Mangaluru: ಫುಟ್‌ಪಾತ್‌ನಲ್ಲೇ ಪಾರ್ಕಿಂಗ್‌; ಪಾದಚಾರಿಗಳ ಪರದಾಟ

ಅಪಾಯಕಾರಿಯಾಗಿ ರಸ್ತೆಯಲ್ಲೇ ನಡೆದಾಡುವ ಸ್ಥಿತಿ; ಹಿರಿಯ ನಾಗರಿಕರಿಗೆ ಸಂಕಷ್ಟ

Team Udayavani, Aug 23, 2024, 4:16 PM IST

Mangaluru: ಫುಟ್‌ಪಾತ್‌ನಲ್ಲೇ ಪಾರ್ಕಿಂಗ್‌; ಪಾದಚಾರಿಗಳ ಪರದಾಟ

ಮಹಾನಗರ: ನಗರದಲ್ಲಿ ಅಗಲಗೊಂಡ ಫ‌ುಟ್‌ಪಾತ್‌ಗಳು ವಾಹನ ಗಳ ಪಾರ್ಕಿಂಗ್‌ಗೆ ಬಳಕೆಯಾಗುತ್ತಿದ್ದರೂ ಇದನ್ನು ತಡೆಯಲು ಪರಿಣಾಮಕಾರಿಯಾದ ಯಾವುದೇ ಕ್ರಮ ಅನುಷ್ಠಾನಗೊಳ್ಳುತ್ತಿಲ್ಲ.

ಪೊಲೀಸರು ಆಗಾಗ್ಗೆ ಪ್ರಕರಣಗಳನ್ನು ದಾಖಲಿಸುವುದು, ವ್ಹೀಲ್‌ ಲಾಕ್‌ ಮಾಡು ವುದು, ಎಚ್ಚರಿಕೆಗಳನ್ನು ನೀಡುವುದು ಮೊದಲಾದವುಗಳನ್ನು ನಡೆಸುತ್ತಿದ್ದರೂ ಅದರಿಂದ ಹೆಚ್ಚು ಪರಿಣಾಮ ಉಂಟಾಗಿಲ್ಲ. ಪಾದಚಾರಿಗಳ ಬಳಕೆಗೆ ಫ‌ುಟ್‌ಪಾತ್‌ಗಳು ಸಿಗದೆ ಅವರು ಅಪಾಯಕಾರಿಯಾಗಿ ರಸ್ತೆಯಲ್ಲೇ ನಡೆದುಕೊಂಡು ಹೋಗಬೇಕಾದ ಪರಿಸ್ಥಿತಿ ನಗರದ ಹಲವೆಡೆ ಇದೆ.

ಫ‌ುಟ್‌ಪಾತ್‌ನ ಮೇಲೇರಲು ಕಾರಣ
ವಾಹನಗಳ ಪಾರ್ಕಿಂಗ್‌ಗೆ ಕಟ್ಟಡಗಳಲ್ಲಿ ವ್ಯವಸ್ಥೆ ಮಾಡದಿರುವುದು ವಾಹನಗಳನ್ನು ಫ‌ುಟ್‌ಪಾತ್‌ ಮೇಲೆ ನಿಲುಗಡೆ ಮಾಡುವುದಕ್ಕೆ ಮುಖ್ಯ ಕಾರಣ. ಇದಕ್ಕೆ ಪೂರಕವೆಂಬಂತೆ ಫ‌ುಟ್‌ಪಾತ್‌ಗಳು ಅನೇಕ ಕಡೆ ರಸ್ತೆಗೆ ಸಮಾನಾಂತರವಾಗಿವೆ. ಹಾಗಾಗಿ ಸುಲಭವಾಗಿ ವಾಹನಗಳು ಫ‌ುಟ್‌ಪಾತ್‌ ಮೇಲೇರುತ್ತವೆ. ಕೆಲವು ಕಡೆ ಫ‌ುಟ್‌ಪಾತ್‌ಗಳನ್ನು ರಸ್ತೆಯಿಂದ ಸುಮಾರು ಅರ್ಧ ಅಡಿ, ಒಂದು ಅಡಿಯಷ್ಟು ಎತ್ತರಕ್ಕೆ ನಿರ್ಮಿಸಲಾಗಿದೆ. ಇಂತಹ ಕಡೆಗಳಲ್ಲಿ ವಾಹನಗಳು ಫ‌ುಟ್‌ಪಾತ್‌ ಮೇಲೇರುವುದು ಸಾಧ್ಯವಾಗುತ್ತಿಲ್ಲ.

