Mother: ಅಮ್ಮನ ವರ್ಣನೆಯಲ್ಲಿ ಸೋಲುವ ಲೇಖನಿಗಳೇ ಹೆಚ್ಚು

Team Udayavani, Aug 31, 2024, 3:23 PM IST

17-uv-fusion

ಕೆಲವರನ್ನು ಕೆಲವನ್ನು ವರ್ಣಿಸುವಾಗ ಸರಳ ವರ್ಣನೆ ಕೊಟ್ಟು ಬಿಟ್ಟರೆ ತೃಪ್ತಿ ಎನಿಸುವುದಿಲ್ಲ. ಅಂತಹದೇ ಸಾಲಿಗೆ ಸೇರುವ ಪದ ಅದು “ಅಮ್ಮ”.ಗರ್ಭದುಂಡೆಯ ಒಳಗೂ ಅದರಾಚೆಗೂ ಜತೆ ನಿಂತು ಕಾಯುವ ಆ ಜೀವದ ವರ್ಣನೆಯಲಿ ಸೋಲುವ ಲೇಖನಿಗಳೇ ಹೆಚ್ಚು. ಬರೆಯುವ ನನ್ನ ಲೇಖನಿ ಅದೇ ರೀತಿ ಸೋಲುವ ಮುನ್ನ ನನ್ನಮ್ಮನ ಕುರಿತು ಗೀಚಿದ್ದು ಹೀಗೆ…

ಅಮ್ಮ ಎಂದಾಗ ಮೊದಲು ನೆನಪಾಗುವುದೇ ಅವಳ ಸ್ವಾಭಿಮಾನದ ಬದುಕು. ಯಾರಾ ಹಂಗು ಇಲ್ಲದೆ ಸ್ವತಂತ್ರವಾಗಿ ಬದುಕಬೇಕೆನ್ನುವ ಅವಳ ಛಲ.ಇಂದಿಗೂ ಕಣ್ಣಿಗೆ ಕಟ್ಟಿದಂತಿದೆ ಆ ಛಲಗಾತಿ,ತುಳಿಯುವ ಜನರೆದುರು ತಲೆಎತ್ತಿ ಬದುಕಿದ ಬಾಲ್ಯದ ಅಸ್ಪಷ್ಟ ಚಿತ್ರಣಗಳು. ಬಡತನದ ಬೇಗುದಿ ಅವಳ ಬಾಲ್ಯದ ಆಸೆಗಳನು ಚಿವುಟಿತು. ಶಿಕ್ಷಣದ ಕನಸು ಅದೇ ಪರಿಯಲಿ ಕಮರಿತು.ಬಡತನದ ಆರ್ಭಟಕೆ ಆಕೆಯ ನೂರು ಕನಸುಗಳು ಸತ್ತ ಸದ್ದು, ಜಗಕೆ ಮಾತ್ರ ನಿಶಬ್ಧ.

ಹೋರಾಟದಿಂದಲೇ ಶುರುವಾದ ಅವಳ ಬದುಕು ಇಂದಿಗೂ ಜಗದ ರಣರಂಗದಲಿ ಹೋರಾಟದ ಕಿಚ್ಚ ಪಿಡಿದು ಮುನ್ನುಗ್ಗುತ್ತಲೇ ಇದೆ.

ದುಡಿಯುವ ತಂದೆಗೆ ಜೊತೆಯಾಗಿ ದುಡಿದು ಕುಟುಂಬದ ಬಂಡಿ ಎಳೆಯುತಿರುವ ಅವಳ ಆಸೆ-ಕನಸುಗಳ ಬಗೆಗೆ ಕೇಳಿದಾಗ ಮಿಡಿಯುವುದು “ನೀನು ಮತ್ತು ನಿನ್ನಕ್ಕಒಳ್ಳೆಯ ಹಾದಿಗೆ ಹೋದರೆ ಸಾಕು ಮಗ” ಅನ್ನುವ ಆಕೆಯ ಮಾತೃ ಹೃದಯ. ಮಕ್ಕಳಿಗೆ ಗದರುವುದು, ಹೊಡೆಯುವುದು ತಾಯಂದಿರ ಸಹಜ ಗುಣ. ನನ್ನ ತಾಯಿಯು ಕೂಡ ಆ ಗುಣದಿಂದ ಹೊರತಾಗಿಲ್ಲ. ಅವಳು ನನಗೆ ಹೊಡೆದ ಸನ್ನಿವೇಶಗಳು ಬಹಳ ವಿರಳ. ಆದರೆ ಅವಳ ಕೆಲವೇ ಹೊಡೆತಗಳಿಂದ ಕಲಿತ ಪಾಠಗಳು ಮಾತ್ರ ಬಹಳ.

