Report; ಸೆಪ್ಟಂಬರ್ನಲ್ಲಿ ನಡೆವ ಜನಗಣತಿ ಜತೆಗೇ ಜಾತಿಗಣತಿ?
ಮಿತ್ರ ಪಕ್ಷ, ವಿಪಕ್ಷಗಳ ಒತ್ತಡ | ಪಿಎಂ ಕಚೇರಿ ಸಮ್ಮತಿ ಬಳಿಕ ತೀರ್ಮಾನ?
Team Udayavani, Aug 24, 2024, 1:51 AM IST
ಹೊಸದಿಲ್ಲಿ: ಮುಂದಿನ ತಿಂಗಳು ಆರಂಭವಾಗಲಿದೆ ಎನ್ನಲಾಗಿರುವ ಜನಗಣತಿ ಜತೆಗೆ ಜಾತಿಗಣತಿ ನಡೆಸಲೂ ಕೇಂದ್ರ ಸರಕಾರ ಚಿಂತನೆ ನಡೆಸಿದೆ ಎನ್ನಲಾಗಿದೆ. ಕಾಂಗ್ರೆಸ್ ನೇತೃತ್ವದ ವಿಪಕ್ಷ ಒಕ್ಕೂಟ, ಎನ್ಡಿಎ ಮಿತ್ರ ಪಕ್ಷವಾಗಿರುವ ಜೆಡಿಯು, ಎಲ್ಜೆಪಿ (ಪಾಸ್ವಾನ್) ಈ ಬಗ್ಗೆ ಒಲವು ಹೊಂದಿರುವ ಹಿನ್ನೆಲೆಯಲ್ಲಿ ಜನಗಣತಿ ಜತೆಗೇ ಜಾತಿಗಣತಿ ನಡೆಸುವ ಬಗ್ಗೆ ಸರಕಾರ ಪರಾಮರ್ಶೆ ನಡೆಸುತ್ತಿದೆ ಎಂದು ವರದಿಯೊಂದು ತಿಳಿಸಿದೆ.
ಕೇಂದ್ರ ಗೃಹ ಸಚಿವಾಲಯ ಮತ್ತು ಕಾರ್ಯಕ್ರಮ ಅನುಷ್ಠಾನ, ಸಾಂಖ್ಯಿಕ ಸಚಿವಾಲಯ ಜನಗಣತಿ ನಡೆಸುವ ಬಗ್ಗೆ ಅಂತಿಮ ಹಂತದ ಸಿದ್ಧತೆ ನಡೆಸಿರುವಂತೆಯೇ ಜಾತಿ ಗಣತಿ ನಡೆಸುವ ವಿಚಾರ ವ್ಯಕ್ತವಾಗಿದೆ. ಆದರೆ ಈ ಬಗ್ಗೆ ಪ್ರಧಾನಮಂತ್ರಿಗಳ ಕಚೇರಿಯಿಂದ ಸಮ್ಮತಿ ದೊರೆತ ಬಳಿಕ ನಿರ್ಧಾರ ಹೊರಬೀಳುವ ಸಾಧ್ಯತೆ ಇದೆ.
ದೇಶಕ್ಕೆ ಸ್ವಾತಂತ್ರ್ಯ ಬಂದ ಬಳಿಕ ಇದುವರೆಗೆ ಜಾತಿ ಗಣತಿ ನಡೆಸಲಾಗಿಲ್ಲ. 2011ರಲ್ಲಿ ಯುಪಿಎ ಸರಕಾರ ದೇಶಾದ್ಯಂತ ಜಾತಿಗಣತಿ ನಡೆಸಿದ್ದರೂ, ವರದಿ ಬಿಡುಗಡೆ ಮಾಡಿರಲಿಲ್ಲ. 2015ರಲ್ಲಿ ಕರ್ನಾಟಕದ ಕಾಂಗ್ರೆಸ್ ಸರಕಾರ ಜಾತಿಗಣತಿ ನಡೆಸಿತ್ತು. ವಿಪಕ್ಷ ಕಾಂಗ್ರೆಸ್ ಜಾತಿಗಣತಿ ನಡೆಸಲು ಕೇಂದ್ರಕ್ಕೆ ಆಗ್ರಹಿಸುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Monkeypox; ಕೇರಳದಲ್ಲಿ ಮತ್ತೊಂದು ಶಂಕಿತ ಮಂಕಿಪಾಕ್ಸ್ ಪತ್ತೆ: ದೇಶದಲ್ಲಿ 2ನೇ ಪ್ರಕರಣ
Kolkata incident; ಸಿಬಿಐ ವರದಿ ಕಳವಳಕಾರಿ: ಸುಪ್ರೀಂ
Mallikarjun Kharge; ನಿಮ್ಮ ನಾಯಕರ ಬಾಯಿಗೆ ಬೀಗ ಹಾಕಿ: ಮೋದಿಗೆ ಖರ್ಗೆ ಪತ್ರ
Inflation: 4 ತಿಂಗಳ ಕನಿಷ್ಠಕ್ಕೆ ಸಗಟು ಹಣದುಬ್ಬರ: ಆಗಸ್ಟ್ನಲ್ಲಿ ಶೇ.1.31
Jio ನೆಟ್ವರ್ಕ್ನಲ್ಲಿ ತಾಂತ್ರಿಕ ದೋಷ: ಗ್ರಾಹಕರ ಪರದಾಟ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.