Football ಡ್ಯುರಾಂಡ್ ಕಪ್: ನಾರ್ತ್ಈಸ್ಟ್ ಯುನೈಟೆಡ್ ಫೈನಲಿಗೆ
Team Udayavani, Aug 27, 2024, 12:20 AM IST
ಶಿಲ್ಲಾಂಗ್: ಡ್ಯುರಾಂಡ್ ಕಪ್ ಫುಟ್ಬಾಲ್ ಕೂಟದ ಸೋಮವಾರದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ನಾರ್ತ್ ಈಸ್ಟ್ ಯುನೈಟೆಡ್ ಎಫ್ಸಿ ತಂಡವು ಶಿಲ್ಲಾಂಗ್ ಲಾಜಾಂಗ್ ತಂಡವನ್ನು 3-0 ಗೋಲುಗಳಿಂದ ಸೋಲಿಸಿ ಮೊದಲ ಬಾರಿ ಫೈನಲ್ ಹಂತಕ್ಕೇರಿತು.
ಇಲ್ಲಿನ ಜವಾಹರ್ಲಾಲ್ ನೆಹರೂ ಕ್ರೀಡಾಂಗಣದಲ್ಲಿ ನಡೆದ ಈ ಹೋರಾಟದಲ್ಲಿ ನಾರ್ತ್ಈಸ್ಟ್ ಯುನೈಟೆಡ್ ತಂಡವು ಅಮೋಘ ಆಟದ ಪ್ರದರ್ಶನ ನೀಡಿತು. ಮೊದಲ ಅವಧಿಯ ಆಟದಲ್ಲಿ ನಾರ್ತ್ ಈಸ್ಟ್ ತಂಡ 2 ಗೋಲು ಹೊಡೆದು ಮುನ್ನಡೆ ಸಾಧಿಸಿತ್ತು. ಪಂದ್ಯ ಮುಗಿಯಲು ಕೆಲವು ನಿಮಿಷಗಳಿರುವಾಗ ತಂಡ ಇನ್ನೊಂದು ಗೋಲು ಹೊಡೆದು ಗೆಲುವಿನ ಸಂಭ್ರಮ ಆಚರಿಸಿತು.
ಪ್ರೇಕ್ಷಕರು ಶಿಲ್ಲಾಂಗ್ ತಂಡಕ್ಕೆ ಹೆಚ್ಚಿನ ಬೆಂಬಲ ನೀಡಿದರೂ ನಾರ್ತ್ ಈಸ್ಟ್ ತಂಡ ಅಮೋಘವಾಗಿ ಆಡಿ ಮೆರೆದಾಡಿತು. ಪಂದ್ಯದ 13ನೇ ನಿಮಿಷದಲ್ಲಿ ತಂಡದ ಮೊರೊಕ್ಕೋದ ಆಟಗಾರ ಅಲಾಯಿದ್ದೀನ್ ಅಜರಾಯಿ ಮೊದಲ ಗೋಲು ಹೊಡೆದರು.
ಇಂದು 2ನೇ ಸೆಮಿಫೈನಲ್
ಮಂಗಳವಾರ ಕೋಲ್ಕತಾದ ಸಾಲ್ಟ್ಲೇಕ್ ಕ್ರೀಡಾಂಗಣದಲ್ಲಿ ನಡೆಯುವ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಮಾಜಿ ನಾಯಕ ಸುನೀಲ್ ಚೇಟ್ರಿ ನೇತೃತ್ವದ ಬೆಂಗಳೂರು ಎಫ್ಸಿ ತಂಡವು ಮೋಹನ್ ಬಾಗನ್ ತಂಡವನ್ನು ಎದುರಿಸಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
INDvsBAN: ಕುಸಿದ ಭಾರತಕ್ಕೆ ಆಸರೆಯಾದ ಅಶ್ವಿನ್, ಜಡೇಜಾ; ಶತಕ ಬಾರಿಸಿದ ಲೋಕಲ್ ಬಾಯ್
INDvsBAN: ”ಈತ ಭಾರತದ ಬಾಬರ್ ಅಜಂ..”: ಟೀಂ ಇಂಡಿಯಾ ಆಟಗಾರನಿಗೆ ನೆಟ್ಟಿಗರ ತರಾಟೆ
Cricket: ಲಂಕಾ ಕ್ರಿಕೆಟಿಗನನ್ನು 20 ವರ್ಷಗಳ ಕಾಲ ಬ್ಯಾನ್ ಮಾಡಿದ ಕ್ರಿಕೆಟ್ ಆಸ್ಟ್ರೇಲಿಯಾ
Ricky Ponting: ಡೆಲ್ಲಿಯಿಂದ ಪಂಜಾಬ್ ಗೆ ಬಂದ ರಿಕಿ ಪಾಂಟಿಂಗ್
Test Series: ಭಾರತ-ಬಾಂಗ್ಲಾ ತಂಡಗಳಿಗೆ ರಿಯಲ್ ಟೆಸ್ಟ್
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.