Social activists ಭಯದ ನೆರಳಲ್ಲೆ ಜೀವಿಸುವ ಅನಿವಾರ್ಯತೆ

ದುಬಾರಿ ಶುಲ್ಕ ಭರಿಸಲು ಹೆಣಗಾಟ, ಪ್ರಾಣರಕ್ಷಣೆಗೆ ಪರದಾಡುವ ಪರಿಸ್ಥಿತಿ

Team Udayavani, Aug 24, 2024, 6:26 PM IST

1-mudhol

ಹಣಮಂತ ವಸಂತ ಸಿಂಧೆ, ಅಮರನಾಥರೆಡ್ಡಿ ಎಸ್ಪಿ

ಮುಧೋಳ: ಸರ್ಕಾರದ ದುಬಾರಿ ರಕ್ಷಣಾ ಶುಲ್ಕ ಭರಿಸಲು ಸಾಧ್ಯವಾಗದೆ ಭ್ರಷ್ಟ ರಾಜಕಾರಣಿಗಳು, ಸರ್ಕಾರಿ ಅಧಿಕಾರಿಗಳು ಸೇರಿದಂತೆ ಅನ್ಯಾಯದ ಹಾದಿಯಲ್ಲಿ ನಡೆಯುವವರ ಬಣ್ಣ ಬಯಲು ಮಾಡುವ ಸಾವಿರಾರು ಸಾಮಾಜಿಕ ಕಾರ್ಯಕರ್ತರು ನಿತ್ಯ ನಿರಂತರ ಭಯದ ನೆರಳಲ್ಲಿ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಸಾಮಾಜಿಕ ಕಾರ್ಯಕರ್ತರಿಗೆ ಬೆದರಿಕೆ ಕರೆಗಳು, ಜೀವಭಯ ವಾತಾವರಣ ನಿರ್ಮಾಣವಾದಾಗ ರಕ್ಷಣೆ‌ ಕೋರಿ‌ ಸರ್ಕಾರಕ್ಕೆ‌ ಮೊರೆಹೋದರೆ, ರಕ್ಷಣೆಗೆ ಸರ್ಕಾರ ವಿಧಿಸಿರುವ ಶುಲ್ಕ ಭರಿಸುವುದು ಬಡಸಾಮಾಜಿಕ ಹೋರಾಟಗಾರರಿಗೆ ಸಾಧ್ಯವಾಗದೆ ಭಯದ ತೂಗುಕತ್ತಿಯ ನೆರಳಿನಲ್ಲಿಯೇ ಧೈರ್ಯದಿಂದ ಜೀವಿಸಬೇಕಾದ ಅನಿವಾರ್ಯತೆ ಇದೆ.

ಭ್ರಷ್ಟರಿಗೆ ಕಾನೂನಿನ ಕುಣಿಕೆ ಬಿಗಿಗೊಳಿಸಲು ಹೋರಾಡುವ ಮಾಹಿತಿ ಹಕ್ಕು ಹೋರಾಟಗಾರರು, ಸಾಮಾಜಿಕ ಕಾರ್ಯಕರ್ತರು ಎಷ್ಟೋಸಾರಿ ಎದುರಾಳಿಗ ಕುತಂತ್ರಕ್ಕೆ ಬಲಿಯಾದ ಉದಾಹರಣೆಗಳು ನಮ್ಮ ಕಣ್ಣಮುಂದೆಯೇ ಇವೆ.

