Kalburgi: ಕಾರ್ಡ್‌ದಾರರಿಗೆ ‘ಆದಾಯ ಮಿತಿ’ಗೆ ಆಕ್ರೋಶ


Team Udayavani, Aug 28, 2024, 2:25 PM IST

13-kalburgi

ಕಲಬುರಗಿ: ರಾಜ್ಯದಲ್ಲಿ ಅನ್ನಭಾಗ್ಯ ಯೋಜನೆಯಡಿ ಪಡಿತರ ಆಹಾರ ಪಡೆಯುತ್ತಿದ್ದ 12,62,403 ಕಾರ್ಡ್‌ದಾರರ ಪಡಿತರ ಚೀಟಿ ಮತ್ತು ಆಹಾರ ಕೈ ತಪ್ಪಿ ಹೋಗುವ ಭೀತಿ ಎದುರಾಗಿದೆ. ಇದಕ್ಕೆ ರಾಜ್ಯ ಸರ್ಕಾರದ ಆದಾಯದ ಮಿತಿ ಬರೆಯೇ ಕಾರಣವಾಗಿದ್ದು, ಕುಟುಂಬದ ಎಲ್ಲ ಸದಸ್ಯರ ಆದಾಯವನ್ನು ಕುಟುಂಬದ ಆದಾಯ ಎಂದು ಪರಿಗಣಿಸಲಾಗಿದೆ. ಇದರ ಮಿತಿ 1.20 ಲಕ್ಷ ರೂ. ನಿಗದಿಪಡಿಸಿರುವುದಕ್ಕೆ ಸಾರ್ವಜನಿಕ ವಲಯದಿಂದ ಆಕ್ರೋಶ ವ್ಯಕ್ತವಾಗಿದೆ.

ರಾಜ್ಯದಲ್ಲಿ ಒಟ್ಟು 1,50,53,297 ಕಾರ್ಡ್‌ ದಾರರ ಪೈಕಿ 22,62,403 ಕಾರ್ಡ್‌ದಾರರಲ್ಲಿ ಆದ್ಯತಾ ಮತ್ತು ಅಂತ್ಯೋದಯ ಕಾರ್ಡ್‌ದಾರರು 10,97,621 ಹಾಗೂ 1.20 ಲಕ್ಷ ರೂ.ಗಳಿಗಿಂತ ಹೆಚ್ಚಿನ ಆದಾಯ ಹೊಂದಿದ 10,54,368 ಕಾರ್ಡ್‌ ದಾರರು, ಅಲ್ಲದೆ, 1,06,152 ಜನರು ಆದಾಯ ತೆರಿಗೆ ಕಟ್ಟುವವರು, 4272 ಸರ್ಕಾರಿ ನೌಕರರು ಅನರ್ಹ ಭೀತಿ ಎದುರಿಸುವಂತಾಗಿದೆ. ಈ ಎಲ್ಲ ಕಾರ್ಡ್‌ದಾರರ ನೈಜ ಸ್ಥಿತಿ ಪರಿಶೀಲಿಸಿ ಆಗಸ್ಟ್‌ 31ರೊಳಗೆ ವರದಿ ಕಳಿಸುವಂತೆ ಜಿಲ್ಲಾ ಉಪ ನಿರ್ದೇಶಕರಿಗೆ ಸರ್ಕಾರ ಸೂಚನೆ ನೀಡಿದೆ. ಇದರ ಆಧಾರದಲ್ಲಿ ಒಟ್ಟು 22.62 ಲಕ್ಷ ಕಾರ್ಡ್‌ ದಾರರು ಅನರ್ಹತೆ ಭೀತಿ ಎದುರಿಸುತ್ತಿದ್ದಾರೆ.

