Kalaburagi: ಭೀಮಾಗೆ ಮತ್ತೆ ಮಹಾರಾಷ್ಟ್ರ ನೀರು: ಪ್ರವಾಹ ಉಲ್ಬಣ
Team Udayavani, Aug 29, 2024, 4:01 PM IST
ಕಲಬುರಗಿ: ಜಿಲ್ಲೆಯ ಜೀವನದಿ ಭೀಮಾ ನದಿಗೆ ಮಹಾರಾಷ್ಟ್ರದ ಉಜನಿ ಜಲಾಯಶದಿಂದ ನೀರು ಹರಿವು ಬಿಡಲಾಗುತ್ತಿದ್ದು, ಭೀಮಾ ನದಿ ಅಪಾಯಕಾರಿ ಮಟ್ಟದಲ್ಲಿ ಹರಿಯುತ್ತಿದೆ.
ಕಳೆದ ನಾಲ್ಕು ದಿನಗಳಿಂದ ಒಂದು ಲಕ್ಷ ಕ್ಯೂಸೆಕ್ಸ್ ನೀರು ಉಜನಿ ಅಣೆಕಟ್ಟಿನಿಂದ ನೀರು ಬಿಡುತ್ತಿರುವುದರಿಂದ ಭೀಮಾ ನದಿ ಪ್ರವಾಹ ಮಟ್ಟದಲ್ಲಿ ಹರಿಯಲಾರಂಭಿಸಿದೆ.
ಒಟ್ಟಾರೆ ಭೀಮಾ ನದಿಯಲ್ಲಿ ಒಳಹರಿವು 145,000 ಕ್ಯೂಸೆಕ್ಸ್ ಇದ್ದರೆ ಹೊರ ಹರಿವು ಸಹ 145,000 ಕ್ಯೂಸೆಕ್ಸ್ ಇದೆ. ಹೀಗಾಗಿ ಭೀಮಾ ಏತ ನೀರಾವರಿ ಜಲಾಶಯದ 29 ಗೇಟುಗಳ ಪೈಕಿ 22 ಗೇಟುಗಳ ಮೂಲಕ ನೀರು ಹರಿಯ ಬಿಡಲಾಗುತ್ತಿದೆ. ಹೀಗಾಗಿ ಶ್ರೀಕ್ಷೇತ್ರ ದೇವಲ್ ಗಾಣಗಾಪುರ- ಇಟಗಾ ನಡುವೆ ಸಂಪರ್ಕ ಕಡಿತವಾಗಿದೆ. ಅದಲ್ಲದೇ ಶ್ರೀಕ್ಷೇತ್ರ ಮಣ್ಣೂರು ಯಲ್ಲಮ್ಮ ದೇವಾಲಯ ಸಹ ಜಲಾವೃತಗೊಂಡಿದೆ.
ಇತ್ತ ಕಲಬುರಗಿ ಜಿಲ್ಲೆಯಲ್ಲಿ ಮಳೆ ಇಲ್ಲ. ಆದರೆ ಆಗಸ್ಟ್ 30 ರಿಂದ ಸೆಪ್ಟೆಂಬರ್ 3 ರವರೆಗೆ ಭಾರಿ ಪ್ರಮಾಣದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಒಂದು ವೇಳೆ ಕಲಬುರಗಿ ಜಿಲ್ಲೆಯಲ್ಲೂ ಮಳೆಯಾಗಿದಲ್ಲಿ ಭೀಮಾ ಪ್ರವಾಹ ಮತ್ತಷ್ಟು ಅಪಾಯ ಮಟ್ಟದಲ್ಲಿ ಹರಿಯುವ ಆತಂಕ ಎದುರಾಗುವ ಸಾಧ್ಯತೆಗಳಿವೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.