Udupi; ಗೀತಾರ್ಥ ಚಿಂತನೆ 18 : ವಿವಿಧ ವೃತ್ತಿಗಳಿಂದಲೂ ಭಗವತ್ಸೇವೆ
Team Udayavani, Aug 26, 2024, 11:34 PM IST
‘ಸ್ವ ವಿಹಿತ’ ಎಂಬ ಶಬ್ದವು ಅನೇಕ ರೀತಿಗಳಲ್ಲಿ ತೆರೆದುಕೊಳ್ಳುತ್ತದೆ. ವಿಶ್ವಕ್ಕೆ ಹಿತವಾದುದು ಎಂಬರ್ಥವಿದೆ. ಹತ್ತು ಜನರಿಗೆ ಉಪಯೋಗವಾಗುವ ವೃತ್ತಿಯನ್ನು ಕೈಗೊಳ್ಳಬೇಕು ಎಂಬ ಸೂಚನೆ ಬರುತ್ತದೆ. ವಿಶೇಷ ಹಿತವಾದುದೆಂದರೆ ವಿಶೇಷ ಮನೋವೃತ್ತಿಯದೆಂದೂ ಅರ್ಥ. ಉದಾಹರಣೆಗೆ ಸಂಗೀತ, ಕೃಷಿ, ಶಿಕ್ಷಣ ಹೀಗೆ ಒಬ್ಬೊಬ್ಬರ ಒಲವು ಒಂದೊಂದು ಬಗೆ. ಇಂತಹವರು ಅದೇ ಕ್ಷೇತ್ರದಲ್ಲಿ ತೊಡಗಿಕೊಂಡು ಭಗವಂತನ ಸೇವೆ ಮಾಡಬಹುದು.
ವಕೀಲರು, ಲೆಕ್ಕಪರಿಶೋಧಕರು ಹೀಗೆ ನವೀನ ವೃತ್ತಿಗಳನ್ನೂ ಭಗವಂತನ ಪೂಜೆಯಾಗಿ ಮಾಡಲು ಸಾಧ್ಯವಿದೆ. ಬೇರೆಯವರ ಬದುಕು ಹಾಳು ಮಾಡುವಂತಹ ವೃತ್ತಿಗಳನ್ನು ಕೈಗೊಳ್ಳಲೇಬಾರದು. ಇಂತಹ ವೃತ್ತಿಗಳ ಅಗತ್ಯವೂ ಇಲ್ಲ. ಇಂತಹ ವೃತ್ತಿಯಿಂದ ಬಂದ ಆದಾಯವನ್ನು ದೇವರಿಗೆ ಸಮರ್ಪಣೆ ಮಾಡುವುದರಿಂದಲೂ ಪ್ರಯೋಜನವಿಲ್ಲ. ಒಟ್ಟಾರೆಯಾಗಿ ತಪ್ಪಾದ ವೃತ್ತಿಯನ್ನು ಕೈಗೊಳ್ಳದಿರುವುದು ಮಾತ್ರವಲ್ಲ, ಹಾಗೆ ಸಂಶಯಾತೀತವಾಗಿಯೂ ಇರಬೇಕು. ಗೀತೆಯಲ್ಲಿ ಶ್ರೀಕೃಷ್ಣ ‘ಬೋಧಯತಿ ಭಗವಾನ್ ನಾರಾಯಣಃ’ ಎಂದು ಹೇಳಿದ್ದಾನೆ ವಿನಾ ‘ಆಜ್ಞಾಪಯತಿ’, ‘ಸಂದೇಶಯತಿ’ ಎನ್ನಲಿಲ್ಲ. ಅಂದರೆ ಶ್ರೀಕೃಷ್ಣನ ಉದ್ದೇಶ ಆದೇಶ ಕೊಡುವುದಲ್ಲ, ಒಳಗಿನಿಂದಲೇ ಜ್ಞಾನ ಉದ್ದೀಪಿಸುವಂತೆ ಮಾಡುವುದು. ಈ ಜ್ಞಾನ ಉದ್ದೀಪನದ ಮುಹೂರ್ತ ಶ್ರೀಕೃಷ್ಣಲೀಲೋತ್ಸವದಂದು ಆಗಲೆಂದು ಗೀತಾಚಾರ್ಯನಲ್ಲಿ ಪ್ರಾರ್ಥಿಸುತ್ತೇವೆ.
ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ,
ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ,ಉಡುಪಿ
ಸಂಪರ್ಕ ಸಂಖ್ಯೆ: 8055338811
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಆದಿ ಉಡುಪಿ: ಜುಗಾರಿ ಅಡ್ಡೆಗೆ ಪೊಲೀಸ್ ದಾಳಿ
Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ
Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ ಒಂದು ವರ್ಷದ ಮರಿ ಚಿರತೆ ರಕ್ಷಣೆ
Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು
Udupi:ಗೀತಾರ್ಥ ಚಿಂತನೆ 103: ಪಂಡಿತರೆಂದರೇನು?ಅಥವ ಪಂಡಿತರೆಂದರೆ ಯಾರು?
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Drink & Drive Case: ಕುಡಿದು ವಾಹನ ಚಾಲನೆ; ʼಮಂಜುಮ್ಮೆಲ್ ಬಾಯ್ಸ್ʼ ನಟ ಬಂಧನ
Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು
IPL Mega Auction: ಮೊದಲ ದಿನದ ಹರಾಜಿನ ಬಳಿಕ ಆರ್ ಸಿಬಿ ತಂಡ ಹೀಗಿದೆ ನೋಡಿ
Arrested: ಹೊಯ್ಸಳ ಪೊಲೀಸ್ ಮೇಲೆ ಹಲ್ಲೆ; ಬಂಧನ
Sambhal Violence: ಮೃತರ ಸಂಖ್ಯೆ ನಾಲ್ಕಕ್ಕೆ, ಇಂಟರ್ನೆಟ್ ಸ್ಥಗಿತ, ನಿಷೇಧಾಜ್ಞೆ ಜಾರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.