ಬೊಲಾರ್ಡ್‌ ನಿರ್ಮಾಣ ನಿರ್ಲಕ್ಷ್ಯ

ವಾಹನಗಳು ಒಂದು ವೇಳೆ ಫ‌ುಟ್‌ಪಾತ್‌ ಮೇಲೇರಲು ಯತ್ನಿಸಿದರೂ ಅವುಗಳನ್ನು ತಡೆಯುವ ಸಲುವಾಗಿ ಫ‌ುಟ್‌ಪಾತ್‌ಗಳ ಮೇಲೆ ಅಲ್ಲಲ್ಲಿ ಬೊಲಾರ್ಡ್‌(ಗೂಟಗಳು)ಗಳನ್ನು ಅಳವಡಿಸಲಾಗುತ್ತಿತ್ತು. ಆದರೆ ಈಗ ಅಂತಹ ಬೊಲಾರ್ಡ್‌ಗಳ ಅಳವಡಿಕೆಯೂ ಕಡಿಮೆಯಾಗಿದೆ. ಹಾಗಾಗಿ ಫ‌ುಟ್‌ಪಾತ್‌ನ ಉದ್ದಕ್ಕೂ ವಾಹನಗಳನ್ನು ಸುಲಭವಾಗಿ ನಿಲ್ಲಿಸಲು ಸಾಧ್ಯವಾಗುತ್ತಿದೆ. ಕೆಲವೆಡೆ ಬೊಲಾರ್ಡ್‌ಗಳನ್ನು ಅಳವಡಿಸಿರುವ ಸ್ಥಳಗಳಲ್ಲಿ ದ್ವಿಚಕ್ರ ವಾಹನಗಳು ಫ‌ುಟ್‌ಪಾತ್‌ನ್ನು ಅತಿಕ್ರಮಿಸಿಕೊಂಡಿವೆ.

ವ್ಯಾಪಕವಾಗುತ್ತಿದೆ ಅತಿಕ್ರಮಣ
ನಗರದ ರಥಬೀದಿ, ಹಂಪನಕಟ್ಟೆ, ಲಾಲ್‌ಬಾಗ್‌, ಬಿಜೈ, ಕಂಕನಾಡಿ ಸಹಿತ ಪ್ರಮುಖ ಜಂಕ್ಷನ್‌ಗಳ ಬಳಿಯಲ್ಲಿ, ಜನರ ಓಡಾಟ ಹೆಚ್ಚಾಗಿರುವ ಸ್ಥಳಗಳಲ್ಲಿಯೇ ಫ‌ುಟ್‌ಪಾತ್‌ಗಳನ್ನು ವಾಹನಗಳು ಅತಿಕ್ರಮಿಸಿಕೊಂಡಿವೆ.

