Krishna Janmashtami Special: ಸಂಭವಾಮಿ ಯುಗೇ ಯುಗೇ…

ಕೃಷ್ಣ ನೀಡಿದ ಕೊನೆಯ ಸಂದೇಶ

Team Udayavani, Aug 26, 2024, 7:50 AM IST

Krishna Janmashtami Special: ಸಂಭವಾಮಿ ಯುಗೇ ಯುಗೇ…

ದ್ವಾರಕೆ ಎಂಬ ಹೆಸರೇ ಚಂದ. ಏನು ದ್ವಾರಕೆ ಅಂದರೆ? ಎಲ್ಲ ಕಡೆಯೂ ದ್ವಾರ ಅರ್ಥಾತ್‌ ಬಾಗಿಲುಗಳೇ ಇರುವುದು. ಯಾರೂ ಎಲ್ಲಿಂದಲೂ ಬರಬಹುದು. ಮುಕ್ತಪ್ರವೇಶದ ನಗರ ಅದು. ಕೃಷ್ಣನ ಹಾಗೆ. ಅವನಾದರೂ ಎಲ್ಲರಿಗೂ, ಎಲ್ಲದಕ್ಕೂ ತೆರೆದುಕೊಂಡವನು. ವಿಧಿ ನಿಷೇಧಗಳಿಲ್ಲದವನು. ಹಾಗಾಗಿ ಅವನು ಮಾಡಿದ್ದು ಧರ್ಮ!

ಕೃಷ್ಣ, ರಾಮನ ಹಾಗಲ್ಲ. ರಾಮನಾದರೋ ಆದರ್ಶದ ಮಾರ್ಗದಲ್ಲಿ ಸಾಗಿದ. ಅವನದು ಧರ್ಮದ ಮಾರ್ಗ; ನೀತಿಯ ಮಾರ್ಗ. ಕೃಷ್ಣ ಸಾಗಿದ ಮಾರ್ಗವು ಅವನಿಗೆ ಮಾತ್ರ. ಎಲ್ಲರಿಗಲ್ಲ. ಕೃಷ್ಣ ಮುಕ್ತ.

ಕಟ್ಟುಪಾಡುಗಳಿಲ್ಲದವನು. ಮೇಲಿದ್ದ ವೈಕುಂಠಧಾಮದಿಂದ ಕೃಷ್ಣ ಇಳಿದು ಬಂದ. ಕೆಳಗಿದ್ದ ದ್ವಾರಕೆ, ಸಮುದ್ರ ಮಧ್ಯದಿಂದ ಎದ್ದು ಬಂತು. ಕೃಷ್ಣ ಮತ್ತು ದ್ವಾರಕೆಗೆ ಏನೋ ಹತ್ತಿರದ ಅನುಬಂಧ. ದ್ವಾರಕೆಯಂತೆ ಕೃಷ್ಣನೂ ಎಲ್ಲಿಯೋ ಅಜ್ಞಾತ ಮೂಲದಲ್ಲಿ ಇದ್ದ. ಜಗತ್ತು ಆ ಕಾಲಕ್ಕೆ ಹೊಸ ನಾಯಕತ್ವವನ್ನು ಬಯಸುತ್ತಿತ್ತು.

ಕಂಸನ ಕ್ರೌರ್ಯ ಎಳೆಯ ತಲೆಮಾರನ್ನು ಕಾಡುತ್ತಿತ್ತು. ಒಬ್ಬ ಕಂಸ ಬಹಿರಂಗದಲ್ಲಿ ಕಾಣುತ್ತಿದ್ದ. ಅವನದು ಪ್ರಕಟವಾದ ದೌರ್ಜನ್ಯ. ಆದರೆ ಕಾಣದೇ ಇದ್ದ ಅಂತರಂಗದಲ್ಲಿ ನೂರಾರು ಕಂಸರು ಇದ್ದಿರಬೇಕು. ಕಂಸ ಎಂದರೆ ಆವರಣ. ಅದರೊಳಗಿನ ಕ್ರೌರ್ಯ ಯಾರಿಗೆ ಕಂಡೀತು? ಕಾಣದಿದ್ದರೂ ಅನುಭವಿಸುತ್ತಿದ್ದ ಸಹಸ್ರ ಸಹಸ್ರ ಜನರ ಕೊರಳ ಕರೆ ಕೃಷ್ಣಾವತಾರಕ್ಕೆ ಮುನ್ನುಡಿಯಾಯಿತು.

