![DKSHi-4](https://www.udayavani.com/wp-content/uploads/2025/02/DKSHi-4-415x234.jpg)
![DKSHi-4](https://www.udayavani.com/wp-content/uploads/2025/02/DKSHi-4-415x234.jpg)
Team Udayavani, Aug 31, 2024, 9:07 PM IST
ಹೊಸದಿಲ್ಲಿ: ಹರಿಯಾಣ ವಿಧಾನಸಭೆಗೆ ಅಕ್ಟೋಬರ್ 1 ರಂದು ನಡೆಯಬೇಕಾಗಿದ್ದ ಮತದಾನವನ್ನು ಚುನಾವಣ ಆಯೋಗವು ಶನಿವಾರ(ಆ 31) ಅಕ್ಟೋಬರ್ 5 ಕ್ಕೆ ಮುಂದೂಡಿದೆ.
ಅಕ್ಟೋಬರ್ 1 ರಂದು ನಡೆಯಲಿರುವ ಜಮ್ಮು ಮತ್ತು ಕಾಶ್ಮೀರ ಚುನಾವಣೆಯ ಮೂರನೇ ಹಂತದ ಮತದಾನದ ದಿನಾಂಕದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಜಮ್ಮು ಮತ್ತು ಕಾಶ್ಮೀರ ಮತ್ತು ಹರಿಯಾಣ ಎರಡರ ಚುನಾವಣಾ ಫಲಿತಾಂಶಗಳನ್ನು ಅಕ್ಟೋಬರ್ 4 ರ ಬದಲಾಗಿ ಅಕ್ಟೋಬರ್ 8 ರಂದು ಪ್ರಕಟಿಸಲಾಗುತ್ತದೆ.
ಅಧಿಸೂಚನೆಯಲ್ಲಿ, ಚುನಾವಣಾ ಸಮಿತಿಯು, “ರಾಷ್ಟ್ರೀಯ ಪಕ್ಷಗಳು, ರಾಜ್ಯ ಮಟ್ಟದ ಪಕ್ಷಗಳು ಮತ್ತು ಅಖಿಲ ಭಾರತ ಬಿಷ್ಣೋಯಿ ಮಹಾಸಭಾದಿಂದ ಹರ್ಯಾಣದ ಬಿಷ್ಣೋಯ್ ಸಮುದಾಯದ ಜನರು ಶತಮಾನಗಳ ಹಳೆಯ ಅಸೋಜ್ ಅಮವಾಸ್ಯೆ ಹಬ್ಬದ ಆಚರಣೆಯಲ್ಲಿ ಭಾಗವಹಿಸಲು ರಾಜಸ್ಥಾನಕ್ಕೆ ಸಾಮೂಹಿಕವಾಗಿ ತೆರಳುತಿರುವ ಕಾರಣ, ಆ ಸಮುದಾಯದ ಪ್ರಾತಿನಿಧ್ಯವನ್ನು ಸ್ವೀಕರಿಸಿ ದಿನಾಂಕವನ್ನು ಮುಂದೂಡಲಾಗಿದೆ” ಎಂದು ಹೇಳಿದೆ.
ಬಿಜೆಪಿ ಸ್ವಾಗತ
ಬಿಜೆಪಿ ನಾಯಕ ಆರ್‌ಪಿ ಸಿಂಗ್ ಮಾತನಾಡಿ, ‘ಈ ಹಿಂದೆಯೂ ಚುನಾವಣ ದಿನಾಂಕಗಳನ್ನು ಮುಂದೂಡಲಾಗಿದೆ. ದೊಡ್ಡ ಸಮುದಾಯದ ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು ಆಯೋಗ ಈ ನಿರ್ಧಾರ ಕೈಗೊಂಡಿದೆ’ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಅಸಮಾಧಾನ
ಕಾಂಗ್ರೆಸ್ ಸಂಸದೆ ಕುಮಾರಿ ಸೆಲ್ಜಾ ಪ್ರತಿಕ್ರಿಯಿಸಿ “ಚುನಾವಣ ಆಯೋಗದ ಬಗ್ಗೆ ನಾವು ಏನು ಹೇಳಬಹುದು ? ಬಿಜೆಪಿ 10 ವರ್ಷಗಳಲ್ಲಿ ಸ್ಪರ್ಧೆಯನ್ನು ಗೆಲ್ಲಲು ಸಾಧ್ಯವಾಗಲಿಲ್ಲ, 5 ದಿನಗಳಲ್ಲಿ ಏನಾಗಬಹುದು? ಕಾಂಗ್ರೆಸ್ ಸಿದ್ಧವಾಗಿದೆ ಮತ್ತು ನಾವು ಎಲ್ಲ ಸ್ಥಾನಗಳನ್ನೂ ಗೆಲ್ಲಲು ಪ್ರಯತ್ನಿಸುತ್ತೇವೆ” ಎಂದರು.
