Billa Ranga Baashaa: ಕಿಚ್ಚನ ಹುಟ್ಟುಹಬ್ಬಕ್ಕೆ ʼಬಿಲ್ಲ ರಂಗ ಬಾಷʼ ಕೊಡಲಿದೆ ಬಿಗ್ ಅಪ್ಡೇಟ್
Team Udayavani, Aug 29, 2024, 11:02 AM IST
ಬೆಂಗಳೂರು: ಕಿಚ್ಚ ಸುದೀಪ್ (Kiccha Sudeep) ಅವರ ʼಮ್ಯಾಕ್ಸ್ʼ ಬಗ್ಗೆ ಕುತೂಹಲ ಹೆಚ್ಚಾಗುತ್ತಿದ್ದಂತೆ ಅವರ ಮುಂದಿನ ಸಿನಿಮಾದ ಕುರಿತ ಅಪ್ಡೇಟ್ ವೊಂದು ಹೊರಬಿದ್ದಿದೆ.
ʼವಿಕ್ರಾಂತ್ ರೋಣʼ ಬಳಿಕ ನಿರ್ದೇಶಕ ಅನೂಪ್ ಭಂಡಾರಿ (Anup Bhandari) ಜತೆ ಕಿಚ್ಚ ಅವರು ʼಬಿಲ್ಲ ರಂಗ ಬಾಷʼ (Billa Ranga Baashaa) ಸಿನಿಮಾವನ್ನು ಮಾಡಲಿದ್ದಾರೆ ಎಂದು ಈ ಹಿಂದೆಯೇ ಅನೌನ್ಸ್ ಆಗಿತ್ತು. ಆದರೆ ಅನೌನ್ಸ್ ಬಳಿಕ ಸಿನಿಮಾದ ಬಗ್ಗೆ ಯಾವುದೇ ಪ್ರಮುಖ ಅಪ್ಡೇಟ್ ಬಂದಿರಲಿಲ್ಲ.
ಇತ್ತ ಸುದೀಪ್ ಸಿನಿಮಾಕ್ಕೆ ಒಂದಷ್ಟು ಬ್ರೇಕ್ ನೀಡಿ, ಬಳಿಕ ಬಿಗ್ ಬಾಸ್ (Bigg Boss Kannada) ನಿರೂಪಣೆಯಲ್ಲಿ ಬ್ಯುಸಿಯಾಗಿದ್ದರು. ಇದಾದ ನಂತರ ಅವರು ತಮಿಳು ನಿರ್ದೇಶಕ ವಿಜಯ್ ಕಾರ್ತಿಕೇಯನ್ (Vijay Karthikeyan) ಅವರ ‘ಮ್ಯಾಕ್ಸ್ʼ(Max Movie) ಸಿನಿಮಾದಲ್ಲಿ ಬ್ಯುಸಿಯಾದರು.
ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬಕ್ಕೆ(ಸೆ.2ರಂದು) ನಾಲ್ಕು ದಿನ ಬಾಕಿಯಿರುವಾಗಲೇ ಅನೂಪ್ ಭಂಡಾರಿ ಅವರ ʼಬಿಲ್ಲ ರಂಗ ಬಾಷʼ ಸಿನಿಮಾದ ಕುರಿತು ಅಪ್ಡೇಟ್ ವೊಂದು ಹೊರಬಿದ್ದಿದೆ.
ಚಿತ್ರಕಥೆ ಬರೆದು, ಸ್ಕ್ರಿಪ್ಟ್ ಕೆಲಸವನ್ನು ಬಹುತೇಕ ಮುಗಿಸಿರುವ ಅನೂಪ್ ಸಿನಿಮಾದ ಬಗ್ಗೆ ಹೊಸ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಈ ಹಿಂದೆ ಅನೂಪ್ ʼಬಾ ರಾಜಾ ಬಾ’ ಎನ್ನುವ ಸಣ್ಣ ಹಾಡಿನ ಝಲಕ್ ಕೇಳಿಸಿ ಕುತೂಹಲ ಹೆಚ್ಚಿಸಿದ್ದರು.
It’s an honour to be associating with @KicchaSudeep sir once again. There is another exciting collaboration and an exciting announcement on Sep 2nd @ 10 AM. ಸುದೀಪ್ ಸರ್ ಹುಟ್ಟುಹಬ್ಬದ ದಿನ ಮತ್ತೆ ಭೇಟಿ ಆಗೋಣ! Be Ready Boys #BRBMovie pic.twitter.com/xsitXPyNjR
— Anup Bhandari (@anupsbhandari) August 29, 2024
“ಕಿಚ್ಚ ಸುದೀಪ್ ಅವರೊಂದಿಗೆ ಮತ್ತೆ ಕೆಲಸ ಮಾಡುತ್ತಿರುವುದು ಗೌರವದ ವಿಚಾರ. ತುಂಬಾ ಖುಷಿಯ ಸಂಗತಿಯನ್ನು ಹಂಚಿಕೊಳ್ಳಲು ಸುದೀಪ್ ಸರ್ ಹುಟ್ಟುಹಬ್ಬದ (ಸೆ.2 ರಂದು) ದಿನ ಬೆಳಗ್ಗೆ 10ಗಂಟೆಗೆ ಮತ್ತೆ ಭೇಟಿ ಆಗೋಣ! ಎಂದು ಸುದೀಪ್ ಅವರೊಂದಿಗಿನ ಫೋಟೋವನ್ನು ಹಂಚಿಕೊಂಡು ಅನೂಪ್ ಭಂಡಾರಿ ತಿಳಿಸಿದ್ದಾರೆ.
ಟೈಟಲ್ ನಿಂದಲೇ ʼಬಿಲ್ಲ ರಂಗ ಬಾಷʼ ಸಿನಿಮಾ ಕುತೂಹಲ ಹುಟ್ಟಿಸಿದೆ. ಇದು ಯಾವ ಜಾನರ್ ಸಿನಿಮಾವೆಂದು ಪ್ರೇಕ್ಷಕರು ಕುತೂಹಲದಿಂದ ಕಾಯುವಂತೆ ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್ ಹಂಚಿಕೆ; ಡಾ.ಸರ್ಜಿ
Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್!
Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು
Rohit Sharma; ಮುಗಿಯಿತಾ ರೋಹಿತ್ ಕ್ರಿಕೆಟ್ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?
Channapatna; ನ್ಯೂಇಯರ್ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.