Landslide Survivors: ಭೂಕುಸಿತದಿಂದ ಪಾರಾದವರಿಗೆ ಆಘಾತದಿಂದ ಚೇತರಿಸಿಕೊಳ್ಳಲು ಮಾರ್ಗದರ್ಶಿ

ಮನಸ್ಸಿಗೆ ಸಾಂತ್ವನದ ಮುಲಾಮು

Team Udayavani, Sep 1, 2024, 11:54 AM IST

10-wayanad

ಭೂಕುಸಿತದಂದಹ ಪ್ರಾಕೃತಿಕ ಅವಘಡಗಳು ದೈಹಿಕವಾಗಿ ಮಾತ್ರವಲ್ಲದೆ ಮಾನಸಿಕ ಮತ್ತು ಭಾವನಾತ್ಮಕವಾಗಿಯೂ ಭಾರೀ ಪರಿಣಾಮಗಳನ್ನು ಉಂಟು ಮಾಡಬಹುದಾಗಿದೆ. ಇಂತಹ ದುರಂತಗಳು ಹಠಾತ್‌, ಅನಿರೀಕ್ಷಿತ ಮತ್ತು ತೀವ್ರ ಸ್ವರೂಪದವಾಗಿದ್ದು, ಅಕ್ಯೂಟ್‌ ಸ್ಟ್ರೆಸ್‌ ಡಿಸಾರ್ಡರ್‌ ಮತ್ತು ಪೋಸ್ಟ್‌ ಟ್ರಾಮ್ಯಾಟಿಕ್‌ ಸ್ಟ್ರೆಸ್‌ ಡಿಸಾರ್ಡರ್‌ (ಪಿಟಿಎಸ್‌ಡಿ)ಯಂತಹ ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.

ಇಂತಹ ಅವಘಡಗಳಲ್ಲಿ ಬದುಕುಳಿದವರು ಈ ಹಿಂದೆ ಯಾವುದಾದರೂ ಮಾನಸಿಕ ಆರೋಗ್ಯ ಸಮಸ್ಯೆ ಹೊಂದಿದ್ದರೆ ದುರಂತದಿಂದ ಪಾರಾದ ಬಳಿಕ ಅದು ಉಲ್ಬಣಿಸುವುದು ಅಥವಾ ರೋಗ ಲಕ್ಷಣಗಳು ಮರುಕಳಿಸುವುದನ್ನು ಕಾಣಬಹುದು. ಜತೆಗೆ, ಇಂತಹ ದುರಂತಗಳು ಮನುಷ್ಯತ್ವದಲ್ಲಿ ಅವರು ನಂಬಿಕೆ ಕಳೆದುಕೊಳ್ಳುವಂತೆ ಮಾಡಬಹುದು, ಇತರರಿಂದ ದೂರ ಸರಿಯುವಂತೆ ಮಾಡಬಹುದು ಮತ್ತು ಎಲ್ಲ ತರಹದ ಆತ್ಮೀಯ ಸಂಬಂಧಗಳಿಂದಲೂ ಪ್ರತ್ಯೇಕಗೊಳ್ಳುವಂತೆ ಮಾಡಬಹುದು.

ಬಹುತೇಕ ಮಂದಿ ಅವಘಡಗಳ ಪರಿಣಾಮಗಳಿಂದ ಪುಟಿದೆದ್ದು ಕ್ರಮೇಣ ಸಹಜ ಜೀವನಕ್ಕೆ ಮರಳಬಹುದಾದರೂ ಚೇತರಿಸಿಕೊಳ್ಳುವ ಈ ಹಾದಿ ಸವಾಲಿನದ್ದಾಗಿರುತ್ತದೆ. ಭೂಕುಸಿತದಂತಹ ಪ್ರಾಕೃತಿಕ ಅವಘಡಗಳಿಂದ ಪಾರಾದವರು ತಮ್ಮ ಭಾವನಾತ್ಮಕ ಸೌಖ್ಯವನ್ನು ಮರಳಿ ಸಂಪಾದಿಸಿಕೊಂಡು ಸ್ವನಿಯಂತ್ರಣದ ಸಾಮರ್ಥ್ಯವನ್ನು ಸಾಧಿಸಲು ಇಲ್ಲಿ ಮಾರ್ಗದರ್ಶನ ಒದಗಿಸುವ ಪ್ರಯತ್ನವನ್ನು ಮಾಡಲಾಗಿದೆ.

