S. L. Bhyrappa; ರಾಜ್ಯಪಾಲರಿಗೆ ಸರಕಾರದಿಂದ ಅಗೌರವ
ಆರೋಪಿತರು ಪ್ರಾಮಾಣಿಕರಾಗಿದ್ದರೆ ತನಿಖೆ ಎದುರಿಸಲಿ
Team Udayavani, Aug 25, 2024, 6:30 AM IST
ಮೈಸೂರು: ರಾಜ್ಯಪಾಲರು ಮುಖ್ಯ ಮಂತ್ರಿ ವಿರುದ್ಧ ಅಭಿಯೋಜನೆಗೆ ಅನುಮತಿ ನೀಡಿರುವುದನ್ನು ರಾಜ್ಯ ಸರಕಾರ ಸಮರ್ಥವಾಗಿ ಎದುರಿಸುವ ಬದಲಿಗೆ ರಾಜ್ಯಪಾಲರಿಗೆ ಅಗೌರವ ತರುವ ಕೆಲಸ ಮಾಡುತ್ತಿದೆ ಎಂದು ಹೇಳುವ ಮೂಲಕ ಕಾದಂಬರಿಕಾರ ಡಾ| ಎಸ್.ಎಲ್. ಭೈರಪ್ಪ, ರಾಜ್ಯ ಸರಕಾರದ ನಡೆಯನ್ನು ಟೀಕಿಸಿದರು.
ಮೈಸೂರಿನ ಗಣಪತಿ ಸಚ್ಚಿದಾ ನಂದ ಆಶ್ರಮದಲ್ಲಿ ಶನಿವಾರ ಏರ್ಪಡಿಸಿದ್ದ ಮೇಘಾಲಯ ರಾಜ್ಯಪಾಲ ಸಿ.ಎಚ್. ವಿಜಯ ಶಂಕರ್ ಅವರಿಗೆ ನಾಗರಿಕ ಸಮ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಭ್ರಷ್ಟಾಚಾರ ನಡೆದಾಗ ರಾಜ್ಯಪಾಲರು ನೇರವಾಗಿ ಕ್ರಮ ಕೈಗೊಳ್ಳಲು ಸಾಧ್ಯವಾಗದಿದ್ದರೂ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಬಹುದಾಗಿದೆ. ಆರೋಪ ಹೊತ್ತವರು ತನಿಖೆ ಎದುರಿಸುವ ಬದಲು ರಾಜ್ಯಪಾಲ ಹುದ್ದೆಗೆ ಅಗೌರವ ತೋರಿಸಬಾರದು ಎಂದರು.
ರಾಜ್ಯಪಾಲರ ಹುದ್ದೆ ಸಾಂವಿಧಾನಿಕ ಹುದ್ದೆಯಾಗಿದೆ. ಕಾಲಾನಂತರ ಇದು ಗಂಡಾಂತರಕಾರಿ ಸ್ಥಾನವಾಗಿ ಪರಿಣಮಿಸಿದೆ. ಕಾಲಾನಂತರ ವಿಪಕ್ಷಗಳು ಹುಟ್ಟಿಕೊಂಡ ಮೇಲೆ ರಾಜ್ಯಪಾಲರು ತಮ್ಮನ್ನು ನೇಮಕ ಮಾಡಿದ ಪಕ್ಷದ ಪರವಾಗಿ ಹಾಗೂ ವಿಪಕ್ಷಗಳ ನಿಲುವಿಗೆ ವಿರುದ್ಧವಾಗಿ ವರ್ತಿಸುತ್ತಾರೆ ಎಂಬ ಆಪಾದನೆಗಳು ಆರಂಭವಾದವು ಎಂದು ತಿಳಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.