Gujarat: ಅಪಾಯದ ಮಟ್ಟ ಮೀರಿದ ನದಿಗಳು
Team Udayavani, Aug 27, 2024, 11:19 PM IST
ಗಾಂಧಿನಗರ: ಗುಜರಾತ್‌ನಲ್ಲಿ ಸತತ 3ನೇ ದಿನವೂ ಭಾರೀ ಮಳೆ ಆಗಿದ್ದು, ನದಿಗಳಲ್ಲಿ ನೀರಿನ ಮಟ್ಟ ಹೆಚ್ಚಳವಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಕಳೆದ 2 ದಿನದಲ್ಲಿ 15,000 ಮಂದಿಯನ್ನು ಸುರಕ್ಷಿತ ಜಾಗಗಳಿಗೆ ಸ್ಥಳಾಂತರಿಸಲಾಗಿದ್ದು, 300 ಮಂದಿಯನ್ನು ರಕ್ಷಿಸಲಾ ಗಿದೆ. ರಕ್ಷಣೆಗಾಗಿ ಸೇನೆಯ 6 ತುಕಡಿಯನ್ನೂ ನಿಯೋಜಿಸಲಾಗಿದೆ.
ವಿಶ್ವಾಮಿತ್ರ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಸಮೀಪದ ಪ್ರದೇಶಗಳು ಜಲಾವೃತವಾಗಿವೆ. ವಡೋದರದಲ್ಲಿ 8361 ಮಂದಿ, ಪಂಚ ಕಮಲ್ ಜಿಲ್ಲೆಯಲ್ಲಿ 4000 ಮಂದಿ ಯನ್ನು ಸ್ಥಳಾಂತರಿಸಲಾಗಿದೆ. ವಾಯು ಪಡೆ ಮತ್ತು ಕರಾವಳಿ ಭದ್ರತಾ ಪಡೆ ಸಹಾಯದಿಂದ 300 ಮಂದಿಯನ್ನು ರಕ್ಷಿಸಲಾಗಿದೆ. ಈ ಪೈಕಿ 75 ಮಂದಿ ತುಂಬು ಗರ್ಭಿಣಿಯರಿದ್ದಾರೆ ಎಂದು ಹೇಳಿದ್ದಾರೆ.
ಒಟ್ಟಾರೆ ಮಳೆ ಪೀಡಿತ ಪ್ರದೇಶಗಳಿಂದ ಈ ವರೆಗೆ 23,870 ಮಂದಿಯನ್ನು ಸ್ಥಳಾಂತರಿಸಲಾಗಿದೆ. ರಾಜಸ್ಥಾನದ ಜೈಪುರ, ಉದಯಪುರ, ಬನಸ್ವಾರ, ದುಂಗಾರ್‌ಪುರ ಜಿಲ್ಲೆಗಳಲ್ಲೂ ಭಾರೀ ಮಳೆಯಾಗಿದೆ. ಕಾಶ್ಮೀರದಲ್ಲಿ ಮೇಘ ಸ್ಫೋಟದಲ್ಲಿ ನಾಪತ್ತೆಯಾಗಿ ದ್ದವರ ಪೈಕಿ 2 ಶವ ಮಂಗಳವಾರ ಪತ್ತೆಯಾಗಿದೆ. ಇದರಲ್ಲಿ 12 ವರ್ಷದ ಬಾಲಕನ ಶವವೂ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Borewell Tragedy: ಹತ್ತು ದಿನಗಳ ಕಾರ್ಯಾಚರಣೆ… ಕೊನೆಗೂ ಬದುಕಿ ಉಳಿಯಲಿಲ್ಲ ಚೇತನಾ
Borewell Tragedy: 10 ದಿನದ ಕಾರ್ಯಾಚರಣೆ ಬಳಿಕ ಬದುಕಿ ಬಂದ ಬಾಲೆ, ಇದು ಪವಾಡ ಎಂದ ಪೋಷಕರು
Navy: ಜ.15ಕ್ಕೆ ನೌಕಾಪಡೆಗೆ 2 ಯುದ್ಧ ನೌಕೆ, 1 ಸಬ್‌ಮರೀನ್ ಸೇರ್ಪಡೆ
Share Market: ಹೊಸ ವರ್ಷದ ಮೊದಲ ದಿನ 368 ಅಂಕ ಏರಿದ ಸೆನ್ಸೆಕ್ಸ್
Viral: ಫೇಸ್‌ಬುಕ್ ಪ್ರೇಯಸಿ ಭೇಟಿಗೆ ಅಕ್ರಮವಾಗಿ ಪಾಕ್‌ಗೆ ತೆರಳಿ ಸಿಕ್ಕಿಬಿದ್ದ ಭಾರತೀಯ ಯುವಕ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.