ಕೋಪದಿಂದ ಗದರಿ ನಮ್ಮಿಬ್ಬರ ನಡುವೆ ಸಣ್ಣದೊಂದು ಜಗಳವಾದ ಬಳಿಕ ಆಕೆಯೇ ಮರಳಿ ಬಂದು ನನ್ನನ್ನು ಮಾತನಾಡಿಸುವ ಆ ಗುಣವೇ ನನಗವಳಲ್ಲಿ ಅಚ್ಚುಮೆಚ್ಚು. ಸಾಮಾನ್ಯ ವಾಗಿ ತಾಯಂದಿರು ಮಕ್ಕಳ ಶಿಕ್ಷಣ ವಿಚಾರವಾಗಿ ಅವರ ಮೇಲೆ ಒತ್ತಡ ಹೇರುವುದು ನಿತ್ಯಕಾಣುವ ದೃಶ್ಯ. ಆದರೆ ಆ ವಿಚಾರದಲ್ಲಿ ನಾನು ಮಾತ್ರ ಪುಣ್ಯವಂತ, ಇಂದಿಗೂ ನನ್ನ ತಾಯಿ ಓದಿನ ವಿಚಾರದಲ್ಲಿ ಒತ್ತಡ ಹೇರಿಲ್ಲ ಮತ್ತು ಅಂಕಗಳು ಕಡಿಮೆ ಯಾದಾಗ ಗದರಿದ ಪ್ರಸಂಗವೂ ಎನಗೆ ನೆನಪಿಲ್ಲ.

ಆಕೆಯ ಅಡುಗೆಯ ಉಪ್ಪು ಹುಳಿ ಖಾರ ನೋಡುವ ಕೆಲಸ ಏನಿದ್ದರೂ ಸದಾ ನನ್ನದೇ. ನಾನು ಚೆನ್ನಾಗಿದೆ ಅಸ್ತು ಅಂದಮೇಲೆಯೇ ಆಕೆಯ ಮನಸಿಗೂ ತೃಪ್ತಿಯಾಗುವುದು. ಆಕೆಯ ಅಡುಗೆಗೆ,ಆಕೆ ತಲೆನೋವು ಎಂದಾಗ ಮಾಡಿ ಕೊಡುವ ಆ ವಿಶೇಷ ಚಹಾದ ಕಂಪಿಗೆ ನಾನೆಂದಿಗೂ ಅಭಿಮಾನಿಯೇ ಸರಿ.

ಮಾತೃಭಾಷೆಯನ್ನಷ್ಟೇ ಸ್ಪಷ್ಟವಾಗಿ ಮಾತನಾಡಬಲ್ಲ, ಕೇವಲ ಕನ್ನಡದಲ್ಲಿ ಸಹಿಯಷ್ಟೇ ಮಾಡಲು ಬರುವ, ಶಾಲೆಯ ಗಾಳಿಯು ಸೋಕದ ಅವಳು ನನ್ನ ಪಾಲಿಗೆ ಮಾತ್ರ ಅಸಾಮಾನ್ಯ ಶ್ರಮಜೀವಿ, ಜಗತ್ತಿನ ಶ್ರೇಷ್ಠ ತಾಯಿ, ಕುಟುಂಬ ನಿರ್ವಹಣೆಯಲ್ಲಿ ಉನ್ನತ ಪಧವೀದರೆ, ಅಡುಗೆಯಲ್ಲಿ ಅಸಾಧರಣ ಪ್ರತಿಭೆ, ಕಣ್ಣು ನೋಡಿಯೇ ನನ್ನ ಮನಸನರಿಯುವ ಮನೋವಿಜ್ಞಾನಿ, ಬಾಯಿಲೆಕ್ಕದಲ್ಲಿ ಕೂಡಿಸು, ಕಳೆ, ಗುಣಿಸು, ಭಾಗಿಸನ್ನು ಅರೆದು ಕುಡಿದಿರುವ ಗಣಿತ ಪಂಡಿತೆ.. ಹೀಗೆ ಹೇಳುತಾ ಹೋದರೆ ಆಕೆಯ ಗುಣಗಾನ ಅನಂತ.