ಕೃಷ್ಣ ಹುಟ್ಟಿದ!

ದ್ವಾರಕೆಯ ಹಾಗೆ- ಎಲ್ಲಿಯೋ ಜಲಗರ್ಭದಲ್ಲಿ ಅಡಗಿದ್ದದ್ದು ಮೇಲೆ ಬಂದಂತೆ, ಕೃಷ್ಣನೂ ಅಮೂರ್ತವಾಗಿದ್ದವನು ಮೂರ್ತಿಯಾದ. ಯಾದವರಿಗೆ ಸುಂದರವಾದ ಬದುಕನ್ನು ಕಲ್ಪಿಸಿದ. ಅದುವರೆಗೆ ಉನ್ನತ ಸ್ತರದ ಕ್ಷತ್ರಿಯರಿಂದ ಹೀಗಳಿಕೆಗೆ ಒಳಗಾಗಿದ್ದ ಯಾದವರು ತಲೆಯೆತ್ತಿ ನಿಂತರು. ಕೇವಲ ಯಾದವರಷ್ಟೇ ಅಲ್ಲ, ಭರತವರ್ಷದ ಮುಗ್ಧ ಜನಸಮುದಾಯವೇ ತಲೆಯೆತ್ತಿ ನಿಂತಿತು. ಪುರುಷರೆಲ್ಲ ವಸುದೇವರಾಗಿ, ಸ್ತ್ರೀಯರೆಲ್ಲ ದೇವಕಿಯರಾಗಿ, ಆಹಾ! ಭುವನದ ಭಾಗ್ಯವೆಂಬಂತೆ, ಬಾಲಕೃಷ್ಣ ಮಾತೃತ್ವದ ತೊಟ್ಟಿಲಲ್ಲಿ ಮಲಗಿದ. ಕಂಸನ ಅವಸಾನವಾಯಿತು.

ಸಂಪತ್ತಿನ ಹಿಂದೆ ಸಂಕಟವೂ ಬಂತು! ಕಂಸವಧೆಯ ಬಳಿಕ ಮಥುರೆಯಲ್ಲಿದ್ದ ಯಾದವರು ಜರಾಸಂಧನ ಆಗ್ರಹಕ್ಕೆ ತುತ್ತಾದರು. ಅವನು ಮಾಡುತ್ತಿದ್ದ ನಿರಂತರ ಆಕ್ರಮಣದಿಂದ ಕಂಗೆಟ್ಟರು. ಅವರಿಗೆ ನೆಲೆಸುವುದಕ್ಕೆ ಹೊಸ ಊರು ಬೇಕಿತ್ತು. ಅದು ಸುರಕ್ಷಿತವೂ ಆಗಿರಬೇಕಿತ್ತು. ಅದಕ್ಕಾಗಿ ಕೃಷ್ಣ, ಸಮುದ್ರದಲ್ಲಿ ಮುಳುಗಿದ್ದ ಕುಶಸ್ಥಳಿ ಎಂಬ ಹಳೆಯ ಪಟ್ಟಣವನ್ನು ಮೇಲೆ ತಂದ. ಅಲ್ಲಿ ವಿಶ್ವಕರ್ಮನಿಂದ ನೂತನ ನಗರವನ್ನು ಕಟ್ಟಿಸಿದ. ಅದು ದ್ವಾರಕೆಯಾಯಿತು. ಸಮಸ್ತ ಯಾದವರಿಗೂ ಅದು ನೆಲೆಯಾಯಿತು. ಕಷ್ಟದಲ್ಲಿದ್ದ ಯಾದವರು ಸುಖೀಗಳಾದರು. ಬಡವರಾಗಿದ್ದವರು ಶ್ರೀಮಂತರೂ ಆದರು. ಕೃಷ್ಣನ ನಾಯಕತ್ವ ಯಾದವರ ಜೀವನವನ್ನು ಹಸನಾಗಿಸಿತು. ಅವರು ಹಿಗ್ಗಿದರು. ಮಾತ್ರವಲ್ಲ; ಕೊಬ್ಬಿದರೂ ಕೂಡ. ಸುಖವೆಂದರೆ ಅಷ್ಟೇ; ಸಂಪತ್ತು ಬರುವಾಗ ಅದು ಆಪತ್ತನ್ನೂ ತರುತ್ತದೆ.

