Hattiangady ಶಾಲೆ: ಶಿಥಿಲ ಕೊಠಡಿ ತೆರವಿಗೆ ಕೊನೆಗೂ ಅನುಮತಿ
Team Udayavani, Aug 27, 2024, 12:47 PM IST
ಕುಂದಾಪುರ: ಹಟ್ಟಿಯಂಗಡಿ ಸರಕಾರಿ ಹಿ.ಪ್ರಾ. ಶಾಲೆಯ ಶಿಥಿಲಗೊಂಡಿರುವ ಕೊಠಡಿಯೊಂದನ್ನು ತೆರವು ಮಾಡಲು ಇಲಾಖೆ ಕೊನೆಗೂ ಅನುಮತಿ ನೀಡಿದೆ. ಇದರೊಂದಿಗೆ ಗಾಳಿ – ಮಳೆಗೆ ಕುಸಿದು ಬೀಳುವ ಅಪಾಯವಿದ್ದು, ಕೆಡವಲು ಅನುಮತಿ ನೀಡಿರುವ ಆದೇಶದಿಂದಾಗಿ ಈಗ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
ಸುಮಾರು 75 ವರ್ಷ ಹಳೆಯದಾದ ಈ ಕೊಠಡಿಯು ತೀರಾ ಶಿಥಿಲಾವಸ್ಥೆಯಲ್ಲಿರುವುದರಿಂದ ದುರಸ್ತಿ ಅಸಾಧ್ಯ. ಪಂಚಾಯತ್ ರಾಜ್ ಎಂಜಿನಿಯರ್ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಅವರು ನೀಡಿರುವ ವರದಿಯಂತೆ ಈ ಕೊಠಡಿಯನ್ನು ಕೆಡವಲು ಉಡುಪಿ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಅನುಮತಿ ನೀಡಿದ್ದಾರೆ.
ಮಕ್ಕಳ ಹಿತದೃಷ್ಟಿಯಿಂದ ಆ ಕಟ್ಟಡದ ತೆರವಿಗೆ ಎಸ್‌ಡಿಎಂಸಿ, ಶಿಕ್ಷಕರು, ಪೋಷಕರು, ಹಳೆ ವಿದ್ಯಾರ್ಥಿ ಸಂಘದವರು ವರ್ಷದಿಂದ ಮನವಿ ಮಾಡುತ್ತಿದ್ದರು. ಸದ್ಯ ಅಲ್ಲಿ ತರಗತಿ ನಡೆಸದೇ, ಬೇರೆ ಕಡೆ ನಡೆಸಲಾಗುತ್ತಿತ್ತು. ಆದರೂ ಮಕ್ಕಳು ಆಚೀಚೆ ಓಡಾಡುವ ವೇಳೆ ಗಾಳಿ- ಮಳೆಗೆ ಕುಸಿದು ಬಿದ್ದು, ಏನಾದರೂ ಅನಾಹುತ ಸಂಭವಿಸುವ ಭೀತಿ ಇತ್ತು.
ತೆರವಿಗೆ ಎಸ್‌ಡಿಎಂಸಿ ಮನವಿ
ಈ ಶಿಥಿಲಗೊಂಡ ಕಟ್ಟಡ ಅಪಾಯಕಾರಿಯಾಗಿದ್ದು, ಇಲ್ಲಿ ತರಗತಿ ನಡೆಸಲು ಸಾಧ್ಯವಿಲ್ಲ. ಈ ಕಟ್ಟಡವನ್ನು ಆದಷ್ಟು ಬೇಗ ತೆರವು ಮಾಡಿ, ಆ ಜಾಗದಲ್ಲಿ ಹೊಸ ಕಟ್ಟಡ ನಿರ್ಮಾಣಕ್ಕೆ ಕ್ರಮಕೈಗೊಳ್ಳಬೇಕು ಎನ್ನುವುದಾಗಿ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ವತಿಯಿಂದ ಉಡುಪಿ ಜಿ.ಪಂ. ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಇದಕ್ಕೂ ಮುನ್ನ ಬೈಂದೂರು ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೂ ಮನವಿ ಸಲ್ಲಿಸಿದ್ದು, ಅವರು ಸ್ವತಹಃ ಇಲ್ಲಿಗೆ ಭೇಟಿ ನೀಡಿ, ವರದಿ ತಯಾರಿಸಿ, ಮೇಲಾಧಿಕಾರಿಗಳಿಗೆ ಸಲ್ಲಿಸಿದ್ದರು.
ಈ ಕೊಠಡಿಯಲ್ಲಿ ಯಾವುದೇ ತರಗತಿ ನಡೆಯದ ಕಾರಣ, ಶಿಕ್ಷಕರ ಕಚೇರಿಯನ್ನೇ ಇನ್ನೊಂದು ತರಗತಿ ಕೋಣೆಯಾಗಿ ಮಾಡಲಾಗಿದೆ. ಇರುವಂತಹ ಕೊಠಡಿಗಳಲ್ಲಿಯೇ ತರಗತಿ ನಡೆಸಲಾಗುತ್ತಿದ್ದು, ಈ ಕಟ್ಟಡವನ್ನು ನೆಲಸಮಗೊಳಿಸಿದ ಬಳಿಕ ಆ ಜಾಗದಲ್ಲಿ ಹೊಸ ಕಟ್ಟಡ ನಿರ್ಮಾಣವಾಗಬೇಕು ಎನ್ನುವುದು ಶಿಕ್ಷಕರು, ಎಸ್‌ಡಿಎಂಸಿ, ಹಳೆ ವಿದ್ಯಾರ್ಥಿಗಳ ಸಂಘ ಹಾಗೂ ಪೋಷಕರ ಬೇಡಿಕೆಯಾಗಿದೆ.
