Dasara: ಉಡುಪಿ ಉಚ್ಚಿಲ ದಸರಾ – 2024 ಆಮಂತ್ರಣ ಪತ್ರಿಕೆ ಬಿಡುಗಡೆ
Team Udayavani, Aug 27, 2024, 7:09 PM IST
ಕಾಪು : ಮೊಗವೀರ ಮಹಾಜನ ಸಂಘ ಸಂಚಾಲಿತ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ “ಉಡುಪಿ ಉಚ್ಚಿಲ ದಸರಾ -2024” ರ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಆ.27ರ ಮಂಗಳವಾರ ಬಿಡುಗಡೆಗೊಳಿಸಲಾಯಿತು.
ದ.ಕ. ಮೊಗವೀರ ಮಹಾಜನ ಸಂಘದ ಗೌರವ ಸಲಹೆಗಾರ ನಾಡೋಜ ಡಾ| ಜಿ. ಶಂಕರ್ ಅವರು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿ, ಅಕ್ಟೋಬರ್ 3 ರಿಂದ ಅಕ್ಟೋಬರ್ 12ರ ವರೆಗೆ ನಡೆಯಲಿರುವ ಮೂರನೇ ವರ್ಷದ ಉಚ್ಚಿಲ ದಸರಾವನ್ನು ಉಡುಪಿ ಉಚ್ಚಿಲ ದಸರಾ ಎಂಬ ಘೋಷಣೆಯೊಂದಿಗೆ ಅದ್ದೂರಿಯಾಗಿ ಆಚರಿಸಲಾಗುವುದು. ನೃತ್ಯ ವೈವಿಧ್ಯ, ಕುಸ್ತಿ ಸ್ಪರ್ಧೆ, ದೇಹದಾಢ್ಯಸ್ಪರ್ಧೆ, ಹೆಣ್ಣು ಮಕ್ಕಳ ಹುಲಿ ಕುಣಿತ ಸ್ಪರ್ಧೆ, ಸಾಮೂಹಿಕ ದಾಂಡಿಯ ನೃತ್ಯ ಸಹಿತ ಹಲವು ವಿಶೇಷಗಳೊಂದಿಗೆ ದಸರಾ ವೈಭವ ನಡೆಯಲಿದೆ ಎಂದರು.
ದೇವಸ್ಥಾನದ ಪ್ರಧಾನ ಅರ್ಚಕ ವೇ| ಮೂ| ಕೆ. ವಿ.ರಾಘವೇಂದ್ರ ಉಪಾಧ್ಯಾಯ ನೇತೃತ್ವದಲ್ಲಿ ಆಮಂತ್ರಣ ಪತ್ರಿಕೆಗೆ ಪೂಜೆ ಸಲ್ಲಿಸಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.
ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಬೆಳ್ಳಂಪಳ್ಳಿ, ಪ್ರಧಾನ ಕಾರ್ಯದರ್ಶಿ ಶರಣ್ ಕುಮಾರ್ ಮಟ್ಟು, ಜೊತೆ ಕಾರ್ಯದರ್ಶಿ ಸುಜಿತ್ ಸಾಲ್ಯಾನ್ ಮುಲ್ಕಿ, ಕೋಶಾಧಿಕಾರಿ ರತ್ನಾಕರ ಸಾಲ್ಯಾನ್, ಕ್ಷೇತ್ರಾಡಳಿತ ಮಂಡಳಿಯ ಅಧ್ಯಕ್ಷ ಗಿರಿಧರ ಸುವರ್ಣ ಮೂಳೂರು, ಕಾರ್ಯದರ್ಶಿ ನಾರಾಯಣ ಸಿ ಕರ್ಕೇರ, ಕೋಶಾಧಿಕಾರಿ ಸುಧಾಕರ್ ಕುಂದರ್, ದಸರಾ ಉತ್ಸವ ಸಮಿತಿ ಅಧ್ಯಕ್ಷ ವಿನಯ್ ಕರ್ಕೇರ ಮಲ್ಪೆ, ಸದಸ್ಯರಾದ ಮೋಹನ್ ಬಂಗೇರ ಕಾಪು, ದಿನೇಶ್ ಎರ್ಮಾಳು, ಮೊಗವೀರ ಮಹಾಜನ ಸಂಘದ ಮಹಿಳಾ ಮಂಡಳಿಯ ಅಧ್ಯಕ್ಷೆ ಉಷಾರಾಣಿ ಬೋಳೂರು, ಪ್ರಧಾನ ಕಾರ್ಯದರ್ಶಿ ಉಷಾ ಲೋಕೇಶ್, ಕಾಪು ನಾಲ್ಕುಪಟ್ಣ ಮೊಗವೀರ ಸಭಾ ಉಚ್ಚಿಲ ಅಧ್ಯಕ್ಷ ಮನೋಜ್ ಪಿ. ಕಾಂಚನ್, ಮಹಿಳಾ ಸಭಾದ ಅಧ್ಯಕ್ಷೆ ಸುಗುಣ ಎಸ್. ಕರ್ಕೇರ, ಕ್ಷೇತ್ರಾಡಳಿತ ಸಮಿತಿ ಮಾಜಿ ಅಧ್ಯಕ್ಷ ವಾಸುದೇವ ಸಾಲ್ಯಾನ್, ಜೀರ್ಣೋದ್ಧಾರ ಸಮಿತಿ ಮಾಜಿ ಅಧ್ಯಕ್ಷ ಗುಂಡು ಬಿ. ಅಮೀನ್, ಪ್ರಮುಖರಾದ ಸತೀಶ್ ಎಸ್. ಅಮೀನ್ ಬೆಣ್ಣೆ ಕುದ್ರು, ಸತೀಶ್ ಸಾಲ್ಯಾನ್, ಮಂಜುನಾಥ್ ಸುವರ್ಣ ಬ್ರಹ್ಮಾವರ, ರವೀಂದ್ರ ಶ್ರೀಯಾನ್ ಹಿರಿಯಡ್ಕ, ಶಿವರಾಮ ಕೋಟ, ಲೋಕೇಶ್ ಮೆಂಡನ್ ಉಪ್ಪೂರು, ವಿನಯ ಕರ್ಕೆರ ಮಲ್ಪೆ, ಕೇಶವ ಎಂ ಕೋಟ್ಯಾನ್, ಗಿರೀಶ್ ಕುಮಾರ್ ಪಿತ್ರೋಡಿ, ಜಯಂತ್ ಸಾಲ್ಯಾನ್ ಕನಕೋಡ, ಕಿರಣ್ ಕುಮಾರ್ ಪಿತ್ರೋಡಿ, ಸುಧಾಕರ ವಿ ಸುವರ್ಣ ಉಚ್ಚಿಲ, ನಾರಾಯಣ ಸಿ ಕರ್ಕೇರ ಪಡಬಿದ್ರಿ ಕಾಡಿಪಟ್ಣ, ಸತೀಶ್ ಆರ್ ಕರ್ಕೇರ ಸುರತ್ಕಲ್, ವಿಜಯ ಸುವರ್ಣ ಕುಳಾಯಿ, ಹೇಮಂತ್ ತಿಂಗಳಾಯ ಹೊಯ್ಗೆ ಬಜಾರ್, ಪುರುಷೋತ್ತಮ ಕೋಟ್ಯಾನ್ ಬೋಳೂರು, ಯಶವಂತ್ ಪಿ. ಮೆಂಡನ್ ಬೋಳೂರು, ಸತೀಶ್ ಅಮೀನ್ ಪಡುಕೆರೆ ಮೊದಲಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Train ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ
Himachal Pradesh;ನಷ್ಟದಲ್ಲಿರುವ ಹೊಟೇಲ್ ಮುಚ್ಚಲು ಹೈಕೋರ್ಟ್ ಆದೇಶ
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Dinesh Gundu Rao: ಅನರ್ಹರ ಕಾರ್ಡ್ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ
Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್ ಘೋಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.