Cricket Stories; ದಿಕ್ಕೆಟ್ಟ ಹಾರ್ದಿಕ್‌ ಬದುಕಲ್ಲಿ ಹೊಸ ರಾಗ ಹಾಡಿದ ಬ್ರಿಟಿಷ್‌ ಗಾಯಕಿ


ಕೀರ್ತನ್ ಶೆಟ್ಟಿ ಬೋಳ, Aug 29, 2024, 6:09 PM IST

Cricket Stories; ದಿಕ್ಕೆಟ್ಟ ಹಾರ್ದಿಕ್‌ ಬದುಕಲ್ಲಿ ಹೊಸ ರಾಗ ಹಾಡಿದ ಬ್ರಿಟಿಷ್‌ ಗಾಯಕಿ

ಇತ್ತೀಚಿನ ದಿನಗಳಲ್ಲಿ ಅತ್ಯಂತ ಏಳು ಬೀಳುಗಳನ್ನು ಕಂಡ ಕ್ರಿಕೆಟಿಗ ಯಾರಾದರು ಇದ್ದರೆ ಅದು ಹಾರ್ದಿಕ್‌ ಪಾಂಡ್ಯ. ವೈಯಕ್ತಿಕ ಮತ್ತು ವೃತ್ತಿ ಜೀವನ ಎರಡರಲ್ಲೂ ಹಾರ್ದಿಕ್‌ ಪಾಂಡ್ಯ ಭಾರಿ ಏರಿಳಿತ ಕಾಣುತ್ತಿದ್ದಾರೆ. ಯಶಸ್ಸಿನ ಶಿಖರವೇರಿದ್ದ ಹಾರ್ದಿಕ್‌ ಅಷ್ಟೇ ಕೆಳಕ್ಕೆ ಬಿದ್ದಿದ್ದಾರೆ. ಮತ್ತೆ ಮೇಲಕ್ಕೆ ಎದ್ದಿದ್ದಾರೆ. ಆದರೂ ಕಳೆದ ಕೆಲವು ತಿಂಗಳಿನಿಂದ ಹಾರ್ದಿಕ ಜೀವನ ಅವರು ಯೋಜಿಸಿದಂತೆ ಸಾಗುತ್ತಿಲ್ಲ ಎನ್ನವುದು ಮಾತ್ರ ನಿಜ.

ಗುಜರಾತ್‌ ಟೈಟಾನ್ಸ್‌ ತಂಡದ ಯಶಸ್ವಿ ನಾಯಕನಾಗಿದ್ದ ಹಾರ್ದಿಕ್‌ ಪಾಂಡ್ಯ ಅವರು ಯಾವಾಗ ಮರಳಿ ಮುಂಬೈ ಇಂಡಿಯನ್ಸ್‌ ಗೆ ಬಂದರೋ ಅಲ್ಲಿಂದ ಅವರ ಹಣೆಬರಹವೆ ಬದಲಾಯಿತು ಎನ್ನಬಹುದು. ಮರಳಿ ಬಂದ ಪಾಂಡ್ಯರನ್ನು ತವರೂರು ಆತ್ಮೀಯತೆಯಿಂದ ಸ್ವಾಗತಿಸುತ್ತದೆ ಎಂದು ಫ್ರಾಂಚೈಸಿ ಮತ್ತು ಪಾಂಡ್ಯ ಅಂದುಕೊಂಡಿದ್ದರು. ಆದರೆ ಇದು ಮುಂಬೈ ಅಭಿಮಾನಿಗಳಿಗೆ ಇಷ್ಟವಾಗಲಿಲ್ಲ. ಹಾರ್ದಿಕ್‌ ಇಲ್ಲದೆ ಎರಡು ವರ್ಷ ಕಳೆದಿದ್ದ ಮುಂಬೈ ಅಭಿಮಾನಿಗಳಿಗೆ ಅದೇಕೋ ಮತ್ತೆ ಬರುವುದು ಇಷ್ಟವಾಗಲಿಲ್ಲ. ಆದರೆ ಇದು ಆಕ್ರೋಶವಾಗಿ ಬದಲಾಗಿದ್ದು ಹಾರ್ದಿಕ್‌ ಗೆ ನಾಯಕತ್ವ ವಹಿಸಿದಾಗ.

