India Under 19: ಆಸೀಸ್ ವಿರುದ್ದದ ಸರಣಿಗೆ ದ್ರಾವಿಡ್ ಪುತ್ರ ಸಮಿತ್ ಆಯ್ಕೆ
Team Udayavani, Aug 31, 2024, 1:27 PM IST
ಮುಂಬೈ: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಭಾರತ ಅಂಡರ್ 19 ಮತ್ತು ಆಸ್ಟ್ರೇಲಿಯಾ ಅಂಡರ್ 19 ನಡುವಿನ ಮುಂಬರುವ ಸರಣಿಗೆ ಶನಿವಾರ (ಆಗಸ್ಟ್ 31) ತಂಡ ಪ್ರಕಟಿಸಿದೆ. ಭಾರತದ ಲೆಜೆಂಡರಿ ಕ್ರಿಕೆಟಿಗ ಮತ್ತು ಮಾಜಿ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರ ಪುತ್ರ ಸಮಿತ್ ದ್ರಾವಿಡ್ ಅವರು ಟೆಸ್ಟ್ ಮತ್ತು ಸೀಮಿತ ಓವರ್ ಮಾದರಿಯ ಎರಡೂ ತಂಡಗಳಲ್ಲಿಯೂ ಸ್ಥಾನ ಪಡೆದಿದ್ದಾರೆ.
18 ವರ್ಷ ಪ್ರಾಯದ ಸಮಿತ್ ದ್ರಾವಿಡ್ ಸದ್ಯ ನಡೆಯುತ್ತಿರುವ ಮಹಾರಾಜ ಟ್ರೋಫಿ ಕೂಟದಲ್ಲಿ ಆಡಿದ್ದಾರೆ. ಮೈಸೂರು ವಾರಿಯರ್ಸ್ ಪರವಾಗಿ ಕಣಕ್ಕಿಳಿದಿದ್ದ ಸಮಿತ್ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. ಮಹಾರಾಜ ಟ್ರೋಫಿ 2024ರಲ್ಲಿ ಏಳು ಪಂದ್ಯವಾಡಿರುವ ಸಮಿತ್, 113ರ ಸ್ಟ್ರೈಕ್ ರೇಟ್ ನಲ್ಲಿ 11.71ರ ಸರಾಸರಿಯಲ್ಲಿ ಕೇವಲ 82 ರನ್ ಮಾತ್ರ ಕಲೆ ಹಾಕಿದ್ದಾರೆ.
ಉತ್ತರ ಪ್ರದೇಶದ ಮೊಹಮ್ಮದ್ ಅಮಾನ್ ಮುಂಬರುವ ಸರಣಿಯಲ್ಲಿ ಏಕದಿನ ತಂಡವನ್ನು ಮುನ್ನಡೆಸಲಿದ್ದು, ನಾಲ್ಕು ದಿನಗಳ ಪಂದ್ಯಗಳಲ್ಲಿ ಸೋಹಮ್ ಪಟವರ್ಧನ್ ತಂಡವನ್ನು ಮುನ್ನಡೆಸಲಿದ್ದಾರೆ.
ಇವರ ಜೊತೆಗೆ ಕರ್ನಾಟಕದ ಕಾರ್ತಿಕೇಯ ಕೆಪಿ, ಸಮರ್ಥ್ ಎನ್, ಹಾರ್ದಿಕ್ ರಾಜ್ ಅವರು ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಹಾರ್ದಿಕ್ ರಾಜ್ ಅವರು ಏಕದಿನ ತಂಡಕ್ಕೆ ಮಾತ್ರ ಆಯ್ಕೆಯಾಗಿದ್ದಾರೆ.
ಭಾರತ U-19 ತಂಡವು ಸೆಪ್ಟೆಂಬರ್ 21, 23 ಮತ್ತು 26 ರಂದು ಪುದುಚೇರಿಯಲ್ಲಿ ಮೂರು 50-ಓವರ್‌ಗಳ ಪಂದ್ಯಗಳಲ್ಲಿ ಆಸ್ಟ್ರೇಲಿಯಾ U-19 ಅನ್ನು ಎದುರಿಸಲಿದೆ. ನಂತರ ಚೆನ್ನೈನಲ್ಲಿ ಎರಡು ನಾಲ್ಕು ದಿನಗಳ ಪಂದ್ಯಗಳು ಸೆಪ್ಟೆಂಬರ್ 30 ರಿಂದ ಪ್ರಾರಂಭವಾಗಲಿದೆ.
ಏಕದಿನ ಸರಣಿಗಾಗಿ ಭಾರತ U-19 ತಂಡ: ರುದ್ರ ಪಟೇಲ್ (ಉ.ನಾ) (GCA), ಸಾಹಿಲ್ ಪರಾಖ್ (MAHCA), ಕಾರ್ತಿಕೇಯ ಕೆಪಿ (KSCA), ಮೊಹಮ್ಮದ್ ಅಮಾನ್ (ನಾ) (UPCA), ಕಿರಣ್ ಚೋರ್ಮಲೆ (MAHCA), ಅಭಿಗ್ಯಾನ್ ಕುಂದು (ವಿ.ಕೀ) (MCA), ಹರ್ವಂಶ್ ಸಿಂಗ್ ಪಂಗಾಲಿಯಾ (ವಿ.ಕೀ) (SCA), ಸಮಿತ್ ದ್ರಾವಿಡ್ (KSCA), ಯುಧಾಜಿತ್ ಗುಹಾ (CAB), ಸಮರ್ಥ್ ಎನ್ (KSCA), ನಿಖಿಲ್ ಕುಮಾರ್ (UTCA), ಚೇತನ್ ಶರ್ಮಾ (RCA), ಹಾರ್ದಿಕ್ ರಾಜ್ (KSCA), ರೋಹಿತ್ ರಾಜಾವತ್ (MPCA), ಮೊಹಮ್ಮದ್ ಇನಾನ್ (KCA)
ನಾಲ್ಕು ದಿನಗಳ ಸರಣಿಗಾಗಿ ಭಾರತ U-19 ತಂಡ: ವೈಭವ್ ಸೂರ್ಯವಂಶಿ (bihar CA), ನಿತ್ಯ ಪಾಂಡ್ಯ (BCA), ವಿಹಾನ್ ಮಲ್ಹೋತ್ರಾ (ಉ.ನಾ) (PCA), ಸೋಹಮ್ ಪಟವರ್ಧನ್ (ನಾ) (MPCA), ಕಾರ್ತಿಕೇಯ ಕೆಪಿ (KSCA), ಸಮಿತ್ ದ್ರಾವಿಡ್ (KSCA), ಅಭಿಗ್ಯಾನ್ ಕುಂದು (ವಿ.ಕೀ) (MCA), ಹರ್ವಂಶ್ ಸಿಂಗ್ ಪಂಗಾಲಿಯಾ (ವಿ.ಕೀ) (SCA), ಚೇತನ್ ಶರ್ಮಾ (RCA), ಸಮರ್ಥ್ ಎನ್ (KSCA), ಆದಿತ್ಯ ರಾವತ್ (CAU), ನಿಖಿಲ್ ಕುಮಾರ್ (UTCA), ಅನ್ಮೋಲ್ಜೀತ್ ಸಿಂಗ್ (ಪಿಸಿಎ), ಆದಿತ್ಯ ಸಿಂಗ್ (ಯುಪಿಸಿಎ), ಮೊಹಮ್ಮದ್ ಇನಾನ್ (ಕೆಸಿಎ)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.