ವ್ಯಾಪಕ ವಿರೋಧ: ಆದಾಯದ ಮಿತಿ 1.20 ಲಕ್ಷ ರೂ.ಗಳಿಗೆ ಸೀಮಿತ ಮಾಡಿರುವುದರ ಕುರಿತು ವ್ಯಾಪಕ ವಿರೋಧ ವ್ಯಕ್ತವಾಗಿದೆ. ಈ ಕ್ರಮದಿಂದ ಒಟ್ಟು 10,54,368 ಕಾರ್ಡ್‌ದಾರರಿಗೆ ದಿಗಿಲು ಉಂಟಾಗಿದೆ. ಕಟ್ಟಡ ಕಾರ್ಮಿಕರು ದಿನಾಲು (ಗಂಡ-ಹೆಂಡತಿ ಸೇರಿ ದಿನಕ್ಕೆ) 700 ರೂ. ದುಡಿದರೆ ಅವರ ಆದಾಯ ಎಷ್ಟಾಗುತ್ತದೆ. ಅವರನ್ನು 1.20 ಲಕ್ಷ ರೂ. ಆದಾಯದ ಮಿತಿ ವ್ಯಾಪ್ತಿಗೆ ಸೇರಿಸಿ ಕಾರ್ಡ್‌ ರದ್ದು ಮಾಡಿದರೆ ದುಡಿಮೆ ಇಲ್ಲದೆ ಇರು ವಾಗ, ಮಳೆಗಾಲದಲ್ಲಿ ಏನು ಮಾಡಬೇಕು? ಇದು ಸರ್ಕಾರಕ್ಕೆ ಅರ್ಥವಾಗು ವುದಿಲ್ಲವೇ ಎನ್ನುವ ರಾಜ್ಯ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ, ಇದರ ಹಿಂದೆ ದೊಡ್ಡ ಷಡ್ಯಂತ್ರವಿದೆ. ಅನ್ನಭಾಗ್ಯವನ್ನು ನಿಭಾಯಿ ಸಲು ಏದುಸಿರು ಬಿಡುತ್ತಿರುವ ಸರ್ಕಾರ ಅನ್ಯ ಮಾರ್ಗ ಹುಡುಕಿದೆ. ಈ ಮಾರ್ಗ ಬಡವರನ್ನು ಒಕ್ಕಲೆಬ್ಬಿಸುವುದೇ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆದಾಯ ಮಿತಿಗೆ ಮಾನದಂಡ ಏನು?

ಪ್ರಮುಖವಾಗಿ 10,54,368 ಕಾರ್ಡ್‌ದಾರರನ್ನು 1.20 ಲಕ್ಷ ರೂ. ಗಳಿಗಿಂತ ಹೆಚ್ಚಿನ ಆದಾಯದ ಮಿತಿ ಹೊಂದಿರುವವರು ಎಂದು ಗುರುತಿಸಲಾಗಿದೆ. ಈ ಹಿಂದೆ ಕುಟುಂಬದ ಆದಾಯವೆಂದರೆ ಯಜಮಾನನ ಆದಾಯವನ್ನೇ ಪರಿಗಣಿಸಲಾಗಿತ್ತು. ಆದರೆ, ಈಗ ರಾಜ್ಯ ಸರ್ಕಾರ ಕುಟುಂಬದ ಎಲ್ಲ ಸದಸ್ಯರ ಆದಾಯವನ್ನು ಪರಿಗಣಿಸಿ ಅದರ ಮಿತಿಯನ್ನು 1.20 ಲಕ್ಷಕ್ಕೆ ಸೀಮಿತ ಮಾಡಿದೆ. ಮನೆಯ ಯಜಮಾನ, ಯಜಮಾನಿ ಆದಾಯವನ್ನು ಪರಿಗಣಿ ಸಲಿ. ಆದರೆ, ಓದುವ ಮಕ್ಕಳ ಆದಾಯ ಪ್ರಮಾಣ ಪತ್ರ ಹಿಡಿದು ಕೊಂಡು ಲೆಕ್ಕ ಹಾಕುವುದು ಯಾವ ಮಾನದಂಡ. ಓದುವ ಮಕ್ಕಳು ಕುಟುಂಬದ ಯಜಮಾನ ನಿಗೆ ಹೊರೆಯೇ ಹೊರತು ಆದಾಯ ತರುವವರಲ್ಲ. ಅವರನ್ನು ಆದಾಯದ ಮಿತಿ ವ್ಯಾಪ್ತಿಗೆ ಪರಿಗ ಣಿಸಿ ರುವುದು ನಿಜಕ್ಕೂ ಅಕ್ಷಮ್ಯ ಎಂಬ ಆಕ್ರೋಶ ವ್ಯಕ್ತವಾಗಿದೆ.

