US Open 2024: ಹಾಲಿ ಚಾಂಪಿಯನ್ನರಿಗೆ ಗೆಲುವು
Team Udayavani, Aug 27, 2024, 11:00 PM IST
ನ್ಯೂಯಾರ್ಕ್: ಹಾಲಿ ಚಾಂಪಿಯನ್‌ಗಳಾದ ನೊವಾಕ್ ಜೊಕೋವಿಕ್ ಮತ್ತು ಕೊಕೊ ಗಾಫ್ ಯುಎಸ್ ಓಪನ್ ಟೆನಿಸ್ ಪಂದ್ಯಾವಳಿಯಲ್ಲಿ ಗೆಲುವಿನ ಆರಂಭ ಪಡೆದಿದ್ದಾರೆ.
25ನೇ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಯ ಹುಡುಕಾಟದಲ್ಲಿರುವ ದ್ವಿತೀಯ ಶ್ರೇಯಾಂಕದ ಜೊಕೋವಿಕ್ ಮಾಲ್ಡೋವಾದ 138ನೇ ರ್‍ಯಾಂಕ್ ಆಟಗಾರ ರಾಡು ಅಲ್ಬೋಟ್ ಅವರನ್ನು 6-2, 6-2, 6-4ರಿಂದ ಮಣಿಸಿದರು. ಜೊಕೋವಿಕ್ ಮುಂದಿನ ಸುತ್ತಿನಲ್ಲಿ ತಮ್ಮದೇ ದೇಶದ ಲಾಸ್ಲೊ ಡಿಜೆರೆ ವಿರುದ್ಧ ಆಡಲಿದ್ದಾರೆ.
ಮೊದಲ ದಿನದ ಏರುಪೇರಿನ ಫಲಿತಾಂಶ ಅಮೆರಿಕದ ಬೆನ್ ಶೆಲ್ಟನ್ ಅವರಿಂದ ದಾಖಲಾಯಿತು. ಶೆಲ್ಟನ್ ಮಾಜಿ ಚಾಂಪಿಯನ್, ಆಸ್ಟ್ರಿಯಾದ ಡೊಮಿನಿಕ್ ಥೀಮ್ ಅವರನ್ನು 6-4, 6-2, 6-2ರಿಂದ ಉರುಳಿಸಿದರು.
ಅಮೆರಿಕದ ಫ್ರಾನ್ಸೆಸ್ ಥಿಯಾಫೊ, ಟೇಲರ್ ಫ್ರಿಟ್ಜ್, ಜರ್ಮನಿಯ ಅಲೆಕ್ಸಾಂಡರ್ ಜ್ವೆರೇವ್ ದ್ವಿತೀಯ ಸುತ್ತಿಗೆ ಏರಿದ ಪ್ರಮುಖರು.
ವನಿತಾ ಸಿಂಗಲ್ಸ್
ವನಿತಾ ಸಿಂಗಲ್ಸ್‌ನಲ್ಲಿ ಕೊಕೊ ಗಾಫ್ ಫ್ರಾನ್ಸ್‌ನ ವರ್ವರಾ ಗ್ರಶೇವಾ ವಿರುದ್ಧ 6-2, 6-0 ಅಂತರದ ನಿರಾಯಾಸದ ಜಯ ಸಾಧಿಸಿದರು.
ವನಿತಾ ಸಿಂಗಲ್ಸ್‌ನ ಉಳಿದ ಪಂದ್ಯಗಳಲ್ಲಿ ಅರಿನಾ ಸಬಲೆಂಕಾ 6-3, 6-3ರಿಂದ ಅರ್ಹತಾ ಆಟ ಗಾರ್ತಿ ಪ್ರಿಸ್ಕಿಲ್ಲಾ ಹಾನ್ ಅವರನ್ನು ಮಣಿಸಿದರು. ಆತಿಥೇಯ ದೇಶದ ಮ್ಯಾಡಿಸನ್ ಕೀಸ್ ಜೆಕ್ ಆಟಗಾರ್ತಿ ಕ್ಯಾಥರಿನಾ ಸಿನಿಯಕೋವಾ ವಿರುದ್ಧ 6-4, 6-1ರ ಮೇಲುಗೈ ಸಾಧಿಸಿದರು. ಚೀನದ ಕ್ವಿನ್ವೆನ್ ಜೆಂಗ್ ಆತಿಥೇಯ ದೇಶದ ಅಮಂಡಾ ಅನಿಸಿಮೋವಾ ವಿರುದ್ಧ 3 ಸೆಟ್‌ಗಳ ಹೋರಾಟ ನಡೆಸಿ 4-6, 6-4, 6-2ರಿಂದ ಗೆದ್ದು ಬಂದರು.
ಉಕ್ರೇನಿನ ಎಲಿನಾ ಸ್ವಿಟೋಲಿನಾ ಆರ್ಜೆಂಟೀನಾದ ಮರಿಯಾ ಲಾರ್ಡೆಸ್ ಕಾರ್ಲೆ ಅವರನ್ನು 3-6, 6-3, 6-4ರಿಂದ ಹಿಮ್ಮೆಟ್ಟಿಸಿದರು. ರಷ್ಯಾದ ದರಿಯಾ ಕಸತ್ಕಿನಾ ರೊಮೇನಿಯಾದ ಜಾಕ್ವೆಲಿನ್ ಕ್ರಿಸ್ಟಿನ್ ವಿರುದ್ಧ 6-2, 6-4 ಅಂತರದ ಜಯ ಸಾಧಿಸಿದರು.
ಗ್ರೀಕ್‌ನ ಮರಿಯಾ ಸಕ್ಕರಿ ಚೀನದ ಯಫಾನ್ ವಾಂಗ್ ವಿರುದ್ಧ ಆಡು ತ್ತಿರುವಾಗ ಗಾಯಾಳಾಗಿ ಹೊರಬಿದ್ದರು. ಆಗ ವಾಂಗ್ 6-2ರಿಂದ ಮೊದಲ ಸೆಟ್ ಜಯಿಸಿದ್ದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Border-Gavaskar Test series ಇಂದಿನಿಂದ: ಹೋರಾಟಕ್ಕೆ ಭಾರತ-ಆಸ್ಟ್ರೇಲಿಯ ಸಿದ್ಧ
Eden Gardens; ‘ಬಿ’ ಬ್ಲಾಕ್‌ಗೆ ಜೂಲನ್ ಗೋಸ್ವಾಮಿ ಹೆಸರಿಡಲು ನಿರ್ಧಾರ
PCB; ಚಾಂಪಿಯನ್ಸ್ ಟ್ರೋಫಿಗೆ ಅಧಿಕಾರಿಯ ನೇಮಕ
MUST WATCH
ಹೊಸ ಸೇರ್ಪಡೆ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.