  1. ನಿಮ್ಮ ಭಾವನೆಗಳನ್ನು ಅರ್ಥ ಮಾಡಿಕೊಳ್ಳಿ ಅವಘಡವೊಂದು ಘಟಿಸಿದ ಬಳಿಕ ನಿಮ್ಮಲ್ಲಿ ಉಂಟಾಗುವ ಭಾವನೆಗಳು ಮತ್ತು ಅವುಗಳಿಗೆ ನಿಮ್ಮ ಪ್ರತಿಕ್ರಿಯೆಗಳು ಸಹಜ ಎಂಬುದನ್ನು ನೀವು ಅರ್ಥ ಮಾಡಿಕೊಳ್ಳುವುದು ಬಹಳ ಮುಖ್ಯ. ಈ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವುದರಿಂದ ಅವುಗಳಿಗೆ ಹೊಂದಿಕೊಳ್ಳಲು ನಿಮಗೆ ಸುಲಭವಾಗುತ್ತದೆ. ನಿಮಗೆ ಉಂಟಾಗಿರುವ ನಷ್ಟಕ್ಕಾಗಿ ದುಃಖ ಪಡಲು, ಬದಲಾದ ಪರಿಸ್ಥಿತಿಗೆ ಹೊಂದಿಕೊಳ್ಳಲು ನಿಮಗೆ ನೀವೇ ಸ್ವಲ್ಪ ಸಮಯವನ್ನು ನೀಡಿ. ನಿಮ್ಮ ಭಾವನಾತ್ಮಕ ಸ್ಥಿತಿಗತಿಗಳಿಂದ ಹೊರಬರುವುದಕ್ಕಾಗಿ ನಿಮ್ಮ ಬಗ್ಗೆ ನೀವೇ ತಾಳ್ಮೆಯಿಂದ ಇರಿ.
  2. ನೆರವನ್ನು ಪಡೆಯಿರಿ ಅವಘಡದ ಮಾನಸಿಕ ಮತ್ತು ಭಾವನಾತ್ಮಕ ದುಷ್ಪರಿಣಾಮಗಳಿಂದ ಪಾರಾಗುವ ಪ್ರಕ್ರಿಯೆಯಲ್ಲಿ ಅತ್ಯಂತ ನಿರ್ಣಾಯಕವಾದ ಒಂದು ಹೆಜ್ಜೆ ಎಂದರೆ ಸೂಕ್ತ ನೆರವನ್ನು ಪಡೆದುಕೊಳ್ಳುವುದು. ನಿಮ್ಮ ದುಃಸ್ಥಿತಿಯ ಬಗ್ಗೆ ಕಾಳಜಿ ಮತ್ತು ಸಹಾನುಭೂತಿಯಿಂದ ಕೇಳಲು ಮತ್ತು ನಿಮ್ಮ ಬಗ್ಗೆ ಪ್ರೀತಿಯನ್ನು ಇರಿಸಿಕೊಂಡು ಆರೈಕೆ ತೋರಬಲ್ಲ ವ್ಯಕ್ತಿಗಳ ಜತೆಗೆ ನಿಮ್ಮ ಭಾವನೆಗಳನ್ನು ಹಂಚಿಕೊಳ್ಳಿ. ಈಗ ನಿಮಗೆ ಎದುರಾಗಿರುವಂಥದ್ದೇ ಪರಿಸ್ಥಿತಿಯನ್ನು ಹಿಂದೆ ಎದುರಿಸಿದ್ದವರ ಜತೆಗೆ ಮಾತನಾಡಿ ಅವರ ಅನುಭವಗಳನ್ನು ಆಲಿಸುವುದರಿಂದಲೂ ಸಹಾಯವಾಗಬಹುದು. ನೆರವು ನೀಡಬಲ್ಲ, ಕಾಳಜಿ ತೋರಬಲ್ಲ ಗುಂಪು, ಸಮುದಾಯಗಳ ಜತೆಗೆ ನಿಮ್ಮ ಅನುಭವಗಳನ್ನು ಹಂಚಿಕೊಳ್ಳುವುದರಿಂದ ಏಕಾಕಿತನದ ಭಾವನೆ ದೂರವಾಗುತ್ತದೆ ಮತ್ತು ನಮ್ಮ ಬಗ್ಗೆ ಸಹಾನುಭೂತಿಯುಳ್ಳ ಯಾರಾದರೂ ಇದ್ದಾರೆ ಎಂಬ ಭಾವನೆ ಉಂಟಾಗುತ್ತದೆ.
