Desi Swara: ನ್ಯೂಯಾರ್ಕ್‌ ಮತ್ತು ನ್ಯೂಜೆರ್ಸಿ: ಆಕರ್ಷಿಸಿದ ಇಂಡಿಯಾ ಡೇ ಪರೇಡ್‌

ವಿದೇಶಿ ನೆಲದಲ್ಲಿ ಅನಿವಾಸಿಗರ ತ್ರಿವರ್ಣ ಸಂಭ್ರಮ -

Team Udayavani, Aug 24, 2024, 10:03 AM IST

Desi Swara: ನ್ಯೂಯಾರ್ಕ್‌ ಮತ್ತು ನ್ಯೂಜೆರ್ಸಿ: ಆಕರ್ಷಿಸಿದ ಇಂಡಿಯಾ ಡೇ ಪರೇಡ್‌

ಅಮೆರಿಕ: ಅಮೆರಿಕದಲ್ಲಿ ಅತೀ ಹೆಚ್ಚು ಭಾರತೀಯರು ವಾಸಿಸುವ ನಗರಗಳಲ್ಲಿ ನ್ಯೂಯಾರ್ಕ್‌ ಮತ್ತು ನ್ಯೂಜೆರ್ಸಿ ಮುಂಚೂಣಿಯಲ್ಲಿವೆ. ಈ ಎರಡೂ ನಗರಗಳಲ್ಲಿ ಅಮೆರಿಕದ ಹಬ್ಬಗಳ ಜತೆಜತೆಗೆ ಭಾರತದ ಬಹುತೇಕ ಹಬ್ಬಗಳನ್ನು ಅದ್ದೂರಿಯಾಗಿ ಆಚರಿಸಲಾಗುತ್ತದೆ. ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಈ ರೀತಿಯ ಹಬ್ಬಗಳನ್ನು, ಹೆಚ್ಚಿನವರು ಉದ್ಯೋಗದಲ್ಲಿರುವುದರಿಂದ ವಾರಾಂತ್ಯದಲ್ಲಿ ಆಚರಿಸುತ್ತಾರೆ. ಆದ್ದರಿಂದ ಈ ಸಾಲಿನ ಭಾರತದ ಸ್ವಾತಂತ್ರ್ಯೋತ್ಸವವನ್ನು ನ್ಯೂಜೆರ್ಸಿಯಲ್ಲಿ ಆ.11ರಂದು ಮತ್ತು ನ್ಯೂಯಾಕ್‌ನಲ್ಲಿ ಆ.18ರಂದು ಆಚರಿಸಲಾಯಿತು. ಆ. 11ರಂದು ನ್ಯೂಜೆರ್ಸಿಯ Oak Tree Road ಎಂಬಲ್ಲಿ ಮೆರವಣಿಗೆಯಲ್ಲಿ ಸಾಗಿದ ಇಂಡಿಯಾ ಡೇ ಪರೇಡ್‌ ಅತ್ಯಾಕರ್ಷಕವಾಗಿತ್ತು.

ಈ ಕಾರ್ಯಕ್ರಮದಲ್ಲಿ ಬಾಲಿವುಡ್‌ ನಟ ಸೋನುಸೂದ್‌ ಮತ್ತು ಖ್ಯಾತ ಹಿಂದಿ ಚಿತ್ರನಟಿ ಮತ್ತು ಗಾಯಕಿ ಸೋನು ಚೌಹಾಣ್‌ ಪ್ರಧಾನ ಆಕರ್ಷಣೆಯಾಗಿದ್ದರು. ಈ ಮೆರವಣಿಗೆಯ ಪ್ರಮುಖ ಆಕರ್ಷಣೆ ಪುರಿ ಜಗನ್ನಾಥ ದೇವಸ್ಥಾನದ ರಥ. ನೆರೆದವರಿಗೆಲ್ಲರಿಗೂ ರಥವನ್ನು ಎಳೆಯುವ ಅವಕಾಶವೂ ಇತ್ತು.