ದಾರಿ ತೋರಲು ಅವನಿರಲಿಲ್ಲ…

ಕೃಷ್ಣ ಬೆಳೆದ. ದ್ವಾರಕೆಯೂ ಬೆಳೆಯಿತು. ಯಾದವರೂ ಬೆಳೆದರು. ಕೃಷ್ಣ ಯಾದವರ ನಾಯಕನಾಗಿದ್ದವನು ಮಹಾನಾಯಕನಾದ. ಮನೆಯಂಗಳದಿಂದ ಜಗದ ಅಂಗಣಕ್ಕೆ ಕಾಲಿಟ್ಟ. ಧರ್ಮ ಸ್ಥಾಪನೆಯ ತನ್ನ ಹಿರಿದಾದ ಆಶಯದ ಸಾಕಾರಕ್ಕೆ ರಂಗ ನಿರ್ಮಾಣದಲ್ಲಿ ತೊಡಗಿದ. ಪಾಂಡವರನ್ನು ತನ್ನ ಕೈಯ ಆಯುಧಗಳನ್ನಾಗಿಸಿ ದುಷ್ಟರ ವಿನಾಶಕ್ಕೆ ಮುಂದಾದ. ಇತ್ತ ಯಾದವರು, ದನಗಾಹಿಗಳಾಗಿದ್ದವರು ಸಂಪನ್ನರಾದರು. ಬಲಿಷ್ಠರೂ ಆದರು. ಕೃಷ್ಣ- ಬಲರಾಮರ ನೇತೃತ್ವದಲ್ಲಿ ಒಂದು ಪ್ರಬಲ ಶಕ್ತಿಯಾಗಿ ರೂಪುಗೊಂಡರು. ಉತ್ತರಾವರ್ತದ ರಾಜನೀತಿಯಲ್ಲಿ ಪ್ರಭಾವ ಬೀರುವಷ್ಟು ಅವರ ಶಕ್ತಿ ವಿಸ್ತಾರವಾಯಿತು. ಅವರೊಳಗೆ ಅನೇಕ ಮಂದಿ ನಾಯಕರು ಉದ್ಭವಿಸಿದರು. ಒಂದೇ ಆಗಿದ್ದ ಸಮೂಹ ಹಲವಾಯಿತು. ಅವರದೇ ತಂಡಗಳಾದವು. ಒಂದು ಸಲ ತಾವು ಶ್ರೀಮಂತರು, ಪ್ರಬಲರು ಎಂಬ ಅಹಂ ಬಂದಾಗ ಏನಾಗುವುದೋ ಅದೇ ಆಯಿತು. ಅವರ ದಾರಿಯನ್ನು ನೇರ್ಪಡಿಸಿ ಮುನ್ನಡೆಸುವುದಕ್ಕೆ ಕೃಷ್ಣ ಹತ್ತಿರದಲ್ಲಿರಲಿಲ್ಲ.