  3. ನಿಮ್ಮ ಭಾವನೆಗಳನ್ನು ಹಂಚಿಕೊಳ್ಳಿ ನಿಮ್ಮ ಭಾವನೆಗಳನ್ನು ಹಂಚಿಕೊಳ್ಳುವುದು ಚೇತರಿಸಿಕೊಳ್ಳುವ ಪ್ರಕ್ರಿಯೆಯ ಅವಿಭಾಜ್ಯ ಅಂಗವಾಗಿದೆ. ನಿಮ್ಮ ಭಾವನೆಗಳನ್ನು ಹಂಚಿಕೊಳ್ಳುವ, ವ್ಯಕ್ತಪಡಿಸುವ ನಿಮಗೆ ಹಿತಕರವಾದ ಮಾರ್ಗವನ್ನು ಆರಿಸಿಕೊಳ್ಳಿ. ಅದು ಯಾರ ಜತೆಗಾದರೂ ಮಾತನಾಡುವುದು ಆಗಿರಬಹುದು, ಪುಸ್ತಕದಲ್ಲಿ ಬರಹರೂಪದಲ್ಲಿ ಬರೆಯುವುದು ಆಗಿರಬಹುದು ಅಥವಾ ಚಿತ್ರರಚನೆ ಯಾ ಆವೆಮಣ್ಣಿನಲ್ಲಿ ಆಕೃತಿ ಸೃಷ್ಟಿಸುವಂತಹ ಸೃಜನಶೀಲ ಚಟುವಟಿಕೆಯೂ ಆಗಿರಬಹುದು. ನಿಮ್ಮೊಳಗೆ ಏನಾಗುತ್ತಿದೆ ಎಂಬುದನ್ನು ಹೀಗೆ ಹೊರಗೆಡವಲು ಶಕ್ತವಾದರೆ ಅದರಿಂದ ಅವಘಡದ ಕಹಿ ನೆನಪುಗಳಿಂದ ಹೊರಬಂದು ಮುಂದಕ್ಕೆ ಸಾಗಲು ಸಾಧ್ಯವಾಗುತ್ತದೆ.
  4. ಆರೋಗ್ಯಯುತ ವರ್ತನೆಗಳಲ್ಲಿ ತೊಡಗಿಕೊಳ್ಳಿ ಅವಘಡದಿಂದ ಉಂಟಾಗಿರುವ ಒತ್ತಡ, ಮಾನಸಿಕ ಭಾರಗಳನ್ನು ನಿಭಾಯಿಸುವುದಕ್ಕೆ ನಿಮ್ಮ ದೈಹಿಕ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಅತ್ಯಂತ ಮುಖ್ಯ. ಸಮತೋಲಿತ ಆಹಾರವನ್ನು ಸೇವಿಸಿ ಮತ್ತು ಸಾಕಷ್ಟು ವಿಶ್ರಾಂತಿ ಪಡೆಯಿರಿ. ನಿದ್ದೆ ಮಾಡುವುದಕ್ಕೆ ತೊಂದರೆಯಾಗುತ್ತಿದ್ದರೆ ಆಳವಾದ ಉಸಿರಾಟ ಅಥವಾ ಧ್ಯಾನದಂತಹ ವಿಶ್ರಾಮಕಾರಿ ತಂತ್ರಗಳನ್ನು ಅನುಸರಿಸಿ. ಮದ್ಯಪಾನ ಅಥವಾ ಮಾದಕದ್ರವ್ಯದಂತಹ ದುಶ್ಚಟಗಳಿಗೆ ಬಲಿಯಾಗುವುದನ್ನು ತಡೆಯುವುದು ಕೂಡ ಅಷ್ಟೇ ಮುಖ್ಯ. ಈ ದುಶ್ಚಟಗಳು ನಿಮ್ಮ ಭಾವನೆಗಳನ್ನು ಜೋಮುಗಟ್ಟಿಸಿ ನೀವು ಸಕ್ರಿಯವಾಗಿ ಹೊಂದಿಕೊಳ್ಳುವ ಪ್ರಕ್ರಿಯೆಯು ವಿಳಂಬವಾಗುವಂತೆ ಮಾಡುತ್ತವೆ.
