RBI: ಸಾಲ ಪಡೆಯಲು ಯುಪಿಐ ರೀತಿ ಹೊಸ ವ್ಯವಸ್ಥೆ ಜಾರಿ!
Team Udayavani, Aug 28, 2024, 6:30 AM IST
ಮುಂಬಯಿ: ಇನ್ಮುಂದೆ ಸಾಲ ವಿತರಣೆ ಗೂ ಯುಪಿಐ ಮಾದರಿ ಪ್ಲಾಟ್ಫಾರಂ ಅನ್ನು ಪರಿಚಯಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಮುಂದಾಗಿದೆ.
ಹೌದು, ಯುಪಿಐ ಯಶ ಸ್ಸಿನ ಬೆನ್ನಲ್ಲೇ ಯಾವುದೇ ಅಡೆತಡೆಯಿ ಲ್ಲದೇ ಸಾಲವನ್ನು ನೀಡುವಂಥ ಹೊಸ ತಂತ್ರಜ್ಞಾನದ ಪ್ಲಾಟ್ಫಾರಂ ಯುನಿ ಫೈಡ್ ಲೆಂಡಿಂಗ್ ಇಂಟರ್ಫೇಸ್(ಯುಎಲ್ಐ) ಅನ್ನು ಪರಿಚಯಿಸುವು ದಾಗಿ ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಘೋಷಿಸಿದ್ದಾರೆ.
ಸಣ್ಣ, ಅತೀ ಸಣ್ಣ ಮತ್ತು ಸೂಕ್ಷ್ಮ ಉದ್ದಿಮೆ (ಎಂಎಸ್ಎಂಇ)ಗಳಿಗೆ ಹಾಗೂ ಗ್ರಾಮೀಣ ಪ್ರದೇಶದ ಸಾಲ ಗಾರ ರಿಗೆ ಸುಲಲಿತವಾಗಿ ಸಾಲ ವಿತರಿಸುವ ಉದ್ದೇಶದಿಂದ ಇದನ್ನು ಜಾರಿ ಮಾಡಲಾಗುತ್ತಿದೆ. ಕೇಂದ್ರ ಅಥವಾ ರಾಜ್ಯ ಸರಕಾರಗಳು, ಅಕೌಂಟ್ ಅಗ್ರಿಗೇಟರ್ಗಳು, ಬ್ಯಾಂಕ್ಗಳು, ಸಾಲ ಮಾಹಿತಿ ಕಂಪೆನಿಗಳು, ಡಿಜಿಟಲ್ ಐಡೆಂಟಿಟಿ ಪ್ರಾಧಿಕಾರ ಮುಂತಾದ ಸಂಸ್ಥೆಗಳು ಸಂಗ್ರಹಿಸಿರುವ ದತ್ತಾಂಶಗಳನ್ನು ಆಧರಿಸಿ ಡಿಜಿಟಲ್ ಸಾಲ ನೀಡಲಾಗುತ್ತದೆ. ಆದರೆ ಈ ದತ್ತಾಂಶಗಳು ಪ್ರತ್ಯೇಕ ಸಿಸ್ಟಂಗಳಲ್ಲಿ ಇರುವ ಕಾರಣ, ತಡೆರಹಿತ ಹಾಗೂ ಸಕಾಲದಲ್ಲಿ ಸಾಲ ವಿತರಿಸಲು ಸಾಧ್ಯವಾಗುತ್ತಿರಲಿಲ್ಲ ಎಂದು ಅವರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Train ಜನಶತಾಬ್ದಿ ಎಕ್ಸ್ಪ್ರೆಸ್ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ
Himachal Pradesh;ನಷ್ಟದಲ್ಲಿರುವ ಹೊಟೇಲ್ ಮುಚ್ಚಲು ಹೈಕೋರ್ಟ್ ಆದೇಶ
Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್ ಘೋಷಣೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.