TVS Jupiter 110: ಅತ್ಯಾಧುನಿಕ “ಟಿವಿಎಸ್‌ ಜುಪಿಟರ್‌110′ ಸ್ಕೂಟರ್‌ ಮಾರುಕಟ್ಟೆಗೆ

ಸುರಕ್ಷತೆ, ದಕ್ಷತೆ, ಅಧುನಿಕ ಸೌಕರ್ಯ, ನೆಕ್ಸ್ಟ್ ಜೆನ್‌ ಇಂಜಿನ್‌ ಹೊಂದಿರುವ ಸ್ಕೂಟರ್‌

Team Udayavani, Aug 27, 2024, 1:13 PM IST

TVS Jupiter 110: ಅತ್ಯಾಧುನಿಕ “ಟಿವಿಎಸ್‌ ಜುಪಿಟರ್‌110′ ಸ್ಕೂಟರ್‌ ಮಾರುಕಟ್ಟೆಗೆ

ಉದಯವಾಣಿ ಸಮಾಚಾರ
ಬೆಂಗಳೂರು: ದ್ವಿಚಕ್ರ ಮತ್ತು ತ್ರಿಚಕ್ರ ವಾಹನ ವಿಭಾಗದ ಪ್ರಮುಖ ಜಾಗತಿಕ ವಾಹನ ತಯಾರಕರಾದ ಟಿವಿಎಸ್‌ ಮೋಟಾರ್‌ ಕಂಪನಿ (ಟಿವಿಎಸ್‌ಎಂ) ಯಿಂದ ಅತ್ಯಾ ಕರ್ಷಕ ವಿನ್ಯಾಸ, ಉತ್ತಮ ಕಾರ್ಯ ನಿರ್ವಹಣೆ ಹಾಗೂ ಸೌಕರ್ಯಗಳುಳ್ಳ ಹೊಚ್ಚ ಹೊಸ “ಟಿವಿಎಸ್‌ ಜುಪಿಟರ್‌ 110′ ಅನ್ನು ನಗರದ ಖಾಸಗಿ ಹೋಟೆಲ್‌ನಲ್ಲಿ ಸೋಮವಾರ ಬಿಡುಗಡೆಗೊಳಿಸಲಾಯಿತು.

ಈ ನೂತನ ಸ್ಕೂಟರ್‌ ನೆಕ್ಸ್ಟ್ ಜೆನ್‌ ಇಂಜಿನ್‌ ಹೊಂದಿದ್ದು, ಹೆಚ್ಚು ಮೈಲೇಜ್‌, ಆಕರ್ಷಣೀಯ ವಿನ್ಯಾಸ, ಅತ್ಯುತ್ತಮ
ಕಾರ್ಯನಿರ್ವಹಣೆ, ಸೌಕರ್ಯ, ಸುರಕ್ಷತೆ ಮತ್ತು ತಂತ್ರಜ್ಞಾನವನ್ನು ಒದಗಿಸುವ ಸ್ಕೂಟರ್‌ ಇದಾಗಿದೆ.

ಈ ಕುರಿತು ಮಾತನಾಡಿದ ಟಿವಿಎಸ್‌ ಮೋಟಾರ್‌ ಕಂಪನಿಯ ಕಾರ್ಪೊರೇಟ್‌ ಬ್ರ್ಯಾಂಡ್‌ ಮತ್ತು ಮೀಡಿಯಾ ವಿಭಾಗದ ಮುಖ್ಯಸ್ಥ ಅನಿರುದ್ಧ ಹಲ್ದಾರ್‌, ಕಾಲದಿಂದ ಕಾಲಕ್ಕೆ ಜನಪ್ರಿಯವಾಗಿರುತ್ತಿರುವ ಜುಪಿಟರ್‌ ಮೇಲೆ ಪ್ರಸ್ತುತ 6.5 ಮಿಲಿಯನ್‌ ನಷ್ಟು ಕುಟುಂಬಗಳು ವಿಶ್ವಾಸವನ್ನು ಇಟ್ಟಿದ್ದಾರೆ.‌