  5. ರೂಢಿಗತ ದೈನಿಕ ಚಟುವಟಿಕೆಗಳನ್ನು ಪುನರಾರಂಭಿಸಿ ದುರಂತ ಸಂಭವಿಸಿದ ಬಳಿಕ ಅದಕ್ಕೆ ಹಿಂದಿನ ರೂಢಿಗತ ಕಾರ್ಯಚಟುವಟಿಕೆಗಳನ್ನು ಪುನರಾರಂಭಿಸುವುದರಿಂದ ಸಹಜತೆ ಮತ್ತು ಸ್ಥಿರತೆ ಭಾವನೆ ಉಂಟಾಗಬಲ್ಲುದು. ನಿಯಮಿತವಾದ ಊಟ -ಉಪಾಹಾರ, ನಿದ್ದೆ ಮತ್ತು ವ್ಯಾಯಾಮದ ವೇಳಾಪಟ್ಟಿಯನ್ನು ಅನುಸರಿಸಲು ಪ್ರಯತ್ನಿಸಿ. ಉತ್ತಮ ಹವ್ಯಾಸವೊಂದರಲ್ಲಿ ತೊಡಗಿಕೊಳ್ಳುವುದು, ಉದ್ಯಾನದಲ್ಲಿ ನಡಿಗೆ, ಒಳ್ಳೆಯ ಪುಸ್ತಕವೊಂದನ್ನು ಓದುವುದರಂತಹ ಉತ್ತಮ ಹವ್ಯಾಸಗಳಲ್ಲಿ ತೊಡಗಿಕೊಳ್ಳುವುದರಿಂದಲೂ ನಮ್ಮ ಚೈತನ್ಯ ಪುಟಿದೇಳುತ್ತದೆ.
  6. ಜೀವನದ ಪ್ರಾಮುಖ್ಯ ನಿರ್ಧಾರಗಳನ್ನು ಈ ಸಮಯದಲ್ಲಿ ತೆಗೆದುಕೊಳ್ಳಬೇಡಿ ದುರಂತ ಘಟಿಸಿದ ಬಳಿಕ ಸ್ವಲ್ಪವೇ ಸಮಯದಲ್ಲಿ ಉದ್ಯೋಗ ಬದಲಾವಣೆಯಂತಹ ಜೀವನದ ಮುಖ್ಯ ನಿರ್ಧಾರಗಳನ್ನು ತೆಗೆದುಕೊಳ್ಳದಿರಿ. ನೀವು ಭಾವನಾತ್ಮಕವಾಗಿ ದುರಂತದ ಕರಿಛಾಯೆಯಿಂದ ಚೇತರಿಸಿಕೊಳ್ಳುತ್ತಿರುವಾಗಲೇ ಇಂತಹ ನಿರ್ಧಾರಗಳನ್ನು ತೆಗೆದುಕೊಂಡರೆ ಅತಿಯಾದ ಒತ್ತಡ ಉಂಟಾಗಬಹುದು. ನಿಮ್ಮ ಸ್ಥಿರತೆ ಮತ್ತು ನಿಯಂತ್ರಣದ ಸ್ಥಾಪನೆಗೆ ಸಹಕಾರಿಯಾಗಬಲ್ಲ ಸಣ್ಣ ಸಣ್ಣ ಮತ್ತು ನಿಭಾಯಿಸಬಹುದಾದ ಗುರಿಗಳನ್ನು ಹಾಕಿಕೊಳ್ಳಿ.
  7. ಅಗತ್ಯ ಕಂಡಲ್ಲಿ ವೃತ್ತಿಪರರ ನೆರವು ಪಡೆಯಿರಿ ಹತಾಶೆ ಮತ್ತು ದುರಂತದ ಛಾಯೆ, ಅನುಭವಗಳನ್ನು ನಿರಂತರವಾಗಿವೆ ಮತ್ತು ಅವುಗಳ ನಡುವೆ ನಿಮ್ಮ ದೈನಿಕ ಕಾರ್ಯಚಟುವಟಿಕೆ, ಜವಾಬ್ದಾರಿಗಳನ್ನು ನಿಭಾಯಿಸುವುದು ಕಷ್ಟಕರ ಎಂದು ಕಂಡುಬಂದರೆ ಅಗತ್ಯವಾಗಿ ವೃತ್ತಿಪರ ಆರೋಗ್ಯಸೇವಾ ಪೂರೈಕೆದಾರರ ನೆರವನ್ನು ಪಡೆಯಿರಿ. ಇದರಲ್ಲಿ ಯಾವುದೇ ಹಿಂಜರಿಕೆ ಬೇಡ. ಚೇತರಿಸಿಕೊಳ್ಳುವ ಮತ್ತು ಮಾನಸಿಕ ಸೌಖ್ಯವನ್ನು ಪುನರ್‌ಸ್ಥಾಪಿಸಿಕೊಳ್ಳುವ ನಿಮ್ಮ ಪ್ರಯತ್ನದಲ್ಲಿ ಮಾನಸಿಕ ಆರೋಗ್ಯ ಸೇವಾ ಪೂರೈಕೆದಾರರು ನಿಮಗೆ ಸಹಾಯ ಮಾಡಬಲ್ಲರು.

