Doctor’s monthly stipend: ಸ್ಥಾನೀಯ ವೈದ್ಯ ವಿದ್ಯಾರ್ಥಿಗಳ ಶಿಷ್ಯವೇತನ ಶೇ. 25 ಏರಿಕೆ

Team Udayavani, Aug 24, 2024, 6:28 AM IST

Shrana-p

ಬೆಂಗಳೂರು: ಸ್ಥಾನೀಯ ವೈದ್ಯಕೀಯ ವಿದ್ಯಾರ್ಥಿಗಳ ಹೋರಾಟಕ್ಕೆ ಸ್ಪಂದಿಸಿರುವ ರಾಜ್ಯ ಸರಕಾರ, ಸ್ನಾತಕೋತ್ತರ ವೈದ್ಯಕೀಯ ಮತ್ತು ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಹಾಗೂ ಹಿರಿಯ ರೆಸಿಡೆಂಟ್‌ ವೈದ್ಯರ ಮಾಸಿಕ ಶಿಷ್ಯವೇತನವನ್ನು ಸರಾಸರಿ ಶೇ.25ರಷ್ಟು ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ. ಪರಿಷ್ಕೃತ ಶಿಷ್ಯವೇತನವು ಆಗಸ್ಟ್‌ 1ರಿಂದಲೇ ಪೂರ್ವಾನ್ವಯ ಆಗಲಿದೆ.

ರಾಜ್ಯದ ವೈದ್ಯಕೀಯ ಶಿಕ್ಷಣ ಇಲಾಖೆಯ ಸರಕಾರಿ ಸ್ವಾಯತ್ತ ವೈದ್ಯಕೀಯ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಸ್ನಾತ
ಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳು, ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಹಾಗೂ ಹಿರಿಯ ರೆಸಿಡೆಂಟ್‌ ವೈದ್ಯರ‌ ಮಾಸಿಕ ಶಿಷ್ಯವೇತನ ಹೆಚ್ಚಳ ಮಾಡಲಾಗಿದೆ.

ವೈದ್ಯಕೀಯ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ಥಾನಿಕ ವೈದ್ಯರ ಶಿಷ್ಯವೇತನ ಹೆಚ್ಚಳಕ್ಕೆ ಆಗ್ರಹಿಸಿ ಆಗಸ್ಟ್‌ 12ರಿಂದ ಕರ್ನಾಟಕ ಸ್ಥಾನಿಕ ವೈದ್ಯರ ಸಂಘ (ಕೆಎಆರ್‌ಡಿ) ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿತ್ತು. ಸಾವಿರಾರು ವೈದ್ಯರು ಇದರಲ್ಲಿ ಭಾಗವಹಿಸಿದ್ದರು.

ಪರಿಣಾಮ ರಾಜ್ಯಾದ್ಯಂತ ಆರೋಗ್ಯ ಸೇವೆಯಲ್ಲಿ ವ್ಯತ್ಯಯ ಉಂಟಾಗಿತ್ತು. ಈ ಮಧ್ಯೆ ಒಂದು ದಿನದ ಹಿಂದಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಎಆರ್‌ಡಿ ಸದಸ್ಯರನ್ನು ಭೇಟಿಯಾಗಿ ಶಿಷ್ಯವೇತನ ಹೆಚ್ಚಳದ ಭರವಸೆ ನೀಡಿದ್ದರು. ಭರವಸೆ ಮೇರೆಗೆ ಮುಷ್ಕರ ಹಿಂಪಡೆದಿದ್ದರು. 2020ರ ಮೇ 16ರಂದು ಈ ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿನ ವೈದ್ಯಕೀಯ ವಿದ್ಯಾರ್ಥಿಗಳ ಮಾಸಿಕ ಶಿಷ್ಯವೇತನವನ್ನು ಹೆಚ್ಚಿಸಲಾಗಿತ್ತು. ಇದಾಗಿ ನಾಲ್ಕು ವರ್ಷಗಳ ನಂತರ ಪರಿಷ್ಕರಣೆ ಮಾಡಲಾಗಿದೆ.