ಅದಾಗಲೇ ಭಾರತದ ಟಿ20 ತಂಡ ಮುನ್ನಡೆಸುತ್ತಿದ್ದ ಹಾರ್ದಿಕ್‌ ರನ್ನು ಕ್ಯಾಪ್ಟನ್‌ ಮಾಡಿದ ಮುಂಬೈ ಇಂಡಿಯನ್ಸ್‌ ಫ್ರಾಂಚೈಸಿ ದೂರಾಲೋಚನೆ ಮಾಡಿತ್ತು. ಆದರೆ ಅದು ಅವರಿಗೆ ತಿರುಮಂತ್ರವಾಯಿತು. ಐದು ಬಾರಿ ಕಪ್‌ ಗೆದ್ದುಕೊಟ್ಟ ರೋಹಿತ್‌ ರನ್ನು ಕೆಳಕ್ಕಿಳಿಸಿದ ಫ್ರಾಂಚೈಸಿ ನಿರ್ಧಾರ ಅಭಿಮಾನಿಗಳಿಗೆ ಅರಗಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಇದು ಆಟದಲ್ಲೂ ಪರಿಣಾಮ ಬೀರಿತು.

ಐಪಿಎಲ್‌ ಮುಗಿದೊಡನೆ ಹಾರ್ದಿಕ್‌ ವೈಯಕ್ತಿಕ ಜೀವನದ ಸುದ್ದಿಗಳೂ ಬರತೊಡಗಿತು. ಹಾರ್ದಿಕ್‌ ಅವರು ಪತ್ನಿ, ಸೈಬೀರಿಯಾ ಮೂಲದ ನತಾಶಾ ಸ್ಟಾಂಕೋವಿಕ್ ಅವರ ನಡುವೆ ಎಲ್ಲವೂ ಸರಿಯಿಲ್ಲ ಎಂಬ ಸುದ್ದಿ ಹರಿದಾಡತೊಡಗಿತು. ಹಾರ್ದಿಕ್‌ ಅವರ ಬಗೆಗಿದ್ದ ಎಲ್ಲಾ ನೆಗೆಟಿವ್‌ ಕಾಮೆಂಟ್‌ ಗಳು ಕಡಿಮೆಯಾಗಿ, ಜನರ ಮಧ್ಯೆ ಅವರ ಬಗ್ಗೆ ಅನುಕಂಪ ಮೂಡತೊಡಗಿತು. ಇದೇ ಸಮಯದಲ್ಲಿ ಟಿ20 ವಿಶ್ವಕಪ್‌ ನಲ್ಲಿ ಹಾರ್ದಿಕ್‌ ನೀಡಿದ ಪ್ರದರ್ಶನವೂ ಅವರ ಇಮೇಜ್‌ ಉತ್ತಮವಾಗಲು ಸಾಧ್ಯವಾಯಿತು.

ನತಾಶಾ ಸ್ಟಾಂಕೋವಿಕ್ ಅವರು ಹಾರ್ದಿಕ್‌ ಗೆ ಮೋಸ ಮಾಡಿದರು ಎಂಬ ರೀತಿಯ ವಿಚಾರಗಳು ಇಂಟರ್ನೆಟ್‌ ನಲ್ಲಿ ಹರಿದಾಡಿದ್ದವು. ಇದಕ್ಕೆ ಸರಿಯಾಗಿ ನತಾಶಾ ಸ್ಟಾಂಕೋವಿಕ್ ಅವರು ಬೇರೆ ಯುವಕನೊಂದಿಗೆ ಓಡಾಡುವ ಫೋಟೋ ಕೂಡಾ ವೈರಲ್‌ ಆಗಿತ್ತು. ಹೀಗಾಗಿ ಇಲ್ಲಿ ಹಾರ್ದಿಕ್‌ ಹೀರೋ ಆದರೆ, ನತಾಶಾ ವಿಲನ್‌ ಆಗಿದ್ದರು. ಆದರೆ ಇದೀಗ ಹೊಸ ವಿಚಾರಗಳು ಹೊರಗೆ ಬರುತ್ತಿದೆ.

