Dharwad: ರೇಷ್ಮೆ ಉತ್ಪಾದನೆ ಹೆಚ್ಚಳಕ್ಕೆ ಈಗ ಸಿಕ್ಕಿದೆ ಗುರುತ್ವಾಕರ್ಷಣೆಯ ಬಲ!

ಧಾರವಾಡ ಕೃಷಿ ವಿಶ್ವವಿದ್ಯಾಲಯದಿಂದ ಸಂಶೋಧನೆ ; ಅಧಿಕ ಉತ್ಪಾದನೆ, ಗುಣಮಟ್ಟದ ರೇಷ್ಮೆಯ ಲಭ್ಯತೆ ; ಶೇ.12 ಉತ್ಪಾದನೆ, ಶೇ.15ರಷ್ಟು ಗುಣಮಟ್ಟ ಹೆಚ್ಚಳ

Team Udayavani, Aug 28, 2024, 3:00 PM IST

15-dharwad

ಧಾರವಾಡ: ರೇಷ್ಮೆ ಕೃಷಿ ರಾಜ್ಯದಲ್ಲಿ ಕಡುಕಷ್ಟ ಎನ್ನುತ್ತಿರುವಾಗಲೇ ಹೆಚ್ಚಿನ ಇಳುವರಿ ಮತ್ತು ಗುಣಮಟ್ಟದ ರೇಷ್ಮೆ ಉತ್ಪಾದನೆಗೆ ಗುರುತ್ವ-ಜೈವಿಕ ತಂತ್ರಜ್ಞಾನದ ಮೂಲಕ ಧಾರವಾಡ ಕೃಷಿ ವಿಶ್ವವಿದ್ಯಾಲಯ ನಡೆಸಿದ ವಿನೂತನ ಸಂಶೋಧನೆ ಫಲ ಕೊಟ್ಟಿದ್ದು, ಬೌದ್ಧಿಕ ಹಕ್ಕು ಸ್ವಾಮ್ಯದ ಗರಿ (ಪೇಟೆಂಟ್‌) ಲಭಿಸಿದೆ.

ಹೌದು, ದೇಶದಲ್ಲಿಯೇ ಗುರುತ್ವಕ್ಕೆ ರೇಷ್ಮೆ ಹುಳಗಳನ್ನು ಇರಿಸಿ ನಡೆಸಿದ ಮೊಟ್ಟ ಮೊದಲ ಪ್ರಯೋಗ ಇದಾಗಿದೆ. 2021ರಲ್ಲಿ ಧಾರವಾಡದ ಕೃಷಿ ವಿವಿಯ ಜೈವಿಕ ತಂತ್ರಜ್ಞಾನ ವಿಭಾಗದ ಡಾ|ರವಿಕುಮಾರ ಹೊಸಮನಿ ಮತ್ತು ಕೀಟಶಾಸ್ತ್ರ ವಿಭಾಗದ ಡಾ|ಶಶಿಕಾಂತ ಜಿ.ರಾಯರ್‌ ಕೈಗೊಂಡ ಸಂಶೋಧನೆ ಸತತ ಎರಡು ವರ್ಷಗಳವರೆಗೆ ವಿಭಿನ್ನ ಪ್ರಯೋಗಕ್ಕೊಳಪಟ್ಟು ಕೊನೆಗೆ ಫಲ ನೀಡಿದೆ.

ಬೌದ್ಧಿಕ ಹಕ್ಕುಸ್ವಾಮ್ಯ: ಹತ್ತಕ್ಕೂ ಹೆಚ್ಚು ಬಾರಿ ಮರು ಪ್ರಯೋಗಕ್ಕೆ ಒಳಪಡಿಸಿದಾಗಲೂ ಅದೇ ಮಾದರಿಯಲ್ಲಿ ರೇಷ್ಮೆಯ ಉತ್ಪಾದನೆ ಮತ್ತು ಗುಣಮಟ್ಟ ಹೆಚ್ಚಾಗಿರುವುದು ರುಜುವಾತಾಗಿದೆ. ಸದ್ಯಕ್ಕೆ ಈ ಬಗೆಯ ಮಾದರಿಯನ್ನು ಧಾರವಾಡ ಕೃಷಿ ವಿವಿ ಮಾತ್ರ ಶೋಧಿಸಿದ್ದು, ಕೇಂದ್ರದ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ವ್ಯಾಪ್ತಿಯ ಕಂಟ್ರೋಲರ್‌ ಜನರಲ್‌ ಆಫ್‌ ಪೇಟೆಂಟ್ಸ್‌ ಡಿಜೈನ್ಸ್‌ ಮತ್ತು ಟ್ರೇಡ್‌ ಮಾರ್ಕ್‌ ಸಂಸ್ಥೆಯೂ ದಿ ಇಂಡಿಯನ್‌ ಪೇಟೆಂಟ್‌ ಆಫೀಸ್‌ ಮೂಲಕ ಬೌದ್ಧಿಕ ಹಕ್ಕುಸ್ವಾಮ್ಯನೀಡಿದೆ.