ಅನಿರ್ದಿಷ್ಟಾವಧಿ ಮುಷ್ಕರ ಹಿಂಪಡೆದ ವೈದ್ಯ ವಿದ್ಯಾರ್ಥಿಗಳು
ಬೆಂಗಳೂರು: ರಾಜ್ಯ ಸರಕಾರ ಸ್ನಾತಕೋತ್ತರ ವೈದ್ಯಕೀಯ ಮತ್ತು ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ವ್ಯಾಸಂಗ ಮಾಡುವ ವೈದ್ಯ ವಿದ್ಯಾರ್ಥಿಗಳು ಮತ್ತು ಸೀನಿಯರ್‌ ರೆಸಿಡೆಂಟ್‌ ವೈದ್ಯರ ಶಿಷ್ಯವೇತನವನ್ನು ಶೇ.25ರಷ್ಟು ಹೆಚ್ಚಿಸಿದ ಆದೇಶದ ಬೆನ್ನಲ್ಲೇ ಶುಕ್ರವಾರ ವೈದ್ಯ ವಿದ್ಯಾರ್ಥಿಗಳು ಅನಿರ್ದಿಷ್ಟಾವಧಿ ಮುಷ್ಕರವನ್ನು ಹಿಂಪಡೆದಿದ್ದಾರೆ.

ರಾಜ್ಯದ ಸರಕಾರಿ ವೈದ್ಯಕೀಯ ಕಾಲೇಜುಗಳೊಂದಿಗೆ ಸಂಯೋಜಿತವಾಗಿರುವ ಎಲ್ಲ ಸರಕಾರಿ ಆಸ್ಪತ್ರೆಗಳಲ್ಲಿ ತುರ್ತು ಅಲ್ಲದ ಸೇವೆಗಳನ್ನು ಸ್ಥಗಿತಗೊಳಿಸಿ ಆ. 12ರಿಂದ ಸ್ನಾತಕೋತ್ತರ ವೈದ್ಯಕೀಯ ಮತ್ತು ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ವ್ಯಾಸಂಗ ಮಾಡುವ ವೈದ್ಯ ವಿದ್ಯಾರ್ಥಿಗಳು ಮತ್ತು ಸೀನಿಯರ್‌ ರೆಸಿಡೆಂಟ್‌ ವೈದ್ಯರು ಅನಿರ್ದಿಷ್ಟಾವಧಿ ಮುಷ್ಕರ ನಡೆಸಿದ್ದರು.

ನಿರಂತರವಾಗಿ ನಡೆದ 12 ದಿನಗಳ ಪ್ರತಿಭಟನೆಯಲ್ಲಿ ರಾಜ್ಯಾದ್ಯಂತ 4 ಸಾವಿರ ವೈದ್ಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಸಂಘದ ಅಧ್ಯಕ್ಷ ಡಾ| ಸಿರೀಶ್‌ ಶಿವರಾಮಯ್ಯ ಮಾತನಾಡಿ, ಸ್ವೆ„ಪಂಡ್‌ ಅನ್ನು ಶೇ.100ಕ್ಕೆ ಏರಿಕೆ ಮಾಡುವಂತೆ ಬೇಡಿಕೆ ಇಡಲಾಗಿತ್ತು. ಪ್ರಸ್ತುತ ಸರಕಾರ ಶಿಷ್ಯ ವೇತನವನ್ನು ಶೇ.25ಕ್ಕೆ ಏರಿಕೆ ಮಾಡಿದೆ. ಈ ಹಿನ್ನೆಲೆಯಲ್ಲಿ ಪ್ರತಿಭಟನೆ ಕೈ ಬಿಡಲಾಗಿದೆ ಎಂದು ತಿಳಿಸಿದ್ದಾರೆ.

