Assam: ಸರಕಾರಿ ಅಧಿಕಾರಿಗೆ ಮಾತ್ರ ಮುಸ್ಲಿಂ ವಿವಾಹ ನೋಂದಣಿ ಅಧಿಕಾರ
Team Udayavani, Aug 23, 2024, 6:40 AM IST
ಗುವಾಹಟಿ: ಮುಸ್ಲಿಂ ವಿವಾಹ ಗಳನ್ನು ಮೌಲ್ವಿಗಳು ಅಥವಾ ಖಾಜಿಗಳು ನೋಂದಣಿ ಮಾಡುವುದನ್ನು ತಡೆಯುವ ಹೊಸ ಮಸೂದೆಗೆ ಅಸ್ಸಾಂ ರಾಜ್ಯದ ಸಚಿವ ಸಂಪುಟ ಅನುಮೋದನೆ ನೀಡಿದೆ. ಈ ಮಸೂದೆಯು ವಿವಾಹ ನೋಂದಣಿಯನ್ನು ಕಡ್ಡಾಯಗೊಳಿಸುವುದರ ಜತೆಗೆ ಬಾಲ್ಯ ವಿವಾಹದ ನೋಂದಣಿಯನ್ನು ನಿಷೇಧಿಸುತ್ತದೆ. ಮುಸ್ಲಿಂ ವೈಯಕ್ತಿಕ ಕಾನೂನಿನ ಕೆಲವು ನಿಬಂಧನೆ ಗಳನ್ನು ಅನೂರ್ಜಿತಗೊಳಿಸುವ ಈ ಮಸೂದೆಯನ್ನು ಶುಕ್ರವಾರ ಅಸ್ಸಾಂ ಮುಂಗಾರು ಅಧಿವೇಶನದಲ್ಲಿ ಮಂಡಿಸಲಿದೆ.
ಮಸೂದೆಯ ಪ್ರಕಾರ ಮುಸ್ಲಿಂ ವಿವಾಹಗಳ ಸಹಿತ ಎಲ್ಲ ವಿವಾಹಗಳೂ ಉಪನೋಂದಣಿ ಅಧಿಕಾರಿಯಿಂದಲೇ ನೋಂದಣಿ ಆಗಬೇಕು. 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣುಮಕ್ಕಳ ವಿವಾಹ ನೋಂದಣಿ ಯಾಗುವು ದಿಲ್ಲ ಹಾಗೂ ಉಪನೋಂದಣಾಧಿ ಕಾರಿ ಯಿಂದ ಆದ ನೋಂದಣಿ ಮಾತ್ರವೇ ಅಧಿಕೃತ ವಾಗಿರಲಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ತಿಳಿಸಿದ್ದಾರೆ.
ವಿವಿಧ ಸಮುದಾಯಗಳು ವಿಭಿನ್ನವಾದ ಮದುವೆಯ ಸಂಸ್ಕೃತಿಯನ್ನು ಹೊಂದಿರುತ್ತವೆ. ಈ ಮಸೂದೆಗೂ ಅದಕ್ಕೂ ಸಂಬಂಧವಿಲ್ಲ, ಬದಲಾಗಿ ಮದುವೆ ನೋಂದಣಿಯನ್ನು ಮಾಡುವ ಅಧಿಕಾರ ನೋಂದಣಾಧಿಕಾರಿಗೆ ಮಾತ್ರ ಇರಲಿದೆ. ಉಳಿದಂತೆ ನಿಯಮಗಳಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಅಸ್ಸಾಂ ಮುಖ್ಯಮಂತ್ರಿ ತಿಳಿಸಿದ್ದಾರೆ.
ಈ ಹಿಂದೆ ಮುಸ್ಲಿಂ ಸಮುದಾಯದಲ್ಲಿ ಅಪ್ರಾಪ್ತ ವಯಸ್ಕರನ್ನು ಮದುವೆಯಾಗುತ್ತಿದ್ದರು. ಹೊಸ ಮಸೂದೆಯಲ್ಲಿ ಅದಕ್ಕೆ ನಿಷೇಧ ಹೇರಲಾಗಿದೆ ಎಂದು ಹಿಮಂತ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಟ್ರಾಯ್ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Naxal ಎನ್ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.