ಹೌದು, ನತಾಶಾ ಯಾವಾಗ ಸೈಬೀರಿಯಾ ವಿಮಾನ ಏರಿದರೂ ಇತ್ತ ಹಾರ್ದಿಕ್‌ ಹೊಸ ಹುಡುಗಿಯೊಂದಿಗೆ ಸುತ್ತಾಡುತ್ತಿದ್ದಾರೆ. ಲಂಕಾ ಸರಣಿಯ ಬಳಿಕ ವಿಶ್ರಾಂತಿಗೆಂದು ಹಾರ್ದಿಕ್‌ ಗ್ರೀಸ್‌ ಗೆ ಹೊರಟಿದ್ದು, ಅಲ್ಲಿ ಬ್ರಿಟಿಷ್‌ ಗಾಯಕಿಯೊಂದಿಗೆ ಜಾಲಿ ಮೂಡ್‌ ನಲ್ಲಿದ್ದಾರೆ. ಬ್ರಿಟಿಷ್ ಗಾಯಕಿ ಮತ್ತು ಕಿರುತೆರೆ ನಟಿ ಜಾಸ್ಮಿನ್ ವಾಲಿಯಾ (Jasmin Walia) ಜತೆ ಹಾರ್ದಿಕ್‌ ಮತ್ತೊಂದು ಇನ್ನಿಂಗ್ಸ್‌ ಆರಂಭಿಸಿದ್ದಾರೆ ಎಂದು ವರದಿಯಾಗಿದೆ.

ಯಾರು ಗೊತ್ತಾ ಈ ಜಾಸ್ಮಿನ್‌

ಹಾರ್ದಿಕ್‌ ಮನಸು ಗೆದ್ದ ಮಲ್ಲಿಗೆ ಜಾಸ್ಮಿನ್‌ ವಾಲಿಯಾ ಭಾರತೀಯ ಮೂಲದ ಬ್ರಿಟಿಷ್ ಗಾಯಕಿ ಮತ್ತು ದೂರದರ್ಶನ ತಾರೆ. ಇಂಗ್ಲೆಂಡಿನ ಎಸೆಕ್ಸ್‌ ನಲ್ಲಿ ಜನಿಸಿದ ಜಾಸ್ಮಿನ್‌ ಪೋಷಕರು ಭಾರತೀಯ ಮೂಲದವರು. 2012 ರಲ್ಲಿ ತನ್ನ ವೃತ್ತಿಜೀವನ ಪ್ರಾರಂಭಿಸಿದ ಜಾಸ್ಮಿನ್ ರಿಯಾಲಿಟಿ ಶೋ ʼದಿ ಓನ್ಲಿ ವೇ ಈಸ್ ಎಸೆಕ್ಸ್‌ʼನಲ್ಲಿ ಕೆಲಸ ಮಾಡಿದ್ದರು. ಅವರು ದಿ ಎಕ್ಸ್ ಫ್ಯಾಕ್ಟರ್, ದೇಸಿ ರಾಸ್ಕಲ್ಸ್ ಮತ್ತು ಡಿನ್ನರ್ ಡೇಟ್‌ನಂತಹ ಅಂತಾರಾಷ್ಟ್ರೀಯ ಪ್ರದರ್ಶನಗಳಲ್ಲಿ ಭಾಗಿಯಾಗಿದ್ದರು.

ಜುಲೈ 2020 ರಲ್ಲಿ, ಟೈಮ್ಸ್ ಸ್ಕ್ವೇರ್ ಬಿಲ್‌ ಬೋರ್ಡ್‌ನಲ್ಲಿ ಕಾಣಿಸಿಕೊಂಡ ಮೊದಲ ಬ್ರಿಟಿಷ್ ಭಾರತೀಯ ಮಹಿಳಾ ಗಾಯಕಿಯಾಗಿ ಜಾಸ್ಮಿನ್ ವಾಲಿಯಾ ಇತಿಹಾಸ ನಿರ್ಮಿಸಿದ್ದರು. ಅವರು ಬಿಗ್ ಬಾಸ್ 13 ರ ಫೈನಲಿಸ್ಟ್ ಅಸಿಮ್ ರಿಯಾಜ್ ಅವರ “ನೈಟ್ ಎನ್ ಫೈಟ್ಸ್” ಹಾಡಿನಲ್ಲಿ ಕಾಣಿಸಿಕೊಂಡು ಭಾರತದಲ್ಲಿ ಹೆಸರು ಮಾಡಿದ್ದರು.

