Mangaluru: ಐವನ್ ಡಿಸೋಜ ಮನೆ ಮೇಲೆ ಕಲ್ಲು ತೂರಾಟ… ಘಟನೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ


Team Udayavani, Aug 23, 2024, 11:55 AM IST

Mangaluru: ಐವನ್ ಡಿಸೋಜ ಮನೆ ಮೇಲೆ ಕಲ್ಲು… ಘಟನೆ ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆ

ಮಂಗಳೂರು: ವಿಧಾನ ಪರಿಷತ್‌ ಸದಸ್ಯ ಐವನ್‌ ಡಿ’ ಸೋಜಾ ಅವರ ಮನೆ ಮೇಲೆ ಕಲ್ಲೆಸೆದುದನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್‌ ವತಿಯಿಂದ ಶುಕ್ರವಾರ ಬಿಜೆಪಿ ಕಚೇರಿಗೆ ಹಮ್ಮಿಕೊಂಡಿದ್ದ ಪಾದಯಾತ್ರೆಯನ್ನು ಕಂಕನಾಡಿಯಲ್ಲಿ ಪೊಲೀಸರು ತಡೆದ ಪರಿಣಾಮ, ರಸ್ತೆಯಲ್ಲೇ ಪ್ರತಿಭಟನೆ ಸಭೆ ನಡೆಸಲಾಯಿತು. ವೆಲೆನ್ಸಿಯಾದ ಐವನ್‌ ಅವರ ಮನೆಯಿಂದ ಪಾದಯಾತ್ರೆ ಆರಂಭವಾಗಿತ್ತು.

ಜಿಲ್ಲಾಧ್ಯಕ್ಷ ಹರೀಶ್‌ ಕುಮಾರ್‌ ಮಾತನಾಡಿ, ಐವನ್‌ ಡಿ’ ಸೋಜಾರ ಮನೆಗೆ ಕಲ್ಲು ತೂರಿದವರನ್ನು ಬಂಧಿಸ ಬೇಕು. ಬಿಜೆಪಿಯ ಭ್ರಷ್ಟಾಚಾರವನ್ನು ಬಯಲಿಗೆಳೆಯುವ ಐವನ್‌ ರನ್ನು ಹೆಡೆ ಮುರಿ ಕಟ್ಟಬೇಕೆಂದು ಬಿಜೆಪಿ ಇಂಥದ್ದೆಲ್ಲ ಮಾಡುತ್ತಿದೆ ಎಂದು ಆರೋಪಿಸಿದರು.

ಮಾಜಿ ಶಾಸಕ ಜೆ.ಆರ್‌. ಲೋಬೊ ಮಾತನಾಡಿ, ಕಿಡಿಗೇಡಿಗಳ ಕೃತ್ಯವನ್ನು ಬಿಜೆಪಿ ಸಮರ್ಥಿಸಿದೆ. ಇದರಿಂದ ಬಿಜೆಪಿ ಹಿಂಸೆಗೆ ಪ್ರಚೋದನೆ ನೀಡುತ್ತದೆ ಎಂಬುದು ಸಾಬೀತಾಗಿದೆ ಎಂದರು.

ಕೆಪಿಸಿಸಿ ವಕ್ತಾರ ಎಂ.ಜಿ. ಹೆಗ್ಡೆ ಮಾತನಾಡಿ, ಐವನ್‌ರ ತಲೆಗೆ, ರಾಹುಲ್‌ ಗಾಂಧಿಯ ಕಪಾಳಕ್ಕೆ ಹೊಡೆಯಬೇಕೆನ್ನುವ ಡಾ| ಭರತ್‌ ಶೆಟ್ಟಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದರು.

ಮುಖಂಡರಾದ ಪಿ.ವಿ. ಮೋಹನ್‌, ದೇವಿಪ್ರಸಾದ್‌ ಶೆಟ್ಟಿ ಮಾತನಾಡಿದರು.ವಿಧಾನ ಪರಿಷತ್‌ ಸದಸ್ಯ ಐವನ್‌ ಡಿ’ ಸೋಜಾ ಸಹಿತ ಜಿಲ್ಲಾ ಕಾಂಗ್ರೆಸ್‌ ನಾಯಕರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ವೆಲೆನ್ಸಿಯಾದಿಂದ ಕಂಕನಾಡಿ ವೃತ್ತದವರೆಗೆ ಬಿಜೆಪಿ ಹಾಗೂ ರಾಜ್ಯಪಾಲರ ವಿರುದ್ಧ ಘೋಷಣೆಗಳನ್ನ ಕೂಗುತ್ತಾ ಪಾದಯಾತ್ರೆ ನಡೆಸಿದರು.

