KMC Manipal: ಸುಧಾರಿತ ರೆಟಿನಲ್ ಇಮೇಜಿಂಗ್ ಟೆಕ್ನಾಲಜಿ: ಕ್ಲಾರಸ್ 700 ಕೆಮರಾ ಉದ್ಘಾಟನೆ
Team Udayavani, Aug 28, 2024, 7:56 PM IST
ಮಣಿಪಾಲ: ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ನೇತ್ರವಿಜ್ಞಾನ ವಿಭಾಗವು ಕ್ಲಾರಸ್ 700 – ಎಚ್‌ಡಿ ಅಲ್ಟ್ರಾ-ವೈಡ್‌ಫಿàಲ್ಡ್ ಫಂಡಸ್ ಇಮೇಜಿಂಗ್ ಮತ್ತು ಫ್ಲೋರೆಸ್ಸಿನ್ ಆಂಜಿಯೋಗ್ರಫಿ ಕೆಮರಾದ ಉದ್ಘಾಟನೆಯೊಂದಿಗೆ ರೋಗಿಗಳ ಆರೈಕೆಯಲ್ಲಿ ಗಮನಾರ್ಹ ಮುನ್ನಡೆ ಸಾಧಿಸಿದೆ.
ಝೈಸ್ ಕಂಪನಿ ಅಭಿವೃದ್ಧಿಪಡಿಸಿದ ಈ ಅತ್ಯಾಧುನಿಕ ರೆಟಿನಲ್ ಇಮೇಜಿಂಗ್ ಸಿಸ್ಟಮ್ ವಿಶೇಷವಾಗಿ ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಹೊಂದಿರುವ ರೋಗಿಗಳಿಗೆ ಕಣ್ಣಿನ ಆರೈಕೆಯಲ್ಲಿ ಕ್ರಾಂತಿಯನ್ನುಂಟು ಮಾಡುವ ಭರವಸೆಯಿದೆ.
ಕ್ಲಾರಾಸ್ 700 ಸುಧಾರಿತ ಉಪಕರಣವನ್ನು ಮಾಹೆ ಮಣಿಪಾಲದ ಆರೋಗ್ಯ ವಿಜ್ಞಾನಗಳ ಸಹ ಕುಲಪತಿ ಡಾ| ಶರತ್ ಕುಮಾರ್ ರಾವ್ ಉದ್ಘಾಟಿಸಿ, ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯು ರೋಗಿಗಳ ಆರೈಕೆಗಾಗಿ ಸುಧಾರಿತ ತಂತ್ರಜ್ಞಾನವನ್ನು ಪರಿಚಯಿಸುವಲ್ಲಿ ಯಾವಾಗಲೂ ಮುಂಚೂಣಿಯಲ್ಲಿದೆ. ನಮ್ಮ ನೇತ್ರಶಾಸ್ತ್ರ ವಿಭಾಗಕ್ಕೆ ಕ್ಲಾರಾಸ್ 700 ಅನ್ನು ಸೇರಿಸುವುದು ಅತ್ಯುನ್ನತ ಗುಣಮಟ್ಟದ ಆರೋಗ್ಯ ರಕ್ಷಣೆ ಒದಗಿಸಲಿದೆ ಎಂದರು.
ನೇತ್ರಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ| ಶೈಲಜಾ ಎಸ್. ಮಾತನಾಡಿ, ಕ್ಲಾರಾಸ್ 700 ಅಲ್ಟ್ರಾ-ವೈಡ್‌ಫೀಲ್ಡ್ ರೆಟಿನಾಲ್ ಕೆಮರಾ ಮತ್ತು ಪ್ರಯೋಜನದ ಕುರಿತು ಅವಲೋಕನ ನೀಡಿ, ಗುಣಮಟ್ಟದ ಚಿತ್ರದೊಂದಿಗೆ ನಿಜವಾದ ಬಣ್ಣದಲ್ಲಿ ಅಲ್ಟ್ರಾ-ವೈಡ್‌ಫೀಲ್ಡ್ ಚಿತ್ರಗಳನ್ನು ಸೆರೆಹಿಡಿಯಲು ವಿನ್ಯಾಸಗೊಳಿಸಲಾಗಿದೆ. ಇದು ಫ್ಲೋರೆಸೀನ್ ಆಂಜಿಯೋಗ್ರಫಿ ಸೇರಿದಂತೆ ಸಂಪೂರ್ಣ ಎಲ್ಲ ವಿಧಾನಗಳ ಚಿತ್ರಗಳನ್ನು ನಿಖರವಾಗಿ ನೀಡುತ್ತದೆ. ಈ ಮೂಲಕ ನೇತ್ರತಜ್ಞರು ಸಂಪೂರ್ಣ ರೆಟಿನಾದ ಪರೀಕ್ಷೆಗಳನ್ನು ನಡೆಸಲು ಅನುವು ಮಾಡಿಕೊಡುತ್ತದೆ ಎಂದರು.