ನಾನು ವಯಸ್ಸಾದವ. ಕೂಲಿ ಮಾಡುತ್ತೇನೆ, ಹೆಂಡತಿ ಯೂ ಜತೆಯಲ್ಲಿಯೇ ಬರುತ್ತಾಳೆ. ಇಬ್ಬರದ್ದು ಸೇರಿಸಿ ದರೂ 400 ರೂ. ಸಿಗುವುದು ಕಷ್ಟ. ಆದರೆ, ಸರ್ಕಾರ ನಮ್ಮ ಆದಾಯ 1.20 ಲಕ್ಷ ರೂ. ಆಗಿದೆ ಎಂದು ತಪಾಸಣೆಗೆ ಸೂಚಿಸಿದೆ. ಇದೇನು ಲೆಕ್ಕವೋ ಗೊತ್ತಿಲ್ಲ. ನನಗೆ ಮಕ್ಕಳಿಲ್ಲ, ಕಾರ್ಡ್‌ನಲ್ಲಿ ಇಬ್ಬರ ಹೆಸರೇ ಇದೆ. ಕಾರ್ಡ್‌ ಹೋದರೆ ನಮ್ಮ ಗತಿ ಏನು? ●ಆನಂದಪ್ಪ(ಹೆಸರು ಬದಲಿಸಿದೆ), ಆಳಂದ ಪಟ್ಟಣದ ವೃದ್ಧ

ಕಲಬುರಗಿ ಜಿಲ್ಲೆ ಒಂದರಲ್ಲೇ 76 ಸಾವಿರಕ್ಕೂ ಹೆಚ್ಚು ಜನರು ಆದಾಯ ಮಿತಿ ಮತ್ತು ಸರ್ಕಾರಿ ನೌಕರರು ಹಾಗೂ ಆದಾಯ ತೆರಿಗೆ ಕಟ್ಟುವವರಿರುವ ಕಾರಣಕ್ಕೆ ಕಾಡ್‌ ìಗಳ ಕುರಿತು ತಪಾಸಣೆ ಮಾಡಿ ನೈಜ ವರದಿ ಕೊಡಲು ಸರ್ಕಾರ ಕೇಳಿದೆ. ಕುಟುಂಬದ ಎಲ್ಲ ಸದಸ್ಯರ ಆದಾಯವನ್ನು ಮಿತಿ ವ್ಯಾಪ್ತಿಗೆ ಪರಿಗಣಿಸಲಾಗು ತ್ತಿದೆ. ಮಕ್ಕಳ ಆದಾಯ ಪತ್ರವನ್ನು ಮಿತಿ ವ್ಯಾಪ್ತಿಗೆ ಪರಿಗಣಿಸಲು ಸೂಚಿಸಲಾಗಿದೆ. ●ಭೀಮರಾಯ ಕಲ್ಲೂರು ಉಪ ನಿರ್ದೇಶಕರು, ಆಹಾರ ಇಲಾಖೆ, ಕಲಬುರಗಿ