ವ್ಯಾಪಾರಿಗಳು ತಮ್ಮ ವ್ಯವಹಾರಗಳಿಗೆ ಸಂಬಂಧಿಸಿದಂತೆ ಆಹಾರ ಮಳಿಗೆಯಿಂದ ಆಭರಣ ಮಳಿಗೆಗಳ ಸ್ತಬ್ಧ ಚಿತ್ರ ಮತ್ತು ಪ್ರಚಾರ ಮಳಿಗೆಗಳನ್ನು ತೆರೆದಿದ್ದರು. ಈ ಮೆರವಣಿಗೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಬಟ್ಟೆಯಿಂದ ತಯಾರಿಸಿದ ತ್ರಿವರ್ಣ ಧ್ವಜವನ್ನು, ಜತೆಗೆ ಆಹಾರದ ಪೊಟ್ಟಣ, ನೀರಿನ ಬಾಟಲಿಗಳನ್ನೂ ಉಚಿತವಾಗಿ ಹಂಚಲಾಗಿತ್ತು. ಸಮಾರಂಭವನ್ನು ಪ್ರಾಯೋಜಿಸಿದ ಸಂಘಸಂಸ್ಥೆಗಳ ವತಿಯಿಂದಲೂ ಸ್ತಬ್ಧ ಚಿತ್ರಗಳಿದ್ದವು.

ಆ.18 ರಂದು ನ್ಯೂಯಾರ್ಕ್‌ನಲ್ಲಿ ನಡೆದ ಆಚರಣೆಯ ಮೆರವಣಿಗೆಯು East 27th street madison avenue ರಸ್ತೆಯಲ್ಲಿ ನಡೆಯಿತು. ಇದರಲ್ಲೂ ಗಣಪತಿ ಸ್ತಬ್ಧ ಚಿತ್ರದ ಜತೆಗೆ ಪ್ರಮುಖ ಆಕರ್ಷಣೆಯಾಗಿ ಅಯೋಧ್ಯೆಯ ಶ್ರೀ ರಾಮಮಂದಿರದ ಸ್ತಬ್ಧ ಚಿತ್ರ ಗಮನ ಸೆಳೆಯಿತು. ಎಂದಿನಂತೆ ನ್ಯೂಯಾರ್ಕ್‌ ನಗರದ ವ್ಯಾಪಾರ ಮಳಿಗೆಗಳು ಮತ್ತು ಭಾರತದ ಬ್ಯಾಂಕ್‌ಗಳ ಪ್ರದರ್ಶನ ಮಳಿಗೆಗಳು ಮೆರವಣಿಗೆ ಸಾಗುವ ದಾರಿಯುದ್ದಕ್ಕೂ ಇದ್ದವು. ಈ ಸಮಯದಲ್ಲಿ ಹಿಂದಿ ಚಿತ್ರ ನಟ ಪಂಕಜ್‌ ತ್ರಿಪಾಠಿ, ಸೋನಾಕ್ಷಿ ಸಿನ್ಹಾ, ಆಕೆಯ ಪತಿ ಇಕ್ಬಾಲ್‌, ಮತ್ತು ಮನೋಜ್‌ ತಿವಾರಿ ಮೆರವಣಿಗೆಯಲ್ಲಿ ಸಾಗಿ ಬಂದು ನೆರೆದವರ ಮನರಂಜಿಸಿದ್ದರು.
ಮೆರವಣಿಗೆಯ ನಡುವೆ ಒಮ್ಮೆ ಮತ್ತು ಕೊನೆಯಲ್ಲಿ ನಿರ್ಮಿಸಲಾದ ವೇದಿಕೆಯಲ್ಲಿ ಭಾರತದಿಂದ ಆಗಮಿಸಿದ್ದ ಕಲಾವಿದರಿಂದ ಮನರಂಜನ ಕಾರ್ಯಕ್ರಮಗಳೂ ಇದ್ದವು.