ಮುಖಂಡರಾದ ಪದ್ಮರಾಜ್‌ ಆರ್‌., ಮಮತಾ ಗಟ್ಟಿ, ಸುರೇಶ್‌ ಬಲ್ಲಾಳ್‌, ಶಾಹುಲ್‌ ಹಮೀದ್‌, ಶಾಲೆಟ… ಪಿಂಟೋ, ಅಪ್ಪಿ ಮತ್ತಿತರರು ಭಾಗವಹಿಸಿದ್ದರು.

ದಾಳಿಗೆ ಹೆದರುವುದಿಲ್ಲ: ಐವನ್‌
ಐವನ್‌ ಡಿ’ ಸೋಜಾ ಮಾತನಾಡಿ, ಬಿಜೆಪಿಯ ಈ ದಾಳಿಗೆ ಕಾಂಗ್ರೆಸ್‌ ಅಥವಾ ನಾನು ಜಗ್ಗುವುದಿಲ್ಲ. ಜನವಿರೋಧಿಯಾಗಿ, ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಂಡರೆ ಯಾವ ಪರಿಣಾಮ ಆಗಲಿದೆ ಎಂಬುದು ಶ್ರೀಲಂಕಾ, ಬಾಂಗ್ಲಾ, ಉಗಾಂಡ, ಅಮೆರಿಕ ಮೊದಲಾದ ರಾಷ್ಟ್ರಗಳಲ್ಲಿ ಕಂಡಿದ್ದೇವೆ. ಹಾಗಾಗಿ ಬಾಂಗ್ಲಾ ದೇಶವನ್ನು ಉಲ್ಲೇಖಿಸಿದ್ದೇನೆಯೇ ಹೊರತು ಬಾಂಗ್ಲಾದೇಶ ಮಾದರಿ ಎಂದಿಲ್ಲ. ನಾನು ಹೇಳಿದುದನ್ನು ತಿರುಚಿ ಬಿಜೆಪಿ ರಾಜ್ಯಾದ್ಯಂತ ಹೋರಾಟ ಮಾಡುತ್ತಿದೆ. ಕಲ್ಲು ಬಿಸಾಡುವುದು ಬಿಜೆಪಿ ಗೂಂಡಾ ಸಂಸ್ಕೃತಿಯನ್ನು ತೋರಿಸುತ್ತದೆ ಎಂದರು.

