Mysuru Dasara: ರಾಜಪಥದಲ್ಲಿ ದಸರಾ ಆನೆಗಳ ತಾಲೀಮು
Team Udayavani, Aug 26, 2024, 2:41 AM IST
ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲು ಆಗಮಿಸಿರುವ ಗಜಪಡೆ ರವಿವಾರ ಮೈಸೂರಿನ ರಾಜಪಥದಲ್ಲಿ ತಾಲೀಮು ನಡೆಸಿದವು.
ಆ. 21ರಂದು ಗಜಪಯಣದ ಮೂಲಕ ಮೈಸೂರಿಗೆ ಆಗಮಿಸಿದ್ದ ದಸರಾ ಗಜಪಡೆಯ ಮೊದಲ ತಂಡದ ಆನೆಗಳಿಗೆ ತಾಲೀಮು ಆರಂಭಿಸಲಾಯಿತು. ಕಳೆದೆರಡು ದಿನದಿಂದ ಅರಮನೆ ಆವರಣಕ್ಕೆ ಸೀಮಿತವಾಗಿದ್ದ ತಾಲೀಮು, ರವಿವಾರ ಅರಮನೆಯಾಚೆಗೆ ನಡೆಯಿತು. ಮೊದಲ ದಿನವೇ ಜಂಬೂಸವಾರಿ ಮಾರ್ಗದಲ್ಲಿ ಬನ್ನಿಮಂಟಪದವರೆಗೂ ಪೂರ್ಣಪ್ರಮಾಣದಲ್ಲಿ ಎಂಟು ಆನೆಗಳು ನಡೆದವು. ಕಾಲು ನೋವಿನಿಂದಾಗಿ ಕಂಜನ್‌ಗೆ ವಿಶ್ರಾಂತಿ ನೀಡಲಾಗಿತ್ತು.
ಆನೆಗಳಿಗೆ ಮೈಸೂರು ಅರಮನೆ ಆವರಣದಲ್ಲಿ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ತಾಲೀಮಿಗೆ ಚಾಲನೆ ನೀಡಲಾಯಿತು. ಅರಮನೆಯ ಬಲರಾಮ ದ್ವಾರದಿಂದ ಬೆಳಗ್ಗೆ 7ಕ್ಕೆ ಹೊರಟು ಕೆ.ಆರ್.ವೃತ್ತ, ಸಯ್ನಾಜಿರಾವ್ ರಸ್ತೆ, ಕೆ.ಆರ್.ಆಸ್ಪತ್ರೆ, ಹೈವೇ ವೃತ್ತದ ಮೂಲಕ ಸಾಗಿ 8.25ಕ್ಕೆ ಬನ್ನಿಮಂಟಪದ ಪಂಜಿನ ಕವಾಯತು ಮೈದಾನ ತಲುಪಿದವು. ಕೆಲ ಹೊತ್ತಿನ ಬಳಿಕ ಮತ್ತೆ ಅಲ್ಲಿಂದ ವಾಪಸಾದವು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.