ನೀವು ಟಿಪ್ಪು ಜಯಂತಿ ಮಾಡಿ ನಾವು ವರಮಹಾಲಕ್ಷ್ಮಿ ಹಬ್ಬ ಮಾಡ್ತೀವಿ; ಕಾಂಗ್ರೆಸ್ ಗೆ ಆರಗ ಕೌಂಟರ್
Team Udayavani, Aug 23, 2024, 3:29 PM IST
ತೀರ್ಥಹಳ್ಳಿ : ನೀವು ಟಿಪ್ಪು ಜಯಂತಿ ಮಾಡಿ ನಾವು ವರಮಹಾಲಕ್ಷ್ಮಿ ಹಬ್ಬ ಮಾಡ್ತೀವಿ. ನೀವು ವರಮಹಾಲಕ್ಷ್ಮಿ ಹಬ್ಬವನ್ನು ಆಚರಣೆ ಮಾಡಿ ನೋಡೋಣ, ಅದು ಆಗುವುದಿಲ್ಲ ಯಾಕೆಂದರೆ ನಿಮಗೆ ಚುನಾವಣೆಯ ಓಟ್ ಬಗ್ಗೆ ಭಯ ಇದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ಆ. 23 ರ ಶುಕ್ರವಾರದಂದು ಪಟ್ಟಣದ ಸುವರ್ಣ ಸಹಕಾರ ಭವನದಲ್ಲಿ ನಡೆದ ತಾಲೂಕು ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ವರಮಹಾಲಕ್ಷ್ಮಿ ಹಬ್ಬದ ಸಂದರ್ಭದಲ್ಲಿ ಮಾತನಾಡಿದ ಅವರು ನಮ್ಮ ಈ ಒಂದು ಕಾರ್ಯಕ್ರಮಕ್ಕೆ ಸಾವಿರಾರು ಮಹಿಳೆಯರು ಬರುತ್ತಿದ್ದಾರೆ. ನಮ್ಮ ನಿರೀಕ್ಷೆ ಮೀರಿ ಬರುವ ಕಾರಣ ಕೆಲವು ಗೊಂದಲಗಳು ಈ ಹಿಂದೆ ಆಗಿದೆ. ಕಳೆದ ಬಾರಿ ಆಗಿದ್ದ ಗೊಂದಲಗಳಿಂದ ನನಗೆ ಸ್ವಲ್ಪ ಭಯ ಕೂಡ ಇತ್ತು. ಆದರೆ ನಮ್ಮ ತಾಯಿಯಂದಿರು, ಅಕ್ಕ ತಂಗಿಯರು ಅದನ್ನೆಲ್ಲಾ ಕ್ಷಮಿಸಿ ಕಳೆದ ಚುನಾವಣೆಯಲ್ಲಿ ಅಧಿಕ ಮತ ನೀಡಿ ಗೆಲ್ಲಿಸಿದರು ಎಂದರು.
ಕಾಂಗ್ರೆಸ್ ಪಕ್ಷದವರು ಕಳೆದ ಚುನಾವಣೆಯಲ್ಲಿ ಗ್ಯಾರಂಟಿ ಯೋಜನೆ ಬಗ್ಗೆ ಹೇಳಿದ್ದರು. ಆದರೆ ನಮ್ಮ ಜನತೆ ಅವರ ಯೋಗ್ಯತೆ ನೋಡಿ ಯಾರಿಗೆ ಮತ ಹಾಕಬೇಕೆಂದು ಯೋಚಿಸಿ ಮತ ಹಾಕಿದ್ದಾರೆ.
ಭಾರತೀಯ ಪರಂಪರೆ ಶಿಥಿಲ ಆಯಿತೋ ಆಗ ಭಾರತ ಇಬ್ಬಾಗ ಆಯಿತು. ಭಾರತೀಯ ಪರಂಪರೆ ಸಂಸ್ಕೃತಿ ಎಲ್ಲಿ ಚೆನ್ನಾಗಿದೆಯೋ ಅಲ್ಲಿ ಎಲ್ಲವೂ ಚನ್ನಾಗಿದೆ. ಯಾರೋ ಬಂದು ನಮ್ಮ ಭಾರತದ ಮೇಲೆ ದಾಳಿ ಮಾಡಿದರೆ ಏನಾಗುವುದಿಲ್ಲ ಆದರೆ ನಮ್ಮ ಹೆಣ್ಣು ಮಕ್ಕಳು ಯಾವಾಗ ಸಂಸ್ಕೃತಿ, ಪರಂಪರೆ ಮರೆಯುತ್ತಾರೋ ಆಗ ನಮ್ಮ ದೇಶ ಹಾಳಾಗುತ್ತದೆ ಎಂದರು.