ತಾಲೂಕಿನಲ್ಲಿಯೂ ನಡೆದಿವೆ ದಾಳಿಗಳು
ಮುಧೋಳ ತಾಲೂಕಿನಲ್ಲಿಯೂ ಹೋರಾಟಗಾರ ಹಾಗೂ ಮಾಹಿತಿ ಹಕ್ಕು ಕಾರ್ಯಕರ್ತರ ಮೇಲೆ‌ ಹಲವಾರು ಬಾರಿ ದಾಳಿಗಳು ನಡೆದಿರುವ ಉದಾಹರಣೆಗಳೂ ಉಂಟು. ಭ್ರಷ್ಟರ ವಿರುದ್ಧ ಹೋರಾಟದ ಸಂದರ್ಭದಲ್ಲಿ ಪೋನ್ ಕರೆಗಳ ಮೂಲಕ ಜೀವಭಯ ಹುಟ್ಟಿಸುವುದು. ಮೂರನೇ ವ್ಯಕ್ತಿಗಳ ಮೂಲಕ ಸಂಧಾನದ ನೆಪದಲ್ಲಿ ದಾಳಿ ನಡೆಸುವುದು ಸೇರಿದಂತೆ ಹಲವಾರು ಜೀವಘಾತಕ ಕಾರ್ಯಕ್ಕೆ ಪಟ್ಟಭದ್ರ ಹಿತಾಸಕ್ತಿಗಳು ಮುಂದಾಗಿವೆ. ಎಷ್ಟೋಬಾರಿ ಹೋರಾಟಗಾರರು ಜೀವನ್ಮರಣ ಹೊಡೆದಾಟದಂತಹ ಪ್ರಸಂಗಗಳಲ್ಲಿ ಕೂದಲೆಳೆ ಅಂತರದಲ್ಲಿ ಬಚಾವಾಗಿದ್ದಾರೆ. ಈ ಬಗ್ಗೆ ಹೋರಾಟಗಾರರು ರಕ್ಷಣೆ ಕೋರಿ ಪೊಲೀಸ್ ಮೆಟ್ಟಿಲು ಏರಿದರೆ ತಾತ್ಕಾಲಿಕ ರಕ್ಷಣೆ ಹೊರತುಪಡಿಸಿ ಮತ್ತ್ಯಾವ ಭದ್ರತೆಯೂ ದೊರೆತಿಲ್ಲ. ಒಂದುವೇಳೆ ಸಂಪೂರ್ಣ ರಕ್ಷಣೆ ಬೇಕೆಂದರೆ ಸರ್ಕಾರ ನಿಗಧಿಪಡಿಸಿರುವ ಶುಲ್ಕ ಭರಿಸಬೇಕು. ಇದರಿಂದ ಹೋರಾಟಗಾರರ ಆತ್ಮಸ್ಥರ್ಯ ಕುಗ್ಗಿ ಹೋರಾಟದಿಂದ ಅನಿವಾರ್ಯವಾಗಿ ಹಿಂದೆ ಸರಿಯುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.

ರಕ್ಷಣೆಗೆ ದುಬಾರಿ ಶುಲ್ಕ
ಸಾಮಾಜಿಕ ಹೋರಾಟಗಾರ ಹನಮಂತ ಶಿಂಧೆ ಮಾಹಿತಿ ಹಕ್ಕಿನಡಿ‌ ಪಡೆದುಕೊಂಡಿರುವ ಮಾಹಿತಿಯ ಪ್ರಕಾರ ಪೊಲೀಸ್ ಇಲಾಖೆಯ ರಕ್ಷಣೆಗೆ ಒಂದು ದಿನಕ್ಕೆ ಕನಿಷ್ಠ 10344ರಿಂದ ಗರಿಷ್ಠ 15037ರೂ. ಪಾವತಿಸಬೇಕು. ಬಡ ಹಾಗೂ ಮಧ್ಯಮ ಕುಟುಂದವರಿರುವ ಹೋರಾಟಗಾರರಿಗೆ ಇಷ್ಟೊಂದು ಪ್ರಮಾಣದ ಶುಲ್ಕ ಭರಿಸುವುದು ಅಸಾಧ್ಯಾಗಿದ್ದು, ಅನಿವಾರ್ಯವಾಗಿ ಭಯದ ನೆರಳಲ್ಲಿ ಓಡಾಡುವಂತಾಗಿದೆ.

ಬಡ-ಮಧ್ಯಮ ಕುಟುಂಬದವರೆ ಹೆಚ್ಚು
ಸಾಮಾಜಿಕ ಹಾಗೂ ಮಾಹಿತಿ ಹಕ್ಕು ಹೋರಾಟಗಾರರು ಹೆಚ್ಚಾಗಿ ಬಡ ಹಾಗೂ‌ ಮಧ್ಯಮ ಕುಟುಂಬದ ಹಿನ್ನೆಲೆಯಿಂದ ಬಂದವರೆ ಹೆಚ್ಚು. ಅಂತವರಿಂದ ಸರ್ಕಾರ ನಿಗದಿಪಡಿಸಿರುವ ದುಬಾರಿ ವೆಚ್ಚ ಭರಿಸಲು‌ ಕಷ್ಟಸಾಧ್ಯ. ಆದ್ದರಿಂದ ಶುಲ್ಕವನ್ನು ಇಳಿಕೆ ಮಾಡಬೇಕು ಎಂಬ ಕೂಗು ಹೋರಾಟಗಾರರ ವಲಯದಿಂದ ಕೇಳಿ ಬರುತ್ತಿದೆ.

