Jio; ಕೃತಕ ಬುದ್ಧಿಮತ್ತೆ ಫೋನ್‌ಕಾಲ್ ಸೇವೆ ಘೋಷಣೆ
Team Udayavani, Aug 30, 2024, 6:48 AM IST
ಮುಂಬಯಿ: ಇನ್ನು ಮುಂದೆ, ನೀವು ಯಾರೊಂದಿಗಾದರೂ ಫೋನ್ ಸಂಭಾಷಣೆ ನಡೆಸುವಾಗ ಆ ಕರೆಯನ್ನು ರೆಕಾರ್ಡ್ ಮಾಡುವ, ಲಿಖೀತ ರೂಪದಲ್ಲಿ ಪಡೆಯುವ ಮತ್ತು ಸಂಭಾಷಣೆಯನ್ನು ಮತ್ತೂಂದು ಭಾಷೆಗೆ ಭಾಷಾಂತರಿಸುವ ಸೌಲಭ್ಯವನ್ನು ಪಡೆಯಲಿದ್ದೀರಿ!
ಹೌದು. ರಿಲಯನ್ಸ್ ಇಂಡಸ್ಟ್ರೀಸ್ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಕಂಪೆನಿ ಮುಖ್ಯಸ್ಥ ಮುಕೇಶ್ ಅಂಬಾನಿಯವರು ರಿಲಯನ್ಸ್ ಜಿಯೋ ಗ್ರಾಹಕರಿಗೆ ಇಂಥದ್ದೊಂದು ವಿಶೇಷ ಕೊಡುಗೆ ಘೋಷಿಸಿದ್ದಾರೆ. ರಿಲಯನ್ಸ್ ಜಿಯೋ ಫೋನ್‌ಕಾಲ್ ಎಐ ಎಂಬ ಹೊಸ ಸೇವೆ ಇದಾಗಿದ್ದು, ಇದರ ಮೂಲಕ ಬಳಕೆದಾರರು ಫೋನ್ ಕರೆ ಸಂಭಾಷಣೆಗಳನ್ನು ರೆಕಾರ್ಡ್, ಲಿಪ್ಯಂತರ ಮತ್ತು ಎಲ್ಲ ಭಾಷೆಗಳಲ್ಲಿ ಅನುವಾದ ಮಾಡಬಹುದು. ಅನಂತರ ಅವುಗಳನ್ನುಕ್ಲೌಡ್ ನಲ್ಲಿ ಸೇವ್ ಮಾಡಿಟ್ಟುಕೊಳ್ಳಬಹುದು.
1:1 ಬೋನಸ್ ಷೇರು
ರಿಲಯನ್ಸ್ ಷೇರುದಾರಿಗೂ ಮುಕೇಶ್ ಅಂಬಾನಿ ಸಿಹಿ ಸುದ್ದಿ ನೀಡಿದ್ದಾರೆ. 1:1 ಅನುಪಾತದಲ್ಲಿ ಬೋನಸ್ ಷೇರುಗಳನ್ನು ನೀಡುವುದಾಗಿ ಘೋಷಿಸಿದ್ದಾರೆ. ಈ ಬಗ್ಗೆ ಸೆ.5ರಂದು ನಡೆಯುವ ಆಡಳಿತ ಮಂಡಳಿ ಸಭೆಯಲ್ಲಿ ನಿರ್ಧರಿಸಲಾಗುವುದು ಎಂದಿದ್ದಾರೆ. ಈ ಹಿಂದೆಯೂ ಕಂಪೆನಿ 6 ಬಾರಿ ಬೋನಸ್ ಷೇರ್ ನೀಡಿದ ಇತಿಹಾಸವಿದೆ. ಕಂಪೆನಿಯ ಪ್ರಬಲ ಆರ್ಥಿಕ ಪ್ರದರ್ಶನ ಹಿನ್ನೆಲೆಯಲ್ಲಿ ಷೇರುದಾರರಿಗೆ ಬಹುಮಾನ ರೂಪದಲ್ಲಿ ಬೋನಸ್ ನೀಡಲಾಗುತ್ತಿದೆ ಎಂದಿದ್ದಾರೆ.
ಸೆನ್ಸೆಕ್ಸ್, ನಿಫ್ಟಿ ದಾಖಲೆ ಏರಿಕೆ!
ಅತ್ತ ರಿಲಯನ್ಸ್ ಸಂಸ್ಥೆಯು ತನ್ನ “ಎಐ’ ಕನಸನ್ನು ಬಿತ್ತುತ್ತಲೇ, ಇತ್ತ ಮುಂಬಯಿ ಷೇರುಪೇಟೆಯಲ್ಲಿ ಸಕಾರಾತ್ಮಕ ಸಂಚಲನ ಕಂಡುಬಂದಿದೆ. ಷೇರುಗಳ ಖರೀದಿಯಲ್ಲಿ ಹೂಡಿಕೆದಾರರು ಆಸಕ್ತಿ ವಹಿಸಿದ ಪರಿಣಾಮ, ಸೆನ್ಸೆಕ್ಸ್ ಮತ್ತು ನಿಫ್ಟಿ ಗುರುವಾರ ದಿನಾಂತ್ಯಕ್ಕೆ ಸಾರ್ವಕಾಲಿಕ ಮಟ್ಟಕ್ಕೇರಿವೆ. ಮುಂಬಯಿ ಷೇರುಪೇಟೆ ಸಂವೇದಿ ಸೂಚ್ಯಂಕ 349 ಅಂಕ ಏರಿಕೆಯಾಗಿ, ಸಾರ್ವಕಾಲಿಕ 82,134ರಲ್ಲಿ ವಹಿವಾಟು ಅಂತ್ಯಗೊಳಿಸಿದರೆ, ನಿಫ್ಟಿ 99 ಅಂಕ ಏರಿಕೆಯಾಗಿ, ದಾಖಲೆಯ 25,151ರಲ್ಲಿ ಕೊನೆಗೊಂಡಿದೆ. ಸತತ 11 ದಿನಗಳಿಂದಲೂ ನಿಫ್ಟಿ ಏರಿಕೆಯ ಹಾದಿಯಲ್ಲೇ ಸಾಗಿದ್ದು ವಿಶೇಷ. 2007ರ ಅಕ್ಟೋಬರ್ ಬಳಿತ ಸತತವಾಗಿ ನಿಫ್ಟಿ ದೀರ್ಘಾವಧಿ ಏರಿಕೆಯನ್ನು ಕಂಡಿದ್ದು ಇದೇ ಮೊದಲು ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.