ಪ್ರಕರಣ ದಾಖಲು ನಿರಂತರ
ಈಗಾಗಲೇ ಸಾಕಷ್ಟು ಬಾರಿ ಮೈಕ್‌ ಮೂಲಕ ಎಚ್ಚರಿಕೆ ನೀಡಲಾಗಿದೆ. ನೋ ಪಾರ್ಕಿಂಗ್‌ ಬೋರ್ಡ್‌ಗಳನ್ನು ಕೂಡ ಅಳವಡಿಸಲಾಗಿದೆ. ಆದರೂ ಅನೇಕ ಕಡೆ ದ್ವಿಚಕ್ರ ಹಾಗೂ ಚತುಷ್ಚಕ್ರ ವಾಹನಗಳನ್ನು ಫ‌ುಟ್‌ಪಾತ್‌ಗಳ ಮೇಲೆಯೇ ಪಾರ್ಕಿಂಗ್‌ ಮಾಡುತ್ತಿರುವುದು ಕಂಡುಬರುತ್ತಿದೆ. ಈ ರೀತಿ ನಿಯಮ ಉಲ್ಲಂಗಿಸುವ ವಾಹನಗಳ ಮೇಲೆ ನಿರಂತರವಾಗಿ ಪ್ರಕರಣ ದಾಖಲಿಸಿ ದಂಡ ವಸೂಲಿ ಮಾಡಲಾಗುತ್ತಿದೆ.
-ನಜ್ಮಾ ಫಾರೂಕಿ, ಎಸಿಪಿ, ಸಂಚಾರ ವಿಭಾಗ ಮಂಗಳೂರು ನಗರ.

8 ತಿಂಗಳಲ್ಲಿ 908 ಪ್ರಕರಣ ದಾಖಲು
ಫ‌ುಟ್‌ಪಾತ್‌ ಮೇಲೆ ವಾಹನ ನಿಲ್ಲಿಸಿರುವುದಕ್ಕೆ 8 ತಿಂಗಳಲ್ಲಿ 908ಕ್ಕೂ ಅಧಿಕ ಪ್ರಕರಣ ದಾಖಲಿಸಿ ದಂಡ ವಸೂಲಿ ಮಾಡಲಾಗಿದೆ. ಅಲ್ಲದೆ ನೋ ಪಾರ್ಕಿಂಗ್‌ ಸ್ಥಳಗಲ್ಲಿ ಪಾರ್ಕಿಂಗ್‌ ಮಾಡಿರುವುದಕ್ಕೆ 2,160 ಪ್ರಕರಣ ದಾಖಲಿಸಲಾಗಿದೆ. ಪಾಲಿಕೆಯವರು ನೋ ಪಾರ್ಕಿಂಗ್‌, ಪಾರ್ಕಿಂಗ್‌ ಜಾಗ ಗುರುತಿಸಿ ನೋಟಿಫಿಕೇಶನ್‌ ಮಾಡಬೇಕು. ಅಲ್ಲಿ ಪೊಲೀಸರು ಪರಿಶೀಲನೆ ನಡೆಸಿ ಅನುಮತಿ ನೀಡುತ್ತಾರೆ. ಅನಂತರ ಅಲ್ಲಿ ಸೂಕ್ತ ಸೂಚನಾ ಫ‌ಲಕ ಅಳವಡಿಸಬೇಕು. ಅದಕ್ಕೆ ಪೂರಕವಾಗಿ ನಾವು ಕ್ರಮ ಕೈಗೊಳ್ಳುತ್ತೇವೆ ಎನ್ನುತ್ತಾರೆ ಪೊಲೀಸ್‌ ಅಧಿಕಾರಿಗಳು.

 

ಟಾಪ್ ನ್ಯೂಸ್

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Modi (2)

PM ಮೋದಿ ಅಮೆರಿಕ ಪ್ರವಾಸ; ಮಣಿಪುರಕ್ಕೆ ಹೋಗುವುದಿಲ್ಲವೇಕೆ?:ಕಾಂಗ್ರೆಸ್ ಪ್ರಶ್ನೆ

High Court: ಮಹಿಳೆ ಅಪಹರಣ ಕೇಸ್‌; ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

High Court: ಮಹಿಳೆ ಅಪಹರಣ ಕೇಸ್‌; ಎಚ್‌.ಡಿ.ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