ಶುಲ್ಕ ಇಳಿಕೆಯ ಕೂಗು
ರಕ್ಷಣೆಗಾಗಿ ಸರ್ಕಾರ ವಿಧಿಸಿರುವ ಶುಲ್ಕ ತುಂಬಾ ದುಬಾರಿಯಾಗಿದೆ. ಮಧ್ಯಮ ಹಾಗೂ ಬಡಕುಟುಂಬದ ಹಿನ್ನೆಲೆಯವರೇ ಹೆಚ್ಚಿನ ಪ್ರಮಾಣದಲ್ಲಿ ಹೋರಾಟದ ಹಾದಿಯಲ್ಲಿ‌ ನಡೆಯುತ್ತಾರೆ. ದಿನವೊಂದಕ್ಕೆ ಸಾವಿರಾರು ರೂ. ಭರಿಸಿ ರಕ್ಷಣೆ ಪಡೆದುಕೊಳ್ಳುವ ಶಕ್ತಿ ಅವರಿಗೆ ಇರುವುದಿಲ್ಲ. ಆದ್ದರಿಂದ ಹೋರಾಟಗಾರರಿಗೆ ರಕ್ಷಣಾ ಶುಲ್ಕದಲ್ಕಿ ವಿನಾಯಿತಿ ನೀಡಬೇಕು ಎಂಬುದು ಸಾಮಾಜಿಕ ಹಾಗೂ ಮಾಹಿತಿ ಹಕ್ಕು ಹೋರಾಟಗಾರರ ಆಗ್ರವಾಗಿದೆ.

ರಕ್ಷಣೆಗೆ ನೀಡಬೇಕಾಗಿರುವ ಶುಲ್ಕದ ವಿವರ
ಹುದ್ದೆ ಪ್ರತಿ 8ಗಂಟೆ 1ದಿನಕ್ಕೆ
ಪಿಎಸ್ಐ
ಆರ್.ಎಸ್ಐ 5009 15027
ಎಎಸ್ಐ
ಎಆರ್ ಎಸ್ಐ 4119 12357
ಎಎಚ್ಸಿ
ಎಎಚ್ಸಿ 3796 11388
ಸಿಪಿಸಿ
ಎಪಿಸಿ 3448 10344

ಪ್ರಾಮಾಣಿಕ ಹಾಗೂ ಕಾನೂನಿನಡಿ ಹೋರಾಟದ ಪರಿಣಾಮ. ಮಾಹಿತಿ ಹಕ್ಕು & ಸಾಮಾಜಿಕ ಕಾರ್ಯಕರ್ತರಿಂದ ಸರ್ಕಾರಕ್ಕೆ ಕೋಟ್ಯಂತರ ರೂ. ಮೌಲ್ಯದ ಆಸ್ತಿ & ತೆರಿಗೆ ಹಣ ರಕ್ಷಣೆ ಕ್ರೂಢೀಕರಣಗೊಂಡಿದೆ. ಆದರೆ ಇದರ ಪರಿಣಾಮವಾಗಿ ನನಗೆ ಪ್ರಾಣ ಬೆದರಿಕೆ ಇದ್ದರೂ ನನ್ನ ಪ್ರಾಣ ರಕ್ಷಣೆಗೆ ನೀಡಿಲ್ಲ. ಶುಲ್ಕರಹಿತವಾಗಿ ಭದ್ರತೆಗೆ ವಿನಂಸಿದರೂ ಗೃಹ ಮಂತ್ರಿಗಳು ಹಾಗೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಸೂಕ್ತ ಕಾನೂನು ಕ್ರಮ ಕೈಗೊಂಡಿಲ್ಲ. ನನ್ನ ಪ್ರಾಣಕ್ಕೆ ಏನಾದರು ಹಾನಿ ಸಂಭವಿಸಿದರೆ. ಸರ್ಕಾರದ ಸಂಬಂಧಿಸಿದ ಅಧಿಕಾರಿಗಳೆ ನೇರ ಹೊಣೆಗಾರರು. ಕಾರಣ ಗೃಹ ಸಚಿವರು ನನ್ನ ಪ್ರಾಣ ರಕ್ಷಣೆಗೆ ಶುಲ್ಕರಹಿತ ಭದ್ರತೆ ನೀಡಲು ಆದೇಶಿಸಬೇಕೆಂದು ವಿನಂತಿಸುತ್ತೇನೆ.
– ಹಣಮಂತ ವಸಂತ ಸಿಂಧೆ(ಮಾಹಿತಿ ಹಕ್ಕು &ಸಾಮಾಜಿಕ ಕಾರ್ಯಕರ್ತ)