75 ವರ್ಷ ಹಳೆಯ ಕಟ್ಟಡ
ಬೈಂದೂರು ವಲಯದ ಹಟ್ಟಿಯಂಗಡಿ ಸರಕಾರಿ ಹಿ.ಪ್ರಾ. ಶಾಲೆಯ ಈ ಕಟ್ಟಡವೂ ಸುಮಾರು 75 ವರ್ಷಗಳಿಗೂ ಹಿಂದಿನದ್ದಾಗಿದೆ. ಈ ಶಾಲೆಯಲ್ಲಿ ನಡೆಯುತ್ತಿದ್ದ ಸಾಂಸ್ಕೃತಿಕ ಕಾರ್ಯಕ್ರಮ, ಸಭೆ, ಸಮಾರಂಭಗಳು ಇದೇ ಕಟ್ಟಡದಲ್ಲಿ ನಡೆಯುತ್ತಿದ್ದವು. ಪ್ರತೀ ಚುನಾವಣೆಯಲ್ಲೂ ಈ ಕಟ್ಟಡದಲ್ಲಿಯೇ ಮತಗಟ್ಟೆಯನ್ನು ತೆರೆಯಲಾಗುತ್ತಿತ್ತು. ಆದರೆ ಈ ಬಾರಿಯ ಲೋಕಸಭಾ ಚುನಾವಣೆ ವೇಳೆ ಇಲ್ಲಿ ಮತಗಟ್ಟೆ ತೆರೆದಿರಲಿಲ್ಲ. ಈ ಕಟ್ಟಡದಲ್ಲಿ 3 ಕೊಠಡಿಗಳಿದ್ದು, ಅಲ್ಲಲ್ಲಿ ಬಿರುಕು ಬಿಟ್ಟಿದ್ದು, ಸಿಮೆಂಟ್ ಹಾಕಿರುವುದು ಎದ್ದು ಹೋಗಿ, ಕೆಲವೆಡೆಗಳಲ್ಲಿ ಗೋಡೆ ಮಾತ್ರ ಕಾಣುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Notice: ವಕ್ಫ್ ಬೋರ್ಡ್ ರದ್ದತಿಗೆ ಪಕ್ಷಭೇದ ಮರೆತು ಶ್ರಮಿಸಿ: ಪಲಿಮಾರು ಶ್ರೀ
Karkala: ಈದು ಗ್ರಾಮವನ್ನು ಮರೆತು ಬಿಟ್ಟಿದೆಯೇ ಸರಕಾರ?
PM vishwakarma ನೋಂದಣಿ: ರಾಜ್ಯ ನಂ.1
Udupi: ಮಹಾಲಕ್ಷ್ಮೀ ಕೋ-ಆಪ್ ಬ್ಯಾಂಕ್ ಆರ್‌ಬಿಐ ನಿಯಮದಂತೆ ನಡೆಯುತ್ತಿದೆ: ಶಾಸಕ ಯಶ್‌ಪಾಲ್
MAHE Convocation: ಕ್ಲಿಕ್ ಮಾಡುವ ಮೊದಲೇ ಯೋಚಿಸಿ: ಡಾ.ಇಂದ್ರಜಿತ್ ಭಟ್ಟಾಚಾರ್ಯ ಸಲಹೆ
MUST WATCH
ಹೊಸ ಸೇರ್ಪಡೆ
Final Verdict: ಬುಲ್ಡೋಜರ್ ನ್ಯಾಯ ಒಪ್ಪಲು ಅಸಾಧ್ಯ: ಸಿಜೆಐ ಚಂದ್ರಚೂಡ್ ಅಂತಿಮ ತೀರ್ಪು
BGT: ಭಾರತ ವಿರುದ್ದದ ಮೊದಲ ಟೆಸ್ಟ್ ಗೆ ಆಸೀಸ್ ತಂಡ ಪ್ರಕಟ; ಒಂದು ಅಚ್ಚರಿಯ ಆಯ್ಕೆ
Kambala: ಪಿಲಿಕುಳ ಜೋಡುಕರೆಯಲ್ಲಿ ಮತ್ತೆ ಮೊಳಗಲಿದೆ ಕಹಳೆಗಳ ಸದ್ದು!
Covid Scam: ಕೋವಿಡ್ ಅಕ್ರಮ ವರದಿಯಿಂದ ಏನೂ ಆಗದು: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ
Waqf Notice: ವಕ್ಫ್ ಬೋರ್ಡ್ ರದ್ದತಿಗೆ ಪಕ್ಷಭೇದ ಮರೆತು ಶ್ರಮಿಸಿ: ಪಲಿಮಾರು ಶ್ರೀ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.