ವಿವೇಕವನ್ನು ಮರೆಸಿದ ಅಹಂಕಾರ: ‌ಮಹಾಯುದ್ಧದಲ್ಲಿ ಪಾಂಡವರು ಗೆದ್ದರು. ಯದುಸೇನೆ ಈ ಸಂಗ್ರಾಮದಲ್ಲಿ ಸಕ್ರಿಯವಾಗಿತ್ತು. ಯಾರು ಗೆದ್ದರೋ, ಯಾರು ಸೋತರೋ; ಯಾದವರಿಗೆ ಮಾತ್ರ ಅಹಂಕಾರ ನೆತ್ತಿಗೇರಿರಬೇಕು. ಅವರಲ್ಲಿ ಪರಸ್ಪರ ವೈಷಮ್ಯ ಬೆಳೆಯಿತು. ಮದ್ಯಪಾನದ ಚಟ ಅವರ ಬುದ್ಧಿಯನ್ನು ಮತ್ತಷ್ಟು ಕೆಡಿಸಿತು. ಯಾವ ಪಾತಳಿಯಿಂದ ಕೃಷ್ಣ ಅವರನ್ನು ಮೇಲೆತ್ತಿದ್ದನೋ ಅದೇ ನೆಲೆಗೆ ಅವರು ಕುಸಿದರು. ನಾಗರಿಕರಾಗಿದ್ದವರು ಅನಾಗರಿಕರಾದರು. ಸಮುದಾಯವೊಂದು ತನ್ನೊಳಗೆ ವಿವೇಕವನ್ನು ಹುಟ್ಟಿಸಿಕೊಳ್ಳದಿದ್ದರೆ ಯಾವ ನಾಯಕನೂ ಏನೂ ಮಾಡಲಾರ. ಆದುದರಿಂದಲೇ ಶ್ರೀಕೃಷ್ಣನಿಗೂ ಅವರನ್ನು ತಿದ್ದುವುದಾಗಲಿಲ್ಲ ಅಥವಾ ಅವನೇ ತಿದ್ದಲಿಲ್ಲವೋ; ಯಾರು ಬಲ್ಲರು? ಯುಧಿಷ್ಠಿರನನ್ನು ಸಿಂಹಾಸನದಲ್ಲಿ ಕುಳ್ಳಿರಿಸಿದ ಕೃಷ್ಣ, ದ್ವಾರಕೆಗೆ ಮರಳಿದ. ಆ ವೇಳೆಗೆ ಯಾದವರು ಬದಲಾಗಿದ್ದರು.

ಈ ಮೊದಲು ಮುಗ್ಧರಾಗಿದ್ದವರು ಈಗ ಅಗತ್ಯಕ್ಕಿಂತ ಹೆಚ್ಚು ಬುದ್ಧಿವಂತರಾಗಿದ್ದರು. ಸ್ವಾರ್ಥಿಗಳಾಗಿದ್ದರು. ಆದರ್ಶಗಳು ಮರೆಯಾಗಿದ್ದವು. ಯಾವ ಕೃಷ್ಣನಿಂದ ತಮ್ಮ ಅಭ್ಯುದಯವಾಯಿತೋ ಆ ಕೃಷ್ಣನ ಮಾತಿಗೆ ಅವರೀಗ ಕಿವುಡರಾಗಿದ್ದರು. ಅವರ ಅಹಂಕಾರ ಋಷಿಗಳನ್ನು ಅವಮಾನಿಸುವಷ್ಟಕ್ಕೆ ಮುಟ್ಟಿತು. ಕೃಷ್ಣನನ್ನು ಕಾಣಲೆಂದು ದ್ವಾರಕೆಗೆ ಬಂದ ಋಷಿಗಳ ಎದುರು, ಹೆಣ್ಣಿನ ವೇಷ ಹಾಕಿದ ಸಾಂಬನನ್ನು ನಿಲ್ಲಿಸಿದರು. “ಇವಳು ಬಸುರಿ. ಇವಳು ಹೆರುವ ಮಗು ಹೆಣ್ಣೋ ಗಂಡೋ?’ ಎಂದು ಕೇಳಿದರು. ಕ್ರುದ್ಧರಾದ ಋಷಿಗಳು, “ಇವಳು ಒನಕೆಯನ್ನು ಹೆರುತ್ತಾಳೆ. ಅದರಿಂದಲೇ ನಿಮ್ಮ ಸರ್ವನಾಶ’ ಎಂದು ಶಪಿಸಿದರು. ದುರಹಂಕಾರಿಗಳಾದ ಯಾದವರ ಕುರಿತೂ ಕೃಷ್ಣನಿಗೆ ಮರುಕ. ಸಾಂಬ ಹೆತ್ತ ಒನಕೆಯನ್ನು ಚೂರ್ಣವಾಗಿಸಿ, ಸಮುದ್ರದ ನೀರಿನಲ್ಲಿ ಕದಡಿಸಿದ. ಅದು ಒಟ್ಟಾಗಿ ಜೊಂಡು ಹುಲ್ಲಾಗಿ ಬೆಳೆಯಿತು. “ನೀವೆಲ್ಲ ತೀರ್ಥಕ್ಷೇತ್ರಕ್ಕೆ ಹೋಗಿ. ಪಾಪ ಕಳೆದುಕೊಳ್ಳಿ’ ಅಂದ. ಯಾದವರು ಪ್ರಭಾಸ ಕ್ಷೇತ್ರಕ್ಕೆ ಹೋದರು. ತೀರ್ಥಕ್ಷೇತ್ರದಲ್ಲಿ ತೀರ್ಥ ಸೇವನೆ ಮಾಡಿ ಪ್ರಮತ್ತರಾದರು. ಪರಸ್ಪರ ಹೊಡೆದಾಡಿಕೊಂಡು ಸತ್ತರು. ಹೊಡೆದಾಟಕ್ಕೆ ಆಯುಧವಾದುದು ಅದೇ ಒನಕೆಯ ಚೂರ್ಣದಿಂದ ಹುಟ್ಟಿದ ಜೊಂಡು ಹುಲ್ಲಿನ ದಂಡಗಳು!

