![1-congress](https://www.udayavani.com/wp-content/uploads/2025/02/1-congress-415x299.jpg)
![1-congress](https://www.udayavani.com/wp-content/uploads/2025/02/1-congress-415x299.jpg)
Team Udayavani, Aug 31, 2024, 10:27 AM IST
ಹೊಸನಗರ: ಸಾಲಬಾಧೆಗೆ ತುತ್ತಾಗಿ ತಾಲೂಕಿನ ಮುಂಡಳ್ಳಿ ಸಮೀಪದ ನರ್ತಿಗೆ ನಿವಾಸಿ ರೈತನೋರ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಆ.30ರ ಶುಕ್ರವಾರ ನಡೆದಿದೆ.
ನರ್ತಿಗೆ ನಿವಾಸಿ ತಿಮ್ಮಪ್ಪ ಎನ್.ಟಿ (52) ಮೃತಪಟ್ಟ ರೈತ.
ರೈತ ತಿಮ್ಮಪ್ಪ ಬಾಗಾಯ್ತು ಜಮೀನಿನಲ್ಲಿ ಕೆಲಸ ಮಾಡಲು ತೆರಳಿದ್ದು ಅಲ್ಲಿ ಕೀಟನಾಶಕ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಈತ ವಾಂತಿ ಮಾಡಿಕೊಳ್ಳುತ್ತಿದ್ದಾಗ ಮನೆಯವರು ವಿಚಾರಿಸಲು ಮುಂದಾದಾಗ ವಿಷದ ವಾಸನೆ ಬಂದಿದೆ. ಕೂಡಲೇ ಆತನಿಗೆ ಚಿಕಿತ್ಸೆ ಕೊಡಿಸಲು ಮುಂದಾದರೂ ಯಾವುದೇ ಪ್ರಯೋಜನವಾಗದೆ ಮೃತಪಟ್ಟಿದ್ದಾನೆ.
ರೂ. 6.5 ಲಕ್ಷ ಸಾಲ:
ಮೃತ ರೈತ ತಿಮ್ಮಪ್ಪ 1.25 ಎಕರೆ ತರಿ ಭೂಮಿ, 2 ಎಕರೆ ಬಗರಹುಕುಂ ಜಮೀನಿನಲ್ಲಿ ಬಾಗಾಯ್ತು ಮಾಡಿಕೊಂಡಿದ್ದ. ಕೃಷಿಗಾಗಿ ಧರ್ಮಸ್ಥಳ ಸಂಘ, ನಗರ ನೀಲಕಂಠೇಶ್ವರ ಸಹಕಾರ ಬ್ಯಾಂಕ್, ಜಯನಗರ ಉಜ್ಜೀವನ್ ಫೈನಾನ್ಸ್, ರಿಪ್ಪನ್ ಪೇಟೆ ಚೈತನ್ಯ ಗ್ರಾಮೀಣ ಬ್ಯಾಂಕ್, ಮೂಕಾಂಬಿಕ ಸ್ವಸಹಾಯ ಸಂಘ ಸೇರಿ, ತನ್ನ ಹಾಗೂ ಪತ್ನಿ ಹೆಸರಲ್ಲಿ ರೂ. 6.5 ಲಕ್ಷ ಸಾಲ ಮಾಡಿಕೊಂಡಿದ್ದ.
ಕೃಷಿಯಲ್ಲಿ ಹೆಚ್ಚಿನ ಆದಾಯ ಬಾರದ ಕಾರಣ, ಸಾಲಬಾಧೆಗೆ ತುತ್ತಾಗಿದ್ದು ಕೊನೆಗೆ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಮೃತ ತಿಮ್ಮಪ್ಪ ಪುತ್ರ ಅಮಿತ್ ಎನ್.ಟಿ ದೂರು ನೀಡಿದ್ದು ನಗರ ಪೊಲೀಸ್ ಠಾಣೆಯಲ್ಲಿ ಪಿಎಸ್ಐ ಶಿವಾನಂದ ಕೋಳಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Thirthahalli: ಖಾಸಗಿ ಬಾರ್ ಕ್ಯಾಶಿಯರ್ ಬೈಕ್ ಅಪಘಾತದಲ್ಲಿ ನಿಧನ!
Shivamogga: ಹೆರಿಗೆ ಬಳಿಕ ಆರೋಗ್ಯದಲ್ಲಿ ಏರುಪೇರು; ಆಸ್ಪತ್ರೆಯಲ್ಲಿ ಬಾಣಂತಿ ಸಾವು
Kuppalli: ಅದ್ದೂರಿ ಮಂತ್ರ ಮಾಂಗಲ್ಯ; ಕುವೆಂಪು ಪ್ರತಿಷ್ಠಾನ ಸಮಕಾರ್ಯದರ್ಶಿ ರಾಜೀನಾಮೆ ?
Shimoga: ಅಧಿಕಾರಿ ವಿರುದ್ದ ದರ್ಪ ತೋರಿದ ಶಾಸಕರ ಪುತ್ರನ ವಿರುದ್ದ ನಿಖಿಲ್ ಗರಂ
ಈಡಿಗರು ಸತ್ತಿಲ್ಲ, ಮಹಿಳಾ ಅಧಿಕಾರಿ ಹೆದರಬೇಕಿಲ್ಲ: ಪ್ರಣವಾನಂದ ಶ್ರೀ
You seem to have an Ad Blocker on.
To continue reading, please turn it off or whitelist Udayavani.