ಕಷ್ಟಗಳ ಬೇಗೆಯಲ್ಲೇ ಬೆಂದ ಮತ್ತು ಬೆಯುತ್ತಿರುವ ಅವಳನ್ನು ಸುಖದ ಸುಪತ್ತಿಗೆಯಲ್ಲಿ ತೇಲಿಸುವುದೇ ನನ್ನ ಬಹುದೊಡ್ಡ ಕನಸು. ಅವರವರ ತಾಯಿಯ ವರ್ಣನೆಗೆ ಕೂತಾಗ ಪ್ರತಿಯೊಬ್ಬರು ಅಕ್ಷರ ಕೊರತೆಯ ತೊಂದರೆ ಎದುರಿಸುವ ಕವಿಗಳೇ. ಆಕೆಯ ವರ್ಣನೆ ನಿರಂತರ ಮತ್ತು ಅನಂತ ಅದಕೆ ಕೊನೆಯಿಲ್ಲ.

 ಚೇತನ್‌ ಕಾಶಿಪಟ್ನ

ಎಸ್‌.ಡಿ.ಎಂ. ಕಾಲೇಜು

ಉಜಿರೆ.

ಟಾಪ್ ನ್ಯೂಸ್

Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು

Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು

Rohit Sharma; ಮುಗಿಯಿತಾ ರೋಹಿತ್‌ ಕ್ರಿಕೆಟ್‌ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?

Rohit Sharma; ಮುಗಿಯಿತಾ ರೋಹಿತ್‌ ಕ್ರಿಕೆಟ್‌ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?

Channapatna; ನ್ಯೂಇಯರ್‌ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು

Channapatna; ನ್ಯೂಇಯರ್‌ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು

Sydney Test; ಬದಲಾದ ನಾಯಕ; ಮುಂದುವರಿದ ಬ್ಯಾಟಿಂಗ್‌ ಪರದಾಟ

Sydney Test; ಬದಲಾದ ನಾಯಕ; ಮುಂದುವರಿದ ಬ್ಯಾಟಿಂಗ್‌ ಪರದಾಟ

Adani Case: ಅದಾನಿ ವಿರುದ್ಧದ 3 ಪ್ರಕರಣಗಳ ಜಂಟಿ ವಿಚಾರಣೆಗೆ ನ್ಯೂಯಾರ್ಕ್‌ ಕೋರ್ಟ್‌ ಆದೇಶ

Adani Case: ಅದಾನಿ ವಿರುದ್ಧದ 3 ಪ್ರಕರಣಗಳ ಜಂಟಿ ವಿಚಾರಣೆಗೆ ನ್ಯೂಯಾರ್ಕ್‌ ಕೋರ್ಟ್‌ ಆದೇಶ

6-spcl

Story Of Generations: ಪೀಳಿಗೆಗಳ ವೃತ್ತಾಂತ

train

Tragedy: ರೈಲು ಹಳಿ ಮೇಲೆ ಕೂತು PUBG ಆಡುತ್ತಿದ್ದ ಮೂವರು ಯುವಕರ ದೇಹ ಛಿದ್ರ ಛಿದ್ರ…

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15-uv-fusion

Water: ನಾನು ನೀರು ನಾನಿಲ್ಲದೇ ಜಗತ್ತಿಲ್ಲ

16-digital-arrest

Digital Arrest: ಡಿಜಿಟಲ್‌ ಅರೆಸ್ಟ್‌ ಮುನ್ನೆಚ್ಚರಿಕೆಯೂ ಪರಿಹಾರವಾಗಬಲ್ಲದು

17-bus

Emotions: ಭಾವನೆಗಳ ಬಸ್‌ ನಿಲ್ದಾಣ

14-uv-fusion

Meditation: ವರ್ಧಿತ ಶೈಕ್ಷಣಿಕ ಕಾರ್ಯಕ್ಷಮತೆಗೆ ಧ್ಯಾನ

12-uv-fusion

Success: ಯಶಸ್ವಿ ಜೀವನಕ್ಕೆ ಸೂತ್ರಗಳು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್‌ ಹಂಚಿಕೆ; ಡಾ.ಸರ್ಜಿ

Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್‌ ಹಂಚಿಕೆ; ಡಾ.ಸರ್ಜಿ

7-dhaka

Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್‌!

Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು

Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು

Rohit Sharma; ಮುಗಿಯಿತಾ ರೋಹಿತ್‌ ಕ್ರಿಕೆಟ್‌ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?

Rohit Sharma; ಮುಗಿಯಿತಾ ರೋಹಿತ್‌ ಕ್ರಿಕೆಟ್‌ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?

Channapatna; ನ್ಯೂಇಯರ್‌ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು

Channapatna; ನ್ಯೂಇಯರ್‌ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.