ಇದನ್ನೂ ಓದಿ: Earthquake: ಕುಶಾನಗರ, ಬೈಲುಕೊಪ್ಪ ಭಾಗದಲ್ಲಿ ಭೂಕಂಪನದ ಅನುಭವ… ಜನರಲ್ಲಿ ಆತಂಕ

ಟಾಪ್ ನ್ಯೂಸ್

Chikkamagaluru: ಮನೆಯಲ್ಲಿ ಯಾರೂ ಇರದ ವೇಳೆ ಐದರ ಬಾಲಕಿ ಅನುಮಾನಾಸ್ಪದ ಸಾವು

Chikkamagaluru: ಮನೆಯಲ್ಲಿ ಯಾರೂ ಇರದ ವೇಳೆ ಐದರ ಬಾಲಕಿ ಅನುಮಾನಾಸ್ಪದ ಸಾವು

Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 3ನೇ ರೀಲ್ಸ್ ಪ್ರಸಾರ

Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 3ನೇ ರೀಲ್ಸ್ ಪ್ರಸಾರ

ಕೋಡಿಹಳ್ಳಿ ಚಂದ್ರಶೇಖರ್

Davanagere: ಗ್ಯಾರಂಟಿ ಯೋಜನೆಗಳು ಮತ ಪಡೆಯಲೆಂದೇ ರೂಪಿಸಿರುವ ಕಾರ್ಯಕ್ರಮ: ಕೋಡಿಹಳ್ಳಿ

14

Jani Master: ನನ್ನ ಪತಿ ಎಲ್ಲಿದ್ದಾರೆ.. ಠಾಣೆ ಬಳಿ ಜಾನಿ ಮಾಸ್ಟರ್‌ ಪತ್ನಿ ರಾದ್ಧಾಂತ

Leopard ಓಡಿಸಲು ಅರಣ್ಯ ಇಲಾಖೆ ಹಾರಿಸಿದ ಗುಂಡಿನಿಂದ ನಾಲ್ವರು ರೈತರಿಗೆ ಗಾಯ; ಚಿರತೆ ಸಾವು

Leopard ಓಡಿಸಲು ಅರಣ್ಯ ಇಲಾಖೆ ಹಾರಿಸಿದ ಗುಂಡಿನಿಂದ ನಾಲ್ವರು ರೈತರಿಗೆ ಗಾಯ; ಚಿರತೆ ಸಾವು

adike

Bhutan ಅಡಿಕೆ ಆಮದು ನಮ್ಮ ಬೆಳೆಗಾರರ ಮೇಲೆ ಪರಿಣಾಮ ಬೀರದು: ಕಿಶೋರ್ ಕುಮಾರ್ ಕೊಡ್ಗಿ

Chikkamagaluru: Dress code enforced at Horanadu Annapoorneshwari temple

Chikkamagaluru: ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ವಸ್ತ್ರ ಸಂಹಿತೆ ಜಾರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru: ಪ್ರಮುಖ ವ್ಯಾಪಾರ ಕೇಂದ್ರವೀಗ ಹಾಳು ಕೊಂಪೆ!

Mangaluru: ಪ್ರಮುಖ ವ್ಯಾಪಾರ ಕೇಂದ್ರವೀಗ ಹಾಳು ಕೊಂಪೆ!

Bajpe ಬಸ್‌ ನಿಲ್ದಾಣ ಕಟ್ಟಡ ಪೂರ್ಣ;  90 ಲಕ್ಷ ರೂ. ವೆಚ್ಚದಲ್ಲಿ  ನಿರ್ಮಾಣ

Bajpe ಬಸ್‌ ನಿಲ್ದಾಣ ಕಟ್ಟಡ ಪೂರ್ಣ;  90 ಲಕ್ಷ ರೂ. ವೆಚ್ಚದಲ್ಲಿ  ನಿರ್ಮಾಣ

Mangaluru: ನೂತನ ಮೇಯರ್ ಆಗಿ ಮನೋಜ್ ಕುಮಾರ್ ಕೋಡಿಕಲ್, ಉಪಮೇಯರ್ ಆಗಿ ಭಾನುಮತಿ ಆಯ್ಕೆ

Mangaluru: ನೂತನ ಮೇಯರ್ ಆಗಿ ಮನೋಜ್ ಕುಮಾರ್ ಕೋಡಿಕಲ್, ಉಪಮೇಯರ್ ಆಗಿ ಭಾನುಮತಿ ಆಯ್ಕೆ

Monkey-Pox

Health Department: ಮಂಗನ ಕಾಯಿಲೆ ಆತಂಕ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಶೇಷ ನಿಗಾ

Railway

Mangaluru: ಹಳಿ ನಿರ್ವಹಣೆ ಕಾಮಗಾರಿ; ರೈಲು ಸೇವೆಯಲ್ಲಿ ವ್ಯತ್ಯಯ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

sand

Kundapura: ಮರಳು ಅಕ್ರಮ ಸಾಗಾಟ ಪತ್ತೆ

Chikkamagaluru: ಮನೆಯಲ್ಲಿ ಯಾರೂ ಇರದ ವೇಳೆ ಐದರ ಬಾಲಕಿ ಅನುಮಾನಾಸ್ಪದ ಸಾವು

Chikkamagaluru: ಮನೆಯಲ್ಲಿ ಯಾರೂ ಇರದ ವೇಳೆ ಐದರ ಬಾಲಕಿ ಅನುಮಾನಾಸ್ಪದ ಸಾವು

4

Kundapura: ಕೆಲಸವಿಲ್ಲದೆ ಜುಗುಪ್ಸೆ: ಯುವಕ ಆತ್ಮಹತ್ಯೆ

1-doco

Shivamogga ವಾಯುವಿಹಾರ ಮಾಡುತ್ತಿದ್ದ ಎಂಬಿಬಿಎಸ್ ವಿದ್ಯಾರ್ಥಿ ಕುಸಿದು ಸಾ*ವು !

Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 3ನೇ ರೀಲ್ಸ್ ಪ್ರಸಾರ

Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 3ನೇ ರೀಲ್ಸ್ ಪ್ರಸಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.