![Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್](https://www.udayavani.com/wp-content/uploads/2025/02/4-26-415x249.jpg)
![Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್](https://www.udayavani.com/wp-content/uploads/2025/02/4-26-415x249.jpg)
Team Udayavani, Aug 23, 2024, 6:30 AM IST
ಹೊಸದಿಲ್ಲಿ: ಪೋಲೆಂಡ್ ಪ್ರವಾಸದ ಬಳಿಕ ಪ್ರಧಾನಿ ನರೇಂದ್ರ ಮೋದಿ ಉಕ್ರೇನ್‌ಗೆ ಪ್ರವಾಸ ಕೈಗೊಳ್ಳಲಿ ದ್ದಾರೆ. ಗುರುವಾರ ಪೋಲೆಂಡ್‌ನಿಂದ ರೈಲು ಪ್ರಯಾಣ ಆರಂಭಿಸಿದ ಮೋದಿ ಸತತ 10 ಗಂಟೆಗಳ ಕಾಲ ಪ್ರಯಾಣ ನಡೆಸಿ, ಉಕ್ರೇನ್ ರಾಜಧಾನಿ ಕೀವ್‌ಗೆ ಭೇಟಿ ನೀಡಲಿದ್ದಾರೆ. ಬಳಿಕ ಯುದ್ಧಪೀಡಿತ ಉಕ್ರೇನ್‌ನ ಅಧ್ಯಕ್ಷ ವೊಲೊಡೊಮಿರ್ ಝೆಲೆನ್‌ಸ್ಕಿ ಅವರನ್ನು ಭೇಟಿ ಮಾಡಿ, ಮಾತುಕತೆ ನಡೆಸಲಿದ್ದಾರೆ.
ರಷ್ಯಾದ ಮೇಲೆ ಉಕ್ರೇನ್ ಮೇಲೆ ದಾಳಿ ನಡೆಸಲು ಆರಂಭಿಸಿದ ಬಳಿಕ ಇದೇ ಮೊದಲ ಬಾರಿಗೆ ಆ ದೇಶಕ್ಕೆ ಭೇಟಿ ನೀಡುತ್ತಿದ್ದಾರೆ. ಈ ಹಿಂದೆ ಮೋದಿ ಮತ್ತು ಝೆಲೆನ್‌ಸ್ಕಿ ಅವರ 4ನೇ ಭೇಟಿ ಇದಾಗಲಿದ್ದು, 2021, 2023 ಮತ್ತು 2024ರಲ್ಲಿ ವಿವಿಧ ಕಾರ್ಯಕ್ರಮಗಳ ಸಮಯದಲ್ಲಿ ಭೇಟಿ ಮಾಡಿದ್ದರು.
ರೈಲಿನಲ್ಲಿ ಏಕೆ ಮೋದಿ ಪ್ರಯಾಣ?
ಪೋಲೆಂಡ್‌ನಿಂದ ಉಕ್ರೇನ್‌ನ ರಾಜಧಾನಿ ಕೀವ್‌ಗೆ ವಿಮಾನ ಮೂಲಕ ತೆರಳಲು ಒಂದೂವರೆ ಗಂಟೆ ಸಾಕು. ಹಾಗಿದ್ದೂ, ಮೋದಿ ಅವರು 20 ಗಂಟೆಗಳ ಕಾಲ ರೈಲಿನ ಮೂಲಕ ಪ್ರಯಾಣಿಸುತ್ತಿರುವುದಕ್ಕೆ ಕಾರಣವಿದೆ. ಯುದ್ಧಪೀಡಿತ ಉಕ್ರೇನ್‌ಗೆ ವಿಮಾನ ಪಯಣ ಅಪಾಯಕಾರಿ. ಅಲ್ಲದೇ ಎಲ್ಲ ಏರ್‌ಪೋ ರ್ಟ್‌ಗಳ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ. ಉಕ್ರೇನ್‌ನಲ್ಲಿ ಮೋದಿ 7 ಗಂಟೆ ಇರಲಿದ್ದಾರೆ.
ರೈಲಿನ ವಿಶೇಷತೆಗಳು
ಗಣ್ಯ ವ್ಯಕ್ತಿಗಳ ಪ್ರಯಾಣಕ್ಕಾಗಿಯೇ ಸುರಕ್ಷಿತ ಹಾಗೂ ಐಷಾರಾಮಿ ವ್ಯವಸ್ಥೆ.
ಹೊಟೇಲ್, ಸಭೆ ನಡೆಸಲು ಟೇಬಲ್, ವಿರಮಿಸಲು ಸೋಫಾ ಟಿವಿ ಒಳಗೊಂಡ ಅತ್ಯಾಧುನಿಕ ರೈಲು.
ಕ್ರಿಮಿಯಾಗೆ ತೆರಳುವ ಪ್ರಯಾಣಿ ಕರಿಗಾಗಿ ಉಕ್ರೇನ್‌ನಿಂದ 2014ರಲ್ಲಿ ನಿರ್ಮಾಣಗೊಂಡ ವಿಶೇಷ ರೈಲು.
ಮೋದಿಗೂ ಮೊದಲು ಅಮೆರಿಕ, ಫ್ರಾನ್ಸ್ ಅಧ್ಯಕ್ಷರು ಈ ರೈಲು ಬಳಕೆ.
Obama Is Queer: ಮಾಜಿ ಅಧ್ಯಕ್ಷ ಒಬಾಮಾ ಪತ್ನಿ ಮಿಚೆಲ್ ಗಂಡಸು: ಮಸ್ಕ್ ತಂದೆ
Cut Down: ವೆಚ್ಚ ಕಡಿತ: ಅಮೆರಿಕ ಸರಕಾರಿ ಉದ್ಯೋಗಿಗಳೇ ವಜಾ!
Mexico:ಯುರೋಪ್ ನ Most ವಾಂಟೆಡ್ ಕ್ರಿ*ಮಿನಲ್, ಡ್ರ*ಗ್ ಕಿಂಗ್ ಪಿನ್ ಮಾರ್ಕೋ ಹ*ತ್ಯೆ
Bourbon Whiskey: ಅಮೆರಿಕದ ಬೌರ್ಬನ್ ವಿಸ್ಕಿ ಆಮದು ಸುಂಕ ಕಡಿತ ಮಾಡಿದ ಭಾರತ
ರಷ್ಯಾ-ಉಕ್ರೇನ್ ಕಾಳಗ ತಪ್ಪಿಸಲು ಮುಂದಿನ ವಾರ 3 ದೇಶದ ಅಧಿಕಾರಿಗಳ ಸಭೆ
You seem to have an Ad Blocker on.
To continue reading, please turn it off or whitelist Udayavani.