ಕೃಷ್ಣನಿಲ್ಲದ ಲೋಕದಲ್ಲಿ…

ಇವೆಲ್ಲ ಬೆಳವಣಿಗೆಗಳಿಂದ ಕೃಷ್ಣ ವಿಷಣ್ಣನಾದ. ಬಹುಶಃ ಸಮುದಾಯವನ್ನು ತಿದ್ದುವ ಪ್ರಯತ್ನವೇ ಅರ್ಥಹೀನವೆಂದು ಕಂಡಿರಬೇಕು. ಒಂಟಿಯಾಗಿ ಮರದ ಕೆಳಗೆ ಕಾಲು ಚಾಚಿ ಕುಳಿತ. ಅಲ್ಲಿಗೆ ಬಂದ ಬೇಡನೊಬ್ಬನ ಬಾಣಕ್ಕೆ ಲಕ್ಷ್ಯವಾಗಿ ನಿರ್ಯಾಣ ಹೊಂದಿದ. ಯಾದವೀ ಕಲಹದಲ್ಲಿ ಮೂರ್ಖತೆಯನ್ನು ಪ್ರದರ್ಶಿಸಿದ ಒಂದು ಜನಸಮುದಾಯವು ಅವಸಾನ ಹೊಂದಿತು. ಉತ್ಥಾನ ಹಾಗೂ ಪತನದ ಚಿತ್ರವೊಂದು ಪಾಠವಾಗಿ ಬರೆಯಲ್ಪಟ್ಟಿತು.