ಈ ಮೂಲಕ ಜುಪಿಟರ್‌ ದೇಶದ ಅತಿ ದೊಡ್ಡ ವಾಹನ ಬ್ರ್ಯಾಂಡ್‌ಗಳಲ್ಲಿ ಒಂದಾಗಿದೆ. “ಜ್ಯಾದಾ ಕಾ ಫಾಯ್ದಾ’ ಎಂಬ
ಘೋಷವಾಕ್ಯದೊಂದಿಗೆ ಇದೀಗ ನೂತನ ಜುಪಿಟರ್‌ ಬಿಡುಗಡೆಯಾಗಿದೆ. ಇದು ಹೆಚ್ಚು ಇಂಧನ ದಕ್ಷತೆ ನೀಡುವ ಸಾಮರ್ಥಯ,
ಸ್ಥಳಾವಕಾಶದ ಡಿಕ್ಕಿ, ಸಮಕಾಲೀನ ವಿನ್ಯಾಸ ಸೇರಿ ಮತ್ತಿತರ ಉತ್ತಮ ಗುಣಲಕ್ಷಣಗಳನ್ನು ಹೊಂದಿದೆ ಎಂದು ತಿಳಿಸಿದರು.

ವಿಶೇಷತೆಗಳು
*ಆಕರ್ಷಕ ಇನ್ಫಿನಿಟಿ ಲ್ಯಾಂಪ್‌, ಉದ್ದವಾದ ಸೀಟು, ಬಾಡಿ ಬ್ಯಾಲೆನ್ಸ್‌ ತಂತ್ರಜ್ಞಾನ, ಡಿಕ್ಕಿಯಲ್ಲಿ 2 ಫುಲ್‌ ಹೆಲ್ಮೆಟ್‌ ಇಡುವಷ್ಟು ಸ್ಥಳಾವಕಾಶ, ಮೆಟಲ್‌ ಮ್ಯಾಕ್ಸ್‌ ಬಾಡಿ, ಹೆಡ್‌ಲ್ಯಾಂಪ್‌ಗಳು, ಟರ್ನ್ ಸಿಗ್ನಲ್‌ ಲ್ಯಾಂಪ್‌ ರೆಸ್ಟ್‌ , ಎಮರ್ಜೆನ್ಸಿ ಬ್ರೇಕ್‌ ವಾರ್ನಿಂಗ್‌ ಫೀಚರ್‌ಗಳಿವೆ.

*ಉಳಿದ ಜುಪಿಟರ್‌ಗಳಿಗಿಂತ ಈ ನೂತನ ಸ್ಕೂಟರ್‌ ಶೇ.10ರಷ್ಟು ಹೆಚ್ಚು ಮೈಲೇಜ್‌, ಉತ್ತಮ ಪಿಕ್‌-ಅಪ್‌.

*ವಾಯ್ಸ್‌ ಅಸಿಸ್ಟ್ ಮೂಲಕ ನ್ಯಾವಿಗೇಶನ್‌, ಕಾಲ್‌ ಮತ್ತು ಎಸ್‌ಎಂಎಸ್‌ ಮಾಡಬಹುದಾದ ಆಕರ್ಷಕ ಫೀಚರ್‌ಗಳನ್ನು ಒದಗಿಸುವ ಬ್ಲೂಟೂತ್‌ ನಿಂದ ಕಾರ್ಯ ನಿರ್ವಹಿಸುವ ಸಂಪೂರ್ಣ ಡಿಜಿಟಲ್‌ ಕ್ಲಸ್ಟರ್‌ ಹೊಂದಿದೆ.