ರಾಹುಲ್‌ ಗೆ ಮುಗಿಯದ ಸಂಕಷ್ಟ

ಭಾರತದಲ್ಲಿನ ಅತ್ಯಂತ ಕೌಶಲ್ಯಪೂರ್ಣ ಆಟಗಾರರಲ್ಲಿ ಒಬ್ಬ ಕನ್ನಡಿಗ ಕೆ.ಎಲ್‌ ರಾಹುಲ್‌ ಅವರು. ತನ್ನ ಕೌಶಲ್ಯಕ್ಕೆ ತಕ್ಕಂತೆ ಆಟವಾಡಿದ್ದರೆ ಇಂದು ಎಲ್ಲೋ ಇರಬೇಕಿತ್ತು. ಆದರೆ ಸಂಕಷ್ಟದ ಸಮಯದಲ್ಲಿ ಟೀಂ ಇಂಡಿಯಾಗೆ ಪಾಲಿಗೆ ಅಪದ್ಭಾಂದವನಾಗಿದ್ದ ರಾಹುಲ್‌ ಅದಕ್ಕೆ ಸರಿಯಾದ ಪ್ರತಿಫಲ ಪಡೆಯಲಿಲ್ಲ. ಏಕದಿನ ವಿಶ್ವಕಪ್‌ ವೇಳೆ ವಿಕೆಟ್‌ ಕೀಪರ್‌ ಆಗಿ ರಾಹುಲ್‌ ನೀಡಿದ ಕೊಡುಗೆಯನ್ನು ಮರೆಯುವಂತಿಲ್ಲ. ಆದರೆ ಅದೇ ರಾಹುಲ್‌ ಈಗ ತಂಡದಲ್ಲಿ ಸ್ಥಾನಕ್ಕಾಗಿ ಒದ್ದಾಡುವಂತಾಗಿದೆ.

ಐಪಿಎಲ್‌ ನಲ್ಲಿ ಲಕ್ನೋ ಸೂಪರ್‌ ಜೈಂಟ್ಸ್‌ ತಂಡದ ನಾಯಕನಾಗಿದ್ದ ರಾಹುಲ್‌ ಮೂರು ಸೀಸನ್‌ ನಲ್ಲಿ ಎರಡು ಬಾರಿ ತಂಡವನ್ನು ಪ್ಲೇ ಆಫ್‌ ಗೆ ಕರೆ ತಂದಿದ್ದರು. ಆದರೆ ಇದೀಗ ತಂಡದಿಂದಲೇ ಹೊರಬೀಳುವ ಆತಂಕದಲ್ಲಿದ್ದಾರೆ.

ಲಕ್ನೋ ಸೂಪರ್‌ ಜೈಂಟ್ಸ್‌ ನಲ್ಲಿ ನಾಯಕನಾಗಿದ್ದರೂ ರಾಹುಲ್‌ ಗೆ ತನ್ನ ಸ್ಥಾನದ ಭದ್ರತೆಯಿಲ್ಲ. ಕೆಲ ದಿನಗಳ ಹಿಂದೆ ರಾಹುಲ್‌ ಅವರು ಎಲ್‌ ಎಸ್‌ ಜಿ ಮಾಲಿಕ ಸಂಜೀವ್‌ ಗೋಯೆಂಕಾ ಅವರನ್ನು ಭೇಟಿಯಾಗಿ, ನಾನು ಇದೇ ತಂಡದಲ್ಲಿ ಮುಂದುವರಿಯುತ್ತೇನೆ ಹೇಳಿದ್ದಾರೆ. ಆದರೆ ಗೋಯೆಂಕಾ ಅವರು ಯಾವುದೇ ಭರವಸೆ ನೀಡಿಲ್ಲ ಎನ್ನಲಾಗಿದೆ.

ಕರ್ನಾಟಕ ರಾಜ್ಯ ಕ್ರಿಕೆಟ್‌ ನಿಂದ ಬಂದ ಅತ್ಯುತ್ತಮ ಬ್ಯಾಟರ್‌ ಗಳಲ್ಲಿ ಒಬ್ಬನಾದ ರಾಹುಲ್‌ ವೃತ್ತಿಜೀವನದ ಇನ್ನಾದರೂ ಸರಿಯಾದ ದಾರಿಯಲ್ಲಿ ಸಾಗಲಿ ಎನ್ನುವುದಷ್ಟೇ ಆಶಯ.