ಅನರ್ಹತೆ ಮಾನದಂಡ ಆಧಾರದಲ್ಲಿ ಆತುರವಾಗಿ ಕಾರ್ಡ್‌ಗಳನ್ನು ರದ್ದು ಮಾಡಿದರೆ ಬಹಳ ಕುಟುಂಬಕ್ಕೆ ತೊಂದರೆ ಆಗಲಿದೆ. ಅನ್ನಭಾಗ್ಯ ಅಥವಾ ಗ್ಯಾರಂಟಿ ಹೊಡೆತಕ್ಕೆ ಹೀಗೆ ಮಾಡುವುದೇ ಆದರೆ ಸ್ವಾಭಿಮಾನಿ ಕನ್ನಡಿಗರಿಗೆ, ಶಕ್ತ ಕನ್ನಡಿಗರಿಗೆ ಪಡಿತರ ಬಿಟ್ಟುಕೊಡಲು ಮುಖ್ಯಮಂತ್ರಿಗಳು ಕರೆ ನೀಡಲಿ. ಅದು ಬಿಟ್ಟು ಗದಾ ಪ್ರಹಾರ ಸರಿಯಲ್ಲ. ●ಸುನೀಲ ಮಾರುತಿ ಮಾನಪಡೆ, ಹೋರಾಟಗಾರ

-ಸೂರ್ಯಕಾಂತ್‌ ಎಂ.ಜಮಾದಾರ

ಟಾಪ್ ನ್ಯೂಸ್

ನೌಕಾನೆಲೆ ಸಿಬಂದಿಯಿಂದ ಮೀನುಗಾರರ ಬಲೆಗೆ ಕತ್ತರಿ

Karwar: ನೌಕಾನೆಲೆ ಸಿಬಂದಿಯಿಂದ ಮೀನುಗಾರರ ಬಲೆಗೆ ಕತ್ತರಿ

“ಹಾಲಿನ ದರ ಹೆಚ್ಚಳ ಬಗ್ಗೆ ಸಿಎಂ ಸಿದ್ದರಾಮಯ್ಯ ನಿರ್ಧಾರ’: ಕೆಎಂಎಫ್ ಅಧ್ಯಕ್ಷ

KMF; “ಹಾಲಿನ ದರ ಹೆಚ್ಚಳ ಬಗ್ಗೆ ಸಿಎಂ ಸಿದ್ದರಾಮಯ್ಯ ನಿರ್ಧಾರ’: ಭೀಮಾ ನಾಯ್ಕ

Karnataka ಸುವರ್ಣ ಸಂಭ್ರಮದಲ್ಲಿ ಕನ್ನಡ ಜನೋತ್ಸವ

Karnataka ಸುವರ್ಣ ಸಂಭ್ರಮದಲ್ಲಿ ಕನ್ನಡ ಜನೋತ್ಸವ

Tungabhadra ಡ್ಯಾಂನ ಎಲ್ಲ 33 ಗೇಟ್‌ ಬದಲಿಸಲು ತಜ್ಞರ ಸಲಹೆ

Tungabhadra ಡ್ಯಾಂನ ಎಲ್ಲ 33 ಗೇಟ್‌ ಬದಲಿಸಲು ತಜ್ಞರ ಸಲಹೆ

modi (4)

Congress-NC ಮೈತ್ರಿಗೆ ಪಾಕ್‌ ಬೆಂಬಲ, 370ನೇ ವಿಧಿ ಮರುಸ್ಥಾಪನೆ ಅಸಾಧ್ಯ: ಪ್ರಧಾನಿ: ಮೋದಿ

High Court: ಬಾಂಬ್‌ ಸ್ಫೋಟ ಹೇಳಿಕೆ; ಶೋಭಾ ಕರಂದ್ಲಾಜೆ ಮೇಲಿನ ಕೇಸ್‌ ರದ್ದು

High Court: ಬಾಂಬ್‌ ಸ್ಫೋಟ ಹೇಳಿಕೆ; ಶೋಭಾ ಕರಂದ್ಲಾಜೆ ಮೇಲಿನ ಕೇಸ್‌ ರದ್ದು

High Court; “ಅರ್ಧ ಪಾಕಿಸ್ಥಾನ’: ಯತ್ನಾಳ್‌ ಹೇಳಿಕೆಗೆ ಹೈಕೋರ್ಟ್‌ ಸಿಟ್ಟು

High Court; “ಅರ್ಧ ಪಾಕಿಸ್ಥಾನ’: ಯತ್ನಾಳ್‌ ಹೇಳಿಕೆಗೆ ಹೈಕೋರ್ಟ್‌ ಸಿಟ್ಟು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qwewewqe

