Wealthiest; ಅಂಬಾನಿ ಮೀರಿಸಿ ಶ್ರೀಮಂತ ಭಾರತೀಯನಾದ ಅದಾನಿ!

ಉದ್ದಿಮೆ ರಂಗದ ದೈತ್ಯರ ಒಟ್ಟು ಸಂಪತ್ತೆಷ್ಟು? ಹುರುನ್ ಇಂಡಿಯಾ ಪಟ್ಟಿ ಇಲ್ಲಿದೆ...

Team Udayavani, Aug 29, 2024, 6:54 PM IST

1-adani

ಮುಂಬಯಿ: ಹಿಂಡೆನ್‌ಬರ್ಗ್ ಸಂಶೋಧನಾ ವರದಿಯ ಕುರಿತು ತೀವ್ರ ಚರ್ಚೆ ನಡೆಯುತ್ತಿರುವ ವೇಳೆ ಗೌತಮ್ ಅದಾನಿ ಅವರ ನಿವ್ವಳ ಮೌಲ್ಯವು ಕಳೆದ ವರ್ಷ 95 ಪ್ರತಿಶತದಷ್ಟು ಏರಿಕೆಯಾಗಿ 11.6 ಲಕ್ಷ ಕೋಟಿ ರೂಪಾಯಿಗಳಿಗೆ ತಲುಪಿದೆ.ಶ್ರೀಮಂತ ಭಾರತೀಯ ಎಂಬ ಹಿರಿಮೆ ಹೊಂದಿದ್ದ ಮುಖೇಶ್ ಅಂಬಾನಿ ಅವರನ್ನು ಅದಾನಿ ಈಗ ಹಿಂದಿಕ್ಕಿದ್ದಾರೆ ಎಂದು ವರದಿಯೊಂದು ಗುರುವಾರ(ಆ 29) ತಿಳಿಸಿದೆ.

2024 ರ ಹುರುನ್ ಇಂಡಿಯಾ ಶ್ರೀಮಂತರ ಪಟ್ಟಿಯ ಪ್ರಕಾರ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಅಂಬಾನಿ ಅವರ ಸಂಪತ್ತಿನ ಒಟ್ಟಾರೆ ನಿವ್ವಳ ಮೌಲ್ಯ 25 ಶೇಕಡಾ ಹೆಚ್ಚಿ 10.14 ಲಕ್ಷ ಕೋಟಿ ರೂಪಾಯಿಗಳಿಗೆ ಏರಿದೆ.

2023 ರ ವರದಿಯಲ್ಲಿ, ಅದಾನಿ ಅವರ ಸಂಪತ್ತು ಶೇಕಡಾ 57 ರಷ್ಟು ಕುಸಿದು 4.74 ಲಕ್ಷ ಕೋಟಿ ರೂಪಾಯಿಗಳಿಗೆ ತಲುಪಿತ್ತು. ಅಂಬಾನಿ 8.08 ಲಕ್ಷ ಕೋಟಿ ರೂಪಾಯಿಗಳ ಸಂಪತ್ತನ್ನು ಹೊಂದಿದ್ದರು. ಯುಎಸ್ ಮೂಲದ ಹಿಂಡೆನ್‌ಬರ್ಗ್ ರಿಸರ್ಚ್‌ನಿಂದ ಹೊರಿಸಲಾದ ವಿವಿಧ ಆರೋಪಗಳ ನಂತರ ಅದಾನಿಯವರ ನಿವ್ವಳ ಮೌಲ್ಯವು ತೀವ್ರವಾಗಿ ಕುಸಿದಿದೆ ಎಂಬುದನ್ನೂ ಗಮನಿಸಬಹುದು. ಎಲ್ಲಾ ಆರೋಪಗಳನ್ನು ಸದ್ಯ ನಿರಾಕರಿಸಲಾಗಿದೆ.

2014 ರಲ್ಲಿ ಹುರುನ್, ಅದಾನಿ ಅವರ ಸಂಪತ್ತನ್ನು 44,000 ಕೋಟಿ ರೂ.ಗೆ ನಿಗದಿಪಡಿಸಿತ್ತು, ಅದು ಅವರನ್ನು ಹತ್ತನೇ ಶ್ರೀಮಂತ ಭಾರತೀಯನನ್ನಾಗಿ ಮಾಡಿತ್ತು.

