Bidar; ಪೊಲೀಸರ ಮೇಲೆ ಮಚ್ಚಿನಿಂದ ಹಲ್ಲೆ: ಕಿಡ್ನಾಪ್ ಆರೋಪಿ ಕಾಲಿಗೆ ಗುಂಡೇಟು
Team Udayavani, Aug 30, 2024, 6:42 PM IST
ಬೀದರ್: ಅಪರಹರಣ ಪ್ರಕರಣದ ಆರೋಪಿಯನ್ನು ದಸ್ತಗಿರಿ ಮಾಡಲು ಹೋಗಿದ್ದ ಇಬ್ಬರು ಪೇದೆಗಳ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ ಘಟನೆ ಶುಕ್ರವಾರ(ಆ30) ಭಾಲ್ಕಿ ತಾಲೂಕಿನ ಕುರುಬಖೇಳಗಿ ಗ್ರಾಮದಲ್ಲಿ ನಡೆದಿದ್ದು, ಈ ವೇಳೆ ಆತ್ಮರಕ್ಷಣೆಗಾಗಿ ಪಿಎಸ್‌ಐ ಸರ್ವಿಸ್ ರಿವಾಲ್ವರ್‌ನಿಂದ ಆರೋಪಿಯ ಕಾಲಿಗೆ ಗುಂಡು ಹಾರಿಸಿದ್ದಾರೆ.
ಸಂಗಮೇಶ ಬಿರಾದಾರ ಎಂಬುವನೇ ಅಪರಕರಣ ಕೃತ್ಯ ಎಸಗಿದ್ದಲ್ಲದೇ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿ ಗುಂಡೇಟು ತಿಂದು ಈಗ ಆಸ್ಪತ್ರೆಗೆ ದಾಖಲಾಗಿದ್ದಾನೆ. ಆರೋಪಿಯಿಂದ ಹಲ್ಲೆಗೊಳಗಾದ ಭಾಲ್ಕಿ ಗ್ರಾಮೀಣ ಠಾಣೆಯ ಸಿಬಂದಿಗಳಾದ ರಾಜೇಂದ್ರ ಅವರಿಗೆ ಎದೆ ಮತ್ತು ಗುರುನಾಥ ಅವರ ಕೈ ಮೆಲೆ ಗಾಯಗಳಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಂಗಮೇಶನ ಮೇಲೆ ಜಿಲ್ಲೆ ಸೇರಿ ವಿವಿಧ ಠಾಣೆಗಳಲ್ಲಿ ಒಟ್ಟು 19 ಪ್ರಕರಣಗಳು ದಾಖಲಾಗಿವೆ. ಈ ಗುಂಡಾ ಕಾಯ್ದೆಯಡಿ ಒಂದು ವರ್ಷ ಕಲ್ಬುರ್ಗಿ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸಿದ್ದಾನೆ.
ಘಟನೆ ಹಿನ್ನಲೆ
ಭಾಲ್ಕಿ ತಾಲೂಕಿನ ರುದನೂರ್ ಬಳಿ ಬೈಕ್ ಮೇಲೆ ತೆರಳುತ್ತಿದ್ದ ಕಣಜಿ ಗ್ರಾಮದ ಪ್ರಕಾಶ ಸ್ವಾಮಿ ಎಂಬುವನ್ನು ಕಾರಿನಲ್ಲಿ ಬಂದ ಐದಾರು ಜನರು ಅಡ್ಡಗಟ್ಟಿ ಅಪಹರಿಸಿದ್ದಾರೆ. ಆಡು ಕಾಯುತ್ತಿದ್ದ ವ್ಯಕ್ತಿಯೊಬ್ಬರ ಸುಳಿವಿನ ಮೇರೆಗೆ ಪ್ರಕಾಶ ಅವರ ಮಗ ನಾಗೇಶ್ ಸ್ವಾಮಿ ಅವರು ಧನ್ನೂರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಎಸ್‌ಪಿ ಪ್ರದೀಪ್ ಗುಂಟಿ ಅವರು ಭಾಲ್ಕಿ ಸಿಪಿಐ ಜಿಎಸ್ ಬಿರಾದಾರ ಮತ್ತು ಪಿಎಸ್‌ಐ ಅಶೋಕ ಪಾಟೀಲ ನೇತೃತ್ವದಲ್ಲಿ ತಂಡವನ್ನು ರಚಿಸಿದ್ದರು.
ಅಪಹರಣ ಕೃತ್ಯ ಎಸಗಿದ ಆರೋಪಿತರು ಮಹಾರಾಷ್ಟ್ರದ ಲಾತೂರನಲ್ಲಿ ಇರುವುದನ್ನು ಖಚಿತಪಡಿಸಿಕೊಂಡ ಪೊಲೀಸರ ವಿಶೇಷ ತಂಡ, ಅಲ್ಲಿಗೆ ತೆರಳಿದೆ. ನಂತರ ಆರೋಪಿತರು ನಿಜಾಮಬಾದ್, ಉಸ್ಮಾರಬಾದ್ ಕಡೆ ಹೋಗಿದ್ದು, ಅವರನ್ನು ತಂಡವೂ ಹಿಂಬಾಲಿಸಿದೆ. ಪೊಲೀಸರು ತಮ್ಮನ್ನು ಬೆನ್ನತ್ತಿರುವ ಬಗ್ಗೆ ಗೊತ್ತಾಗುತ್ತಿದ್ದಂತೆ ಅಪರಹಣಗೊಂಡಿದ್ದ ಪ್ರಕಾಶ ಸ್ವಾಮಿಯನ್ನು ಉಸ್ಮಾನಬಾದ್‌ನಲ್ಲಿ ಬಿಟ್ಟು ಅಲ್ಲಿಂದ ಕಾಲ್ಕಿತ್ತಿದ್ದರು. ಆದರೆ, ಕೊನೆಗೆ ಅಪಹರಿಸಿದ್ದ ಸಂಗಮೇಶ ಗುಂಡಪ್ಪ ಮತ್ತು ವಿಜಯ ಎಂಬುವರನ್ನು ದಸ್ತಗಿರಿ ಮಾಡಿದ್ದಾರೆ.
