Waqf ಮುಸ್ಲಿಮೇತರರು ಏಕೆ?: ಜೆಪಿಸಿ ಸಭೆಯಲ್ಲಿ ಗದ್ದಲ
Team Udayavani, Aug 23, 2024, 6:27 AM IST
ಹೊಸದಿಲ್ಲಿ: ವಕ್ಫ್ ತಿದ್ದುಪಡಿ ಮಸೂದೆ ಕುರಿತು ದಿಲ್ಲಿಯಲ್ಲಿ ಜಂಟಿ ಸಂಸ ದೀಯ ಮಂಡಳಿ (ಜೆಪಿಸಿ)ಮೊದಲ ಸಭೆ ಗುರುವಾರ ನಡೆಯಿತು. ಈ ವೇಳೆ ಜಿಲ್ಲಾಧಿಕಾರಿಗೆ ಹೆಚ್ಚಿನ ಅವಕಾಶ ನೀಡಿದ್ದಕ್ಕೆ ಮತ್ತು ಮಂಡಳಿಯಲ್ಲಿ ಮುಸ್ಲಿಂತೇರರಿಗೆ ಸದಸ್ಯತ್ವ ನೀಡುವುದು ಏಕೆ ಎಂದು ಜೆಪಿಸಿಯಲ್ಲಿ ಇರುವ ವಿಪಕ್ಷಗಳ ಸದಸ್ಯರು ಪ್ರಶ್ನೆ ಮಾಡಿದ್ದಾರೆ.
ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ, ಆಪ್ನ ಸಂಜಯ ಸಿಂಗ್, ಎಂಐಎಂ ಪಕ್ಷದ ಅಸಾದುದ್ದೀನ್ ಒವೈಸಿ, ಡಿಎಂಕೆಯ ಎ.ರಾಜಾ ಮಸೂದೆ ಯಲ್ಲಿರುವ ಹಲವು ಅಂಶಗಳ ಬಗ್ಗೆ ಆಕ್ಷೇಪಗಳನ್ನೆತ್ತಿದ್ದಾರೆ. ಅದಕ್ಕೆ ತಿರುಗೇಟು ನೀಡಿದ ಬಿಜೆಪಿ ಸದಸ್ಯರು ಮಸೂದೆ ಯನ್ನು ಸಮರ್ಥಿಸಿದ್ದಾರೆ. ಮಹಿಳೆಯ ರಿಗೆ ಮಂಡಳಿ ಯಲ್ಲಿ ಸದಸ್ಯ ನೀಡುವು ದರಿಂದ ಅವರಿಗೆ ಬಲ ನೀಡಿದಂತೆ ಆಗುತ್ತದೆ ಎಂದು ಹೇಳಿದ್ದಾರೆ. “ಒಟ್ಟು 6 ಗಂಟೆ ಸಭೆ ನಡೆದಿದೆ’ ಎಂದು ಜೆಪಿಸಿ ಅಧ್ಯಕ್ಷ ಜಗದಂಬಿಕಾ ಪಾಲ್ ಸಭೆ ಬಳಿಕ ತಿಳಿಸಿದ್ದಾರೆ. ದೇಶಾದ್ಯಂತ ಮುಸ್ಲಿಂ ಸಂಘಟನೆಗಳ ಜತೆಗೆ ಮಸೂದೆಯ ಬಗ್ಗೆ ನಡೆಸಲಾಗುತ್ತದೆ ಎಂದೂ ಹೇಳಿದ್ದಾರೆ. ಎಲ್ಲ 44 ತಿದ್ದುಪಡಿಗಳನ್ನು ಚರ್ಚಿಸಿ ಮುಂದಿನ ಅಧಿವೇಶನದ ವೇಳೆಗೆ ಉತ್ತಮ ಮಸೂದೆಯನ್ನು ತರುತ್ತೇವೆ ಎಂದು ಅವರು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BBK11: ಕ್ಯಾಪ್ಟನ್ ಹನುಮಂತುಗೆ ನಿಯತ್ತಿನ ಪ್ರಶ್ನೆ ಹಾಕಿ, ರೇಗಾಡಿದ ಚೈತ್ರಾ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.