*ಆಲ್‌ ಇನ್‌ ಒನ್‌ ಲಾಕ್‌, ಯುಎಸ್‌ಬಿ ಮೊಬೈಲ್‌ ಚಾರ್ಜರ್‌, ಎಲ್‌ಇಡಿ ಹೆಡ್‌ಲ್ಯಾಂಪ್‌ ಸುರಕ್ಷಿತವಾಗಿ ರಾತ್ರಿ ಸಮಯದಲ್ಲಿ ಸವಾರಿ ಮಾಡಲು ಬೇಕಾದ ಉತ್ತಮ ಬೆಳಕನ್ನು ಒದಗಿಸುತ್ತದೆ. ಜತೆಗೆ ಮೋಟಾರ್‌ ಸೈಕಲ್‌ಗ‌ಳಲ್ಲಿ ಲಭ್ಯವಿರಬಹುದಾದ ಫ್ರಂಟ್‌ ಟೆಲಿಸ್ಕೋಪಿಕ್‌ ಸಸ್ಪೆನ್‌ಷನ್‌ಅನ್ನು ಹೊಂದಿದೆ.

*ಈ ನೂತನ ಸ್ಕೂಟರ್‌, ಡಾನ್‌ ಬ್ಲೂ ಮ್ಯಾಟ್‌, ಗ್ಯಾಲಕ್ಟಿಕ್‌ ಕಾಪರ್‌ ಮ್ಯಾಟ್‌, ಟೈಟಾನಿಯಂ ಗ್ರೇ ಮ್ಯಾಟ್‌, ಸ್ಟಾರ್‌ಲೈಟ್‌ ಬ್ಲೂ ಗ್ಲಾಸ್‌, ಲೂನಾರ್‌ ವೈಟ್‌ ಗ್ಲಾಸ್‌ ಮತ್ತು ಮೆಟಿಯರ್‌ ರೆಡ್‌ ಗ್ಲೋಸ್‌ ಎಂಬ 6 ಅತ್ಯಾಕರ್ಷಕ ಬಣ್ಣಗಳಲ್ಲಿ ಲಭ್ಯವಿದ್ದು, ಬೆಂಗಳೂರಿನ ಶೋರೂಂಗಳಲ್ಲಿ 77,400 ರೂ. ಆರಂಭಿಕ ಬೆಲೆಯಲ್ಲಿ ದೊರೆಯಲಿದೆ.

ಟಾಪ್ ನ್ಯೂಸ್

Court: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾCourt: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾ

Court: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾ

Congress: ಜಮೀರ್‌ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಡಾ| ಜಿ. ಪರಮೇಶ್ವರ್‌

Congress: ಜಮೀರ್‌ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಡಾ| ಜಿ. ಪರಮೇಶ್ವರ್‌

Karnataka: ವೈದ್ಯ ಸೀಟು ಸಿಗದವರ ಮುಂಗಡ ಶುಲ್ಕ ವಾಪಸ್‌

Karnataka: ವೈದ್ಯ ಸೀಟು ಸಿಗದವರ ಮುಂಗಡ ಶುಲ್ಕ ವಾಪಸ್‌

H.D.Kote: ಹುಲಿ ದಾಳಿಗೆ ಹೊಂಚು: ಕೂದಲೆಳೆ ಅಂತರದಲ್ಲಿ ಪಾರಾದ ಯುವಕ!

H.D.Kote: ಹುಲಿ ದಾಳಿಗೆ ಹೊಂಚು: ಕೂದಲೆಳೆ ಅಂತರದಲ್ಲಿ ಪಾರಾದ ಯುವಕ!

PM ಮೋದಿ ಮನೆ ಮುಂದೆ ಧರಣಿ ನಡೆಸುವಿರಾ? ಎಂ.ಬಿ. ಪಾಟೀಲ್‌

PM ಮೋದಿ ಮನೆ ಮುಂದೆ ಧರಣಿ ನಡೆಸುವಿರಾ? ಎಂ.ಬಿ. ಪಾಟೀಲ್‌

Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್‌: ಛಲವಾದಿ

Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್‌: ಛಲವಾದಿ

Belagavi: ಮರಕ್ಕೆ ಕ್ರೂಸರ್‌ ಢಿಕ್ಕಿ: ಸ್ಥಳದಲ್ಲೇ ಮೂವರ ಸಾವು

Belagavi: ಮರಕ್ಕೆ ಕ್ರೂಸರ್‌ ಢಿಕ್ಕಿ: ಸ್ಥಳದಲ್ಲೇ ಮೂವರ ಸಾವು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru Tech Summit: ರೋಗಿ ಕಣ್ಣು ಮಿಟುಕಿಸಿದರೆ ಮೊಬೈಲ್‌ಗೆ ಮೆಸೇಜ್‌!

