Paralympics ವೈಭವದ ಚಾಲನೆ : ಬಾಡ್ಮಿಂಟನ್, ಆರ್ಚರಿಯಲ್ಲಿ ಗೆಲುವಿನ ಸಿಹಿ
Team Udayavani, Aug 30, 2024, 6:00 AM IST
ಪ್ಯಾರಿಸ್: ಪ್ಯಾರಾಲಿಂಪಿಕ್ಸ್‌ನಲ್ಲಿ ಮೊದಲ ದಿನ ಭಾರತಕ್ಕೆ ಜಯದ ಸಿಹಿ, ಸೋಲಿನ ಕಹಿ ಎರಡೂ ಸಿಕ್ಕಿದೆ. ಪ್ಯಾರಾಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ 8 ಮಂದಿ ಗೆಲುವು ಸಾಧಿಸಿದರೆ, 5 ಮಂದಿ ಸೋಲು ಕಂಡಿದ್ದಾರೆ. 3 ಪಂದ್ಯಗಳಲ್ಲಿ ಭಾರತೀಯರ ವಿರುದ್ಧ ಭಾರತೀಯರೇ ಸ್ಪರ್ಧಿಸಿ ಸೋಲು ಕಂಡಿದ್ದಾರೆ. ಇನ್ನು ಆರ್ಚರಿ ರ್‍ಯಾಂಕಿಂಗ್ ಸುತ್ತಿನಲ್ಲಿ ಉತ್ತಮ ಪ್ರದರ್ಶನ ನೀಡಿದ ಶೀತಲ್ ದೇವಿ ಪ್ರೀಕ್ವಾರ್ಟರ್ ಫೈನಲ್‌ಗೇರಿದ್ದಾರೆ. ಟೇಕ್ವಾಂಡೋ, ಟ್ರಾಕ್ ಸೈಕ್ಲಿಂಗ್‌ನಲ್ಲಿ ಭಾರತೀಯರಿಗೆ ಸೋಲು ಆಗಿದೆ.
ಬ್ಯಾಡ್ಮಿಂಟನ್: ಸುಹಾಸ್, ತುಳಸೀಮತಿ ಸುಕಾಂತ್, ಪಲಕ್ ಗೆಲುವಿನ ಆರಂಭ
ಪ್ಯಾರಾ ಬ್ಯಾಡ್ಮಿಂಟನ್‌ನಲ್ಲಿ ಈ ಬಾರಿ 13 ಮಂದಿ ಆ್ಯತ್ಲೀಟ್‌ಗಳು ಭಾಗಿಯಾಗಿದ್ದು, ಮೊದಲ ದಿನ 8 ಸ್ಪರ್ಧೆಗಳಲ್ಲಿ ಭಾರತ ಗೆದ್ದರೆ, 5 ಸ್ಪರ್ಧೆಗಳಲ್ಲಿ ಸೋಲು ಕಂಡಿದೆ. ಗುರುವಾರ ನಡೆದ ಪ್ಯಾರಾ ಬ್ಯಾಡ್ಮಿಂಟನ್ ಮಿಶ್ರ ಡಬಲ್ಸ್ (ಎಸ್‌ಎಲ್3-ಎಸ್‌ಯು5) ಗ್ರೂಪ್ ಹಂತದ ಸ್ಪರ್ಧೆಯಲ್ಲಿ ನಿತೀಶ್ ಕುಮಾರ್-ತುಳಸೀಮತಿ ಮುರುಗೇಶನ್ ಅವರನ್ನೊಳಗೊಂಡ ಜೋಡಿ, ಕನ್ನಡಿಗ ಸುಹಾಸ್ ಲಲಿನಾಕೆರೆ ಮತ್ತು ಪಾಲಕ್ ಕೊಹ್ಲಿ ಜೋಡಿಯನ್ನು 21-14, 21-17 ಅಂತರದಿಂದ ಸೋಲಿಸಿತು.