11

Eshwara Khandre: ಮಹದಾಯಿಗೆ ಅನುಮತಿ ಸಿಗೋವರೆಗೂ ಮರ ಕಡಿಯಲು ಬಿಡಲ್ಲ

H.D.Kumaraswamy

H. D. Kumaraswamy: ರಾಜಕೀಯ ಮಾಡಲು, ಬೆಂಕಿ ಹಚ್ಚಲು ಬಂದಿಲ್ಲ

1-frr

BJP ಶಾಸಕ ಮುನಿರತ್ನಗೆ ಷರತ್ತುಬದ್ಧ ಜಾಮೀನು; ಆದರೂ ತಪ್ಪಿಲ್ಲ ಸಂಕಷ್ಟ!

HP ಯಿಂದ ಹೊಸ ಪ್ರಿಂಟರ್‌ಗಳ ಬಿಡುಗಡೆ

HP ಯಿಂದ ಹೊಸ ಪ್ರಿಂಟರ್‌ಗಳ ಬಿಡುಗಡೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-baa

Mangalore Port ಇಬ್ಬರು ಬಾಲಕಾರ್ಮಿಕರ ರಕ್ಷಣೆ

Mangaluru: ಪ್ರಮುಖ ವ್ಯಾಪಾರ ಕೇಂದ್ರವೀಗ ಹಾಳು ಕೊಂಪೆ!

Mangaluru: ಪ್ರಮುಖ ವ್ಯಾಪಾರ ಕೇಂದ್ರವೀಗ ಹಾಳು ಕೊಂಪೆ!

Bajpe ಬಸ್‌ ನಿಲ್ದಾಣ ಕಟ್ಟಡ ಪೂರ್ಣ;  90 ಲಕ್ಷ ರೂ. ವೆಚ್ಚದಲ್ಲಿ  ನಿರ್ಮಾಣ

Bajpe ಬಸ್‌ ನಿಲ್ದಾಣ ಕಟ್ಟಡ ಪೂರ್ಣ;  90 ಲಕ್ಷ ರೂ. ವೆಚ್ಚದಲ್ಲಿ  ನಿರ್ಮಾಣ

Mangaluru: ನೂತನ ಮೇಯರ್ ಆಗಿ ಮನೋಜ್ ಕುಮಾರ್ ಕೋಡಿಕಲ್, ಉಪಮೇಯರ್ ಆಗಿ ಭಾನುಮತಿ ಆಯ್ಕೆ

Mangaluru: ನೂತನ ಮೇಯರ್ ಆಗಿ ಮನೋಜ್ ಕುಮಾರ್ ಕೋಡಿಕಲ್, ಉಪಮೇಯರ್ ಆಗಿ ಭಾನುಮತಿ ಆಯ್ಕೆ

Monkey-Pox

Health Department: ಮಂಗನ ಕಾಯಿಲೆ ಆತಂಕ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಶೇಷ ನಿಗಾ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

1-baa

Mangalore Port ಇಬ್ಬರು ಬಾಲಕಾರ್ಮಿಕರ ರಕ್ಷಣೆ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

12

High Court: ಬಿಎಸ್‌ವೈ ಪೋಕ್ಸೋ ಕೇಸ್‌: ಸೆ.27ಕ್ಕೆ ವಿಚಾರಣೆ ಮುಂದಕ್ಕೆ

Modi (2)

PM ಮೋದಿ ಅಮೆರಿಕ ಪ್ರವಾಸ; ಮಣಿಪುರಕ್ಕೆ ಹೋಗುವುದಿಲ್ಲವೇಕೆ?:ಕಾಂಗ್ರೆಸ್ ಪ್ರಶ್ನೆ

High Court: ಮಹಿಳೆ ಅಪಹರಣ ಕೇಸ್‌; ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

High Court: ಮಹಿಳೆ ಅಪಹರಣ ಕೇಸ್‌; ಎಚ್‌.ಡಿ.ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.