Bengaluru Tech Summit: ರೋಗಿ ಕಣ್ಣು ಮಿಟುಕಿಸಿದರೆ ಮೊಬೈಲ್‌ಗೆ ಮೆಸೇಜ್‌!

Bengaluru Tech Summit: ನಾಯಿ, ಬೆಕ್ಕುಗಳಿಗೂ ಬಂತು ಕೃತಕ ಬುದ್ಧಿಮತ್ತೆ ಚಾಟ್‌ಬಾಟ್‌ 

Bengaluru Tech Summit: ನಾಯಿ, ಬೆಕ್ಕುಗಳಿಗೂ ಬಂತು ಕೃತಕ ಬುದ್ಧಿಮತ್ತೆ ಚಾಟ್‌ಬಾಟ್‌ 

Dubai ಬಾನೆತ್ತರದಲ್ಲಿ ಹಾರಾಟಕ್ಕೆ ಸಿದ್ದವಾಗುತ್ತಿದೆ…ಡ್ರೋನ್‌ ಏರ್‌ಟ್ಯಾಕ್ಸಿ

Dubai ಬಾನೆತ್ತರದಲ್ಲಿ ಹಾರಾಟಕ್ಕೆ ಸಿದ್ದವಾಗುತ್ತಿದೆ…Drone ಏರ್‌ಟ್ಯಾಕ್ಸಿ-ಏನಿದರ ವಿಶೇಷ

Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್‌ ತೆರೆದೀರಿ ಜೋಕೆ!

Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್‌ ತೆರೆದೀರಿ ಜೋಕೆ!

New Maruti Dzire:ದಿ ಡ್ಯಾಜ್ಲಿಂಗ್‌-ನ್ಯೂ ಸ್ವಿಫ್ಟ್ ಡಿಸೈರ್‌ ಕಾರು ಮಾರುಕಟ್ಟೆಗೆ ಬಿಡುಗಡೆ

New Maruti Dzire:ದಿ ಡ್ಯಾಜ್ಲಿಂಗ್‌-ನ್ಯೂ ಸ್ವಿಫ್ಟ್ ಡಿಸೈರ್‌ ಕಾರು ಮಾರುಕಟ್ಟೆಗೆ ಬಿಡುಗಡೆ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Court: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾCourt: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾ

Court: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾ

Congress: ಜಮೀರ್‌ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಡಾ| ಜಿ. ಪರಮೇಶ್ವರ್‌

Congress: ಜಮೀರ್‌ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಡಾ| ಜಿ. ಪರಮೇಶ್ವರ್‌

Karnataka: ವೈದ್ಯ ಸೀಟು ಸಿಗದವರ ಮುಂಗಡ ಶುಲ್ಕ ವಾಪಸ್‌

Karnataka: ವೈದ್ಯ ಸೀಟು ಸಿಗದವರ ಮುಂಗಡ ಶುಲ್ಕ ವಾಪಸ್‌

H.D.Kote: ಹುಲಿ ದಾಳಿಗೆ ಹೊಂಚು: ಕೂದಲೆಳೆ ಅಂತರದಲ್ಲಿ ಪಾರಾದ ಯುವಕ!

H.D.Kote: ಹುಲಿ ದಾಳಿಗೆ ಹೊಂಚು: ಕೂದಲೆಳೆ ಅಂತರದಲ್ಲಿ ಪಾರಾದ ಯುವಕ!

PM ಮೋದಿ ಮನೆ ಮುಂದೆ ಧರಣಿ ನಡೆಸುವಿರಾ? ಎಂ.ಬಿ. ಪಾಟೀಲ್‌

PM ಮೋದಿ ಮನೆ ಮುಂದೆ ಧರಣಿ ನಡೆಸುವಿರಾ? ಎಂ.ಬಿ. ಪಾಟೀಲ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.