Cat; ಚಿತ್ರ ನಿರ್ದೇಶಕಿಯ ಮನೆಗೆ ನುಗ್ಗಿದ ಕಳ್ಳ: ಬೆಕ್ಕಿನಿಂದಾಗಿ ಹೆದರಿ ಪರಾರಿ!
Team Udayavani, Aug 28, 2024, 9:59 AM IST
ಮುಂಬೈ: ಮರಾಠಿ ಚಲನಚಿತ್ರ ನಿರ್ದೇಶಕಿ ಸ್ವಪ್ನಾ ಜೋಶಿ ಅವರ ಮುಂಬೈನಲ್ಲಿರುವ ಫ್ಲಾಟ್‌ಗೆ ಕಳ್ಳನೊಬ್ಬ ನುಗ್ಗಿ 6,000 ರೂಪಾಯಿ ನಗದು ಹಣದೊಂದಿಗೆ ಪರಾರಿಯಾಗಿದ್ದಾನೆ ಎಂದು ಮಂಗಳವಾರ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸೋಮವಾರ, ಅಂಧೇರಿ (ಪಶ್ಚಿಮ) ದಲ್ಲಿರುವ ಜೋಶಿ ಅವರ ಫ್ಲಾಟ್‌ಗೆ ಭಾನುವಾರ ಪ್ರವೇಶಿಸಿದ ಅಪರಿಚಿತ ವ್ಯಕ್ತಿಯ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ಅಂಬೋಲಿ ಪೊಲೀಸ್ ಠಾಣೆಯ ಅಧಿಕಾರಿಯ ಪ್ರಕಾರ, ಕಳ್ಳನು ಡ್ರೈನೇಜ್ ಪೈಪ್ ಮೂಲಕ ಮರಾಠಿ ನಿರ್ದೇಶಕಿಯ ಫ್ಲ್ಯಾಟ್‌ಗೆ ನುಸುಳಿದ್ದಾನೆ. ಮನೆಯಲ್ಲಿದ್ದ ಸಾಕು ಬೆಕ್ಕು ಅಪರಿಚಿತನನ್ನು ಕಂಡು ಆತಂಕಕಾರಿ ಶಬ್ದ ಮಾಡಿದ ನಂತರ ಮನೆಯಲ್ಲಿದ್ದ ನಿರ್ದೇಶಕಿಯ ಅಳಿಯ ಎಚ್ಚೆತ್ತುಕೊಂಡಿದ್ದಾರೆ.
ಫ್ಲಾಟ್‌ನಲ್ಲಿ ಅಳವಡಿಸಲಾದ ಸಿಸಿಟಿವಿ ಕೆಮರಾಗಳನ್ನು ಪರಿಶೀಲಿಸಿದಾಗ, ಬೆಳಗಿನ ಜಾವ 3.10 ರಿಂದ 3.30 ರ ನಡುವೆ ಡ್ರೈನೇಜ್ ಪೈಪ್ ಹತ್ತಿ ಕಿಟಕಿಯಿಂದ ಟಿ-ಶರ್ಟ್ ಮತ್ತು ಶಾರ್ಟ್ಸ್ ಧರಿಸಿದ್ದ ಕಳ್ಳ ಮನೆಗೆ ಪ್ರವೇಶಿಸುವುದನ್ನು ಕಂಡಿದ್ದಾರೆ.
ಮನೆಯಲ್ಲಿ ಮಲಗಿದ್ದ ನಿರ್ದೇಶಕಿಯ ವೃದ್ಧ ತಾಯಿಯ ಕೋಣೆಗೆ ಕಳ್ಳ ಪ್ರವೇಶಿಸಿದ್ದಾನೆ. ನಂತರ ಬೆಡ್ ರೂಮ್ ಗೆ ಪ್ರವೇಶಿಸಿದ್ದಾನೆ. ಅಲ್ಲಿ ನಿರ್ದೇಶಕಿ ಪುತ್ರಿ ಮತ್ತು ಆಕೆಯ ಪತಿ ಮಲಗಿದ್ದರು. ಪರ್ಸ್ ಕದ್ದು ಅದರಲ್ಲಿದ್ದ 6,000 ರೂ.ಗಳನ್ನು ಹೊರತೆಗೆದಿದ್ದಾನೆ, ಆದರೆ ಕೋಣೆಯಲ್ಲಿಟ್ಟಿದ್ದ ಲ್ಯಾಪ್‌ಟಾಪ್ ಅನ್ನು ಮುಟ್ಟಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಕ್ಕಿನ ಕೂಗು ಕೇಳಿಸಿ ಎಚ್ಚೆತ್ತುಕೊಂಡ ನಿರ್ದೇಶಕಿ ಅಳಿಯ ದೇವನ್ ಕಳ್ಳನನ್ನು ಗುರುತಿಸಿ ಅವನನ್ನು ಹಿಡಿಯಲು ಮುಂದಾಗಿದ್ದಾರೆ. ಆದರೆ ಆತ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದನು.
ಚಲನಚಿತ್ರ ನಿರ್ಮಾಪಕರು ಪೊಲೀಸರನ್ನು ಸಂಪರ್ಕಿಸಿದರು ಮತ್ತು ದೂರು ದಾಖಲಿಸಿದರು ಮತ್ತು ಅದರ ಆಧಾರದ ಮೇಲೆ ಅಪರಿಚಿತ ವ್ಯಕ್ತಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra; ಇನ್‌ಸ್ಟಾದಲ್ಲಿ 56 ಲಕ್ಷ ಫಾಲೋವರ್ಸ್ ಇದ್ರು ಸಿಕ್ಕಿದ್ದು ಕೇವಲ 155 ಮತ!!
Video: ವಿದ್ಯಾರ್ಥಿಯಿಂದ ಕಾಲು ಒತ್ತಲು ಹೇಳಿ ಶಾಲೆಯಲ್ಲೇ ವಿಶ್ರಾಂತಿಗೆ ಜಾರಿದ ಶಿಕ್ಷಕ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Shanghai: ಎಐ ಆಧಾರಿತ ರೋಬೋಟ್‌ನಿಂದ 12 ರೋಬೋಗಳ ಕಿಡ್ನಾಪ್!
Tallest and shortest; ವಿಶ್ವದ ಅತೀ ಕುಬ್ಜ, ಅತೀ ಎತ್ತರದ ಮಹಿಳೆಯರ ಸಮಾಗಮ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.