ಮಳಿಗೆಗಳಲ್ಲಿ ವ್ಯಾಪಾರಿಗಳು ತಮ್ಮ ಉತ್ಪನ್ನಗಳನ್ನು ಚಿಕ್ಕಚಿಕ್ಕ ಚೀಲಗಳಲ್ಲಿ, ಉದಾಹರಣೆಗೆ ಆಹಾರ ಉತ್ಪನ್ನಗಳಿಗೆ ಖ್ಯಾತಿ ಪಡೆದಿರುವ ಲಕ್ಷ್ಮೀ ಬ್ರಾಂಡ್‌ನ‌ವರು ತಲಾ 180ಗ್ರಾ ಬಾಸುಮತಿ ಅಕ್ಕಿ ಮತ್ತು ಕಡಲೆ ಹಿಟ್ಟು ನೀಡಿದರೆ, ಬೇರೆಯವರೂ ತಮ್ಮ ಮಳಿಗೆಯ ಹೆಸರಿರುವ ಚಿಕ್ಕಚಿಕ್ಕ ಹೆಣಿಗೆಗಳನ್ನು, ಸ್ಥಳೀಯ ಪತ್ರಿಕೆಗಳನ್ನು ಆಕರ್ಷಕ ಚೀಲದಲ್ಲಿ ಹಾಕಿ ಹಂಚುತ್ತಿದ್ದರು. ಸದ್ಗುರು, ಬ್ರಹ್ಮ ಕುಮಾರಿ, ವತಿಯಿಂದಲೂ ಪ್ರಚಾರ ಸಾಮಗ್ರಿಗಳನ್ನು ಹಂಚಲಾಗಿತ್ತು. ಮೆರವಣಿಗೆಯುದ್ದಕ್ಕೂ ಜಯಘೋಷ ಕೇಳಿ ಬರುತ್ತಿತ್ತು. ಎಲ್ಲೆಡೆ ಅಮೆರಿಕದ ರಾಷ್ಟ್ರ ಧ್ವಜ ಮತ್ತು ಭಾರತದ ಧ್ವಜಗಳು ರಾರಾಜಿಸುತ್ತಿದ್ದವು.

ಮಾಹಿತಿ: ವಂದಿತ ಗೌತಮ್‌ ಕಿಣಿ, ನ್ಯೂಜೆರ್ಸಿ

ಟಾಪ್ ನ್ಯೂಸ್

BY-Vijayendra

Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ

1-deee

Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3

Brahmavar: ಕೊಕ್ಕರ್ಣೆ; ಜುಗಾರಿ ನಿರತನ ಬಂಧನ

8

Kundapura: ಬೋಟ್‌ ರೈಡರ್‌ ನಾಪತ್ತೆ; ಸಿಗದ ಸುಳಿವು

BY-Vijayendra

Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ

13

Kundapura: ಮನೆಗೆ ನುಗ್ಗಿ ಚಿನ್ನಾಭರಣ ಕಳವು

POlice

Brahmavar: ಬೆಳ್ಮಾರು; ಕೋಳಿ ಅಂಕಕ್ಕೆ ದಾಳಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

3

Brahmavar: ಕೊಕ್ಕರ್ಣೆ; ಜುಗಾರಿ ನಿರತನ ಬಂಧನ

8

Kundapura: ಬೋಟ್‌ ರೈಡರ್‌ ನಾಪತ್ತೆ; ಸಿಗದ ಸುಳಿವು

BY-Vijayendra

Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ

13

Kundapura: ಮನೆಗೆ ನುಗ್ಗಿ ಚಿನ್ನಾಭರಣ ಕಳವು

POlice

Brahmavar: ಬೆಳ್ಮಾರು; ಕೋಳಿ ಅಂಕಕ್ಕೆ ದಾಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.