Monkeypox: ಶಂಕಿತ ಪ್ರಕರಣಕ್ಕೆ ಪ್ರತ್ಯೇಕ ಐಸೋಲೇಶನ್: ರೆಫರಲ್ ಆಸ್ಪತ್ರೆಯಾಗಿ ವೆನ್ಲಾಕ್
Team Udayavani, Aug 29, 2024, 6:45 AM IST
ಬೆಂಗಳೂರು: ರಾಜ್ಯದಲ್ಲಿ ಮಂಕಿಪಾಕ್ಸ್ ಸೋಂಕಿನ ಮುನ್ನೆಚ್ಚರಿಕೆ ಕ್ರಮವಾಗಿ ಸರ್ವೇಕ್ಷಣೆ ಕಣ್ಗಾವಲು ಪಡೆಯನ್ನು ಸಕ್ರಿಯಗೊಳಿಸಿದ್ದು, ಶಂಕಿತ ಪ್ರಕರಣಗಳನ್ನು ಪ್ರತ್ಯೇಕ ಐಸೋಲೇಶನ್ ಹಾಗೂ ನಿರ್ವಹಣೆಗಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆ ಹಾಗೂ ಬೆಂಗಳೂರಿನ ಇಂದಿ ರಾನಗರದ ಇಡಿ ಆಸ್ಪತ್ರೆಯನ್ನು ರೆಫರಲ್ ಆಸ್ಪತ್ರೆಗಳಾಗಿ ಗುರುತಿಸಲಾಗಿದೆ ಎಂದು ಆರೋಗ್ಯ ಇಲಾಖೆ ಆಯುಕ್ತ ಡಾ| ರಂದೀಪ ತಿಳಿಸಿದ್ದಾರೆ.
ವಿದೇಶದಲ್ಲಿ ಮಂಕಿಪಾಕ್ಸ್ ಪ್ರಕರಣಗಳು ವರದಿಯಾಗುತ್ತಿವೆ. ರಾಜ್ಯದ ವಿಮಾನ ನಿಲ್ದಾಣ ಮತ್ತು ಬಂದರಿನಲ್ಲಿ ಮುನ್ನೆಚ್ಚರಿಕೆ ವಹಿಸಲಾಗಿದೆ. ಸೋಂಕಿತ ಪ್ರದೇಶದಿಂದ ಬರುವ ಪ್ರಯಾಣಿಕರ ಮೇಲೆ ಹೆಚ್ಚಿನ ನಿಗಾ ಇರಿಸಲಾಗಿದೆ.
ಜ್ವರ, ಚಳಿ, ಬೆವರುವಿಕೆ, ತಲೆ ನೋವು, ಮಾಂಸಖಂಡಗಳ ನೋವು, ಸುಸ್ತು, ಗಂಟಲ ಉರಿ, ಕೆಮ್ಮು, ಚರ್ಮದ ಮೇಲಿನ ದದ್ದುಗಳು ಮಂಕಿ ಪಾಕ್ಸ್ ಲಕ್ಷಣಗಳಾಗಿವೆ. ಇವುಗಳಲ್ಲಿ ಯಾವುದಾದರೂ 2 ಲಕ್ಷಣಗಳು ಪ್ರಯಾಣಿಕರಲ್ಲಿ ಪತ್ತೆಯಾದರೆ ಅಂಥವರನ್ನು ಪ್ರಾಥಮಿಕ ಪರೀಕ್ಷೆಗೆ ಒಳಪಡಿಸಿ, ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ರವಾನಿಸಬೇಕಾಗಿದೆ ಎಂದು ಮಾಹಿತಿ ನೀಡಿದರು.