ಈ ಸುಧಾರಿತ ಚಿತ್ರಣ ವ್ಯವಸ್ಥೆಯು ಅಕ್ಷಿಪಟಲದ ಸಾಟಿಯಿಲ್ಲದ ನೋಟವನ್ನು ಒದಗಿಸುತ್ತದೆ. ಕಣ್ಣಿನ ಕಾಯಿಲೆಗಳ ಆರಂಭಿಕ ಪತ್ತೆ ಮತ್ತು ಮೇಲ್ವಿಚಾರಣೆಗೆ ನಿರ್ಣಾಯಕವಾದ ವಿವರವಾದ ಚಿತ್ರಗಳನ್ನು ಸೆರೆಹಿಡಿಯುತ್ತದೆ. ಮಧುಮೇಹ ಅಥವಾ ಅಧಿಕ ರಕ್ತದೊತ್ತಡ ಹೊಂದಿರುವ ರೋಗಿಗಳಿಗೆ ವಿಶೇಷವಾಗಿ ಪ್ರಯೋಜನಕಾರಿಯಾಗಿದೆ. ಇದು ಡೈಲೇಷನ್ (ವಿಸ್ತರಣೆ) ಇಲ್ಲದೆ ಸಮಗ್ರ ರೆಟಿನಾದ ಪರೀಕ್ಷೆಗಳಿಗೆ ನೆರವಾಗಲಿದೆ. ರೋಗಿಗಳಿಗೆ ಹೆಚ್ಚು ಆರಾಮದಾಯಕವಾಗಿಸುತ್ತದೆ ಎಂದರು.
ಕೆಎಂಸಿ ಮಣಿಪಾಲದ ಡೀನ್ ಡಾ| ಪದ್ಮರಾಜ್ ಹೆಗ್ಡೆ, ವೈದ್ಯಕೀಯ ಅಧೀಕ್ಷಕ ಡಾ| ಅವಿನಾಶ್ ಶೆಟ್ಟಿ , ಕೆಎಂಸಿ ಮಣಿಪಾಲದ ಸಹ ಡೀನ್ ಡಾ| ನವೀನ್ ಎಸ್. ಸಾಲಿನ್ಸ್, ನೇತ್ರಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ| ಯೋಗೀಶ್ ಕಾಮತ್ ಮತ್ತು ಹಿರಿಯ ನೇತ್ರ ತಜ್ಞರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಶ್ರೀಕೃಷ್ಣ ಮಠದಲ್ಲಿ ಡಿ.25ಕ್ಕೆ ನ್ಯಾಯಾಂಗದಲ್ಲಿ ಭಗವದ್ಗೀತೆ ಪ್ರಸ್ತುತತೆಯ ವಿಶೇಷ ಸಂವಾದ
Dec. 29: ಪಡುಬಿದ್ರಿಯಲ್ಲಿ ಅಂತರ್‌ರಾಜ್ಯ ಬಂಟ ಕ್ರೀಡೋತ್ಸವ – ಎಂಆರ್‌ಜಿ ಟ್ರೋಫಿ
Udupi: ಕಲ್ಸಂಕ ಜಂಕ್ಷನ್; ಹಗಲು-ರಾತ್ರಿ ಟ್ರಾಫಿಕ್ ಕಿರಿಕಿರಿ
Padubidri: ಪಲಿಮಾರು ಉಪ್ಪು ನೀರು ತಡೆ ಅಣೆಕಟ್ಟು ನಾಲ್ಕೇ ವರ್ಷದಲ್ಲಿ ಜೀರ್ಣಾವಸ್ಥೆಗೆ!
Karkala: ಬೀದಿ ವ್ಯಾಪಾರಿಗಳಿಂದ ಸುಗಮ ಸಂಚಾರಕ್ಕೆ ಅಡ್ಡಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BBK11: ಬಿಗ್ ಬಾಸ್ ರೆಸಾರ್ಟ್ ನಲ್ಲಿ ಹೆಣ್ಮಕ್ಕಳ ಬಟ್ಟೆ ಒಗೆದ ರಜತ್ – ತ್ರಿವಿಕ್ರಮ್
ಶ್ರೀಕೃಷ್ಣ ಮಠದಲ್ಲಿ ಡಿ.25ಕ್ಕೆ ನ್ಯಾಯಾಂಗದಲ್ಲಿ ಭಗವದ್ಗೀತೆ ಪ್ರಸ್ತುತತೆಯ ವಿಶೇಷ ಸಂವಾದ
New Appointment: ಐದು ರಾಜ್ಯಗಳಿಗೆ ಹೊಸ ರಾಜ್ಯಪಾಲರ ನೇಮಿಸಿದ ಕೇಂದ್ರ ಸರ್ಕಾರ
Derogatory Remark: ಧರ್ಮಸ್ಥಳದಲ್ಲಿ ಆಣೆ, ಪ್ರಮಾಣ ಮುಗಿದ ಕತೆ: ಸಿ.ಟಿ.ರವಿ
Police: ಬಾಂಗ್ಲಾದಿಂದ ಅಕ್ರಮ ವಲಸೆ: ಮುಂಬೈಯಲ್ಲಿ10,ದೆಹಲಿಯಲ್ಲಿ11 ಮಂದಿ ಸೆರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.