ಪುರುಷರ ಸಿಂಗಲ್ಸ್ ಗ್ರೂಪ್ ಎಸ್‌ಎಲ್4 ವಿಭಾಗದಲ್ಲಿ ಮಲೇ ಷ್ಯಾದ ಮೊಹಮ್ಮದ್ ಅಮಿನ್ ಬರ್ಹನುದ್ದೀನ್ ವಿರುದ್ಧ ಸುಕಾಂತ್ ಕದಮ್ ಜಯ ಗಳಿಸಿದ್ದಾರೆ. ಇದೇ ಗುಂಪಿನ ಮತ್ತೂಂದು ಸ್ಪರ್ಧೆಯಲ್ಲಿ, ಇಂಡೋನೇಷ್ಯಾದ ಹಿಕ್‌ಮತ್ ರಾಮ್‌ದನಿ ವಿರುದ್ಧ ಕನ್ನಡಿಗ ಸುಹಾಸ್ ಲಲಿನಾಕೆರೆ ಗೆದ್ದರು. ಇನ್ನೊಂದು ಸ್ಪರ್ಧೆಯಲ್ಲಿ ಬ್ರೆಜಿಲ್‌ನ ರೊಜಾರಿಯೋ ಜೂನಿಯರ್ ವಿರುದ್ಧ ತರುಣ್ ದಿಲ್ಲಾನ್ ಗೆಲುವು ಸಾಧಿಸಿದರು. ಉಳಿದಂತೆ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ತುಳಸೀಮತಿ ಮುರುಗೇಶನ್, ಸುಮತಿ ಶಿವನ್ ನಿತ್ಯಶ್ರೀ ಜಯ ಸಾಧಿಸಿದರು.
ಆರ್ಚರಿ: ಶೀತಲ್ ಪ್ರೀ ಕ್ವಾರ್ಟರ್‌ಗೆ
ಭಾರತದ ಪ್ಯಾರಾ ಆರ್ಚರ್ ಶೀತಲ್ ದೇವಿ ಅವರು ಗುರುವಾರ ನಡೆದ ಆರ್ಚರಿ ರ್‍ಯಾಂಕಿಂಗ್ ಸುತ್ತಿನಲ್ಲಿ 2ನೇ ಸ್ಥಾನ ಪಡೆಯುವ ಮೂಲಕ ನೇರವಾಗಿ ಕ್ವಾರ್ಟರ್‌ಫೈನಲ್‌ಗೆ ಪ್ರವೇ ಶಿಸಿದ್ದಾರೆ. ರ್‍ಯಾಂಕಿಂಗ್ ಸುತ್ತಿನಲ್ಲಿ 703 ಅಂಕ ಪಡೆದುಕೊಂಡ ಶೀತಲ್ ಕೇವಲ 1 ಅಂಕದಿಂದ ವಿಶ್ವದಾಖಲೆ ನಿರ್ಮಾಣ ಮಾಡುವ ಅವಕಾಶ ತಪ್ಪಿಸಿ ಕೊಂಡರು. ಕಾಂಪೌಂಡ್ ವಿಭಾಗದ ಕ್ವಾರ್ಟರ್ ಫೈನಲ್ ಪಂದ್ಯ ಶನಿವಾರ ನಡೆಯಲಿದೆ.
ಟರ್ಕಿಯ ಓನೊjàರ್ ಕ್ಯೂರ್ ಗರ್ಡಿ ಅವರು 704 ಅಂಕ ಗಳಿಸುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದಲ್ಲದೇ ಆರ್ಚರಿ ರ್‍ಯಾಂಕಿಂಗ್ ವಿಭಾಗದಲ್ಲಿ ಮೊದಲ ಸ್ಥಾನ ಪಡೆದುಕೊಂಡರು. ಬ್ರಿಟನ್‌ನ ಪೋಬ್ ಪ್ಯಾಟರ್‌ಸನ್ ಪೈನ್ ಅವರು ಗಳಿಸಿದ್ದ 698 ಅಂಕ ಈ ಹಿಂದಿನ ದಾಖಲೆಯಾಗಿತ್ತು.
ಉಳಿದಂತೆ ಮಹಿಳಾ ವಿಭಾಗದಲ್ಲಿ 682 ಅಂಕ ಸಂಪಾದಿಸಿದ ಸರಿತಾ 9ನೇ ಸ್ಥಾನಿಯಾದರು. ಸರಿತಾ ಪ್ರಿಕ್ವಾರ್ಟರ್ ಫೈನಲ್‌ನಲ್ಲಿ ಮಲೇಷ್ಯಾದ ನೂರ್ ಜನಾತನ್ ಅಬ್ದುಲ್ ಅವರನ್ನು ಎದುರಿಸಲಿದ್ದು ಈ ಪಂದ್ಯ ಶುಕ್ರವಾರ ನಡೆಯಲಿದೆ.
ಟೇಕ್ವಾಂಡೋ, ಸೈಕ್ಲಿಂಗ್
ಪ್ಯಾರಾ ಟೇಕ್ವಾಂಡೋದ 44ರಿಂದ 47 ಕೆಜಿ ವಿಭಾಗದಲ್ಲಿ ಭಾರತದ ಅರುಣಾ ತನ್ವರ್ ಸೋಲನುಭವಿಸಿದರೆ, 3000 ಮೀ. ಪ್ಯಾರಾ ಸೈಕ್ಲಿಂಗ್‌ನಲ್ಲಿ ಜ್ಯೋತಿ ಗಡೇರಿಯಾ 10ನೇ ಸ್ಥಾನಿಯಾಗಿ ಹೊರಬಿದ್ದರು.
