Udupi ಗೀತಾರ್ಥ ಚಿಂತನೆ-20; ಧರ್ಮಾಧರ್ಮದಲ್ಲಿ ಸೂಕ್ಷ್ಮತೆ
Team Udayavani, Aug 29, 2024, 1:12 AM IST
ಧರ್ಮ ಶಬ್ದವನ್ನು “ಧಾರಣಾತ್ ಧರ್ಮ ಇತ್ಯಾಹುಃ…’ ಎಂದು ವ್ಯಾಖ್ಯಾನಿಸಲಾಗಿದೆ. ಧಾರಣ= sustain. ಲೋಕದ ವ್ಯವಸ್ಥೆಯನ್ನು ಎತ್ತಿ ಹಿಡಿಯುವುದು ಧರ್ಮ, ಇದಕ್ಕೆ ವಿರುದ್ಧ ಅಧರ್ಮ. ಒಟ್ಟಿನಲ್ಲಿ ವ್ಯವಸ್ಥೆಯ ಸಮಷ್ಟಿ ಚಿಂತನೆ, ವ್ಯವಸ್ಥೆಯ ಸಬಲೀಕರಣವೇ ಧರ್ಮ. ದೇವರನ್ನು ಒಪ್ಪದೆಯೂ ಕರ್ತವ್ಯವನ್ನು ಪ್ರಾಮಾಣಿಕವಾಗಿ ಮಾಡುತ್ತೇವೆ ಎಂಬವರಿದ್ದಾರೆ. ಇದು ಆಗದು. ಏಕೆಂದರೆ ಪ್ರಾಮಾಣಿಕತೆ ಎನ್ನುವುದು ಸ್ಥಿರವಲ್ಲ. ಎಲ್ಲ ಮೌಲ್ಯಗಳಿಗೆ ಮೂಲಾಧಾರ ದೇವರು. ದೇವರಿಗೆ ಯಾವುದು ಸಮ್ಮತ, ಯಾವುದು ಸಮ್ಮತವಲ್ಲ ಎಂಬ ಪ್ರಜ್ಞೆ ಇದ್ದಾಗ ಮಾತ್ರ ಸ್ಥಿರತೆ ಇರುತ್ತದೆ.
“ತದ್ವಿರುದ್ಧಃ ಸರ್ವೋಪಿ ಅಧರ್ಮಃ’ ಎಂದು ಶ್ರೀಮದಾಚಾರ್ಯರು ಹೇಳಿದ್ದಾರೆ. ಕೆಲವರು ಪೂಜೆ ಮಾಡುತ್ತಾರೆ. ಆದರೆ ದೇವರನ್ನು ಒಪ್ಪುವುದಿಲ್ಲ. ಅಂದರೆ ಒಳಗೆ ನಾಸ್ತಿಕರು. ಹೊರಗೆ ತೋರಿಸುವುದಕ್ಕಾಗಿ ಪೂಜೆ. ಇವರೂ ಧರ್ಮದ ವ್ಯಾಪ್ತಿಗೆ ಬರುವುದಿಲ್ಲ ಎಂದು ಸ್ಪಷ್ಟಪಡಿಸಲು “ಸರ್ವೋಪಿ’ ಶಬ್ದವನ್ನು ಬಳಸಲಾಗಿದೆ. ಹಾವು ಕಪ್ಪೆಯನ್ನು ಹಿಡಿಯುವಾಗ ಕಪ್ಪೆ ಬೊಬ್ಬೆ ಹೊಡೆಯುತ್ತದೆ. ಕಪ್ಪೆಯನ್ನು ಬಿಡಿಸಬೇಕೆ? ಬೇಡವೆ? ಅದರ ಆಹಾರವನ್ನು ತಿನ್ನುತ್ತದೆ ಎಂದುತ್ತರಿಸಿದರೆ ತೋಳವು ಮಗುವನ್ನು ಹಿಡಿದರೆ ಸುಮ್ಮನಿರಬೇಕೆ? ಎಂಬ ಪ್ರಶ್ನೆ ಹುಟ್ಟುತ್ತದೆ. ಆದ್ದರಿಂದ “ಇದಮಿತ್ಥಂ’ ಎಂದು ಧರ್ಮ, ಅಧರ್ಮದ ಪಟ್ಟಿ ಮಾಡಿ ಹೇಳುವುದು ಸಾಧ್ಯವಿಲ್ಲ. ಇಂತಹ ಸಂದರ್ಭ “ಸಾಕ್ಷೀಪ್ರಜ್ಞೆ’ಯನ್ನು ಅವಲಂಬಿಸಬೇಕು.
ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ,
ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ,ಉಡುಪಿ
ಸಂಪರ್ಕ ಸಂಖ್ಯೆ: 8055338811
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.