ಕಥೆ ಅಲ್ಲಿಗೆ ಮುಗಿಯಲಿಲ್ಲ… ದ್ವಾರಕೆ ಹಾಗೆಯೇ ಉಳಿಯಬಹುದೆ? ಕೃಷ್ಣನಂತೆ ಅದೂ ಬಂದಲ್ಲಿಗೆ ಹೋಗಲೇಬೇಕಲ್ಲ… ದ್ವಾರಕೆಯೆಂಬ ಮಹಾನಗರವನ್ನು ಸಮುದ್ರ ಆಕ್ರಮಿಸಿತು. ಕೃಷ್ಣನಿಲ್ಲದ ದ್ವಾರಕೆಗೆ ಯಾವ ರಕ್ಷಣೆ? ಅಲ್ಲಿದ್ದ ಯಾದವ ಸ್ತ್ರೀಯರನ್ನು ರಕ್ಷಿಸುವುದಕ್ಕೆ ಪರಾಕ್ರಮಿ ಅರ್ಜುನ ಬಂದ. ಅದರೆ ಅವನು ಈಗ ದುರ್ಬಲನಾಗಿದ್ದ. ಅವನ ಮಂತ್ರಾಸ್ತ್ರಗಳು ವಿಸ್ಮತಿಗೆ ಸರಿದಿದ್ದವು. ಗಾಂಢೀವವೆಂಬ ಮಹಾ ಧನುಸ್ಸು ಎತ್ತಲಾರದಷ್ಟು ಭಾರವಾಗಿತ್ತು. ಅವನ ಕಣ್ಣೆದುರೇ ಎಷ್ಟೋ ಮಂದಿ ಹೆಣ್ಣುಮಕ್ಕಳನ್ನು ದರೋಡೆಕೋರರು ಅಪಹರಿಸಿದರು. ದ್ವಾರಕೆ ಮುಳುಗಿತು. ಕೃಷ್ಣ ನಿರ್ಯಾಣ ಸಮಗ್ರವಾಯಿತು. ತಾನಿದ್ದಷ್ಟು ಕಾಲ ಸುತ್ತಣ ಜಗತ್ತಿಗೆ, ಜನರಿಗೆ ನೆಮ್ಮದಿಯ ಜೀವನವನ್ನು ಕಲ್ಪಿಸಿದ ಮಹಾಪುರುಷ ಕಣ್ಮರೆಯಾದ. ಸಮುದಾಯದ ಒಡಲಿನಿಂದ ನೂರಾರು ನೂತನ ಕೃಷ್ಣರ ಅವತಾರಕ್ಕೆ ಅವಕಾಶ ಕಲ್ಪಿಸಿಕೊಟ್ಟ. ಆದರೆ ಹೊಸ ಕೃಷ್ಣಾವತರಣ ಆಗಲೇ ಇಲ್ಲ.

ಏನೀ ಘಟನೆಗಳ ಸಂದೇಶ?

ಪ್ರತಿಯೊಂದು ಜೀವವೂ, ವಸ್ತುವೂ ಎಲ್ಲಿಂದಲೋ ಬಂದು ಇಲ್ಲಿ ಹೇಗೋ ಬಾಳಿ, ಮತ್ತೆ ಬಂದಲ್ಲಿಗೇ ಹೋಗುವುದು ಎಂದೆ? ಅಥವಾ ಎಂತಹ ಮಹಾನಾಯಕತ್ವವೂ ಜನರನ್ನು ಶಾಶ್ವತವಾಗಿ ತಿದ್ದಲಾರದು ಎಂದೆ? ಅಥವಾ ಧರ್ಮದ, ನೀತಿಯ ಪಥದಲ್ಲಿ ಸಾಗದ ಸಮೂಹವೊಂದು ಕೊನೆಗೆ ಆತ್ಮಘಾತಕ ಪ್ರವೃತ್ತಿಯನ್ನು ಪ್ರಕಟಿಸುವುದು ಎಂದೆ? ಅಥವಾ ಧರ್ಮವಾಗಲಿ ಅಧರ್ಮವಾಗಲಿ ಎಂದೂ ಶಾಶ್ವತವಾಗಿ ಉಳಿಯಲಾರದು ಎಂದೆ? ಅಥವಾ ಈ ಪ್ರಕೃತಿ ಸ್ವಭಾವವು ಚಿಂತಿಸಿದಷ್ಟೂ ನಿಗೂಢವಾದ ಒಗಟು ಎಂದೆ? ಅಥವಾ ಯಾರಿಗೆ ಗೊತ್ತು? ನಮ್ಮ ಪಾಲಿಗೆ ಉಳಿದದ್ದು ಭಗವದ್ಗೀತೆ…ಉದ್ಧವ ಗೀತೆ… ಅದೇ ಕೃಷ್ಣನ ಪಾಠ. “ಸಂಭವಾಮಿ ಯುಗೇ ಯುಗೇ’ ಎಂಬ ಅವನ ಆಶ್ವಾಸನೆ ಮಾತ್ರ.