ಟಾಪ್ ನ್ಯೂಸ್

Udyavara: ಹೊಳೆಯಲ್ಲಿ ತೇಲಿ ಬಂದ ಅಪರಿಚಿತ ಶವ

Udyavara: ಹೊಳೆಯಲ್ಲಿ ತೇಲಿ ಬಂದ ಅಪರಿಚಿತ ಶವ

Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು

Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು

Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ

Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ

Puttur: ಸ್ಕೂಲ್‌ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್‌

Puttur: ಸ್ಕೂಲ್‌ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್‌

Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು

Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು

Kasaragod: ಫ್ಯಾಶನ್‌ ಗೋಲ್ಡ್‌ ವಂಚನೆ ಪ್ರಕರಣ: ಪೂಕೋಯ ತಂಙಳ್‌ ಮತ್ತೆ ಬಂಧನ

Kasaragod: ಫ್ಯಾಶನ್‌ ಗೋಲ್ಡ್‌ ವಂಚನೆ ಪ್ರಕರಣ: ಪೂಕೋಯ ತಂಙಳ್‌ ಮತ್ತೆ ಬಂಧನ

1-kasturi

Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Border Gavaskar Trophy: India ready for Kangaroo Challenge; What is the team’s strength?

Border Gavaskar Trophy: ಕಾಂಗರೂ ಚಾಲೆಂಜ್‌ ಗೆ ಅಣಿಯಾದ ಭಾರತ; ಹೇಗಿದೆ ತಂಡದ ಬಲಾಬಲ

6-tulsi

Tulsi Health Benefits: ತುಳಸಿ ಗಿಡದ ಔಷಧೀಯ ಗುಣಗಳ ಮಾಹಿತಿ ಇಲ್ಲಿವೆ…

Naxal: ನ.17 ಈದು ಎನ್‌ಕೌಂಟರ್- ನ.18 ಕಬ್ಬಿನಾಲೆ ಶೂಟೌಟ್:‌ 21 ವರ್ಷದ ಹಿಂದೆ ನಡೆದಿದ್ದೇನು?

Naxal: ನ.17 ಈದು ಎನ್‌ಕೌಂಟರ್- ನ.18 ಕಬ್ಬಿನಾಲೆ ಶೂಟೌಟ್:‌ 21 ವರ್ಷದ ಹಿಂದೆ ನಡೆದಿದ್ದೇನು?

ಈ ಎಲೆಯಿಂದ ಮಾಡುವ ಖಾದ್ಯ ಆರೋಗ್ಯಕ್ಕೂ ಉತ್ತಮ… ಅದ್ಯಾವ ಎಲೆ ಅಂತೀರಾ ಇಲ್ಲಿದೆ ರೆಸಿಪಿ

ಈ ಎಲೆಯಿಂದ ಮಾಡುವ ಖಾದ್ಯ ಆರೋಗ್ಯಕ್ಕೂ ಉತ್ತಮ… ಅದ್ಯಾವ ಎಲೆ ಅಂತೀರಾ ಇಲ್ಲಿದೆ ರೆಸಿಪಿ…

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Kumbhashi: ರಾ.ಹೆ.66 ಭೀಕರ ರಸ್ತೆ ಅಪಘಾತ : ಪ್ರಾಣಾಪಾಯದಿಂದ ಪಾರಾದ ಗಾಯಾಳುಗಳು !

Kumbhashi: ರಾ.ಹೆ.66 ಭೀಕರ ರಸ್ತೆ ಅಪಘಾತ: ಪ್ರಾಣಾಪಾಯದಿಂದ ಪಾರಾದ ಗಾಯಾಳುಗಳು !

Udyavara: ಹೊಳೆಯಲ್ಲಿ ತೇಲಿ ಬಂದ ಅಪರಿಚಿತ ಶವ

Udyavara: ಹೊಳೆಯಲ್ಲಿ ತೇಲಿ ಬಂದ ಅಪರಿಚಿತ ಶವ

Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು

Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು

Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ

Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ

Puttur: ಸ್ಕೂಲ್‌ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್‌

Puttur: ಸ್ಕೂಲ್‌ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.