Kundapura: ಜೋಳ ನೀಡುವುದಾಗಿ 11.5 ಲಕ್ಷ ರೂ. ವಂಚನೆ: ದೂರು ದಾಖಲು
Team Udayavani, Aug 24, 2024, 6:00 AM IST
ಕುಂದಾಪುರ: ಜೋಳ ಖರೀದಿಗೆ ಹಣ ನೀಡಿದರೂ 55 ಮೆ.ಟನ್ ಜೋಳ ನೀಡದೆ 11.5 ಲಕ್ಷ ರೂ. ವಂಚಿಸಿದ ಕುರಿತು ಆರೀಶ್ ಓವರ್‌ಸೀಸ್ ಇಂಪೆನ್ಸ್ ಎಂಬ ಹೆಸರಿನ ಟ್ರೇಡಿಂಗ್ ಆ್ಯಂಡ್ ಮರ್ಚಂಟ್ ಎಕ್ಸ್‌ಪೋರ್ಟ್ ವ್ಯವಹಾರದ ಸತೀಶ್ಚಂದ್ರ ಬಳ್ಕೂರು ದೂರು ನೀಡಿದ್ದಾರೆ.
ಅವರಿಗೆ ಕರ್ನಾಟಕದ ಅಂಕಲಿಯ ಕಂಡೋಬ ಎಂಟರ್‌ಪ್ರೈಸೆಸ್‌ನ ಮಾಲಕ ಮೋಹನ ಕುಮಾರ್ ಅವರು ಜೋಳ ಬೇಕೆಂದು ಹೇಳಿದ್ದು, ಮಹಾರಾಷ್ಟ್ರದ ಜಾಲ್ನಾ ಜಿಲ್ಲೆಯ ಶಾಸ್ತ್ರೀ ಮೊಹಲ್ಲಾ ತಾಲೂಕಿನ ಮಾರುತಿ ಮಂದಿರದ ಹತ್ತಿರದ ದೀಪಿಕಾ ಟ್ರೇಡಿಂಗ್ ಕಂಪೆನಿಯ ಮಾಲಕ ದೀಪಕ್ ದಗದುಬಾ ಬೋಸ್ಲೆ ಜೋಳ ನೀಡಲು ಒಪ್ಪಿದ್ದ. ಅದರಂತೆ ಮಹಾರಾಷ್ಟ್ರದ ಚಿಕಲಿ ಎಂಬಲ್ಲಿಗೆ ಹೋಗಿ ಜೋಳ ನೋಡಿ 55 ಮೆಟ್ರಿಕ್ ಟನ್ ಜೋಳ ಖರೀದಿಸಲು 12.43 ಲಕ್ಷ ರೂ.ಹಾಗೂ ಸಾಗಾಟಕ್ಕೆ 62 ಸಾ.ರೂ. ಸೇರಿ ಒಟ್ಟು 13.05 ಲಕ್ಷ ರೂ. ನೀಡಲು ತಿಳಿಸಿದದ್ದರು.
ಜೋಳದ ಬಾಬ್ತು 12,43,000 ರೂ. ದೀಪಕ್ ಖಾತೆಗೆ ಹಾಗೂ ದೀಪಕ್ ಸೂಚಿಸಿದ್ದ ಮಹಾರಾಷ್ಟ್ರದ ಟ್ರಿನಿಟಿ ರೋಡ್ ಕ್ಯಾರಿಯರ್ಸ್ ಟ್ರಾನ್ಸ್ ಪೋರ್ಟ್ ಕಂಪೆನಿಗೆ 62 ಸಾ. ರೂ. ಜಮೆ ಮಾಡಲಾಗಿತ್ತು. ಬಳಿಕ ಜೋಳ ನೀಡದ ಕಾರಣ ದೀಪಕ್ 1.50 ಲಕ್ಷ ರೂ. ವಾಪಸ್ ನೀಡಿದ್ದು, ಉಳಿದ 11.55 ಲಕ್ಷ ರೂ. ಅನ್ನು ಈವರೆಗೂ ನೀಡಿಲ್ಲ ಎಂದು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮೊಳಹಳ್ಳಿ ವ್ಯವಸಾಯ ಸೇವಾ ಸಹಕಾರಿ ಸಂಘ: ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ
Padubidri: ಮೈದಾನದ ಅಂಚಿನಲ್ಲಿ ಚರಂಡಿ ನಿರ್ಮಾಣ; ಕ್ರೀಡಾಪ್ರೇಮಿಗಳ ಆರೋಪ
Shirva: ಮೂಡುಬೆಳ್ಳೆ ಪೇಟೆ; ನಿತ್ಯ ಟ್ರಾಫಿಕ್ ಜಾಮ್
Manipal: ಇಲ್ಲಿ ನಿರಾಳವಾಗಿ ನಡೆಯಲೂ ಭಯ!; ಪಾತ್‌ನಲ್ಲಿ ತರಗೆಲೆ, ಗಿಡಗಂಟಿ, ಪೊದರಿನ ಆತಂಕ
Belman: ಅಣೆಕಟ್ಟಿನ ಹಲಗೆ ಅಳವಡಿಕೆ; ತುಂಬಿದ ಶಾಂಭವಿ ನದಿ
MUST WATCH
ಹೊಸ ಸೇರ್ಪಡೆ
Tirupati;ದುರಂತಕ್ಕೆ ಸಿಎಂ ನಾಯ್ಡು,ಆಡಳಿತ ಮಂಡಳಿ,ಪೊಲೀಸರು ಕಾರಣ: ಮಾಜಿ ಟಿಟಿಡಿ ಮುಖ್ಯಸ್ಥರು
ಮೊಳಹಳ್ಳಿ ವ್ಯವಸಾಯ ಸೇವಾ ಸಹಕಾರಿ ಸಂಘ: ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ
Dharwad: ಬಂದ್ ಹೆಸರಲ್ಲಿ ವ್ಯಾಪಾರಿಗೆ ಕಪಾಳಮೋಕ್ಷ?: ಕಾಲೇಜು ಪ್ರಾಧ್ಯಾಪಕರಿಗೆ ಅವಾಜ್
Friendship: ಸ್ನೇಹವೇ ಸಂಪತ್ತು
ಸೇತುವೆ ನಿರ್ಮಾಣಕ್ಕೆ ಆಗ್ರಹಿಸಿ ರಸ್ತೆ ತಡೆದು ಹಳೇ ಕುಂದುವಾಡ ಗ್ರಾಮಸ್ಥರಿಂದ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.