-ರಾಧಾಕೃಷ್ಣ ಕಲ್ಚಾರ್‌ ಖ್ಯಾತ ಯಕ್ಷಗಾನ ಅರ್ಥಧಾರಿ

ಟಾಪ್ ನ್ಯೂಸ್

1-bantwala-1

Bantwala: ಮಸೀದಿಗೆ ತೆರಳಿದ್ದ ವೇಳೆ ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ನಗನಗದು ಕಳವು

1-bus

Haveri; ಖಾಸಗಿ ಬಸ್ ಪಲ್ಟಿ: 15ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ

1-belgavi

Belagavi; ಗಣಪತಿ ಮೂರ್ತಿ ವಿಸರ್ಜನೆ ವೇಳೆ ಮೂವರಿಗೆ ಚಾಕು ಇರಿತ!!

1-trfff

PM Modi ಅವರನ್ನು ಭೇಟಿಯಾಗಿ ಮಾತುಕತೆ ನಡೆಸುವುದಾಗಿ ಘೋಷಿಸಿದ ಟ್ರಂಪ್

Auction of more than 600 gifts received by Modi has started

Auction; ಮೋದಿಗೆ ಸಿಕ್ಕ 600ಕ್ಕೂ ಅಧಿಕ ಉಡುಗೊರೆಗಳ ಹರಾಜು ಶುರು

Panamburu

Mangaluru: ಕಿರಿದಾಗುತ್ತಿದೆ‌ ಪಣಂಬೂರು ಬೀಚ್‌! ಇನ್ನೂ ಖಚಿತವಾಗದ ಕಾರಣ

Pililkula

Biological Park: ಪಿಲಿಕುಳಕ್ಕೆ ಪೆಂಗ್ವಿನ್‌, ಅನಕೊಂಡ ತರಿಸುವ ಮಹತ್ವದ ನಿರ್ಧಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 5ನೇ ರೀಲ್ಸ್ ಪ್ರಸಾರ

Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 5ನೇ ರೀಲ್ಸ್ ಪ್ರಸಾರ

Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 6ನೇ ರೀಲ್ಸ್ ಪ್ರಸಾರ

Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 6ನೇ ರೀಲ್ಸ್ ಪ್ರಸಾರ

Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 7ನೇ ರೀಲ್ಸ್ ಪ್ರಸಾರ

Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 7ನೇ ರೀಲ್ಸ್ ಪ್ರಸಾರ

Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 8ನೇ ರೀಲ್ಸ್ ಪ್ರಸಾರ

Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 8ನೇ ರೀಲ್ಸ್ ಪ್ರಸಾರ

Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 9ನೇ ರೀಲ್ಸ್ ಪ್ರಸಾರ

Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 9ನೇ ರೀಲ್ಸ್ ಪ್ರಸಾರ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

2-yellapur

Yellapur: ರಸ್ತೆಯಲ್ಲಿ ಭಾರೀ ಗಾತ್ರದ ಹೊಂಡ; ನಿಯಂತ್ರಣ ತಪ್ಪಿ ಲಾರಿ ಪಲ್ಟಿ

1-bantwala-1

Bantwala: ಮಸೀದಿಗೆ ತೆರಳಿದ್ದ ವೇಳೆ ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ನಗನಗದು ಕಳವು

1-bus

Haveri; ಖಾಸಗಿ ಬಸ್ ಪಲ್ಟಿ: 15ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ

police

Davanagere; ಪ್ಯಾಲೇಸ್ತೀನ್ ಬಾವುಟದ ಸ್ಟಿಕ್ಕರ್ ಅಂಟಿಸಿಕೊಂಡವರ ವಿರುದ್ಧ ಪ್ರಕರಣ ದಾಖಲು

1-belgavi

Belagavi; ಗಣಪತಿ ಮೂರ್ತಿ ವಿಸರ್ಜನೆ ವೇಳೆ ಮೂವರಿಗೆ ಚಾಕು ಇರಿತ!!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.