Hangyo ಐಸ್‌ಕ್ರೀಮ್ಸ್ ಜತೆಗೆ ಫೇರಿಂಗ್ ಕ್ಯಾಪಿಟಲ್ 25 ಮಿ. ಡಾಲರ್ ಹೂಡಿಕೆ
Team Udayavani, Aug 23, 2024, 12:57 AM IST
ಮಂಗಳೂರು: ದಕ್ಷಿಣ ಭಾರತದ ಪ್ರಖ್ಯಾತ ಐಸ್‌ಕ್ರೀಮ್ ಬ್ರಾಂಡ್ ಮಂಗಳೂರಿನ ಹ್ಯಾಂಗ್ಯೋ ಐಸ್‌ಕ್ರೀಮ್ಸ… ಕಂಪೆನಿಯಲ್ಲಿ ಖಾಸಗಿ ಈಕ್ವಿಟಿ ಸಂಸ್ಥೆ ಫೇರಿಂಗ್ ಕ್ಯಾಪಿಟಲ್ 25 ಮಿಲಿಯನ್ ಡಾಲರ್ (ಸುಮಾರು 210 ಕೋ. ರೂ.) ಹೂಡಿಕೆ ಮಾಡಿದೆ. ಇದರಿಂದ ದಕ್ಷಿಣ ಭಾರತದಾದ್ಯಂತ ಮಾರುಕಟ್ಟೆ ವ್ಯಾಪ್ತಿ ವಿಸ್ತರಿಸಲು ಹ್ಯಾಂಗ್ಯೋ ಐಸ್‌ಕ್ರೀಂಗೆ ಸಹಕಾರಿಯಾಗಲಿದೆ.
ಹ್ಯಾಂಗ್ಯೋ ಐಸ್‌ಕ್ರೀಮ್ಸ್ ಸಂಸ್ಥೆಯ ಬಲವಾದ ಬೆಳವಣಿಗೆ ಹಾಗೂ ಮಾರುಕಟ್ಟೆ ಸಾಮರ್ಥ್ಯವನ್ನು ಗಮನದಲ್ಲಿರಿಸಿ ಫೇರಿಂಗ್ ಕ್ಯಾಪಿಟಲ್ ಈ ಹೂಡಿಕೆಗೆ ಮುಂದಾಗಿದೆ.
2003ರಲ್ಲಿ ಪೈ ಕುಟುಂಬ ಆರಂಭಿಸಿದ ಹ್ಯಾಂಗ್ಯೋ ದಕ್ಷಿಣ ಭಾರತದ ಅತಿದೊಡ್ಡ ಐಸ್‌ಕ್ರೀಮ್ಸ್ ಬ್ರ್ಯಾಂಡ್‌ಗಳಲ್ಲಿ ಒಂದು. ಅತ್ಯುತ್ತಮ ಗುಣಮಟ್ಟ ಮತ್ತು ರುಚಿಕರವಾದ ಹಾಗೂ ಸ್ವಾದಭರಿತ ಐಸ್‌ಕ್ರೀಂಗಳಿಂದ ಗುರುತಿಸಲ್ಪಟ್ಟಿದೆ.
ಹಾಂಗ್ಯೋ ಸ್ಥಾಪಕ ಹಾಗೂ ಎಕ್ಸಿಕ್ಯೂಟಿವ್ ಚೇರ್ಮನ್ ದಿನೇಶ್ ಪೈ ಮಾತನಾಡಿ, ಫೇರಿಂಗ್ ಕ್ಯಾಪಿಟಲ್‌ನಿಂದಾಗಿ ಹಾಂಗ್ಯೋ ಐಸ್‌ಕ್ರೀಮ್ಸ್ ಉದ್ಯಮ ಕ್ಷೇತ್ರದಲ್ಲಿ ಹೊಸ ಅಧ್ಯಾಯ ಆರಂಭವಾಗಿದೆ. ವ್ಯಾಪ್ತಿಯನ್ನು ವಿಸ್ತರಿಸಲು ಮತ್ತು ಗ್ರಾಹಕರಿಗೆ ಹೆಚ್ಚು ಉತ್ತೇಜಕ ಉತ್ಪನ್ನಗಳನ್ನು ನೀಡಲು ನೆರವಾಗಲಿದೆ ಎಂದರು.
ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಜಗದೀಶ್ ಪೈ ಮಾತನಾಡಿ, ಫೇರಿಂಗ್ ಕ್ಯಾಪಿಟಲ್‌ನ ಹೂಡಿಕೆಯಿಂದ ಸೃಷ್ಟಿಯಾಗುವ ಅವಕಾಶಗಳನ್ನು ಬಳಸಿಕೊಳ್ಳಲು ಉತ್ಸುಕರಾಗಿದ್ದೇವೆ. ದೇಶದಲ್ಲಿ ಜನ ಮೆಚ್ಚಿದ ಐಸ್‌ಕ್ರೀಂ ಆಗಿ ಪರಿವರ್ತಿಸಲು ಇದು ಸಹಕಾರಿಯಾಗಲಿದೆ ಎಂದರು.