ಶುಲ್ಕ ರಹಿತ ಪೊಲೀಸ್ ಭದ್ರತೆ ನೀಡಲು ಅದರದೇಯಾದ ಮಾನದಂಡಗಳಿವೆ. ವ್ಯಕ್ತಿಯ ಬಂದಿರುವ ಬೆದರಿಕೆ ಕರೆ ಹಾಗೂ ಇನ್ನೀತರ ಮಾನದಂಡಗಳನ್ನು ಅನುಸರಿಸಿ ಶುಲ್ಕರಹಿತ ಭದ್ರತೆ ನೀಡಬಹದು.
– ಅಮರನಾಥರೆಡ್ಡಿ ಎಸ್ಪಿ ಬಾಗಲಕೋಟೆ

ವರದಿ: ಗೋವಿಂದಪ್ಪ ತಳವಾರ

ಟಾಪ್ ನ್ಯೂಸ್

ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್‌ ಸೂರ್ಯವಂಶಿ

Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್‌ ಸೂರ್ಯವಂಶಿ

virat-Hotel

BBMP Notice: ವಿರಾಟ್‌ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್‌ಗೆ ಬಿಬಿಎಂಪಿ ನೋಟಿಸ್‌

Shabarimala

Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್‌ ಬುಕ್ಕಿಂಗ್‌ ತಾತ್ಕಾಲಿಕ ರದ್ದು

Dinesh-Gundurao

Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್‌

CT-Ravi-BJP

Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ

Mulki-kambala

Kambala Kalarava: ರಾಜ ಮನೆತನದ ಐತಿಹ್ಯವಿರುವ ಮೂಲ್ಕಿ ಸೀಮೆಯ ʼಅರಸು ಕಂಬಳʼ

IND-W vs WI: ವನಿತೆಯರ ಏಕದಿನ ಮುಖಾಮುಖಿ

IND-W vs WI: ವನಿತೆಯರ ಏಕದಿನ ಮುಖಾಮುಖಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ

ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

Krantiveer Brigade launched by worshipping the feet of 1008 saints: KS Eshwarappa

Politicss; 1008 ಸಾಧುಸಂತರ ಪಾದಪೂಜೆ‌ ಮೂಲಕ‌ ಕ್ರಾಂತಿವೀರ ಬ್ರಿಗೇಡ್‌ ಗೆ ಚಾಲನೆ: ಈಶ್ವರಪ್ಪ

India: ಒಂದು ದೇಶ ಒಂದು ಚುನಾವಣೆ ಜಾರಿ ಆಗಲಿ: ಪೇಜಾವರ ಸ್ವಾಮೀಜಿ

India: ಒಂದು ದೇಶ ಒಂದು ಚುನಾವಣೆ ಜಾರಿ ಆಗಲಿ: ಪೇಜಾವರ ಸ್ವಾಮೀಜಿ

Rabkavi Banhatti: ಲೋಕ ಅದಾಲತ್ ನಲ್ಲಿ ಒಂದಾದ ದಂಪತಿಗಳು

Rabkavi Banahatti: ಲೋಕ ಅದಾಲತ್ ನಲ್ಲಿ ಒಂದಾದ ದಂಪತಿಗಳು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್‌ ಸೂರ್ಯವಂಶಿ

Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್‌ ಸೂರ್ಯವಂಶಿ

virat-Hotel

BBMP Notice: ವಿರಾಟ್‌ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್‌ಗೆ ಬಿಬಿಎಂಪಿ ನೋಟಿಸ್‌

Shabarimala

Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್‌ ಬುಕ್ಕಿಂಗ್‌ ತಾತ್ಕಾಲಿಕ ರದ್ದು

Dinesh-Gundurao

Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್‌

CT-Ravi-BJP

Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.