ಅಕ್ಟೋಬರ್ 4 ರ ಬದಲಾಗಿ ಅಕ್ಟೋಬರ್ 8 ರಂದು ಮತ ಎಣಿಕೆ ದಿನವನ್ನು ಬದಲಾಯಿಸಲಾಗಿರುವ ಬಗ್ಗೆ ಜಮ್ಮು ಮತ್ತು ಕಾಶ್ಮೀರ ಕಾಂಗ್ರೆಸ್ ಅಧ್ಯಕ್ಷ ತಾರಿಕ್ ಹಮೀದ್ ಕರ್ರಾ ಪ್ರತಿಕ್ರಿಯಿಸಿ “ಆ ಸಮಯದಲ್ಲಿ ಹಬ್ಬವಿದೆ ಎಂದು ಚುನಾವಣ ಆಯೋಗಕ್ಕೆ ತಿಳಿದಿರಲಿಲ್ಲವೇ? ಅವರು ಪರಿಗಣಿಸಿದ ನಂತರ ಅಂತಿಮ ದಿನಾಂಕವನ್ನು ಘೋಷಿಸುತ್ತಾರೆ ಅವರು ಚುನಾವಣೆಯನ್ನು ಅನುಮಾನಾಸ್ಪದವಾಗಿ ಮಾಡುತ್ತಿದ್ದಾರೆ” ಎಂದು ಕಿಡಿ ಕಾರಿದ್ದಾರೆ.
ಹರ್ಯಾಣ ಮಾಜಿ ಸಿಎಂ ಮತ್ತು ಕಾಂಗ್ರೆಸ್ ನಾಯಕ ಭೂಪಿಂದರ್ ಸಿಂಗ್ ಹೂಡಾ ಪ್ರತಿಕ್ರಿಯಿಸಿ “ಇದು ಚುನಾವಣ ಆಯೋಗದ ಹಕ್ಕು, ಅವರು ದಿನಾಂಕವನ್ನು ವಿಸ್ತರಿಸಿದ್ದಾರೆ,ಬಿಜೆಪಿ ಈಗಾಗಲೇ ಹರಿಯಾಣದಲ್ಲಿ ಸೋಲನ್ನು ಒಪ್ಪಿಕೊಂಡಿದೆ. ಹರಿಯಾಣ ಸರ್ಕಾರವು ಚುನಾವಣ ಆಯೋಗಕ್ಕೆ ಪತ್ರ ಬರೆದಾಗ, ನಾನು ಬಿಜೆಪಿ ಸೋಲನ್ನು ಒಪ್ಪಿಕೊಂಡಿದೆ ಎಂದು ಹೇಳಿದ್ದೆ ಎಂದರು.
ತಂತ್ರಗಳನ್ನು ಅನುಸರಿಸುತ್ತಿದೆ
ಹರ್ಯಾಣ ಮಾಜಿ ಡಿಸಿಎಂ ಮತ್ತು ಜೆಜೆಪಿ ನಾಯಕ ದುಶ್ಯಂತ್ ಚೌಟಾಲಾ ಅವರು ಪ್ರತಿಕ್ರಿಯಿಸಿ “ನಾವು ಇದನ್ನು ಸ್ವಾಗತಿಸುತ್ತೇವೆ, ಬಿಜೆಪಿ ತನ್ನ ಸೋಲನ್ನು ತಪ್ಪಿಸಲು ಈ ಎಲ್ಲಾ ತಂತ್ರಗಳನ್ನು ಅನುಸರಿಸುತ್ತಿದೆ ಎಂಬುದನ್ನು ಇದು ಸ್ಪಷ್ಟವಾಗಿ ತೋರಿಸುತ್ತದೆ” ಎಂದು ಹೇಳಿಕೆ ನೀಡಿದ್ದಾರೆ.
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನೇ ಕೊಚ್ಚಿ ಕೊಂದ ತಾಯಿ!
ಹೆಚ್ಚು ವರದಕ್ಷಿಣೆ ನೀಡಲಿಲ್ಲವೆಂದು ಸೊಸೆಗೆ HIV ಸೋಂಕಿನ ಇಂಜೆಕ್ಷನ್ ನೀಡಿದ ಅತ್ತೆ ಮಾವ
Valentine’s Day: ಹಳೇ ಗೆಳೆಯನಿಗೆ 100ಪಿಜ್ಜಾ ಆರ್ಡರ್ ಮಾಡಿದ ಯುವತಿ: ಆದರೆ ಟ್ವಿಸ್ಟ್ ಇದೆ
Stampede: ಕುಂಭಕ್ಕೆ ಹೊರಟವರು ಕಾಲ್ತುಳಿತಕ್ಕೆ ಬಲಿ! ದೆಹಲಿ ರೈಲುನಿಲ್ದಾಣದಲ್ಲಿ ಆಗಿದ್ದೇನು?
You seem to have an Ad Blocker on.
To continue reading, please turn it off or whitelist Udayavani.