MUDAದಲ್ಲಿ ನಡೆದ ಅಕ್ರಮ ಸಿಬಿಐ ತನಿಖೆಗೆ ಒಪ್ಪಿಸಿ: ಎಂಎಲ್‌ಸಿ ರವಿಕುಮಾರ್
Team Udayavani, Aug 31, 2024, 3:32 AM IST
ಬೆಂಗಳೂರು: ಸಿದ್ದರಾಮಯ್ಯನವರೇ ಸೈಟ್‌ಗಿಂತ ಸಂವಿಧಾನ ದೊಡ್ಡದು. ಅಧಿಕಾರ ದುರ್ಬಳಕೆ ಮಾಡಿಕೊಂಡು ಸ್ವಜನಪಕ್ಷಪಾತ ಎಸಗಿರುವ ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಬೇಕು. ಮುಡಾದಲ್ಲಿ ನಡೆದ ಅಕ್ರಮವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ಪರಿಷತ್ ಸದಸ್ಯ ಎನ್. ರವಿಕುಮಾರ್ ಆಗ್ರಹಿಸಿದ್ದಾರೆ.
ಹಗರಣಕ್ಕೆ ಸಂಬಂಧಪಟ್ಟಂತೆ ಆಡಿಯೋ ದಾಖಲೆ ಬಿಡುಗಡೆ ಮಾಡಿ ಮಾತನಾಡಿ, 2020ರಲ್ಲಿ 50:50 ಅನುಪಾತದಲ್ಲಿ ನಿವೇಶನ ಕೊಡುವ ಬಗ್ಗೆ ಮುಡಾದಲ್ಲಿ ವಿಷಯ ಮಂಡಿಸಲಾಗಿತ್ತು. ವಿಸ್ತೃತ ಚರ್ಚೆ ನಿರ್ಣಯ ಕೈಗೊಂಡಿಲ್ಲ. ಆ ಸಭೆಯಲ್ಲಿ ಅಧ್ಯಕ್ಷ ರಾಜೀವ್, ಮರಿತಿಬ್ಬೇಗೌಡ, ಜಿ.ಟಿ. ದೇವೇಗೌಡ, ತನ್ವೀರ್ ಸೇಠ್ , ಡಾ| ಯತೀಂದ್ರ, ಆಯುಕ್ತ ನಟೇಶ್ ಮೊದಲಾದವರು ಇದ್ದರು. ಅವರು ಆಡಿದ ಮಾತುಗಳು ಇಲ್ಲಿವೆ. ನಿರ್ಣಯ ಆಗಿದೆ ಎಂದು ರಾಜೀವ್ ಮತ್ತು ಆಯುಕ್ತರು ಹೇಳಿದ್ದರಿಂದ ಸಿದ್ದರಾಮಯ್ಯ ಪತ್ನಿಗೆ 14 ಸೈಟ್ ಕೊಡಲಾಗಿದೆ ಎಂದರು.
ಗ್ಯಾರಂಟಿಗೆ ಕೌಂಟರ್ ಕೊಡುವಲ್ಲಿ ವಿಫಲ, ಬಿಜೆಪಿಗೆ ಹಿನ್ನಡೆ: ಎಂಟಿಬಿ
ಹೊಸಕೋಟೆ: ಬಿಜೆಪಿ ಕಾರ್ಯಕರ್ತರು ಸರಿಯಾಗಿದ್ದಾರೆ. ಆದರೆ ನಾವು ಮಾಡಿದ ತಪ್ಪುಗಳಿಂದ ಮತ್ತು ಕಾಂಗ್ರೆಸ್‌ನ ಗ್ಯಾರಂಟಿ ಆಶ್ವಾಸನೆಗೆ ಪಕ್ಷದ ರಾಜ್ಯ ನಾಯಕರು ಸರಿಯಾಗಿ ಕೌಂಟರ್ ಮಾಡುವಲ್ಲಿ ಎಡವಿದ್ದರಿಂದ ವಿಧಾನಸಭೆ ಚುನಾವಣೆಯಲ್ಲಿ ಸೋಲಬೇಕಾಯಿತು ಎಂದು ಮಾಜಿ ಸಚಿವ, ಹಾಲಿ ವಿಧಾನ ಪರಿಷತ್ ಸದಸ್ಯ ಎಂ.ಟಿ.ಬಿ. ನಾಗರಾಜ್ ಹೇಳಿದರು.
ಹೊಸಕೋಟೆ ನಗರದ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಸದಸ್ಯತಾ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರ ಜನಪ್ರಿಯತೆ ಕುಂದಿಲ್ಲ. ಕುಂದಿಸಿದ್ದು ಮಾತ್ರ ಪಕ್ಷದ ಮುಖಂಡರು. ಲೋಕಸಭೆ ಚುನಾವಣೆಯಲ್ಲಿ ಕೆಲವು ತಪ್ಪುಗಳಿಂದಾಗಿ ಪಕ್ಷಕ್ಕೆ ಹಿನ್ನಡೆಯಾಗಿದೆ ಎಂದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.