ರಾಜ್ಯದ್ಯಲ್ಲಿ ಸ್ನಾತಕೋತ್ತರ 3,540, ಸೂಪರ್‌ ಸ್ಪೆಷಾಲಿಟಿ 445 ಮತ್ತು ಹಿರಿಯ ಸ್ಥಾನಿಕ 527 ಸೇರಿ ಒಟ್ಟು 4,312 ಸೀಟುಗಳು ಮಂಜೂರಾಗಿವೆ. ಶೇ. 100ರಷ್ಟು ಶಿಷ್ಯವೇತನ ಪರಿಷ್ಕರಣೆಗೆ ಈ ಸ್ಥಾನಿಕ ವೈದ್ಯರು ಬೇಡಿಕೆ ಇಟ್ಟಿದ್ದರು. ಅವರೊಂದಿಗೆ ಚರ್ಚಿಸಿ, ಶೇ.25 ಪರಿಷ್ಕರಿಸಲಾಗಿದೆ. -ಡಾ| ಶರಣ ಪ್ರಕಾಶ ಪಾಟೀಲ್‌, ವೈದ್ಯಕೀಯ ಶಿಕ್ಷಣ ಸಚಿವ

ಟಾಪ್ ನ್ಯೂಸ್

Nagamangala Case: ಎನ್‌ಐಎ ತನಿಖೆಗೆ ಬಿಜೆಪಿ ಆಗ್ರಹ

Nagamangala Case: ಎನ್‌ಐಎ ತನಿಖೆಗೆ ಬಿಜೆಪಿ ಆಗ್ರಹ

goa

Goa Beachನಲ್ಲಿ ಮದುವೆ: ದಿನಕ್ಕೆ 1 ಲಕ್ಷ ರೂ. ಶುಲ್ಕ

1-ddsadsa

Amit Shah; ತಡೆಯದಿದ್ದರೆ ಅಕ್ರಮ ವಲಸಿಗರೇ ಬಹುಸಂಖ್ಯಾಕರಾಗುತ್ತಾರೆ!

Pushkar sing dhami

Uttarakhand: ಪ್ರತಿಭಟನಕಾರರಿಂದ ಹಾನಿ ನಷ್ಟ ಭರಿಸುವ ಕಾನೂನು ಜಾರಿ

ದಸರೆಗೆ ಗಂಗಾರತಿ ಮಾದರಿಯಲ್ಲಿ ಕಾವೇರಿ ಆರತಿ: ಹರಿದ್ವಾರಕ್ಕೆ ಚಲುವರಾಯಸ್ವಾಮಿ ನಿಯೋಗ ಭೇಟಿ

Dasara: ಗಂಗಾರತಿ ಮಾದರಿಯಲ್ಲಿ ಕಾವೇರಿ ಆರತಿ; ಹರಿದ್ವಾರಕ್ಕೆ ಚಲುವರಾಯಸ್ವಾಮಿ ನಿಯೋಗ ಭೇಟಿ

BJP ಶಾಸಕ ಮುನಿರತ್ನಗೆ ಎಸ್‌ಐಟಿ ಕುಣಿಕೆ? ರಾಜ್ಯಪಾಲರಿಗೂ ಶೀಘ್ರ ದೂರು

BJP ಶಾಸಕ ಮುನಿರತ್ನಗೆ ಎಸ್‌ಐಟಿ ಕುಣಿಕೆ? ರಾಜ್ಯಪಾಲರಿಗೂ ಶೀಘ್ರ ದೂರು

Pager ಸ್ಫೋಟಕ್ಕೆ ಕೇರಳ ವ್ಯಕ್ತಿಯ ಸಂಸ್ಥೆ ನಂಟು!

