Matsyagandha Express ರೈಲಿಗೆ ಎಲ್‌ಎಚ್‌ಬಿ ಕೋಚ್ ಅಳವಡಿಕೆ ಪ್ರಕ್ರಿಯೆ ಆರಂಭ
Team Udayavani, Aug 23, 2024, 1:01 AM IST
ಉಡುಪಿ: ಮತ್ಸ್ಯಗಂಧ ರೈಲಿನ ಸೀಲಿಂಗ್ ಕುಸಿತದ ಬಗ್ಗೆ ರೈಲ್ವೇ ಬೋರ್ಡ್‌ಗೆ ರೈಲ್ವೇ ಸಚಿವರ ಮೂಲಕ ಸಂಸದ ಕೋಟ ಶ್ರೀನಿವಾಸ ಪೂಜಾರಿ ಮನವಿ ನೀಡಿದ ಹಿನ್ನೆಲೆಯಲ್ಲಿ ಈಗ ಮತ್ಸ್ಯಗಂಧ ರೈಲಿಗೆ ಎಲ್‌ಎಚ್‌ಬಿ ಕೋಚ್ ಅಳವಡಿಕೆಯ ಪ್ರಕ್ರಿಯೆ ಚುರುಕುಗೊಂಡಿದೆ.
ಕೊಂಕಣ ರೈಲು ನಿಗಮವು ದಕ್ಷಿಣ ರೈಲ್ವೇ ಹಾಗೂ ರೈಲ್ವೇ ಮಂಡಳಿಗೆ ಈ ಬಗ್ಗೆ ಕ್ಷಿಪ್ರ ಕೋಚ್ ಅಳವಡಿಕೆಯ ಮನವಿ ನೀಡಿತ್ತು. ಸಂಸದರ ಸೂಚನೆಯಂತೆ ಈಗ ದಕ್ಷಿಣ ರೈಲ್ವೇ, ಕೊಂಕಣ ರೈಲ್ವೇ ಹಾಗೂ ಕೇಂದ್ರ ರೈಲ್ವೇ ಇಲಾಖೆಗೆ ಮತ್ಸ್ಯಗಂಧ ರೈಲಿಗೆ ಎಲ್‌ಎಚ್‌ಬಿ ಅಳವಡಿಕೆ ಕುರಿತು ತಾಂತ್ರಿಕ ಒಪ್ಪಿಗೆ ಕೇಳಿ ಮಾತುಕತೆ ನಡೆಸಿದೆ.
ರೈಲು ಮಂಡಳಿಗೂ ಶೀಘ್ರವಾಗಿ ಎಲ್‌ಎಚ್‌ಬಿ ಕೋಚ್ ನೀಡುವಂತೆ ಸಂಸದರು ಸೂಚಿಸಿದ ಹಿನ್ನೆಲೆಯಲ್ಲಿ ಕಾರ್ಖಾನೆಯಿಂದ ಕೋಚ್ ನಿರ್ಮಾಣವಾಗಿ ದಕ್ಷಿಣ ರೈಲ್ವೇಗೆ ಕೋಚ್ ಹಸ್ತಾಂತರವಾಗಲಿದೆ.
ಕೋಚ್ ಹಸ್ತಾಂತರವಾಗುತ್ತಲೆ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆಯನ್ನು ಬದಲಾಯಿಸಬೇಕಾದ ಕಾರಣ 120 ದಿನಗಳ ಮುಂಚೆ ಟಿಕೆಟ್ ಬುಕ್ಕಿಂಗ್ ಅಮಾನತಿನಲ್ಲಿಡಲಾಗುತ್ತದೆ. ಈ ಎಲ್ಲ ಪ್ರಕ್ರಿಯೆಗಳ ಮೇಲೆ ಸಂಸದರು ನಿಗಾ ವಹಿಸಿದ್ದು, ಕರಾವಳಿ ಮುಂಬಯಿ ಪ್ರಯಾಣಿಕರ ಸುರಕ್ಷಿತ ಪ್ರಯಾಣಕ್ಕೆ ಮತ್ಸ್ಯಗಂಧ ರೈಲಿನಲ್ಲಿ ಸಕಲ ವ್ಯವಸ್ಥೆ ಮಾಡಲಾಗುವುದು ಎಂದು ಸಂಸದರ ಕಚೇರಿ ಪ್ರಕಟನೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hubli: ಕಾಂಗ್ರೆಸ್‌ನವರಿಂದ ಹಾವು ತೋರಿಸಿ ಹೆದರಿಸುವ ಕೆಲಸ: ಶಾಸಕ ರಾಜುಗೌಡ
Bollywood: ʼಕಲ್ಕಿʼ ನಿರ್ದೇಶಕನ ಸಿನಿಮಾದಲ್ಲಿ ಬಿಟೌನ್ ಬ್ಯೂಟಿ ಆಲಿಯಾ?
Sasthana: ಸ್ಥಳೀಯರಿಗೆ ಟೋಲ್ ಬಗ್ಗೆ ಪ್ರತಿಭಟನೆ
Bantwala: ಪ್ರಿಯತಮೆಯನ್ನು ಭೇಟಿಯಾಗಲು ಬಂದ ಯುವಕನಿಗೆ ಸ್ಥಳೀಯರಿಂದ ಹಲ್ಲೆ: ಪ್ರಕರಣ ದಾಖಲು
Tollywood: ‘ಕಣ್ಣಪ್ಪʼ ಚಿತ್ರದ ಫೋಟೋ ಲೀಕ್; 5 ಲಕ್ಷ ರೂ. ಘೋಷಿಸಿದ ಬಳಿಕ ವ್ಯಕ್ತಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.