ಕಿಡಿಗೇಡಿಗಳನ್ನು ಕರೆತರುವಾಗ ಭಾಲ್ಕಿಯ ಕರಂಜಿ ಬಳಿ ತನಗೆ ಮೂತ್ರ ವಿಸರ್ಜನೆ ಹೋಗಬೇಕಿದೆ ಎಂದು ಸಂಗಮೇಶ ಹೇಳಿದಾಗ ಪೊಲೀಸರು ವಾಹನ ನಿಲ್ಲಿಸಿದ್ದಾರೆ. ಈ ವೇಳೆ ಪಿಎಸ್‌ಐ ಅವರನ್ನು ತಳ್ಳಿ ಓಡಿ ಹೋಗಿದ್ದಾನೆ. ನಂತರ ಮೊಬೈಲ್ ಲೋಕೇಶನ್ ಆಧಾರದಲ್ಲಿ ಸಂಗಮೇಶ ಸ್ವಗ್ರಾಮ ಕುರುಬಖೇಳಗಿಯಲ್ಲಿ ಇರುವ ಕುರಿತು ಮಾಹಿತಿ ಪತ್ತೆ ಹಚ್ಚಿ, ಬಂಧಿಸಲು ತೆರಳಿದಾಗ ಇಬ್ಬರು ಪೇದೆಗಳ ಮೇಲೆ ಹಲ್ಲೆ ಮಾಡಿದ್ದಾನೆ. ಈ ವೇಳೆ ಪಿಎಸ್‌ಐ ಅಶೋಕ ಪಾಟೀಲ, ಎರಡು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ, ಸರೆಂಡರ್ ಆಗಲು ಸೂಚಿಸಿದ್ದಾರೆ. ಆತ ಕೇಳದಿದ್ದಾಗ ಪಿಎಸ್‌ಐ ಆರೋಪಿಯ ಕಾಲಿಗೆ ಎರಡು ಗುಂಡು ಹಾರಿಸಿದ್ದು, ಒಂದು ಗುಂಡು ಬಲಗಾಲಿಗೆ ತಗುಲಿದೆ. ಆರೋಪಿಯ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ವಕ್ಫ್ ನೋಟಿಸ್‌ಗೆ ಬಿಜೆಪಿ ಆಕ್ರೋಶ; ರಾಜ್ಯಾದ್ಯಂತ ಮುಖಂಡರು, ಕಾರ್ಯಕರ್ತರ ಪ್ರತಿಭಟನೆ
Waqf Notice: ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅಹೋರಾತ್ರಿ ಧರಣಿ
By Poll: ಕ್ಷೇತ್ರದಲ್ಲಿ 5ಲಕ್ಷಕ್ಕೂ ಹೆಚ್ಚು ಮನೆಗಳ ಕಟ್ಟಿಸಿರುವೆ, ದಾಖಲೆ ನೋಡಲಿ: ಬೊಮ್ಮಾಯಿ
By Election: ಬೊಮ್ಮಾಯಿ 4 ಬಾರಿ ಗೆದ್ರೂ ಕ್ಷೇತ್ರದ ಬಡವರಿಗೆ ಒಂದೂ ಮನೆ ಕಟ್ಟಿಸಿಲ್ಲ: ಸಿಎಂ
Hassan: ಹಾಸನಾಂಬೆ ದೇವಿಗೆ ಈ ಬಾರಿ ದಾಖಲೆ ಪ್ರಮಾಣದಲ್ಲಿ ಹರಿದು ಬಂದ ಆದಾಯ!
MUST WATCH
ಹೊಸ ಸೇರ್ಪಡೆ
Power cut shock:ಅದಾನಿ ಕಂಪೆನಿಗೆ ಬಾಂಗ್ಲಾ ಪಾವತಿ ಶುರು
WhatsApp ನಲ್ಲಿ ಧರ್ಮ ಆಧರಿತ ಗುಂಪು: ಕೇರಳ ಐಎಎಸ್ ಅಧಿಕಾರಿ ದೂರು
Elephants; ಮಧ್ಯಪ್ರದೇಶ ಬಳಿಕ ಒಡಿಶಾದಲ್ಲಿ 7 ತಿಂಗಳಿನಲ್ಲಿ 50 ಆನೆಗಳ ಸಾವು
ವಕ್ಫ್ ನೋಟಿಸ್‌ಗೆ ಬಿಜೆಪಿ ಆಕ್ರೋಶ; ರಾಜ್ಯಾದ್ಯಂತ ಮುಖಂಡರು, ಕಾರ್ಯಕರ್ತರ ಪ್ರತಿಭಟನೆ
Waqf Notice: ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅಹೋರಾತ್ರಿ ಧರಣಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.