Pager ಸ್ಫೋಟಕ್ಕೆ ಕೇರಳ ವ್ಯಕ್ತಿಯ ಸಂಸ್ಥೆ ನಂಟು!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Nagamangala Case: ಎನ್‌ಐಎ ತನಿಖೆಗೆ ಬಿಜೆಪಿ ಆಗ್ರಹ

Nagamangala Case: ಎನ್‌ಐಎ ತನಿಖೆಗೆ ಬಿಜೆಪಿ ಆಗ್ರಹ

ದಸರೆಗೆ ಗಂಗಾರತಿ ಮಾದರಿಯಲ್ಲಿ ಕಾವೇರಿ ಆರತಿ: ಹರಿದ್ವಾರಕ್ಕೆ ಚಲುವರಾಯಸ್ವಾಮಿ ನಿಯೋಗ ಭೇಟಿ

Dasara: ಗಂಗಾರತಿ ಮಾದರಿಯಲ್ಲಿ ಕಾವೇರಿ ಆರತಿ; ಹರಿದ್ವಾರಕ್ಕೆ ಚಲುವರಾಯಸ್ವಾಮಿ ನಿಯೋಗ ಭೇಟಿ

BJP ಶಾಸಕ ಮುನಿರತ್ನಗೆ ಎಸ್‌ಐಟಿ ಕುಣಿಕೆ? ರಾಜ್ಯಪಾಲರಿಗೂ ಶೀಘ್ರ ದೂರು

BJP ಶಾಸಕ ಮುನಿರತ್ನಗೆ ಎಸ್‌ಐಟಿ ಕುಣಿಕೆ? ರಾಜ್ಯಪಾಲರಿಗೂ ಶೀಘ್ರ ದೂರು

Lok Adalat: 35.84 ಲಕ್ಷ ಪ್ರಕರಣ ಇತ್ಯರ್ಥ

Lok Adalat: 35.84 ಲಕ್ಷ ಪ್ರಕರಣ ಇತ್ಯರ್ಥ

High Court: ಅಶ್ಲೀಲ ವೀಡಿಯೋ ಹಂಚಿಕೆ: ಪ್ರೀತಂಗೌಡ ವಿರುದ್ಧದ ಪ್ರಕರಣ ವಿಚಾರಣೆ ಮುಂದಕ್ಕೆ

High Court: ಅಶ್ಲೀಲ ವೀಡಿಯೋ ಹಂಚಿಕೆ: ಪ್ರೀತಂಗೌಡ ವಿರುದ್ಧದ ಪ್ರಕರಣ ವಿಚಾರಣೆ ಮುಂದಕ್ಕೆ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Nagamangala Case: ಎನ್‌ಐಎ ತನಿಖೆಗೆ ಬಿಜೆಪಿ ಆಗ್ರಹ

Nagamangala Case: ಎನ್‌ಐಎ ತನಿಖೆಗೆ ಬಿಜೆಪಿ ಆಗ್ರಹ

goa

Goa Beachನಲ್ಲಿ ಮದುವೆ: ದಿನಕ್ಕೆ 1 ಲಕ್ಷ ರೂ. ಶುಲ್ಕ

1-ddsadsa

Amit Shah; ತಡೆಯದಿದ್ದರೆ ಅಕ್ರಮ ವಲಸಿಗರೇ ಬಹುಸಂಖ್ಯಾಕರಾಗುತ್ತಾರೆ!

Pushkar sing dhami

Uttarakhand: ಪ್ರತಿಭಟನಕಾರರಿಂದ ಹಾನಿ ನಷ್ಟ ಭರಿಸುವ ಕಾನೂನು ಜಾರಿ

ದಸರೆಗೆ ಗಂಗಾರತಿ ಮಾದರಿಯಲ್ಲಿ ಕಾವೇರಿ ಆರತಿ: ಹರಿದ್ವಾರಕ್ಕೆ ಚಲುವರಾಯಸ್ವಾಮಿ ನಿಯೋಗ ಭೇಟಿ

Dasara: ಗಂಗಾರತಿ ಮಾದರಿಯಲ್ಲಿ ಕಾವೇರಿ ಆರತಿ; ಹರಿದ್ವಾರಕ್ಕೆ ಚಲುವರಾಯಸ್ವಾಮಿ ನಿಯೋಗ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.