Mangaluru ಕೊರಗ ಸಮುದಾಯದ ಪ್ರಗತಿಗೆ ಆದ್ಯತೆ ನೀಡಲು ಸೂಚನೆ
Team Udayavani, Aug 23, 2024, 11:35 PM IST
ಮಂಗಳೂರು: ಕೊರಗ ಸಮುದಾಯದ ಅಭಿವೃದ್ಧಿಗೆ ಅನುಕೂಲವಾಗುವಂತೆ ಸೆಪ್ಟಂ ಬರ್ ಮೊದಲನೇ ವಾರದಲ್ಲಿ ಬೃಹತ್ ಕಾರ್ಯಕ್ರಮವನ್ನು ಆಯೋಜಿಸುವಂತೆ ಜಿ.ಪಂ. ಸಿಇಒ ಡಾ| ಆನಂದ್ ಕೆ. ಹೇಳಿದರು.
ಜಿಲ್ಲಾ ಮಟ್ಟದಲ್ಲಿ ಅಗತ್ಯ ಪೂರ್ವಸಿದ್ಧತೆ ಮತ್ತು ಐಇಸಿ ಕಾರ್ಯ ಕ್ರಮಗಳನ್ನು ಯಶಸ್ವಿಯಾಗಿ ಕೈಗೊ ಳ್ಳುವ ಬಗ್ಗೆ ಜಿ.ಪಂ. ನಲ್ಲಿ ಶುಕ್ರವಾರ ಜರಗಿದ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಕೊರಗ ಸಮುದಾಯದವರಿಗೆ ಪಿಎಂ ಜನ್‌ಜಾತಿ ಆದಿವಾಸಿ ಮಹಾ ಅಭಿಯಾನನಡಿ ಕೇಂದ್ರ ಸರಕಾರದ 9 ಇಲಾಖೆಗಳ ಕಾರ್ಯಕ್ರಮಗಳನ್ನು ಅನುಷ್ಠಾನಗೊಳ್ಳುತ್ತಿವೆ.
ಆ.23ರಿಂದ ಸೆ.10ರ ವರೆಗೆ ಆಧಾರ್ ನೋಂದಣಿ, ಜನ್‌ಧನ್ ಬ್ಯಾಂಕ್ ಖಾತೆ, ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್, ಜಾತಿ ಪ್ರಮಾಣ ಪತ್ರ, ಸಿಕಲ್‌ಸೆಲ್ ಅನೀಮಿಯ, ಸ್ಕ್ರೀನಿಂಗ್, ಪಡಿತರ ಚೀಟಿ, ಪಿಎಂ ಮಾತೃವಂ ದನಾ ಕಾರ್ಯಕ್ರಮಗಳ ಕುರಿತು ಅರಿವು ಮೂಡಿಸಲಾಗುತ್ತಿದ್ದು, ಕೊರಗ ಸಮುದಾಯದವರು ಇದರ ಪ್ರಯೋ ಜನ ಪಡೆದುಕೊಳ್ಳಬೇಕು ಎಂದರು.
ಪ್ರತಿ ತಾಲೂಕಿನ ಕೊರಗರ ಮನೆಗಳಿಗೆ ರಸ್ತೆ ವ್ಯವಸ್ಥೆ ಇದೆಯೇ ಎಂಬ ಬಗ್ಗೆ 7 ದಿನಗಳಲ್ಲಿ ಸರ್ವೆ ನಡೆಸಿ ಪಟ್ಟಿ ನೀಡಬೇಕು. ಖಾಸಗಿ ರಸ್ತೆಯನ್ನು ಬಳಸುತ್ತಿದ್ದರೆ ಆ ಬಗ್ಗೆ ಮಾಹಿತಿ ಕಲೆ ಹಾಕಿ ಪಂಚಾಯತ್‌ನ ಮೂಲಕ ಸೂಕ್ತ ವ್ಯವಸ್ಥೆ ಮಾಡಬೇಕು ಎಂದರು.