ಭಾರತದ ಇಂದಿನ ಸ್ಪರ್ಧೆಗಳು
ಆ್ಯತ್ಲೆಟಿಕ್ಸ್
ಮಹಿಳೆಯರ ಡಿಸ್ಕಸ್ (ಫೈನಲ್): ಕರೀಮ್ ಜ್ಯೋತಿ ದಲಾಲ್, ಸಾಕ್ಷಿ ಕಸಾನ
ಸಮಯ: ಮ. 1.30
ಮಹಿಳೆಯರ 100 ಮೀ. (ಫೈನಲ್): ಪ್ರೀತಿ ಪಾಲ್
ಸಮಯ: ಸ. 4.45
ಬ್ಯಾಡ್ಮಿಂಟನ್
ಮಹಿಳೆಯರ ಸಿಂಗಲ್ಸ್ (ಗ್ರೂಪ್ ಹಂತ): ಮಾನಸಿ ಜೋಶಿ
ಸಮಯ: ಮ. 12.00
ಪುರುಷರ ಸಿಂಗಲ್ಸ್ (ಗ್ರೂಪ್ ಹಂತ): ಮನೋಜ್ ಸರ್ಕಾರ್
ಸಮಯ: ಮ. 1.20, ನಿತೀಶ್ ಕುಮಾರ್, ಸಮಯ: ಮ. 2.00
ಸುಹಾಸ್ ಯತಿರಾಜ್, ಸಮಯ: ಮ. 2.40
ಶೂಟಿಂಗ್
ಮಹಿಳೆಯರ 10 ಮೀ. ಏರ್ ರೈಫಲ್ (ಅರ್ಹತಾ ಸುತ್ತು): ಅವನಿ ಲೇಖರ
ಸಮಯ: ಮ. 12.30
ಪುರುಷರ 10 ಮೀ. ಏರ್ ಪಿಸ್ತೂಲ್: ರುದ್ರಾಂಶ್ ಖಂಡೇಲ್ವಾಲ್, ಮನೀಶ್ ನರ್ವಾಲ್
ಸಮಯ: ಮ. 2.45
ಮಿಶ್ರ 10 ಮೀ. ಏರ್ ರೈಫಲ್ (ಅರ್ಹತಾ ಸುತ್ತು): ಶ್ರೀಹರ್ಷ ದೇವರೆಡ್ಡಿ
ಸಮಯ: ಸ. 5.00
ರೋವಿಂಗ್
ಮಿಶ್ರ ಡಬಲ್ಸ್ ಸ್ಕಲ್ಸ್ (ಹೀಟ್): ಅನಿತಾ-ನಾರಾಯಣ ಕೊಂಗನಪಲ್ಲೆ
ಸಮಯ: ಮ. 3.00
ಟ್ರ್ಯಾಕ್ ಸೈಕ್ಲಿಂಗ್
ಪುರುಷರ ಅರ್ಹತಾ ಸ್ಪರ್ಧೆ: ಅರ್ಷದ್ ಶೈಕ್
ಸಮಯ: ಸ. 4.24
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cooch Behar Trophy: ಸೆಹವಾಗ್ ಪುತ್ರನಿಂದ ದ್ವಿಶತಕ
Pro Kabaddi; ವಿಜಯ್ ಮಲಿಕ್ ಅಮೋಘ ಆಟ: ತೆಲುಗು ಟೈಟಾನ್ಸ್ ಗೆ ಗೆಲುವು
T20 Ranking: ಬರೋಬ್ಬರಿ 69 ಸ್ಥಾನ ಮೇಲಕ್ಕೇರಿದ ಭಾರತೀಯ ಬ್ಯಾಟರ್
BGT 2024: ಮೊದಲ ಪಂದ್ಯಕ್ಕೆ ನಮ್ಮ ಆಡುವ ಬಳಗ ಅಂತಿಮವಾಗಿದೆ ಎಂದ ನಾಯಕ ಬುಮ್ರಾ
BGT 2025: ಶುಕ್ರವಾರದಿಂದ ಟೆಸ್ಟ್ ಸರಣಿ ಆರಂಭ: ಇಲ್ಲಿದೆ ಎಲ್ಲಾ ಪಂದ್ಯಗಳ ವೇಳಾಪಟ್ಟಿ, ಸಮಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.