ಏನಿದು ಅನ್ವೇಷಣೆ?: ರೇಷ್ಮೆ ಉತ್ಪಾದನೆಗೆ ಈವರೆಗೂ ರೇಷ್ಮೆ ಗೂಡಿನಲ್ಲಿ (ಚಂದ್ರಿಕೆ) ಹುಳಗಳನ್ನು ಬಿಟ್ಟು ರೇಷ್ಮೆ ಪಡೆಯಲಾಗುತ್ತಿತ್ತು. 45-50 ದಿನಗಳಲ್ಲಿ ಮೊಟ್ಟೆ, ಲಾರ್ವಾ, ಕೀಟ, ಕೊಕೊನ್‌ ಮತ್ತು ಚಿಟ್ಟೆ ಸ್ವರೂಪದ ಐದು ಹಂತಗಳಲ್ಲಿ ರೇಷ್ಮೆ ಹುಳು ರೂಪುಗೊಳ್ಳುತ್ತದೆ. ಈ ಪೈಕಿ ಲಾರ್ವಾ ಇದ್ದಾಗಿನ 5ನೇ ಹಂತದ ಹುಳಗಳನ್ನು ಭೂಮಿಯ ಗುರುತ್ವಾಕರ್ಷಣೆಗಿಂತಲೂ 20 ಪಟ್ಟು ಹೆಚ್ಚಿನ ಗುರುತ್ವದಲ್ಲಿ ಒಂದು ಗಂಟೆ ಇರಿಸಿ ನಿರ್ದಿಷ್ಟ ಘಟಕದಲ್ಲಿ ತಿರುಗಿಸಲಾಗುತ್ತದೆ. ಒಂದು ಅವಧಿಗೆ ಒಟ್ಟು 25 ಹುಳಗಳನ್ನು ಇರಿಸಿ ಅವುಗಳನ್ನು ಮರಳಿ ರೇಷ್ಮೆಗೂಡಿನಲ್ಲಿ ಹಾಕಲಾಗುತ್ತದೆ.

ಈ ಗುರುತ್ವದ ಸಹಾಯದಿಂದ ಅತ್ಯಧಿಕ ರೇಷ್ಮೆ ಉತ್ಪಾದನೆ ಮಾಡಲು ಸಹಾಯಕ್ಕೆ ಬರುತ್ತಿದೆ. ಈಗ ಈ ತಂತ್ರಜ್ಞಾನ ರೈತರ ಹೊಲಗಳಿಗೆ ಇಳಿಸಲು ಅಗತ್ಯವಾದ ಸಿದ್ಧತೆಯನ್ನು ಧಾರವಾಡ ಕೃಷಿ ವಿವಿ ಮಾಡಿಕೊಂಡಿದೆ. ಇದರಿಂದ 100 ಕೆ.ಜಿ. ರೇಷ್ಮೆ ಉತ್ಪಾದನೆ ಮಾಡುತ್ತಿದ್ದ ರೈತ ಅಷ್ಟೇ ಶ್ರಮ ಮತ್ತು ಖರ್ಚಿನಲ್ಲಿನ್ನು 112 ಕೆ.ಜಿ. ಉತ್ಪಾದನೆ ಮಾಡುತ್ತಾನೆ. ಜತೆಗೆ ಗುಣಮಟ್ಟದಲ್ಲೂ ಶೇ.15ರಷ್ಟು ಹೆಚ್ಚಳವಾಗಿದ್ದು ಸಾಬೀತಾಗಿದೆ.