ಕೋಲ್ಡ್ ಸ್ಟೋರೆಜ್ ಸಂಗ್ರಹ
ವೈದ್ಯಕೀಯ ಅಧಿಕಾರಿಗಳು ಶಂಕಿತ ಮಂಕಿ ಪಾಕ್ಸ್ ಪ್ರಕರಣಗಳ ವಿವರವನ್ನು ಐಎಚ್ಐಪಿ ಪೋರ್ಟಲ್ನಲ್ಲಿ “ಫೀವರ್ ವಿತ್ ರ್ಯಾಶ್’ ಪ್ರಕಾರವಾಗಿ ಪಿ-ಫಾರ್ಮ್ ನಲ್ಲಿಯೇ ವರದಿ ಮಾಡಬೇಕು. ಸೋಂಕಿನ ಲಕ್ಷಣಗಳಿರುವ ವ್ಯಕ್ತಿಯ ದದ್ದುಗಳ ದ್ರವ, ಗಾಯ ತಳದ ಸ್ವಾಬ್, ರಕ್ತದ ಮಾದರಿ, ಸೀರಂ ಮಾದರಿ, ಗಂಟಲು ಮೂಗಿನ ಸ್ವಾಬ್, ಮೂತ್ರದ ಮಾದರಿಯನ್ನು ಕೋಲ್ಡ್ ಸ್ಟೋರೆಜ್ನಲ್ಲಿ (+4ಸಿ)ನಲ್ಲಿ ಸಂಗ್ರಹಿಸಿಟ್ಟು, ಬೆಂಗಳೂರಿನ ಬಿಎಂಸಿ-ಆರ್ಐ ವೈರಾಣು ಪ್ರಯೋಗಾಲಯ, ವಿಕ್ಟೋರಿಯಾ ಮೈಕ್ರೋಬಯಾಲಜಿ ಹಾಗೂ ವೈರಸ್ ಸಂಶೋಧನ ಪತ್ತೆ ಪ್ರಯೋಗಾಲಯ, ಪುಣೆ ಐಸಿಎಂಆರ್ಗೆ ರವಾನಿಸಲಾಗುತ್ತದೆ.
21ದಿನ ಐಸೋಲೇಶನ್
ವ್ಯಕ್ತಿಯಲ್ಲಿ ಮಂಕಿಪಾಕ್ಸ್ ವರದಿಯಾದರೆ ಕನಿಷ್ಠ 21ದಿನಗಳವರೆಗೆ ಅಥವಾ ದದ್ದುಗಳು ಸಂಪೂರ್ಣವಾಗಿ ಗುಣಮುಖರಾಗುವ ತನಕ ಐಸೋಲೇಶನ್ನಲ್ಲಿ ಇರಬೇಕು. ಅವರಿಗೆ ಕೇಂದ್ರ ಆರೋಗ್ಯ ಇಲಾಖೆಯ ಮಾರ್ಗಸೂಚಿಯಂತೆ ಚಿಕಿತ್ಸೆ ನೀಡಲಾಗುತ್ತದೆ. ಆರೋಗ್ಯಾಧಿಕಾರಿಗಳು ಸೋಂಕಿತ ಪ್ರದೇಶದಿಂದ ಬರುವ ಸೋಂಕಿನ ಲಕ್ಷಣಗಳಿಲ್ಲದ ಪ್ರಯಾಣಿಕರ ಆರೋಗ್ಯದ ಮೇಲ್ವಿಚಾರಣೆಯನ್ನು 21 ದಿನಗಳವರೆಗೆ ನಿಗಾ ವಹಿಸಲಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CM ಸಿದ್ದರಾಮಯ್ಯ ಭ್ರಷ್ಟ ಎಂದು ನಿರೂಪಿಸಲು ಯಶಸ್ವಿ: ಆರ್.ಅಶೋಕ್
BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?
Congress; ಅಧಿವೇಶನಕ್ಕೆ ಮುನ್ನ ಸಂಪುಟಕ್ಕೆ ಸರ್ಜರಿ? ಸಾಧ್ಯತೆಗಳೇನು?
High Court: ನಕ್ಸಲ್ ಚಟುವಟಿಕೆ: ಸಾವಿತ್ರಿ ಬಾಡಿ ವಾರಂಟ್ ಮನವಿ ಮರು ಪರಿಶೀಲನೆಗೆ ನಿರ್ದೇಶ
ಕಸ್ತೂರಿಂಗನ್ ವರದಿ ತಿರಸ್ಕಾರ ಆಗ್ರಹಿಸಿ “ಬೆಂಗಳೂರು ಚಲೋ’
MUST WATCH
ಹೊಸ ಸೇರ್ಪಡೆ
Mangaluru: ಟ್ರಾಯ್ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Naxal ಎನ್ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.