ಹಾಂಗ್ಯೋ ಕಾರ್ಯತಂತ್ರ ಸಲಹೆಗಾರ ಉಲ್ಲಾಸ್ ಕಾಮತ್ ಮಾತನಾಡಿ, ನಾವು ಐಸ್‌ಕ್ರೀಮ… ಉದ್ಯಮದಲ್ಲಿ ಅಗಾಧವಾದ ಮಾರುಕಟ್ಟೆ ಹಿಡಿತ ಹೊಂದಿದ್ದೇವೆ. ಫೇರಿಂಗ್ ಕ್ಯಾಪಿಟಲ್ ಪಾಲುದಾರಿಕೆಯು ದೇಶಾದ್ಯಂತ ಬಲವಾದ ಬ್ರ್ಯಾಂಡ್ ರೂಪಿಸಲು ಸಾಧ್ಯವಾಗಲಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಹ್ಯಾಂಗ್ಯೋ ಐಸ್‌ಕ್ರೀಂ ಕರ್ನಾಟಕ, ಕೇರಳ, ತಮಿಳುನಾಡು, ಗೋವಾ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರಗಳ ಸುಮಾರು 350 ಜಿಲ್ಲೆಗಳಲ್ಲಿ 30 ಸಾವಿರಕ್ಕೂ ಅಧಿಕ ವಿತರಕರನ್ನು ಹೊಂದಿದೆ. ಆಧುನಿಕ ಹಾಗೂ ಆನ್‌ಲೈನ್ ವ್ಯವಹಾರದ ಮೂಲಕ ಕಪ್, ಕೋನ್‌ಗಳು, ಟ್ಯೂಬ್‌ಗಳು, ಕುಲ್ಫಿ ಸಹಿತ ವಿವಿಧ ಬಗೆಯ ಸುಮಾರು 1.2 ಲಕ್ಷ ಲೀಟರ್ ಐಸ್‌ಕ್ರೀಂಗಳನ್ನು ನಿತ್ಯ ಗ್ರಾಹಕರಿಗೆ ವಿತರಿಸುತ್ತಿದೆ.
ಮುಂದಿನ ಬೆಳವಣಿಗೆಗಾಗಿ ಫೇರಿಂಗ್ ಕ್ಯಾಪಿಟಲ್ ಜತೆ ಪಾಲುದಾರಿಕೆ ಹೊಂದಲು ಮುಂದಾಗಿದ್ದೇವೆ. ಹ್ಯಾಂಗ್ಯೋ ತನ್ನ ಉತ್ಪಾದನ ಸಾಮರ್ಥ್ಯಗಳನ್ನು ಹೆಚ್ಚಿಸಲು, ಹೊಸ ಉತ್ಪನ್ನ ತಯಾರಿಸಲು ಮತ್ತು ದಕ್ಷಿಣ ಭಾರತದ ಪ್ರಮುಖ ಮಾರುಕಟ್ಟೆಗಳಲ್ಲಿ ತನ್ನ ಅಸ್ತಿತ್ವವನ್ನು ವಿಸ್ತರಿಸಲು ಫೇರಿಂಗ್ ಕ್ಯಾಪಿಟಲ್‌ನಿಂದ ಸಂಗ್ರಹಿಸಿದ ಬಂಡವಾಳ ಸಹಕಾರಿಯಾಗಲಿದೆ.
– ಪ್ರದೀಪ್ ಪೈ, ಸಂಸ್ಥಾಪಕ, ಎಂ.ಡಿ., ಹಾಂಗ್ಯೋ ಐಸ್‌ಕ್ರೀಮ್ಸ್
ಹ್ಯಾಂಗ್ಯೋ ಐಸ್‌ಕ್ರೀಮ್ಸ್ ವೇಗವಾಗಿ ಬೆಳೆಯುತ್ತಿರುವ ಮತ್ತು ಲಾಭದಾಯಕ ಗ್ರಾಹಕ ಕಂಪೆನಿಯಾಗಿದೆ. ಇದು ಅತ್ಯಾಧುನಿಕ ಉತ್ಪಾದನೆ, ವಿತರಣೆ ಮತ್ತು ಗ್ರಾಹಕರ ಬೆಂಬಲದೊಂದಿಗೆ ಉತ್ಪನ್ನಗಳ ಗುಣಮಟ್ಟದಲ್ಲಿ ಸ್ಥಿರತೆ ಕಂಡುಕೊಂಡಿದೆ. ಮುಂದಿನ ಬೆಳವಣಿಗೆಗೆ ಹ್ಯಾಂಗ್ಯೋ ಜತೆ ಫೇರಿಂಗ್ ಕ್ಯಾಪಿಟಲ್ ಪಾಲುದಾರಿಕೆ ಮಾಡಿಕೊಳ್ಳುತ್ತದೆ.
– ಸಮೀರ್ ಶ್ರಾಫ್, ಸಹ ಸಂಸ್ಥಾಪಕ ಮತ್ತು ಎಂ.ಡಿ., ಫೇರಿಂಗ್ ಕ್ಯಾಪಿಟಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Chhattisgarh: ಐಇಡಿ ಸ್ಫೋ*ಟ: ಪೊಲೀಸ್ ಸಿಬ್ಬಂದಿಗೆ ಗಾಯ
Ullala: ಕೊಣಾಜೆ ಬಳಿ ರಿಕ್ಷಾ ಅಪಘಾತ: ವ್ಯಕ್ತಿ ಮೃತ್ಯು
Maharashtra Elections: 21 ಮಹಿಳೆಯರು ಆಯ್ಕೆ, ವಿಪಕ್ಷದಿಂದ ಒಬ್ಬರೇ!
Mahayuti; ಮಹಾರಾಷ್ಟ್ರ ಮುಖ್ಯಮಂತ್ರಿ ನಿರ್ಧರಿಸಲು ಮಹತ್ವದ ಚರ್ಚೆ: ಯಾರಿಗೆ ಪಟ್ಟ?
Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.