Bengaluru: ಮನೆಗಳ್ಳ ಸೆರೆ, 1.2 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಜಪ್ತಿ
Team Udayavani, Aug 30, 2024, 12:14 PM IST
![10-bng](https://www.udayavani.com/wp-content/uploads/2024/08/10-bng-2-620x372.jpg)
![10-bng](https://www.udayavani.com/wp-content/uploads/2024/08/10-bng-2-620x372.jpg)
ಬೆಂಗಳೂರು: ಮನೆಯೊಂದರಲ್ಲಿ ಚಿನ್ನಾಭರಣ ಕಳವು ಮಾಡಿದ್ದ ಆರೋಪಿಯನ್ನು ಬಂಧಿಸಿ, 1.20 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ಜಪ್ತಿ ಮಾಡಲಾಗಿದೆ.
ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯ ಸಾಯಿ ರೆಸಿಡೆನ್ಸಿಯ ಕೋಗಿಲು ನಿವಾಸಿ ಅಜಿತ್‌ದಾಸ್ ಬಂಧಿತ ಆರೋಪಿ.
ಅಸ್ಸಾಂ ಮೂಲದ ಅಜಿತ್, ಕೋಗಿಲಿನಲ್ಲಿ ಬಾಡಿಗೆ ಮನೆ ಪಡೆದು ನೆಲೆಸಿದ್ದ. ಮನೆ ಮಾಲಿಕರು ಸಂಬಂಧಿಕರ ಮನೆಗೆ ತೆರಳಿದ್ದ ವೇಳೆ ಬಾಲ್ಕನಿಯಲ್ಲಿರುವ ಸ್ಲೈಡ್ ಡೋರ್ ಒಡೆದು ಒಳ ಪ್ರವೇಶಿಸಿ 20 ಗ್ರಾಂ ಚಿನ್ನಾಭರಣ ಕಳವು ಮಾಡಿದ್ದ. ಬಂಧಿತ ಆರೋಪಿಯಿಂದ 1.20 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.