ.

ಜ್ವರ: ಬಾಲಕಿ ಸಾವು
ಕುಂಬಳೆ: ಜ್ವರ ಬಾಧಿಸಿದ್ದ ಶಿರಿಯ ಬತ್ತೇರಿಯ ಖಲೀಲ್‌ ಅವರ ಪುತ್ರಿ ಫಾತಿಮಾ (6) ಸಾವಿಗೀಡಾಗಿದ್ದಾಳೆ. ಉಪ್ಪಳ ಎ.ಜೆ.ಐ. ಶಾಲೆಯ 1ನೇ ತರಗತಿ ವಿದ್ಯಾರ್ಥಿನಿ. ಪರಿಯಾರಂ ಆಸ್ಪತ್ರೆ ಯಲ್ಲಿ ಚಿಕಿತ್ಸೆ ನೀಡಲಾಗಿದ್ದರೂ ರಕ್ಷಿಸಲು ಸಾಧ್ಯವಾಗಲಿಲ್ಲ.

ವಯನಾಡು ಸಂತ್ರಸ್ತರಿಗೆ ಸಹಾಯ
ಜಿಲ್ಲೆಯಲ್ಲಿ ಖಾಸಗಿ ಬಸ್‌ಗಳ ಸಾಂತ್ವನ ಯಾತ್ರೆ
ಕಾಸರಗೋಡು: ವಯನಾಡುವಿನಲ್ಲಿ ಸಂಭವಿಸಿದ ಭೂಕುಸಿತ ದುರಂತದಿಂದ ನಷ್ಟ ಸಂಭವಿಸಿದವರಿಗೆ ಸಹಾಯವೊದಗಿಸುವ ಅಂಗವಾಗಿ ಕೇರಳ ಸ್ಟೇಟ್‌ ಪ್ರೈವೇಟ್‌ ಬಸ್‌ ಆನರ್ಸ್‌ ಫೆಡರೇಶನ್‌ ನೇತೃತ್ವದಲ್ಲಿ ಜಿಲ್ಲೆಯಲ್ಲಿ ಸಾಂತ್ವನ ಯಾತ್ರೆ ನಡೆಸುತ್ತಿದೆ.

ಕಾಸರಗೋಡು ಹೊಸ ಬಸ್‌ ನಿಲ್ದಾಣದಲ್ಲಿ ಗುರುವಾರ ಬೆಳಗ್ಗೆ ನಡೆದ ಕಾರ್ಯಕ್ರಮದಲ್ಲಿ ಶಾಸಕ ಎನ್‌.ಎ. ನೆಲ್ಲಿಕುನ್ನು ಸಾಂತ್ವನ ಯಾತ್ರೆಗೆ ಚಾಲನೆ ನೀಡಿದರು. ಜಿಲ್ಲಾ ಅಧ್ಯಕ್ಷ ಕೆ. ಗಿರೀಶ್‌ ಅಧ್ಯಕ್ಷತೆ ವಹಿಸಿದ್ದರು. ಗುರುವಾರ ಸಂಗ್ರಹವಾಗುವ ಎಲ್ಲ ಖಾಸಗಿ ಬಸ್‌ಗಳ ಮೊತ್ತವನ್ನು ವಯನಾಡು ಸಂತ್ರಸ್ತರಿಗೆ ನೀಡಲಾಗುವುದು.

ಮಾರ್ಕೆಟಿಂಗ್‌ ವಂಚನೆ ಪ್ರಕರಣ: ದೂರು
ಬದಿಯಡ್ಕ: ಆನ್‌ಲೈನ್‌ ಮೂಲಕ ಷೇರ್‌ ಮಾರ್ಕೆಟಿಂಗ್‌ ಟ್ರೇಡಿಂಗ್‌ನಲ್ಲಿ ಹಣ ಹೂಡಿದಲ್ಲಿ ಭಾರೀ ಲಾಭ ಲಭಿಸುವುದಾಗಿ ನಂಬಿಸಿ ನೀರ್ಚಾಲು ನಿವಾಸಿ ಕುಂಟಿಕಾನ ಪಾಡಲಡ್ಕದ ಲಿಯೋ ಜೋಸ್‌(58) ಅವರಿಗೆ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಡ್ಯಾನಿಲಿಪೋಲಿ ಮತ್ತು ಅಮಿಲಿಯ ವಿರುದ್ಧ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿದ್ದಾರೆ. ತನ್ನಿಂದ 2.50 ಲಕ್ಷ ರೂ. ಪಡೆದು ವಂಚಿಸಿದ್ದಾಗಿ ದೂರು ನೀಡಿದ್ದರು.

ಕಳವು: ಆರೋಪಿ ಸೆರೆ
ಕಾಸರಗೋಡು: ವೆಳ್ಳೇರಿ ಕುಂಡು ಠಾಣೆ ವ್ಯಾಪ್ತಿಯಲ್ಲಿ ಇತ್ತೀ ಚೆಗೆ ನಡೆದ ಕಳವು ಪ್ರಕರಣಕ್ಕೆ ಸಂಬಂಧಿಸಿ ಪನತ್ತಡಿ ಪಾಣತ್ತೂರು ಪಟ್ಟುವಂ ನಿವಾಸಿ ರತೀಶ್‌ ಯಾನೆ ಬಂಡಿಚೋರ್‌ ಅತೀಶ್‌(67)ನನ್ನು ವೆಳ್ಳೇರಿಕುಂಡು ಪೊಲೀಸರು ಬಂಧಿಸಿದ್ದಾರೆ. ಪರಪ್ಪದ ತಾಲೂಕು ಲೈಬ್ರೆರಿಕೌನ್ಸಿಲ್‌ ಕಚೇರಿ ಹಾಗು ಮಲಬಾರ್‌ ಹೊಟೇಲ್‌ನಿಂದ ಕಳವು ಮಾಡಿದ ಪ್ರಕರಣದಲ್ಲಿ ಈತ ಆರೋಪಿಯಾಗಿ ದ್ದಾನೆ. ಕೊಲೆ ಪ್ರಕರಣಗಳು ಸಹಿತ ಹಲವು ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ.