ಮಹಿಳೆಯರಿಗೆ ಬಾಗಿನ ಹಂಚಿಕೆ
ಈ ಬಾರಿ ವರಮಹಾಲಕ್ಷ್ಮಿ ಹಬ್ಬದ ಆಚರಣೆಯಲ್ಲಿ ಸರಿ ಸುಮಾರು 2000ಕ್ಕೂ ಹೆಚ್ಚು ಮಹಿಳೆಯರು ಆಗಮಿಸಿದ್ದರು. ಸಂಸದ ಬಿ ವೈ ರಾಘವೇಂದ್ರ ಆಗಮಿಸುತ್ತಾರೆ ಎಂದು ಹೇಳಲಾಗಿತ್ತು ಆದರೆ ಕಾರಣಾಂತರಗಳಿಂದ ಆಗಮಿಸಲಿಲ್ಲ. ಬಂದಂತಹ ಎಲ್ಲಾ ಮುತ್ತೈದೆಯರಿಗೂ ಬಾಗಿನ ವಿತರಣೆ ಮಾಡಲಾಯಿತು.
ಕಳೆದ ಎರಡು ವರ್ಷಗಳಿಂದ ವರಮಹಾಲಕ್ಷ್ಮಿ ಹಬ್ಬ ಭಾರಿ ವಿಶೇಷವಾಗಿತ್ತು. ವಿಧಾನಸಭಾ ಚುನಾವಣೆಯ ಸಮಯವಾಗಿದ್ದ ಕಾರಣ ಒಂದು ಬಾರಿ ಬೆಳ್ಳಿ ಕಾಯಿನ್, ಸೀರೆ ವಿತರಣೆ ಮಾಡಿದ್ರೆ ಕಳೆದ ಬಾರಿ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಸಹ ಸೀರೆ ವಿತರಣೆ ಮಾಡಲಾಗಿತ್ತು.
ಈ ಹಿನ್ನಲೆಯಲ್ಲಿ ಈ ಬಾರಿ ಸಿರೆ ಸಿಗುತ್ತದೆ ಎಂಬ ಕಾರಣದಿಂದ ಅನೇಕ ಮಹಿಳೆಯರು ತಂಡೊಪತಂಡವಾಗಿ ಆಗಮಿಸಿದ್ದರು.
ಇದನ್ನೂ ಓದಿ: Election: ಅಧ್ಯಕ್ಷ – ಉಪಾಧ್ಯಕ್ಷ ಚುನಾವಣೆ… ಮಹಾಲಿಂಗಪುರ ಪುರಸಭೆ ಕಾಂಗ್ರೆಸ್ ತೆಕ್ಕೆಗೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi; ಮೈಕ್ರೋಫೈನಾನ್ಸ್ ಸಾಲ ಮೋಸ ಪ್ರಕರಣ ತನಿಖೆಗೆ ಮೂರು ತಂಡ ರಚನೆ: ಸತೀಶ ಜಾರಕಿಹೊಳಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸಿ: ಜನಾರ್ದನ ರೆಡ್ಡಿ
ಗುತ್ತಿಗೆದಾರ ಆತ್ಮಹತ್ಯೆ ಪ್ರಕರಣ: ಖರ್ಗೆ ಹೆಸರು ಅನಗತ್ಯವಾಗಿ ತರಲಾಗಿದೆ; ಚೆನ್ನಾರೆಡ್ಡಿ
Hubballi: ಬಂಧಿಸಲು ಹೋದ ಪೊಲೀಸರ ಮೇಲೆ ದಾಳಿ… ಆರೋಪಿ ಕಾಲಿಗೆ ಗುಂಡೇಟು
Hubballi: ಸಿಲಿಂಡರ್ ಸ್ಫೋಟ ಪ್ರಕರಣ… ಮತ್ತೋರ್ವ ಕೊನೆಯುಸಿರು, ಮೃತರ ಸಂಖ್ಯೆ 8ಕ್ಕೆ ಏರಿಕೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Assam; ಚಹಾರ್ ಜಿಲ್ಲೆ 4 ಗ್ರಾಮ ಬಾಲ್ಯ ವಿವಾಹ ಮುಕ್ತ: ಸಿಎಂ ಹಿಮಾಂತ್
Kushtagi: ವಸತಿ ಶಾಲೆ ಆವರಣ ಗೋಡೆ ಜಿಗಿದು ಕಾಲ್ಕಿತ್ತ 4 ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು
Mumbai-Nagpur ಹೆದ್ದಾರಿಯಲ್ಲಿ ಏಕಕಾಲದಲ್ಲಿ 50 ವಾಹನಗಳ ಟಯರ್ ಪಂಕ್ಚರ್
Kottigehara:ಸಿಲಿಂಡರ್ ಸ್ಫೋಟ, ಮನೆ ಸಂಪೂರ್ಣ ನೆಲಸಮ,ಕೆಲಸಕ್ಕೆ ಹೋಗಿದ್ದರಿಂದ ಮನೆಮಂದಿ ಪಾರು
TestTeam; ಆಸ್ಟ್ರೇಲಿಯಾ ಪ್ರಕಟಿಸಿದ ವರ್ಷದ ಟೆಸ್ಟ್ ತಂಡಕ್ಕೆ ಭಾರತೀಯ ನಾಯಕ; ರೋಹಿತ್ ಅಲ್ಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.