ಕೊನೆಯದಾಗಿ

ಭೂಕುಸಿತ ಅಥವಾ ಯಾವುದೇ ಪ್ರಾಕೃತಿಕ ಅವಘಡದ ಕರಾಳ ನೆನಪಿನಿಂದ ಹೊರಬಂದು ಚೇತರಿಸಿಕೊಳ್ಳುವುದು ಸಾಕಷ್ಟು ಸಮಯ ಮತ್ತು ಪ್ರಯತ್ನ ಅಗತ್ಯವಾಗಿರುವ ಒಂದು ದೀರ್ಘ‌ ಪ್ರಕ್ರಿಯೆಯಾಗಿದೆ. ನಿಮ್ಮ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವುದು, ಕ್ಲಪ್ತ ಸಮಯದಲ್ಲಿ ಅಗತ್ಯವಾದ ನೆರವನ್ನು ಪಡೆಯುವುದು, ಆರೋಗ್ಯ ಪೂರ್ಣ ನಡವಳಿಕೆಗಳಲ್ಲಿ ತೊಡಗುವುದು ಮತ್ತು ರೂಢಿಗತ ಚಟುವಟಿಕೆಗಳನ್ನು ಪುನರ್‌ ಸ್ಥಾಪಿಸಿಕೊಳ್ಳುವ ಮೂಲಕ ನೀವು ಮರಳಿ ಸಹಜ ಜೀವನವನ್ನು ಆರಂಭಿಸಿ ಚೇತರಿಸಿಕೊಳ್ಳುವ ಹಾದಿಯಲ್ಲಿ ಮುಂದಕ್ಕೆ ಸಾಗಬಹುದಾಗಿದೆ.

ಈ ನಿಟ್ಟಿನಲ್ಲಿ ಅಗತ್ಯ ವಾದರೆ ವೃತ್ತಿಪರ ಸಹಾಯವನ್ನು ಪಡೆ ಯುವುದು ಮತ್ತು ಚೇತರಿಸಿಕೊಳ್ಳಲು ಸಮಯ ತಗಲುವುದು ಸ್ವೀಕಾರಾರ್ಹ ಎಂಬುದು ನಿಮ್ಮ ಗಮನದಲ್ಲಿ ಇರಲಿ. ನಿಮ್ಮ ಕಷ್ಟ-ಸುಖಗಳಿಗೆ ಕಿವಿಯಾಗಬಲ್ಲ ಮತ್ತು ನಿಮ್ಮ ಬಗ್ಗೆ ಸಹಾನುಭೂತಿ ಮತ್ತು ಕಾಳಜಿಯುಳ್ಳ ಜನರ ಜತೆಗೆ ನಿಮ್ಮೊಳಗಿನ ಭಾವನೆಗಳನ್ನು ಹಂಚಿಕೊಂಡು ಹಗುರಾಗಿ.

