Darshan ಫೋಟೋ ವೈರಲ್;ಕಣ್ಣೀರಿಟ್ಟ ರೇಣುಕಾಸ್ವಾಮಿ ತಂದೆ: ಸಿಬಿಐ ತನಿಖೆಗೆ ಒತ್ತಾಯ
ಜೈಲು ಜೈಲಾಗಿಯೇ ಇರಬೇಕು... ತನಿಖೆ ಸರಿ ದಾರಿಯಲ್ಲಿತ್ತು ಎಂಬ ಭಾವನೆ ಹೋಯಿತು
Team Udayavani, Aug 25, 2024, 7:49 PM IST
ಚಿತ್ರದುರ್ಗ: ಪರಪ್ಪನ ಅಗ್ರಹಾರ ಜೈಲಿನಲ್ಲಿ(Parappana Agrahara) ಸಿಗರೇಟ್ ಸೇದುತ್ತಾ, ನಗುತ್ತಾ ಇರುವ ನಟ ದರ್ಶನ್ (Darshan) ಅವರ ಫೋಟೋ ವೈರಲ್ ಆದ ಬೆನ್ನಲ್ಲೇ ರೇಣುಕಾಸ್ವಾಮಿ ತಂದೆ ಶಿವನಗೌಡರ್ ಕಣ್ಣಿರು ಹಾಕಿದ್ದಾರೆ.
ಭಾನುವಾರ (ಆ 25) ಮಾಧ್ಯಮ ಪ್ರತಿನಿಧಿಗಳೊಂದಿಗೆ ಫೋಟೋ ಕುರಿತು ಪ್ರತಿಕ್ರಿಯಿಸಿದ ಶಿವನಗೌಡರ್ ” ಫೋಟೋ ನೋಡಿದರೆ ತಪ್ಪು ಮಾಡಿದ್ದೇನೆ ಎಂಬ ಭಾವನೆ ಇದೆಯೇ?, ಆರೋಪಿ ದರ್ಶನ್ ಕುರ್ಚಿ ಮೇಲೆ ಸಿಗರೇಟ್ ಹಿಡಿದು ಕೂತಿರುವ ಫೋಟೋ ನೋಡಿ ನಮಗೆ ಶಾಕ್ ಆಯಿತು.ಪರಮಾಶ್ವರ್ಯವಾಗಿದೆ. ತನಿಖೆ ಆಗಲಿ, ನಮಗೆ ನ್ಯಾಯಾಂಗದ ಮೇಲೆ ನಂಬಿಕೆ ಇದೆ. ಜೈಲು ಜೈಲಾಗಿಯೇ ಇರಬೇಕು ಮತ್ತೊಂದು ಆಗಿರಬಾರದು. ರೆಸಾರ್ಟ್ ನಲ್ಲಿ ಕುಳಿತಂತೆ ಕುಳಿತಿದ್ದಾರೆ’ ಎಂದು ಭಾವುಕರಾಗಿ ಕಣ್ಣೀರಿಟ್ಟರು.
‘ಸಿಎಂ ಸಿದ್ದರಾಮಯ್ಯ ಅವರು ತಪ್ಪಿತಸ್ಥರಿಗೆ ಶಿಕ್ಷೆ ಆಗುತ್ತದೆ ಎಂದಿದ್ದಾರೆ. ಪೊಲೀಸರ ಮೇಲೆ ನಮಗೆ ಪೂರ್ಣ ನಂಬಿಕೆ ಇದೆ. ನನ್ನ ಮಗನನ್ನು ಕಳೆದುಕೊಂಡಿದ್ದು ನನಗೆ ಗೊತ್ತಿದೆ. ನನ್ನ ಮಗನಿಗೆ ಶಾಂತಿ ಸಿಗಬೇಕಾದರೆ ಅವರಿಗೆ ಶಿಕ್ಷೆಯಾಗಬೇಕು.ಸರ್ಕಾರ ನಿರ್ದಾಕ್ಷಿಣ್ಯವಾಗಿ ತನಿಖೆ ಮಾಡಬೇಕು ಎಂದು ಕೈಮುಗಿದು ಕೇಳುತ್ತೇನೆ’ ಎಂದು ಕಣ್ಣೀರಿಟ್ಟರು.