ನಲ್ಲಿ ನೀರಿನ ಸಂಪರ್ಕ ಇಲ್ಲದಿ ರುವ ಮನೆಗಳಿಗೆ ಸಮೀಪದ ಜಲ ಮೂಲಗಳಿಂದ ವ್ಯವಸ್ಥೆ ಕಲ್ಪಿಸಬೇಕು. ಕೊರಗ ಸಮುದಾಯದವರ ಆರೋಗ್ಯ ತಪಾಸಣೆಗೆ ಸಂಚಾರಿ ಆರೋಗ್ಯ ಘಟಕದ 3 ವಾಹನಗಳನ್ನು ಕೂಡಲೇ ದುರಸ್ತಿಗೊಳಿಸಬೇಕು. ಹೆಚ್ಚಿನ ವಾಹನಗಳಿಗೆ ಮನವಿ ಸಲ್ಲಿಸು ವಂತೆಯೂ ಜಿಲ್ಲಾ ಆರೋಗ್ಯ ಅಧಿ ಕಾರಿಗೆ ತಿಳಿಸಿದರು. ಕೊರಗ ಸಮುದಾಯದವರಿಗೆ ಹಾಸ್ಟೆಲ್‌ಗಳನ್ನು ನಿರ್ಮಿಸಲು ಅನುದಾ ನವಿದ್ದು, ಸೂಕ್ತ ಸ್ಥಳ ಗುರುತಿಸಿ ನಿರ್ಮಾಣ ಕಾರ್ಯ ಆರಂ ಭಿಸಬೇಕು. ಈ ಸಮುದಾಯದ ಮಕ್ಕಳಿಗಾಗಿ ಜಿಲ್ಲೆ ಯಲ್ಲಿ ಅಂಗನವಾಡಿ ನಿರ್ಮಿಸಲು ಸೂಚಿಸಿದರು.
ಈ ಸಮುದಾಯದ ಸ್ನಾತಕೋತ್ತರ ವಿದ್ಯಾರ್ಥಿ ಗಳಿಗೆ ಲ್ಯಾಪ್‌ಟಾಪ್ ಒದಗಿಸಲು ಅವಕಾಶವಿದ್ದು, ಸೂಕ್ತವಾದವರನ್ನು ಅಥವಾ ಪ್ರಸ್ತುತ ಪದವಿಯಲ್ಲಿ ಓದುತ್ತಿರುವವರನ್ನು ಗುರುತಿಸಿ ಎಂದರು.
ಉಡುಪಿ ಜಿಲ್ಲೆ: ಸೂಚನೆ
ಉಡುಪಿ: ಜಿಲ್ಲೆಯಲ್ಲಿ ಕೊರಗ ಸಮುದಾಯದವರಿಗೆ ಪ್ರಧಾನಮಂತ್ರಿ ಜನ್‌ಜಾತಿ ಆದಿವಾಸಿ ಮಹಾ ಅಭಿಯಾನ ಯೋಜನೆಯಡಿ ಕೇಂದ್ರ ಸರಕಾರದ 9 ಇಲಾಖೆಗಳ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗುತ್ತಿದೆ. ಆ.23ರಿಂದ ಸೆ.10ರ ವರೆಗೆ ಆಧಾರ್ ನೋಂದಣಿ, ಜನ್‌ಧನ್ ಬ್ಯಾಂಕ್ ಖಾತೆ, ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್, ಜಾತಿ ಪ್ರಮಾಣ ಪತ್ರ, ಸಿಕಲ್ ಸೆಲ್ ಅನೇಮಿಯ, ಸ್ಕ್ರೀನಿಂಗ್, ಪಡಿತರ ಚೀಟಿ, ಪ್ರಧಾನ ಮಂತ್ರಿ ಮಾತೃ ವಂದನಾ ಕಾರ್ಯಕ್ರಮಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದರ ಪ್ರಯೋಜನವನ್ನು ಜಿಲ್ಲೆಯ ಕೊರಗ ಸಮುದಾಯ ಪಡೆದುಕೊಳ್ಳಬಹುದು.
ಮಾಹಿತಿಗಾಗಿ ಯೋಜನಾ ಸಮನ್ವಯಾಧಿಕಾರಿಗಳ ಕಚೇರಿ, ಸಮಗ್ರ ಬುಡಕಟ್ಟು ಅಭಿವೃದ್ಧಿ ಯೋಜನೆ, ರಜತಾದ್ರಿ, ಮಣಿಪಾಲ, ಉಡುಪಿ 0820-2574814 ಸಂಪರ್ಕಿಸಲು ಪ್ರಕಟನೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.