-ಡಾ| ಪೂನಂ ಸಂತೋಷ್‌

ಕನ್ಸಲ್ಟಂಟ್‌ ಸೈಕಿಯಾಟ್ರಿ

ಕೆಎಂಸಿ ಆಸ್ಪತ್ರೆ, ಮಂಗಳೂರು

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಸೈಕಿಯಾಟ್ರಿ ವಿಭಾಗ, ಕೆಎಂಸಿ, ಮಂಗಳೂರು)

 

ಟಾಪ್ ನ್ಯೂಸ್

Minister ಕೆ.ಎನ್‌. ರಾಜಣ್ಣಗೆ ಪ್ರಾಸಿಕ್ಯೂಷನ್‌ ಸಂಕಷ್ಟ?

Minister ಕೆ.ಎನ್‌. ರಾಜಣ್ಣಗೆ ಪ್ರಾಸಿಕ್ಯೂಷನ್‌ ಸಂಕಷ್ಟ?

Priyank Kharge ಶೀಘ್ರ ರಾಜ್ಯಕ್ಕೆ ಪ್ರತ್ಯೇಕ ಬಾಹ್ಯಾಕಾಶ ನೀತಿ ಪ್ರಕಟ

Priyank Kharge ಶೀಘ್ರ ರಾಜ್ಯಕ್ಕೆ ಪ್ರತ್ಯೇಕ ಬಾಹ್ಯಾಕಾಶ ನೀತಿ ಪ್ರಕಟ

ಶುಕ್ರಯಾನಕ್ಕೂ ಕೇಂದ್ರ ಸಂಪುಟ ಅನುಮೋದನೆ: ಚಂದ್ರ, ಮಂಗಳ ಯೋಜನೆ ಬಳಿಕ ಶುಕ್ರಯಾನಕ್ಕೆ ನೆರವು

ಶುಕ್ರಯಾನಕ್ಕೂ ಕೇಂದ್ರ ಸಂಪುಟ ಅನುಮೋದನೆ: ಚಂದ್ರ, ಮಂಗಳ ಯೋಜನೆ ಬಳಿಕ ಶುಕ್ರಯಾನಕ್ಕೆ ನೆರವು

Ramalinga Reddy: “ಸಾರಿಗೆ ಸಿಬಂದಿ ವೇತನ ಪರಿಷ್ಕರಣೆಗೆ ಚರ್ಚೆ

Ramalinga Reddy: “ಸಾರಿಗೆ ಸಿಬಂದಿ ವೇತನ ಪರಿಷ್ಕರಣೆಗೆ ಚರ್ಚೆ

Biotechnology: ಜೈವಿಕ ತಂತ್ರಜ್ಞಾನ ಬಲವರ್ಧನೆಗೆ ಬಯೋ ರೈಡ್‌: ಅಶ್ವಿ‌ನಿ ವೈಷ್ಣವ್‌

Biotechnology: ಜೈವಿಕ ತಂತ್ರಜ್ಞಾನ ಬಲವರ್ಧನೆಗೆ ಬಯೋ ರೈಡ್‌: ಅಶ್ವಿ‌ನಿ ವೈಷ್ಣವ್‌

sidda

‘One Nation One Election’ ಪ್ರಸ್ತಾವ: ಒಕ್ಕೂಟ ವ್ಯವಸ್ಥೆಗೆ ವಿರುದ್ಧ: ಸಿಎಂ

cmCM Siddaramaiah ಮೈಸೂರಲ್ಲಿ ಚಿತ್ರನಗರಿ: 110 ಎಕರೆ ಹಸ್ತಾಂತರ

CM Siddaramaiah ಮೈಸೂರಲ್ಲಿ ಚಿತ್ರನಗರಿ: 110 ಎಕರೆ ಹಸ್ತಾಂತರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6-redmeat