ಕೃಷಿ ವಿವಿಗೆ 3ನೇ ಪೇಟೆಂಟ್‌ ಗರಿ

ಧಾರವಾಡ ಕೃಷಿ ವಿವಿ ಶೋಧಿಸಿದ ಜೋಳ ಮತ್ತು ಸಾವಿ ತಳಿಗಳನ್ನು ಪ್ರಧಾನಿ ನರೇಂದ್ರ ಮೋದಿ ಈ ತಿಂಗಳ 11ರಂದು ದೆಹಲಿಯಲ್ಲಿ ಬಿಡುಗಡೆ ಮಾಡಿದ್ದಾರೆ. ಕೃಷಿ ವಿವಿ ಆರಂಭಗೊಂಡ 37 ವರ್ಷಗಳಲ್ಲಿ ಈಗಾಗಲೇ ಕೃಷಿ ವಿಜ್ಞಾನಿಗಳಾದ ಡಾ|ವಿ.ಪಿ.ಸಾವಳಗಿ ಮತ್ತು ಡಾ|ಆರ್‌.ವಾಸುದೇವ ಬೇರೆ ಬೇರೆ ಕೃಷಿ ಪ್ರಯೋಗಗಳಲ್ಲಿ ಬೌದ್ಧಿಕ ಹಕ್ಕುಸ್ವಾಮ್ಯ ಪಡೆದುಕೊಂಡಿದ್ದರು. ಈಗ ಡಾ|ರವಿಕುಮಾರ್‌ ಹಾಗೂ ತಂಡದಿಂದ ಕೃಷಿ ವಿವಿಗೆ ಮೂರನೇ ಬೌದ್ಧಿಕ ಹಕ್ಕುಸ್ವಾಮ್ಯ ಲಭಿಸಿದಂತಾಗಿದೆ.

ಗ್ರಾಮೀಣ ರೈತ ಕುಟುಂಬದಿಂದ ಬಂದ ನನಗೆ ಗುರುತ್ವ ಬಲ ಮತ್ತು ಜೈವಿಕತೆಯ ಪ್ರಯೋಗಗಳು ಅಚ್ಚುಮೆಚ್ಚು. ಕಷ್ಟದಲ್ಲಿರುವ ರೇಷ್ಮೆ ಕೃಷಿಗೆ ಏನಾದರೂ ಕೊಡುಗೆ ಕೊಡಬೇಕು ಎನ್ನುವ ನನ್ನ ಕನಸು ನನಸಾಗಿದೆ. ●ಡಾ|ರವಿಕುಮಾರ್‌ ಹೊಸಮನಿ, ಜೈವಿಕ ತಂತ್ರಜ್ಞಾನ ವಿಭಾಗ, ಕೃಷಿ ವಿವಿ,ಧಾರವಾಡ

ಕಳೆದ 2 ವರ್ಷಗಳಿಂದ ಯಶಸ್ವಿ ಯಾಗಿ ನಡೆಸಿರುವ ವಿಭಿನ್ನ ಪ್ರಯೋ ಗಗಳ ಒಟ್ಟು 10 ಪೇಟೆಂಟ್‌ಗಳನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿದ್ದೇವೆ. ಬಹುತೇಕ ಎಲ್ಲ ದಕ್ಕೂ ಪೇಟೆಂಟ್‌ ಸಿಕ್ಕುವ ಸಾಧ್ಯತೆ ಇದೆ. ●ಡಾ|ಪಿ.ಎಲ್‌.ಪಾಟೀಲ್‌, ಕುಲಪತಿ, ಕೃಷಿ ವಿವಿ-ಧಾರವಾಡ