ಹೆಚ್‌ಸಿಎಲ್‌ನ ಶಿವ ನಾಡರ್ ಮತ್ತು ಕುಟುಂಬವು 3.14 ಲಕ್ಷ ಕೋಟಿ ರೂಪಾಯಿಗಳ ನಿವ್ವಳ ಮೌಲ್ಯದೊಂದಿಗೆ ಮೂರನೇ ಶ್ರೀಮಂತರಾಗಿದ್ದು, ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಸೈರಸ್ ಪೂನವಾಲಾ 2024 ರಲ್ಲಿ 2.89 ಲಕ್ಷ ಕೋಟಿ ರೂಪಾಯಿಗಳ ನಿವ್ವಳ ಮೌಲ್ಯದೊಂದಿಗೆ ನಾಲ್ಕನೇ ಸ್ಥಾನಕ್ಕೆ ಕುಸಿದಿದ್ದಾರೆ. ಸನ್ ಫಾರ್ಮಾಸ್ಯುಟಿಕಲ್ಸ್‌ನ ದಿಲೀಪ್ ಸಾಂಘ್ವಿ ಐದನೇ ಸ್ಥಾನದಲ್ಲಿ ಮುಂದುವರೆದಿದ್ದಾರೆ.

6ನೇ ಸ್ಥಾನದಲ್ಲಿ ಕುಮಾರ್ ಮಂಗಲಂ ಬಿರ್ಲಾ ಮತ್ತು ಕುಟುಂಬ, 7ನೇ ಸ್ಥಾನದಲ್ಲಿ ಗೋಪಿಚಂದ್ ಹಿಂದುಜಾ ಮತ್ತು ಕುಟುಂಬ,8 ನೇ ಸ್ಥಾನದಲ್ಲಿ ರಾಧಾಕಿಶನ್ ದಮಾನಿ( DMart) ಮತ್ತು ಕುಟುಂಬ, 9 ನೇ ಸ್ಥಾನದಲ್ಲಿಅಜೀಂ ಪ್ರೇಮ್‌ಜಿ ಮತ್ತು ಕುಟುಂಬ, 10 ನೇ ಸ್ಥಾನದಲ್ಲಿ ನೀರಜ್ ಬಜಾಜ್ ಮತ್ತು ಕುಟುಂಬ,11 ನೇ ಸ್ಥಾನದಲ್ಲಿ ಸುನೀಲ್ ಸುರೇಶ್ ಮತ್ತು ಕುಟುಂಬವಿದೆ.

ಜೊಹೊದ ರಾಧಾ ವೆಂಬು 47,500 ಕೋಟಿ ರೂ.ಗಳ ಸಂಪತ್ತನ್ನು ಹೊಂದಿರುವ  ಅತ್ಯಂತ ಶ್ರೀಮಂತ ಮಹಿಳೆಯಾಗಿದ್ದಾರೆ. ಜೆಪ್ಟೊದ ಸಹ-ಸಂಸ್ಥಾಪಕರಾದ ಕೈವಲ್ಯ ವೋಹ್ರಾ ಮತ್ತು ಆದಿತ್ ಪಲಿಚಾ ಅವರು 3,600 ರೂ. ಕೋಟಿ ಮತ್ತು 4,300 ಕೋಟಿ ರೂ ಸಂಪತ್ತು ಹೊಂದಿದ್ದಾರೆ.

ಬಾಲಿವುಡ್‌ ಸೂಪರ್‌ಸ್ಟಾರ್‌ ಶಾರುಖ್ ಖಾನ್ ಅವರು 7,300 ಕೋಟಿ ರೂ.ಗಳ ಮೌಲ್ಯದೊಂದಿಗೆ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.ಸಂಪತ್ತು ಅವರ ವ್ಯಾಪಾರ ಪಾಲುದಾರರಾದ ಜೂಹಿ ಚಾವ್ಲಾ ಅವರಿಗಿಂತ (4,600 ಕೋಟಿ ರೂ.) ಹೆಚ್ಚಿನದಾಗಿದೆ. ಮನರಂಜನಾ ಕ್ಷೇತ್ರದಲ್ಲಿ ಶಾರುಖ್‌ ದೇಶದ ಶ್ರೀಮಂತ ತಾರೆ ಎನಿಸಿಕೊಂಡಿದ್ದಾರೆ.