ಇದನ್ನೂ ಓದಿ: Darshan: ಕೈಯಲ್ಲಿ ಸಿಗರೇಟ್,ಮುಖದಲ್ಲಿ ನಗು.. ಜೈಲಿನಲ್ಲಿರುವ ದರ್ಶನ್ ಫೋಟೋ ವೈರಲ್
ಸರ್ಕಾರ, ಪೊಲೀಸರು, ನ್ಯಾಯಾಂಗದ ಮೇಲೆ ನಂಬಿಕೆ ಇದೆ. ನನ್ನ ಮಗನ ಸಾವಿಗೆ ಇಡೀ ರಾಜ್ಯವೇ ದುಃಖ ಪಟ್ಟಿದೆ. ಗೃಹ ಸಚಿವರು ಈ ಬಗ್ಗೆ ಬಗ್ಗೆ ಗಮನ ಹರಿಸಬೇಕು. ನಮ್ಮ ಮನೆ ಕಣ್ಣಿರಲ್ಲಿ ಕೈತೊಳೆಯುತ್ತಿದೆ. ಅವರಿಗೆ ಮನುಷ್ಯತ್ವ ಇದೆಯೇ?. ದಿನ ಬೆಳಗಾದರೆ ಸೊಸೆಯ ಜೀವನದ ಬಗ್ಗೆ ಸಂಕಟವಾಗುತ್ತದೆ. ಈ ದೃಶ್ಯ ನಮ್ಮ ಹೊಟ್ಟೆ ಉರಿಸುತ್ತದೆ.ದಯವಿಟ್ಟು ಅರ್ಥ ಮಾಡಿಕೊಂಡು ಸಮಗ್ರ ತನಿಖೆ ನಡೆಸಬೇಕು. ಈ ರೀತಿ ಆಗುತ್ತಿರುವುದರಿಂದ ಸಿಬಿಐ ತನಿಖೆ ನಡೆಸಬೇಕು ಎಂದು ಶಿವನಗೌಡರ್ ಒತ್ತಾಯ ಮಾಡಿದರು.
ತನಿಖೆ ಸರಿ ದಾರಿಯಲ್ಲಿತ್ತು ಎಂಬ ಭಾವನೆ ಹೋಯಿತು
ರೇಣುಕಾಸ್ವಾಮಿ ಸಂಬಂಧಿ ಷಡಕ್ಷರಯ್ಯ ಮಾತನಾಡಿ, ‘ಮಾಧ್ಯಮದಲ್ಲಿ ಫೋಟೋ ನೋಡಿ ನನಗೆ ಶಾಕ್ ಆಯಿತು. ತನಿಖೆ ಸರಿ ದಾರಿಯಲ್ಲಿತ್ತು ಎಂಬ ಭಾವನೆ ಕೂಡಾ ಇತ್ತು. ಆದರೆ ಈ ಫೋಟೋ ನೋಡಿ ಶಾಕ್ ಆಗಿದೆ. ಈ ರೀತಿ ಹೇಗೆ ನಡೀತು ಎಂಬ ಸಂಶಯ ಕಾಡುತ್ತಿದೆ. ಸರ್ಕಾರದ ಮೇಲೆ ನಮಗೆ ನಂಬಿಕೆ ಇದೆ, ನ್ಯಾಯ ಸಿಗುವ ಭರವಸೆ ಇದೆ. ಫೋಟೋದಲ್ಲಿರುವಂತೆ ಘಟನೆ ನಡೆದಿದ್ದರೆ ಅದನ್ನ ತನಿಖೆ ನಡೆಸಬೇಕಿದೆ’ ಎಂದರು.
‘ಸರಕಾರ ಮತ್ತು ಪೊಲೀಸ್ ಇಲಾಖೆಯ ಎಲ್ಲರನ್ನ ಭೇಟಿ ಮಾಡಿದ್ದೇವೆ. ನಮಗೆ ನ್ಯಾಯ ಸಿಗುವ ಭರವಸೆ ನೀಡಿದ್ದರು. ಮುಂದೆ ಈ ರೀತಿ ಆಗಬಾರಾದು ಎಂದು ನಾವು ಕೇಳಿ ಕೊಳ್ಳುತ್ತೇವೆ’ ಎಂದು ಷಡಕ್ಷರಯ್ಯ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.