ಟಾಪ್ ನ್ಯೂಸ್

1-horoscope

Horoscope: ಗಣೇಶ, ದುರ್ಗೆಯರ ಆರಾಧನೆಯಿಂದ ವಿಘ್ನ ನಿವಾರಣೆ,ಶುಭಕಾರ್ಯ ನಡೆಸುವ ಬಗ್ಗೆ ಚಿಂತನೆ

Hassan: ಮುಂದಿನ ವರ್ಷ 3ನೇ ವಿಶ್ವಯುದ್ಧ ! ಬ್ರಹ್ಮಾಂಡ ಗುರೂಜಿ ಭವಿಷ್ಯ

Hassan: ಮುಂದಿನ ವರ್ಷ 3ನೇ ವಿಶ್ವಯುದ್ಧ ! ಬ್ರಹ್ಮಾಂಡ ಗುರೂಜಿ ಭವಿಷ್ಯ

Ratan TATA (2)

Ratan Tata; ಅಡುಗೆಯವರು, ನಾಯಿಗೂ ವಿಲ್‌ ಬರೆದಿರುವ ಟಾಟಾ!

1-odisha

Cyclone Dana; ಚಂಡಮಾರುತ ಗೆದ್ದ ಒಡಿಶಾ, ಬಂಗಾಲ

1-qwqewew

T20; ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಕರ್ನಾಟಕದ ವೈಶಾಖ್‌ ವಿಜಯ್‌ಕುಮಾರ್‌ ಆಯ್ಕೆ

1-delay

Hoax calls; ವಿಮಾನ ಬಳಿಕ, ತಿರುಪತಿ ಹೊಟೇಲ್‌ಗ‌ಳಿಗೆ ಹುಸಿ ಬಾಂಬ್‌ ಬೆದರಿಕೆ!

1-a-kho-kho

Kho Kho; ಹೊಸದಿಲ್ಲಿಯಲ್ಲಿ ಚೊಚ್ಚಲ ಖೋ ಖೋ ವಿಶ್ವಕಪ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kasaragod: ಮಾವೋವಾದಿ ಕಮಾಂಡರ್‌ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು

Kasaragod: ಮಾವೋವಾದಿ ಕಮಾಂಡರ್‌ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು

Kasaragod: ರೈಲು ನಿಲ್ದಾಣ “ಅಮೃತ್‌ ಭಾರತ್‌’ ಮಾನ್ಯತೆ

Kasaragod: ರೈಲು ನಿಲ್ದಾಣ “ಅಮೃತ್‌ ಭಾರತ್‌’ ಮಾನ್ಯತೆ

Kasaragod: ವಂಚನೆ ಪ್ರಕರಣ… ಸಚಿತಾ ರೈ ಕಣ್ಣೂರು ಸೆಂಟ್ರಲ್‌ ಜೈಲಿಗೆ

Kasaragod: ವಂಚನೆ ಪ್ರಕರಣ… ಸಚಿತಾ ರೈ ಕಣ್ಣೂರು ಸೆಂಟ್ರಲ್‌ ಜೈಲಿಗೆ

Kasaragod: ವಂಚನೆ ಪ್ರಕರಣ: ಸಚಿತಾ ರೈ ಬಂಧನ

cr

Kasaragod:ಅಪರಾಧ ಸುದ್ದಿಗಳು;‌ ಅಕ್ರಮ ಮೀನುಗಾರಿಕೆ: 3 ಬೋಟ್‌ಗಳು ವಶಕ್ಕೆ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

1-horoscope

Horoscope: ಗಣೇಶ, ದುರ್ಗೆಯರ ಆರಾಧನೆಯಿಂದ ವಿಘ್ನ ನಿವಾರಣೆ,ಶುಭಕಾರ್ಯ ನಡೆಸುವ ಬಗ್ಗೆ ಚಿಂತನೆ

Hassan: ಮುಂದಿನ ವರ್ಷ 3ನೇ ವಿಶ್ವಯುದ್ಧ ! ಬ್ರಹ್ಮಾಂಡ ಗುರೂಜಿ ಭವಿಷ್ಯ

Hassan: ಮುಂದಿನ ವರ್ಷ 3ನೇ ವಿಶ್ವಯುದ್ಧ ! ಬ್ರಹ್ಮಾಂಡ ಗುರೂಜಿ ಭವಿಷ್ಯ

Ratan TATA (2)

Ratan Tata; ಅಡುಗೆಯವರು, ನಾಯಿಗೂ ವಿಲ್‌ ಬರೆದಿರುವ ಟಾಟಾ!

1-odisha

Cyclone Dana; ಚಂಡಮಾರುತ ಗೆದ್ದ ಒಡಿಶಾ, ಬಂಗಾಲ

1-qwqewew

T20; ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಕರ್ನಾಟಕದ ವೈಶಾಖ್‌ ವಿಜಯ್‌ಕುಮಾರ್‌ ಆಯ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.