ಜೆಪ್ಟೋ ಆ್ಯಪ್‌ ಕೈವಲ್ಯ ಕಿರಿಯ ಶ್ರೀಮಂತ!
ಜೆಪ್ಟೊ ಆ್ಯಪ್‌ ಸಹ ಸಂಸ್ಥಾಪಕ ಕೈವಲ್ಯ ವೋಹ್ರಾ (21) ಬರೋಬ್ಬರಿ 3,600 ಕೋಟಿ ರೂ. ಮೌಲ್ಯದ ಸಂಪತ್ತಿ ನೊಂದಿಗೆ ದೇಶದ ಅತ್ಯಂತ ಕಿರಿಯ ವಯಸ್ಸಿನ ಶ್ರೀಮಂತ ಎನಿಸಿಕೊಂಡಿದ್ದಾರೆ. ಇದೇ ಆ್ಯಪ್‌ನ ಇನ್ನೊಬ್ಬ ಸಂಸ್ಥಾಪಕ ಆದಿತ್‌ ಪಲಿಚಾ (22) 4,300 ಕೋಟಿ ರೂ. ಸಂಪತ್ತಿ ನೊಂದಿಗೆ 2ನೇ ಕಿರಿಯ ಶ್ರೀಮಂತರಾಗಿದ್ದಾರೆ.

ಬಿಲಿಯನೇರ್‌ಗಳ ಸಂಖ್ಯೆ ಈಗ 334
ಭಾರತದಲ್ಲಿನ ಬಿಲಿಯನೇರ್‌ಗಳ ಸಂಖ್ಯೆ ಈ ಬಾರಿ ದಾಖಲೆಯ 334ಕ್ಕೇರಿದೆ. ಅಂದರೆ ಭಾರತದಲ್ಲಿ ಪ್ರತೀ 5 ದಿನಕ್ಕೆ ಒಬ್ಬ ಬಿಲಿಯನೇರ್‌ ಸೇರ್ಪಡೆಯಾಗಿದ್ದಾನೆ. 2023ರಲ್ಲಿ ಈ ಸಂಖ್ಯೆ 259 ಆಗಿತ್ತು. ಒಟ್ಟಾರೆ ಪಟ್ಟಿಯಲ್ಲಿ 1,539 ಶ್ರೀಮಂತರಿದ್ದಾರೆ. ಕನಿಷ್ಠ 1,000 ಕೋಟಿ ರೂ. ಸಂಪತ್ತು ಇದ್ದವರನ್ನು ಈ ಪಟ್ಟಿ ಯಲ್ಲಿ ಸೇರ್ಪಡೆ ಮಾಡಲಾಗಿದೆ.

ಟಾಪ್ ನ್ಯೂಸ್

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-tWWW

Tupperware ಲಂಚ್‌ ಬಾಕ್ಸ್‌ ದಿವಾಳಿ: ಅಮೆರಿಕದ ಕಂಪೆನಿ ಘೋಷಣೆ

Stock Market: ಷೇರುಪೇಟೆ ಸೂಚ್ಯಂಕ ಜಿಗಿತ-83,000 ಅಂಕಗಳ ದಾಖಲೆ ಮಟ್ಟದ ಏರಿಕೆ

Stock Market: ಷೇರುಪೇಟೆ ಸೂಚ್ಯಂಕ ಜಿಗಿತ-83,000 ಅಂಕಗಳ ದಾಖಲೆ ಮಟ್ಟದ ಏರಿಕೆ

EV

Festival Season: ಟಾಟಾ ಇವಿ ಕಾರುಗಳ ಮೇಲೆ ಭಾರೀ ರಿಯಾಯಿತಿ

Ford Motor: ಭಾರತಕ್ಕೆ ಮತ್ತೆ ಮರಳಿದ ಫೋರ್ಡ್ ಮೋಟಾರ್-‌ ಚೆನ್ನೈ ಘಟಕ ಪುನರಾರಂಭ

Ford Motor: ಭಾರತಕ್ಕೆ ಮತ್ತೆ ಮರಳಿದ ಫೋರ್ಡ್ ಮೋಟಾರ್-‌ ಚೆನ್ನೈ ಘಟಕ ಪುನರಾರಂಭ

sens-2

BSE ಸೆನ್ಸೆಕ್ಸ್‌ 83,000 ಮತ್ತೊಂದು ಮೈಲುಗಲ್ಲು

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.