Uchila: ರಾಷ್ಟ್ರೀಯ ಹೆದ್ದಾರಿಯಲ್ಲಿ ಉರಿಯುತ್ತಿಲ್ಲ ಬೀದಿದೀಪ
ಎಸ್‌ಡಿಪಿಐ ಮೊಬೈಲ್ ಟಾರ್ಚ್ ಪ್ರತಿಭಟನೆ
Team Udayavani, Aug 27, 2024, 1:12 PM IST
ಕಾಪು: ರಾಷ್ಟ್ರಿಯ ಹೆದ್ದಾರಿ 66ರ ಉಚ್ಚಿಲದಲ್ಲಿ ಅಳವಡಿಸಿರುವ ದಾರಿದೀಪಗಳು ಕಳೆದ ಹಲವು ತಿಂಗಳುಗಳಿಂದ ಉರಿಯದೇ ಇರುವುದನ್ನು ಖಂಡಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಉಚ್ಚಿಲ ಗ್ರಾಮ ಸಮಿತಿಯ ವತಿಯಿಂದ ಉಚ್ಚಿಲ ಪೇಟೆಯಲ್ಲಿ ಡಿವೈಡರ್ ಮಧ್ಯದಲ್ಲಿ ಮೊಬೈಲ್ ಟಾರ್ಚ್ ಪ್ರದರ್ಶಿಸಿ ಶನಿವಾರ ರಾತ್ರಿ ವಿನೂತನ ಶೈಲಿಯಲ್ಲಿ ಪ್ರತಿಭಟನೆ ನಡೆಸಲಾಯಿತು.
ಎಸ್.ಡಿ.ಪಿ.ಐ ಕಾಪು ಕ್ಷೇತ್ರ ಸಮಿತಿ ಅಧ್ಯಕ್ಷ ಹನೀಫ್ ಮೂಳೂರು ಮಾತನಾಡಿ, ರಾಷ್ಟ್ರಿಯ ಹೆದ್ದಾರಿಯ 66ರಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಡಿವೈಡರ್‌ಗಳಲ್ಲಿ ಅಳವಡಿಸಿರುವ ಲೈಟ್ ಗಳು ಉರಿಯದೇ ಸಾರ್ವಜನಿಕರಿಗೆ ರಾತ್ರಿ ಹೊತ್ತು ರಸ್ತೆ ದಾಟಲು ಕಷ್ಟಕರವಾಗಿದೆ. ಈ ಬಗ್ಗೆ ಹಲವು ಬಾರಿ ಸಂಬಂಧಪಟ್ಟವರಿಗೆ ಮನವಿ ನೀಡಿದರೂ ಪ್ರಯೋಜನವಾಗಿಲ್ಲ. ಒಂದು ತಿಂಗಳೊಳಗಾಗಿ ಹೆದ್ದಾರಿ ಪ್ರಾಧಿಕಾರ ದಾರಿದೀಪ ಉರಿಯುವಂತೆ ಮಾಡದೆ ಇದ್ದಲ್ಲಿ ಸಾವರ್ಜನಿಕರ ಸಹಕಾರದೊಂದಿಗೆ ಉಗ್ರ ರೀತಿಯಲ್ಲಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಎಸ್.ಡಿ.ಪಿ.ಐ ಜಿಲ್ಲಾ ಕಾರ್ಯದರ್ಶಿ ಅಬ್ದುಲ್ ಮಜೀದ್ ಮಾತನಾಡಿ, ದಾರಿದೀಪಗಳು ಉರಿಯದಿದ್ದಲ್ಲಿ ಕಂಬಗಳ ಅಗತ್ಯವಿರುವುದಿಲ್ಲ, ಕಾಮಗಾರಿಯ ಗುತ್ತಿಗೆ ಪಡೆದಿರುವ ನವಯುಗ ಕಂಪೆನಿ ತತ್‌ಕ್ಷಣವೇ ಸ್ಪಂಧಿಸಿ ದಾರಿದೀಪಗಳನ್ನು ಉರಿಯುವಂತೆ ಮಾಡಬೇಕು. ಇಲ್ಲದಿದ್ದಲ್ಲಿ ಸಾರ್ವಜನಿಕರ ಸಹಕಾರದೊಂದಿಗೆ ಕಂಬಗಳನ್ನೇ ಕಿತ್ತು ಎಸೆಯುವುದಾಗಿ ಎಚ್ಚರಿಸಿದರು.
ಎಸ್.ಡಿ.ಪಿ.ಐ ಉಚ್ಚಿಲ ಗ್ರಾಮ ಸಮಿತಿ ಅಧ್ಯಕ್ಷ ಹಮೀದ್ ಉಚ್ಚಿಲ, ಬಡಾ ಗ್ರಾ.ಪಂ. ಪಂಚಾಯತ್ ಸದಸ್ಯರಾದ ಅಬ್ದುಲ್ ರಜಾಕ್, ರಫೀಕ್ ದೀವು, ಆಸೀಫ್ ವೈ.ಸಿ., ತವಕ್ಕಲ್ ಯಂಗ್ ಮೆನ್ಸ್ ಅಸೋಸಿಯೇಶನ್‌ನ ಅಧ್ಯಕ್ಷ ಅಬ್ದುಲ್ ರಜಾಕ್, ಉಚ್ಚಿಲ ಆಟೋ ಚಾಲಕ ಮಾಲಕರ ಸಂಘದ ಅಧ್ಯಕ್ಷ ಸಿರಾಜ್ ಎನ್.ಎಚ್., ನಿಸಾರ್ ಮೂಲ್ಕಿ ಉಪಸ್ಥಿತರಿದ್ದರು.
ಉದಯವಾಣಿ ಸುದಿನದಲ್ಲಿ ಸಚಿತ್ರ ವರದಿ ಎರ್ಮಾಳು – ಉಚ್ಚಿಲ – ಮೂಳೂರು ನಡುವಿನ ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪಥ ರಸ್ತೆಯಲ್ಲಿ 91 ಬೀದಿ ದೀಪಗಳಿದ್ದರೂ ಅದರಲ್ಲಿ ಒಂದೂ ಉರಿಯುತ್ತಿಲ್ಲ ಎನ್ನುವುದರ ಬಗ್ಗೆ ಅ.18ರ ಉದಯವಾಣಿ ಸುದಿನದಲ್ಲಿ ಸಚಿತ್ರ ವರದಿ, ಸಮಸ್ಯೆಗಳ ಸರಮಾಲೆಯನ್ನು ಬಿಚ್ಚಿಡಲಾಗಿತ್ತು. ಈ ಬಗ್ಗೆ ಉಚ್ಚಿಲ ಬಡಾ ಗ್ರಾ.ಪಂ., ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು ಮತ್ತೂಮ್ಮೆ ಹೆದ್ದಾರಿ ಇಲಾಖೆ, ಪ್ರಾಧಿಕಾರ ಮತ್ತು ಜಿಲ್ಲಾಡಳಿತಕ್ಕೆ ಪತ್ರ ಬರೆದು ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.