Cabinet meeting ತೃಪ್ತಿ ತಂದಿಲ್ಲ: ಬಿ.ಆರ್.ಪಾಟೀಲ ಮತ್ತೊಮ್ಮೆ ಅಸಮಧಾನ

CM Siddaramaiah ಕಲ್ಯಾಣ ಕರ್ನಾಟಕಕ್ಕೆ ಪ್ರತಿ ವರ್ಷ 5000 ಕೋಟಿ

CM Siddaramaiah ಕಲ್ಯಾಣ ಕರ್ನಾಟಕಕ್ಕೆ ಪ್ರತಿ ವರ್ಷ 5000 ಕೋಟಿ

Kalaburagi; ಕಲ್ಯಾಣಕ್ಕೆ ಪ್ರತ್ಯೇಕ ಸಚಿವಾಲಯ! ಸಿಎಂ ಸಿದ್ದರಾಮಯ್ಯ ಘೋಷಣೆ

Kalaburagi; ಕಲ್ಯಾಣಕ್ಕೆ ಪ್ರತ್ಯೇಕ ಸಚಿವಾಲಯ! ಸಿಎಂ ಸಿದ್ದರಾಮಯ್ಯ ಘೋಷಣೆ

ಸೆ.22ಕ್ಕೆ ತುಂಗಭದ್ರಾ ನದಿಗೆ ಸಿಎಂ ಸಿದ್ದರಾಮಯ್ಯ ಬಾಗಿನ: ಡಿಸಿಎಂ ಡಿ.ಕೆ.ಶಿವಕುಮಾರ್‌

ಸೆ.22ಕ್ಕೆ ತುಂಗಭದ್ರಾ ನದಿಗೆ ಸಿಎಂ ಸಿದ್ದರಾಮಯ್ಯ ಬಾಗಿನ: ಡಿಸಿಎಂ ಡಿ.ಕೆ.ಶಿವಕುಮಾರ್‌

SIddu-Phone

Kalaburagi: ಪತಿ ಕೊಲೆ ಪ್ರಕರಣ ತನಿಖೆಗಾಗಿ ಸಿಎಂಗೆ ಮನವಿ ಸಲ್ಲಿಸಿದ ಪತ್ನಿ; ಎಸ್‌ಪಿಗೆ ಕರೆ 

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

1-JSSS

TMC ರಾಜ್ಯಸಭಾ ಸದಸ್ಯತ್ವಕ್ಕೆ ಜವಾಹರ್‌ ಸರ್ಕಾರ್‌ ರಾಜೀನಾಮೆ

ನೌಕಾನೆಲೆ ಸಿಬಂದಿಯಿಂದ ಮೀನುಗಾರರ ಬಲೆಗೆ ಕತ್ತರಿ

Karwar: ನೌಕಾನೆಲೆ ಸಿಬಂದಿಯಿಂದ ಮೀನುಗಾರರ ಬಲೆಗೆ ಕತ್ತರಿ

1-eeeeee

Train ಹಳಿಯ ಮೇಲೆ ರಾಡ್‌: ಹಳಿ ತಪ್ಪಿಸಲು ಮತ್ತೆ ಯತ್ನ, ತಪ್ಪಿದ ಅನಾಹುತ

“ಹಾಲಿನ ದರ ಹೆಚ್ಚಳ ಬಗ್ಗೆ ಸಿಎಂ ಸಿದ್ದರಾಮಯ್ಯ ನಿರ್ಧಾರ’: ಕೆಎಂಎಫ್ ಅಧ್ಯಕ್ಷ

KMF; “ಹಾಲಿನ ದರ ಹೆಚ್ಚಳ ಬಗ್ಗೆ ಸಿಎಂ ಸಿದ್ದರಾಮಯ್ಯ ನಿರ್ಧಾರ’: ಭೀಮಾ ನಾಯ್ಕ

firee

Bihar;ಜಮೀನು ವಿವಾದ: 21 ದಲಿತರ ಮನೆಗಳಿಗೆ ಬೆಂಕಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.