■ ಬಸವರಾಜ್‌ ಹೊಂಗಲ್‌

ಟಾಪ್ ನ್ಯೂಸ್

Legislative Council ಚುನಾವಣೆ: ಗರಿಗೆದರಿದ ಚಟುವಟಿಕೆ

Legislative Council ಚುನಾವಣೆ: ಗರಿಗೆದರಿದ ಚಟುವಟಿಕೆ

aatishi

Delhi CM;5 ಸಚಿವರೊಂದಿಗೆ ನಾಳೆ ಆತಿಷಿ ಪ್ರಮಾಣ ವಚನ ಸ್ವೀಕಾರ

ಬಾಹ್ಯಾಕಾಶ ಕ್ಷೇತ್ರದಲ್ಲಿ ಪಾರಮ್ಯ ಸಾಧಿಸಲು ಭಾರತದ ದಿಟ್ಟಹೆಜ್ಜೆ

ಬಾಹ್ಯಾಕಾಶ ಕ್ಷೇತ್ರದಲ್ಲಿ ಪಾರಮ್ಯ ಸಾಧಿಸಲು ಭಾರತದ ದಿಟ್ಟಹೆಜ್ಜೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dharwad: ತತ್ವಶಾಸ್ತ್ರವೇ ನನ್ನ ಕಾದಂಬರಿಗಳ ಮೂಲಸೆಲೆ: ಎಸ್.ಎಲ್.ಬೈರಪ್ಪ

Dharwad: ತತ್ವಶಾಸ್ತ್ರವೇ ನನ್ನ ಕಾದಂಬರಿಗಳ ಮೂಲಸೆಲೆ: ಎಸ್.ಎಲ್.ಭೈರಪ್ಪ

basavaraj

Dharwad; ಶಾಂತಿ ಕದಡುವವರ ವಿರುದ್ಧ ಕ್ರಮಕ್ಕೆ ಸಿಎಂಗೆ ಪತ್ರ: ಹೊರಟ್ಟಿ

Hubli: ಪಂಚಮಸಾಲಿ ವಕೀಲರ ಪರಿಷತ್ತಿನಿಂದ ಸೆ.22ರಿಂದ ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನೆ

Hubli: ಪಂಚಮಸಾಲಿ ವಕೀಲರ ಪರಿಷತ್ತಿನಿಂದ ಸೆ.22ರಿಂದ ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನೆ

mutalik (2)

B.C.Road ಏನು ಅಫ್ಘಾನಿಸ್ಥಾನ,ಪಾಕಿಸ್ಥಾನದಲ್ಲಿ ಇದೆಯಾ?: ಮುತಾಲಿಕ್ ಕಿಡಿ

ರಾಡ್‌ ಬಿದ್ದು ಎಎಸ್‌ಐ ಸಾವು ಪ್ರಕರಣದಲ್ಲಿ ಕಾಮಗಾರಿ ಕಂಪನಿಯ 11 ಜನರ ಬಂಧನ

Hubli: ರಾಡ್‌ ಬಿದ್ದು ಎಎಸ್‌ಐ ಸಾವು ಪ್ರಕರಣದಲ್ಲಿ ಕಾಮಗಾರಿ ಕಂಪನಿಯ 11 ಜನರ ಬಂಧನ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Legislative Council ಚುನಾವಣೆ: ಗರಿಗೆದರಿದ ಚಟುವಟಿಕೆ

Legislative Council ಚುನಾವಣೆ: ಗರಿಗೆದರಿದ ಚಟುವಟಿಕೆ

aatishi

Delhi CM;5 ಸಚಿವರೊಂದಿಗೆ ನಾಳೆ ಆತಿಷಿ ಪ್ರಮಾಣ ವಚನ ಸ್ವೀಕಾರ

kangana-2

Emergency ಚಿತ್ರ; 25ರೊಳಗೆ ಬಿಡುಗಡೆ ನಿರ್ಧರಿಸಿ: ಕೋರ್ಟ್‌

ಬಾಹ್ಯಾಕಾಶ ಕ್ಷೇತ್ರದಲ್ಲಿ ಪಾರಮ್ಯ ಸಾಧಿಸಲು ಭಾರತದ ದಿಟ್ಟಹೆಜ್ಜೆ

ಬಾಹ್ಯಾಕಾಶ ಕ್ಷೇತ್ರದಲ್ಲಿ ಪಾರಮ್ಯ ಸಾಧಿಸಲು ಭಾರತದ ದಿಟ್ಟಹೆಜ್ಜೆ

Pannu Singh

Khalistani; ಭಾರತದ ವಿರುದ್ಧ ಅಮೆರಿಕ ಕೋರ್ಟ್‌ಗೆ ಪನ್ನು ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.