Australia: ಕೆಲಸದ ಅವಧಿ ಬಳಿಕ ಬಾಸ್ ನೌಕರರ ಮಧ್ಯೆ ಸಂಪರ್ಕ ಇಲ್ಲ
Team Udayavani, Aug 24, 2024, 6:45 AM IST
ಹೊಸದಿಲ್ಲಿ: ಕೆಲಸದ ಅವಧಿ ಮುಗಿದ ಬಳಿಕ ತಮ್ಮ ಬಾಸ್‌ಗಳನ್ನು ಅಲಕ್ಷ್ಯ ಮಾಡಬಹುದಾದ ಕಾನೂನನ್ನು ಆಸ್ಟ್ರೇಲಿಯಾದಲ್ಲಿ ಜಾರಿ ಮಾಡಲಾ ಗಿದೆ. ನೌಕರರ ಮಾನಸಿಕ ಆರೋಗ್ಯ ಕಾಪಾಡಲು ಈ ಕಾನೂನನ್ನು ಜಾರಿ ಮಾಡಲಾಗಿದೆ.
“ರೈಟ್ ಟು ಡಿಸ್‌ಕನೆಕ್ಟ್’ ಎಂದು ಕರೆ ಯಲ್ಪಡುವ ಈ ಕಾನೂನಿಗೆ ಸಂಸತ್ತು ಒಪ್ಪಿಗೆ ನೀಡಿತ್ತು. ಇದೀಗ ಆ.26ರಿಂದ ಇದು ಜಾರಿಯಾಗಲಿದೆ. ಇದರಿಂದಾಗಿ ಕೆಲಸದ ಅವಧಿ ಮುಕ್ತಾಯವಾದ ಬಳಿಕವೂ ನೌಕಕರನ್ನು ಗಮನಿಸು ವುದು, ಕೆಲಸ ಮಾಡಿಸುವುದು ಇಂತಹ ವುಗಳಿಗೆ ಅವಕಾಶ ಇರುವುದಿಲ್ಲ.
ಈ ಕಾನೂನಿಗೆ ಹಲವು ಕಂಪೆನಿಗಳು ವಿರೋಧ ವ್ಯಕ್ತಪಡಿಸಿದ್ದು, ಅನಿವಾರ್ಯ ಕೆಲಸ ಮಾಡುವ ನೌಕರರಿಗೆ ಇಂತಹ ಅವಕಾಶ ನೀಡುವುದರಿಂದ ತೊಂದರೆಗ ಳಾಗಬಹುದು ಎಂದು ವಾದಿಸಿದ್ದವು. ಅಲ್ಲದೇ ಹೆಚ್ಚಿನ ಅಧ್ಯಯನ ನಡೆಸದೇ ಆತುರವಾಗಿ ಸರಕಾರ ಈ ನಿರ್ಧಾರ ವನ್ನು ಕೈಗೊಂಡಿದೆ ಎಂದಿದ್ದವು.
ಕಚೇರಿ ಅವಧಿಯ ಬಳಿಕ ಮೊಬೈಲ್ ಫೋನ್‌ಗಳನ್ನು ಸ್ವಿಚ್ ಆಫ್ ಮಾಡ ಬಹುದಾದಂತಹ ಅವಕಾಶಗಳು ಈಗಾಗಲೇ ಫ್ರಾನ್ಸ್, ಜರ್ಮನಿ ಮತ್ತು ಯುರೋಪಿಯನ್ ಯೂನಿಯನ್‌ನ ಇತರ ದೇಶಗಳಲ್ಲಿ ಜಾರಿಯಲ್ಲಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pakistan: ಪಾಕ್‌ನಲ್ಲಿ ಹಿಂಸಾಚಾರ; ಒಟ್ಟು 37 ಮಂದಿ ಸಾವು
Adani; ಆಸೀಸ್ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ
London: ಶಂಕಾಸ್ಪದ ಲಗೇಜ್ ಪತ್ತೆ: ಲಂಡನ್ ಏರ್‌ಪೋರ್ಟ್ ಖಾಲಿ ಮಾಡಿಸಿ ತನಿಖೆ!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.