Red Meat: ಮಧುಮೇಹ ಉಂಟಾಗುವ ಅಪಾಯ ಮತ್ತು ಕೆಂಪು ಮಾಂಸ ಸೇವನೆಗಿರುವ ಸಂಬಂಧ

5-body-weight

Body Weight: ಕ್ರೀಡಾಳುಗಳ ಸಾಧನೆಯ ಮೇಲೆ ಕ್ಷಿಪ್ರ ದೇಹತೂಕ ಏರಿಳಿತದ ಪರಿಣಾಮಗಳು

4-female-health

Females Health: ಲಘು ರಕ್ತಸ್ರಾವ ಮತ್ತು ಋತುಸ್ರಾವ್ರ ವ್ಯತ್ಯಾಸ ತಿಳಿಯಿರಿ

19

Health: ಬಿಸಿಲಿನ ತಾಪದಿಂದ ಆರೋಗ್ಯ ಅಪಾಯ ತಡೆಯಲು ಏನು ಮಾಡ ಬೇಕು?

16

Health: ಸ್ತನ ಕಸಿ ಮತ್ತು ಕ್ಯಾನ್ಸರ್‌ ಪರಸ್ಪರ ಸಂಬಂಧ ಇದೆಯೇ?

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Minister ಕೆ.ಎನ್‌. ರಾಜಣ್ಣಗೆ ಪ್ರಾಸಿಕ್ಯೂಷನ್‌ ಸಂಕಷ್ಟ?

Minister ಕೆ.ಎನ್‌. ರಾಜಣ್ಣಗೆ ಪ್ರಾಸಿಕ್ಯೂಷನ್‌ ಸಂಕಷ್ಟ?

Priyank Kharge ಶೀಘ್ರ ರಾಜ್ಯಕ್ಕೆ ಪ್ರತ್ಯೇಕ ಬಾಹ್ಯಾಕಾಶ ನೀತಿ ಪ್ರಕಟ

Priyank Kharge ಶೀಘ್ರ ರಾಜ್ಯಕ್ಕೆ ಪ್ರತ್ಯೇಕ ಬಾಹ್ಯಾಕಾಶ ನೀತಿ ಪ್ರಕಟ

ಶುಕ್ರಯಾನಕ್ಕೂ ಕೇಂದ್ರ ಸಂಪುಟ ಅನುಮೋದನೆ: ಚಂದ್ರ, ಮಂಗಳ ಯೋಜನೆ ಬಳಿಕ ಶುಕ್ರಯಾನಕ್ಕೆ ನೆರವು

ಶುಕ್ರಯಾನಕ್ಕೂ ಕೇಂದ್ರ ಸಂಪುಟ ಅನುಮೋದನೆ: ಚಂದ್ರ, ಮಂಗಳ ಯೋಜನೆ ಬಳಿಕ ಶುಕ್ರಯಾನಕ್ಕೆ ನೆರವು

Ramalinga Reddy: “ಸಾರಿಗೆ ಸಿಬಂದಿ ವೇತನ ಪರಿಷ್ಕರಣೆಗೆ ಚರ್ಚೆ

Ramalinga Reddy: “ಸಾರಿಗೆ ಸಿಬಂದಿ ವೇತನ ಪರಿಷ್ಕರಣೆಗೆ ಚರ್ಚೆ

Biotechnology: ಜೈವಿಕ ತಂತ್ರಜ್ಞಾನ ಬಲವರ್ಧನೆಗೆ ಬಯೋ ರೈಡ್‌: ಅಶ್ವಿ‌ನಿ ವೈಷ್ಣವ್‌

Biotechnology: ಜೈವಿಕ ತಂತ್ರಜ್ಞಾನ ಬಲವರ್ಧನೆಗೆ ಬಯೋ ರೈಡ್‌: ಅಶ್ವಿ‌ನಿ ವೈಷ್ಣವ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.